Search
  • Follow NativePlanet
Share
» »ಕೊಯಮತ್ತೂರಿನಿಂದ ಇಡುಕ್ಕಿ ಪ್ರವಾಸ ನೆನಪುಗಳು

ಕೊಯಮತ್ತೂರಿನಿಂದ ಇಡುಕ್ಕಿ ಪ್ರವಾಸ ನೆನಪುಗಳು

By Mahesh Pallaki

ಕೊಯಮತ್ತೂರಿನಿಂದ ಇಡುಕ್ಕಿಗೆ 193.9 ಕಿ.ಮೀ. ದೂರವಿದೆ. ಎನ್.ಹೆಚ್.209 ರಲ್ಲಿ ಪ್ರಯಾಣಿಸಿದರೆ ಇಡುಕಿಗೆ ಸರಿಸುಮಾರು 4 ಗಂಟೆ 59 ನಿಮಿಷಗಳ ಪಯಣ. ವಾರಾಂತ್ಯ ಕಳೆಯಲು ಹೇಳಿ ಮಾಡಿಸಿದ ಜಾಗ.
ನಮ್ಮ ದಿನನಿತ್ಯದ ಯಾಂತ್ರಿಕ ಬದುಕಿನಿಂದ ಸ್ವಲ್ಪ ದೂರವಿದ್ದು ಕೆಲದಿನವಾದರೂ ನೆಮ್ಮದಿಯಿಂದಿರಲು ಬಯಸುವವರು ಪ್ರವಾಸದ ಹವ್ಯಾಸ ಬೆಳೆಸಿಕೊಂಡರೆ ಬಹಳ ಒಳ್ಳೆಯದು.

ವೈಯಕ್ತಿಕವಾಗಿ ಹೇಳುವುದಾದರೆ, ಈ ಬಾರಿಯ ಪ್ರವಾಸಕ್ಕೆ ಹೊರಡುವ ಮುಂಚೆ ಎಷ್ಟೋ ಬಾರಿ ಇಡುಕಿಗೆ ಹೋಗಬೇಕು ಅಂದುಕೊಂಡಾಗಲೆಲ್ಲ ಆ ಯೋಜನೆ ಕೈಗೂಡುತ್ತಿರಲಿಲ್ಲ. ಆದರೆ ನನ್ನ ಕನಸು ನನಸಾಗಲು ಹೆಚ್ಚು ದಿನ ಬೇಕಾಗಲಿಲ್ಲ,

ಕೊನೆಗೂ ಈ ಸುಂದರ ಜಾಗಕ್ಕೆ ಹೊರಡುವ ಸಮಯ ಬಂದೇಬಿಟ್ಟಿತ್ತು. ಇದು ಎರಡು ದಿನಗಳ ಚಿಕ್ಕ ಪಯಣವಾದರೂ ಪ್ರವಾಸದ ನೆನಪುಗಳು ಮಾತ್ರ ಮರೆಯಲಾರದಂತದ್ದು. ಅದರ ಪೂರ್ಣ ವಿವರ ಇಲ್ಲಿದೆ.

ಪ್ರವಾಸದ ಆರಂಭ ಸ್ಥಳ : ಕೊಯಮತ್ತೂರು
ಪ್ರವಾಸದ ಜೊತೆಗಾರರು : ಏಕಾಂಗಿ ಪ್ರಯಾಣ
ಪ್ರವಾಸಕ್ಕೆ ಬಳಸಲಾದ ವಾಹನ : ಕಾರು
ಪ್ರವಾಸದ ದಿನಗಳು : 2 ಹಗಲು, 1 ರಾತ್ರಿ.
ತಲುಪಬೇಕಾದ ಸ್ಥಳ : ಇಡುಕ್ಕಿ ಪರ್ವತ ಪ್ರದೇಶ.

ತಲುಪಲು ಇರುವ ದಾರಿ :

1) ಕೊಯಮತ್ತೂರು -ಉಡುಮಲ್ ಪೇಟ್-ಮುನ್ನಾರ್-ಇಡುಕ್ಕಿ
2) ಕೊಯಮತ್ತೂರು-ಪಾಲಕ್ಕಾಡ್-ಇಡುಕ್ಕಿ

ಕಾತುರನಾಗಿದ್ದೆ

ಕಾತುರನಾಗಿದ್ದೆ

ಶುಕ್ರವಾರ ಎಂದು ಮುಗಿಯುವುದೆಂಬ ಕಾತುರತೆ ಅಂದು ಕೊನೆಯಾಗಿತ್ತು.ಇಡುಕ್ಕಿಯನ್ನು ತಲುಪಲು ನಾನು ಆಯ್ದುಕೊಂಡದ್ದು ಕೊಯಿಮತ್ತೂರು-ಉಡುಮಲ್ ಪೇಟ್-ಮುನ್ನಾರ್-ಇಡುಕ್ಕಿ ದಾರಿಯನ್ನು.
ಕಾರಿನ ಚಾಲನೆ ನನಗೆ ಬಹು ಇಷ್ಟವಾದ ಸಂಗತಿಗಳಲ್ಲೊಂದು, ಅದರಲ್ಲೂ ಪ್ರಕೃತಿಯನ್ನು ಸವಿಯುತ್ತಾ ಚಾಲನೆ ಮಾಡುವುದು ಖುಷಿ ನೀಡುತ್ತದೆ, ಈ ರೀತಿ ಪ್ರಕೃತಿಯನ್ನು ಆಸ್ವಾದಿಸುತ್ತಾ ಚಾಲನೆ ಮಾಡುತ್ತಾ
195 ಕಿ.ಮೀ ಅಂತರದ ಇಡುಕ್ಕಿಯನ್ನು ತಲುಪುವ, ಅದರಲ್ಲೂ ಹಿಂದೆ ತಿರುಗಿ ನೋಡದೇ ಒಂದೇ ಏಟಿಗೆ ಇಡುಕ್ಕಿಯನ್ನು ತಲುಪಬೇಕೆಂಬ ತೀವ್ರತೆ ನನ್ನಲ್ಲಿ ಹೆಚ್ಚಾಗಿತ್ತು.

ಚಿತ್ರಕೃಪೆ: flickrPrince

ಮನಸ್ಸು ಮಿಡಿಯುತ್ತಿತ್ತು

ಮನಸ್ಸು ಮಿಡಿಯುತ್ತಿತ್ತು

ಹಚ್ಚಹಸಿರಿನ ಅರಣ್ಯದ ನಡುವಿನ ನಿರ್ಮಲವಾದ ರಹದಾರಿಯ ಪ್ರಯಾಣದ ಫಲವಾಗಿ ನನಗೆ ದೊರೆಯುವ ಸುಂದರ ಇಡುಕ್ಕಿಯ ದರ್ಶನದ ಬಗ್ಗೆ ನನ್ನ ಮನಸ್ಸು ಮಿಡಿಯುತ್ತಿತ್ತು.

ಚಿತ್ರಕೃಪೆ: Arayilpdas

ನೀಲಗಿರಿ ತಾಹಿರ್

ನೀಲಗಿರಿ ತಾಹಿರ್

ಎರವಿಕುಲಂ ರಾಷ್ಟ್ರೀಯ ಉದ್ಯಾನವನ ತಲುಪುವವರೆಗೂ ನನ್ನ ಪ್ರಯಾಣ ಎಲ್ಲಿಯೂ ನಿಲ್ಲಿಸಿರಲಿಲ್ಲ, ಅತ್ಯಗತ್ಯ ನಿಲುಗಡೆಗಳನ್ನು ಹೊರತುಪಡಿಸಿ. ಎರವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ಅಳಿವಿನಂಚಿನಲ್ಲಿರುವ ನೀಲಗಿರಿ ತಾಹಿರ್ ಮೇಕೆಗಳನ್ನು ದೂರದಿಂದ ನೋಡಬಹುದು, ಅದನ್ನು ಹೊರತುಪಡಿಸಿ ಬೇರೇನೂ ನೊಡಲು ಸಿಗುವುದಿಲ್ಲ ಎಂದು ನನಗೆ ತಿಳಿಸಲಾಯಿತು. ಏನೇ ಇರಲಿ ಪ್ರಾಣಿಗಳಿಲ್ಲದೇ ಹೋದರೆ ಏನಂತೆ,

ಚಿತ್ರಕೃಪೆ: Jaseem Hamza

ಮನಸೆಳೆತ

ಮನಸೆಳೆತ

ಈ ನ್ಯಾಷನಲ್ ಪಾರ್ಕ್ ತನ್ನ ಪ್ರಾಕೃತಿಕ ಸೌಂದರ್ಯದಿಂದ ನನ್ನ ಮನಸ್ಸನ್ನು ಸೆಳೆಯಿತು.ಇದು ಸಂರಕ್ಷಿತ ಅರಣ್ಯಪ್ರದೇಶವಾದರೂ ಈ ಪಾರ್ಕ್ ಕೆಲವೊಂದು ಪ್ರದೇಶಗಳನ್ನು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಚಿತ್ರಕೃಪೆ: Jaseem Hamza

ಪಾರ್ಕಿಂಗ್ ವ್ಯವಸ್ಥೆ

ಪಾರ್ಕಿಂಗ್ ವ್ಯವಸ್ಥೆ

ಹೊರಗಿನ ವಾಹನಗಳನ್ನು ಪಾರ್ಕ್ ನ ಒಳಗಡೆ ಬಿಡುವುದಿಲ್ಲವಾದ್ದರಿಂದ ನನ್ನ ಕಾರನ್ನು ಹೊರಗೆ ದೊರೆಯಬಹುದಾದಂತಹ ಪಾರ್ಕಿಂಗ್ ಜಾಗದಲ್ಲಿಯೇ ಪಾರ್ಕ್ ಮಾಡಬೇಕಾಯಿತು.

ಚಿತ್ರಕೃಪೆ: Gargisharma13

ಪಾರ್ಕ್ ಒಳಗಡೆ ಬಸ್

ಪಾರ್ಕ್ ಒಳಗಡೆ ಬಸ್

ನಂತರ ಪಾರ್ಕ್ ನ ಒಳಗಡೆ ನಮ್ಮನ್ನು ಕರೆದೊಯ್ಯಲು ಸಿದ್ದವಾಗಿದ್ದ ಬಸ್ಸಿಗಾಗಿ ಸರದಿಯಲ್ಲಿ ನಿಂತು ಟಿಕೆಟ್ ಪಡೆದು ಬಸ್ಸನ್ನು ಹತ್ತಿ ಕೂತೆನು.ಬಸ್ ನಮ್ಮನ್ನು ರಾಷ್ಟ್ರೀಯ ಉದ್ಯಾನವನದ ಒಳಗೆ ಕರೆದೊಯ್ದು ಬಿಟ್ಟಿತು.ಅಲ್ಲಿಂದ ಬೆಟ್ಟದ ಮೇಲಿನ ನಡಿಗೆ ನನ್ನ ಮನಸ್ಸಿಗೆ ಮುದ ನೀಡಿದ್ದಂತೂ ಸತ್ಯ.

ಚಿತ್ರಕೃಪೆ: Jaseem Hamza

ಗಿರಿಧಾಮ

ಗಿರಿಧಾಮ

ರಾಷ್ಟ್ರೀಯ ಉದ್ಯಾನವನದ ಆ ಆನಂದದಾಯಕ ಭೇಟಿಯ ನಂತರ, ನನ್ನ ಮೆಚ್ಚಿನ ಇಡುಕ್ಕಿ ಗಿರಿಧಾಮಕ್ಕೆ ಹೊರಡಲು ಸನ್ನದ್ದನಾದೆನು. ಕೆಲವೇ ಗಂಟೆಗಳಲ್ಲಿ, ಹಸಿರಿನಿಂದ ಕೂಡಿದ ಸುಂದರ ಪ್ರಾಕೃತಿಕ ಸೌಂದರ್ಯದ ನಡುವಿನಲ್ಲಿ ಚಲಿಸುತ್ತಾ ನನ್ನ ಪ್ರಯಾಣ, ನೈಸರ್ಗಿಕ ಸೌಂದರ್ಯತೆಯಿಂದ ಕೂಡಿದ ಇಡುಕ್ಕಿ ಗಿರಿಧಾಮಕ್ಕೆ ತಲುಪಿತ್ತು. ಅಲ್ಲಿಗೆ ತಲುಪಿದ ಮೇಲೆ ಹಸಿದ ಹೊಟ್ಟೆಯ ತಣಿಸಲು ಕೆಲಕಾಲ ಅಲೆದು, ಕಡೆಗೆ ಪಪ್ಪೆನ್ಸ್ ರೆಸ್ಟೋರೆಂಟ್ಗೆ ಬಂದು ಸೇರಿದೆ.

ಚಿತ್ರಕೃಪೆ: Arayilpdas

ಚಿಕ್ಕ ಭೇಟಿ

ಚಿಕ್ಕ ಭೇಟಿ

ಆ ಹೋಟೆಲ್ಗೆ ನಾ ಕೊಟ್ಟದ್ದು ಸಣ್ಣ ಭೇಟಿಯಾದರೂ, ಅದರ ವಾತಾವರಣ, ಆಹಾರ, ಆತಿಥ್ಯ ಎಲ್ಲವೂ ತೃಪ್ತಿಕರವಾಗಿತ್ತು.ಉಪಹಾರ ಮುಗಿಸಿ ಅಲ್ಲಿಂದ ನಾ ಹೊರಟದ್ದು ಮಾನವ ಮತ್ತು ಪ್ರಕೃತಿಯ
ಅಮೋಘ ಸಂಯೋಜನೆಯಿಂದ ರೂಪಿತಗೊಂಡ ಇಡುಕ್ಕಿ ಆರ್ಚ್ ಅಣೆಕಟ್ಟನ್ನು ನೋಡಲು.

ಚಿತ್ರಕೃಪೆ: Eduardoferreira

ಆರ್ಚ್ ಡ್ಯಾಂ

ಆರ್ಚ್ ಡ್ಯಾಂ

ಮೊತ್ತ ಮೊದಲ ಬಾರಿಗೆ ಆ ಅಣೆಕಟ್ಟನ್ನು ಕಟ್ಟಿರುವ ರೀತಿಯನ್ನು ನೋಡಿ ಮೂಕವಿಸ್ಮಿತನಾದೆ. 550 ಅಡಿ ಎತ್ತರ, 650 ಅಡಿ ಅಗಲದ ಈ ಅಣೆಕಟ್ಟು ಸ್ಥಾಪಿತಗೊಂಡಿರುವುದು ಪೆರಿಯಾರ್ ಎಂಬ ನದಿಯ ಮೇಲೆ.
ಇಲ್ಲಿಗೆ ಪ್ರವೇಶ ನಿಷಿದ್ಧ. ಆದರೂ ಈ ಜಾಗದ ಕೆಲವು ಮೂಲೆಯಲ್ಲಿ ನಿಂತು ನೋಡಿದರೆ ಕೆಲವು ಇತರ ಅಣೆಕಟ್ಟುಗಳು ಹಾಗೂ ಜಲಾಶಯಗಳು ಕಣ್ಣಿಗೆ ಕಾಣಸಿಗುತ್ತವೆ. ಇಲ್ಲಿ ನನಗೆ ತಿಳಿದ ವಿಷಯವೆಂದರೆ ಈ ಅಣೆಕಟ್ಟು ಕೇವಲ ಓಣಂ ಹಾಗೂ ಕ್ರಿಸ್ಮಸ್ ಹಬ್ಬಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಬಿಡಲಾಗುತ್ತದೆ.

ಚಿತ್ರಕೃಪೆ: Rameshng

ಜಲಾಶಯಗಳು:

ಜಲಾಶಯಗಳು:

ಕೆಲವು ಪ್ರವಾಸಿಗರಿಂದ ದೇವಿಕುಳಂನ ಬಗ್ಗೆ ಕೇಳಿ ತಿಳಿದಿದ್ದೆ, ಇದೇ ಇಡುಕ್ಕಿಯ ನನ್ನ ಮುಂದಿನ ಪಯಣಕ್ಕೆ ಹುರಿದುಂಬಿಸಿತ್ತು. ದೇವಿ ಕೆರೆ, ಪಳ್ಳಿವಸಲ್ ಜಲಪಾತ ಮತ್ತು ತೂವನಂ ಜಲಪಾತಗಳು ಇಡುಕ್ಕಿಯ
ಅತ್ಯಂತ ಆಕರ್ಷಣೀಯ ತಾಣಗಳು. ಹಾಗೆಯೇ ಇಲ್ಲಿರುವ ಟೀ ಹಾಗೂ ಮಸಾಲೆ ಗಿಡಗಳ ತೋಟಗಳು ನನ್ನಂತಹ ಪರಿಸರ ಪ್ರೇಮಿಗೆ ಅತ್ಯಂತ ಖುಷಿ ನೀಡಿದ ಜಾಗಗಳು.

ಚಿತ್ರಕೃಪೆ: Jaseem Hamza

ಪ್ರಮುಖ ತಾಣ

ಪ್ರಮುಖ ತಾಣ

ಆನಮುಡಿ ಪೀಕ್, ನನ್ನ ಮೊದಲ ದಿನದ ಪ್ರವಾಸದ ಪಟ್ಟಿಯಲ್ಲಿನ ಒಂದು ಪ್ರಮುಖ ತಾಣಗಳಲ್ಲೊಂದು. ಇದನ್ನು ದಕ್ಷಿಣ ಭಾರತದ ಅತ್ಯಂತ ಎತ್ತರದ ಪ್ರದೇಶವೆಂದು ಕರೆಯುತ್ತಾರೆ. ಇಂತಹ ಎತ್ತರದ ಜಾಗದಲ್ಲಿ
ಪ್ರಕೃತಿಯ ಸೌಂದರ್ಯವನ್ನು ಸವಿಯುವ ಅತ್ಯಮೂಲ್ಯ ಕ್ಷಣಗಳು ನನ್ನದಾದವು. ತಂಪಾದ ಗಾಳಿ, ಹಚ್ಚಹಸಿರಿನ ತೋಟಗಳು, ಪರಿಶುದ್ಧವಾದ ನೀರಿನ ತಾಣಗಳು, ತಲೆಮೇಲೆಯೇ ಹೋದಂತೆ ಕಾಣುವ ಸುಂದರ ಮೋಡಗಳು.

ಚಿತ್ರಕೃಪೆ: Arunguy2002

ನೀಲಕುರಂಜಿ

ನೀಲಕುರಂಜಿ

ನನ್ನೊಳಗೆ ಒಂದು ರೀತಿಯ ಆಧ್ಯಾತ್ಮದ ಅನುಭೂತಿಯನ್ನು ಮೂಡಿಸಿದವು. ಈ ಜಾಗದಲ್ಲಿ ಅರಳುವ ನೀಲಕುರುಂಜಿ ಎಂಬ ವಿಶೇಷ ಹೂವಿನ ತಳಿ ಬಹಳ ಪ್ರಸಿದ್ದವಾದದ್ದು.ಇದು ಅರಳುವುದು 12 ವರ್ಷಗಳಿಗೊಮ್ಮೆ ಮಾತ್ರ.ಇವೆಲ್ಲಾ ಅದ್ಭುತ ಅನುಭವಗಳನ್ನು ಹೊತ್ತು ನಾನು ಅಣಮುಡಿ ಪೀಕ್ ನಿಂದ ರಾತ್ರಿ ತಂಗಲು ಹೋಟೆಲನ್ನು ಹುಡುಕಿ ಹೊರಟೆನು.

ಚಿತ್ರಕೃಪೆ: Dhruvaraj S

ಧರೆಯ ಮೇಲಿನ ಸ್ವರ್ಗ

ಧರೆಯ ಮೇಲಿನ ಸ್ವರ್ಗ

ಅಲ್ಲಿ ತಂಗಲು ಬೆಲ್ ಮೌಂಟ್ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಂಡೆ. ಬಹಳ ಹಸಿದದ್ದರಿಂದ, ಭರಪೂರ ಭೋಜನ ಸೇವಿಸಿ ಮಲಗಲು ಹೊರಟೆನು. ಬೆಲ್ ಮೌಂಟ್ ರೆಸಾರ್ಟ್‌ನ ರುಚಿಕಾರವಾದ ಆಹಾರ,
ಚೊಕ್ಕದಾದ ಹಾಗೂ ವಿಶಾಲವಾದ ಕೊಠಡಿಗಳು, ಮತ್ತು ಸೇವೆಯ ಪರಿ ಬಹಳ ಮುದ ನೀಡುವಂತಹುದ್ದು. ಇಲ್ಲಿನ ಸೌಲಭ್ಯಗಳು ಮತ್ತು ಉಳಿದುಕೊಳ್ಳುವ ವ್ಯವಸ್ತೆಯು ಮಿತವ್ಯಯವಾಗಿದೆ.

ಚಿತ್ರಕೃಪೆ: Shaji0508

ಎಲ್ಲ ಮುಗಿಸಿ

ಎಲ್ಲ ಮುಗಿಸಿ

ಬೆಳಗೆದ್ದು ದೈನಂದಿನ ಕಾರ್ಯಗಳನ್ನು ಮುಗಿಸಿ ಇಂದಿನ ದಿನದ ಪ್ರಯಾಣಕ್ಕೆ ಸಿದ್ದನಾದೆ.ಮುಂದಿನ ಪಯಣ ಹಿಲ್ ವ್ಯೂ ಪಾರ್ಕ್ ಕಡೆಗೆ.

ಚಿತ್ರಕೃಪೆ: Rameshng

ಪಕ್ಷಿವೀಕ್ಷಣೆ

ಪಕ್ಷಿವೀಕ್ಷಣೆ

ಹಿಲ್ ವ್ಯೂ ಪಾರ್ಕ್, ಇಲ್ಲಿ ಪ್ರಕೃತಿಯನ್ನು ಆಸ್ವಾದಿಸುವ ಜೊತೆಗೆ ಪ್ರಾಣಿಪಕ್ಷಿಗಳೂ ಸಹ ನೋಡಲು ಸಿಗುತ್ತವೆ. ಇಲ್ಲಿ ಕಂಡುಬರುವ ಆನೆಗಳು ಪ್ರಯಾಣಿಕರಿಗೆ ಅಂಜದೆ ನಾಚದೇ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿರುತ್ತವೆ.

ಚಿತ್ರಕೃಪೆ: Rameshng

ಜಲಪಾತ

ಜಲಪಾತ

ಅಲ್ಲದೇ ಇಲ್ಲಿ ಸಣ್ಣ ಕೆರೆಯಿದ್ದು ಅದನ್ನು ಪ್ರಯಾಣಿಕರು ಭೇಟಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ನನ್ನ ಎರಡನೆಯ ದಿನದ ಪ್ರಯಾಣ ಒಳ್ಳೆಯ ರೀತಿಯಲ್ಲಿಯೇ ಶುರುವಾಯಿತು.
ಮುಂದಿನ ನನ್ನ ಭೇಟಿ ಇಡುಕ್ಕಿಯ ತೊಮ್ಮಂಕುತು ಜಲಪಾತಕ್ಕೆ. ಇತರ ಜಲಪಾತದ ಹಾಗೆ ಇದು ನೇರವಾಗಿ ಧುಮ್ಮಿಕ್ಕುವ ಜಲಪಾತವಲ್ಲ. ಮಂಜಿನಿಂದ ಆವರಿಸಿದ ಬೆಟ್ಟಗಳ ನಡುವಿನಿಂದ ಏಳು ಮಜಲುಗಳಲ್ಲಿ ದುಮ್ಮಿಕ್ಕುವ ಸುಂದರ ಜಲಪಾತ.

ಚಿತ್ರಕೃಪೆ: Mathew Jibin

ಅತ್ಯಮೂಲ್ಯ ಕ್ಷಣಗಳು

ಅತ್ಯಮೂಲ್ಯ ಕ್ಷಣಗಳು

ಇದು ಜಲಪಾತದೊಟ್ಟಿಗೆ ಚಾರಣ ಮಾಡಬಯಸುವ ಸಾಹಸೀ ಚಾರಣಿಗರಿಗೆ ಹೇಳಿಮಾಡಿಸಿದ ಜಾಗ.ನನ್ನ ಪ್ರವಾಸದ ಅತ್ಯಮೂಲ್ಯ ಕ್ಷಣಗಳನ್ನು ಈ ವಿಶೇಷ ಸೌಂದರ್ಯದಿಂದ ಕೂಡಿದ ಜಲಪಾತದ ಬಳಿ ಕಳೆಯಬೇಕೆಂದು ನಾನು ನಿರ್ಧರಿಸಿದೆ. ಹಾಗೆ ಕೆಲವು ಸಮಯ ಈ ಜಾಗದಲ್ಲಿ ಕಳೆದು ನನ್ನ ರೂಮಿನೆಡೆಗೆ ಹೊರಟೆ. ಅಲ್ಲಿಂದ ನನ್ನ ಪಯಣ ಮರಳಿ ಕೊಯಿಮತ್ತೂರಿಗೆ

ಚಿತ್ರಕೃಪೆ: Manavchugh21

ಪಾಲಿಸಿದರೆ ಉತ್ತಮ

ಪಾಲಿಸಿದರೆ ಉತ್ತಮ

ವರ್ಷದ ಮುಂಚೂಣಿಯ ತಿಂಗಳುಗಳಾದ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ಪಾರ್ಕ್ ನ ಜಾಗವು ಮುಚ್ಚಲಾಗುತ್ತದೆ, ಆದ್ದರಿಂದ ಈ ಸಮಯದಲ್ಲಿ ಭೇಟಿ ನೀಡಬೇಡಿ. ಟ್ರೆಕ್ಕಿಂಗ್ ಮಾಡುವಿರಾದಲ್ಲಿ ಟ್ರೆಕ್ಕಿಂಗಿಗೆ ಅನುಕೂಲವಾಗುಂತಹ ಆರಾಮದಾಯಕ ಷೂಗಳನ್ನು ಧರಿಸಿ.ಇಡುಕ್ಕಿಯ ವಾತಾವರಣವು ಸಂಜೆ ಹೊತ್ತು ಆಹ್ಲಾದಕರವಾಗಿದ್ದು, ಬೆಳಗಿನ ಸಮಯದಲ್ಲಿ ಬಿಸಿಲಿನಿಂದ ಕೂಡಿರುತ್ತದೆ.ಹಾಗಾಗಿ ಸಾಕಾಗುವಷ್ಟು ನೀರು ಹಾಗೂ ಛತ್ರಿಯನ್ನು ಮರೆಯದೇ ತೆಗದುಕೊಂಡು ಹೋಗಿ.

ಚಿತ್ರಕೃಪೆ: Kirubanithi Suba

ಸಂತಸದ ಪ್ರವಾಸ

ಸಂತಸದ ಪ್ರವಾಸ

ಇಡುಕ್ಕಿಯ ನನ್ನ ಪಯಣ, ಅಲ್ಲಿ ನಾನು ತಂಗಿದ್ದು ನನ್ನ ಜೀವನದಲ್ಲಿ ಮರೆಯಲಾರದಂತಹ ಒಂದು ಅನುಭವ. ಪಯಣದ ಆರಂಭದಿಂದ ಕೊನೆಯವರೆಗೂ ಒಂದು ಚಂದದ ಪಯಣ. ಖಂಡಿತವಾಗಿಯು ಮತ್ತೊಮ್ಮೆ ಇಡುಕ್ಕಿಯ ಕಡೆಗೆ ನನ್ನ ಪ್ರಯಾಣ ಆರಂಭಿಸಲು ಕಾತುರನಾಗಿ ಕಾಯುತ್ತಿದ್ದೇನೆ.

ಚಿತ್ರಕೃಪೆ: Spartacuschimera

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more