Search
  • Follow NativePlanet
Share
» » ರೋಡ್ ಟ್ರಿಪ್ ಹೋಗುವಾಗ ಇವೆಲ್ಲಾ ಜೊತೆಗಿರಲೇ ಬೇಕು

ರೋಡ್ ಟ್ರಿಪ್ ಹೋಗುವಾಗ ಇವೆಲ್ಲಾ ಜೊತೆಗಿರಲೇ ಬೇಕು

PC:Nicholas Cole

ರೋಡ್‌ ಟ್ರಿಪ್ ಹೋಗೋದೆಂದರೆ ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ. ಸ್ನೇಹಿತರ ಜೊತೆ ಇಲ್ಲವಾದಲ್ಲಿ ಫ್ಯಾಮಿಲಿ ಜೊತೆ ರಜಾ ದಿನಗಳಲ್ಲಿ ದೂರದ ಊರಿಗೆ, ದೂರದ ಸ್ಥಳಗಳಿಗೆ ತಮ್ಮ ಕಾರ್‌ನಲ್ಲಿ ಪ್ರಯಾಣ ಬೆಳೆಸುವ ಮಜಾನೇ ಬೇರೆ. ಕಾರ್‌ನಲ್ಲಿ ನಿಮಗೆ ಬೇಕಾದ ಸ್ಥಳಗಳಲ್ಲಿ ಕಾರ್‌ ನಿಲ್ಲಿಸಿ ಅಲ್ಲಿನ ಸುತ್ತಮುತ್ತಲಿನ ಪರಿಸರವನ್ನು ನೋಡುತ್ತಾ ಎಂಜಾಯ್‌ ಮಾಡುತ್ತಾ ಪ್ರಯಾಣವನ್ನು ಮುಂದುವರಿಸಬಹುದು. ನೀವು ರೋಡ್‌ ಟ್ರಿಪ್‌ನ್ನು ಚೆನ್ನಾಗಿ ಎಂಜಾಯ್ ಮಾಡಬೇಕಾದರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ಯಾವುದೇ ಕಷ್ಟವಿಲ್ಲದೆ ನಿಮ್ಮ ರೋಡ್‌ ಟ್ರಿಪ್‌ನ್ನು ಎಂಜಾಯ್ ಮಾಡಲು ಸಾಧ್ಯ. ಆ ಕೆಲವು ಟಿಪ್ಸ್‌ಗಳು ಯಾವುದು ಅನ್ನೋದನ್ನು ನಾವಿಲ್ಲಿ ತಿಳಿಸಲಿದ್ದೇವೆ.

ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳಿ

ನಮ್ಮ ಗ್ಯಾಜೆಟ್‌ಗಳಿಲ್ಲದೆ ನೀವು ಟ್ರಿಪ್‌ನ್ನು ಎಂಜಾಯ್ ಮಾಡಲು ಸಾಧ್ಯವಿಲ್ಲ. ನಿಮ್ಮ ಮನಸ್ಸೆಲ್ಲಾ ಫೋನ್‌ ಮೇಲೆನೇ ಇರುತ್ತದೆ. ಏನನ್ನೋ ಕಳೆದುಕೊಂಡಿರುವಂತೆ ಭಾಸವಾಗುತ್ತದೆ. ಅದಕ್ಕಾಗಿ ನೀವು ಯಾವುದೇ ಟ್ರಿಪ್, ಪ್ರವಾಸಕ್ಕೆ ಹೋಗುವ ಮೊದಲು ನಿಮ್ಮ ಫೋನ್‌ ಸಂಪೂರ್ಣವಾಗಿ ಚಾರ್ಜ್ ಆಗಿರುವಂತೆ ನೋಡಿಕೊಳ್ಳಿ, ಜೊತೆಗೆ ಚಾರ್ಜರ್‌ನ್ನೂ ಇಟ್ಟುಕೊಳ್ಳಿ.
ನಿಮ್ಮ ಮೊಬೈಲ್ ಅಷ್ಟೇ ಅಲ್ಲ ನಿಮಗೆ ಪ್ರಯಾಣದಲ್ಲಿ ಅಗತ್ಯವಿರುವ ಐಪ್ಯಾಡ್‌ಗಳು, ಪವರ್‌ ಬ್ಯಾಂಕ್, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳು ಎಲ್ಲವನ್ನೂ ಮುಂಚಿತವಾಗಿ ಚಾರ್ಜಿಂಗ್ ಮಾಡಿಟ್ಟುಕೊಳ್ಳಿ. ಐಪ್ಯಾಡ್‌ನಲ್ಲಿ ನಿಮ್ಮ ಟ್ರಿಪ್‌ನ್ನು ಇನ್ನಷ್ಟು ಎಂಜಾಯ್‌ ಮಾಡುವಂತಾಗಲು ಸೂಕ್ತವಾದಂತಹ ಹಾಡುಗಳನ್ನು ಇಟ್ಟುಕೊಳ್ಳಿ.

ಮೆಡಿಕಲ್ ಕಿಟ್ ನಿಮ್ಮೊಂದಿಗಿರಲಿ

ಪ್ರಯಾಣ ಮಾಡುವ ಸಂದರ್ಭದಲ್ಲಿ ಮೆಡಿಕಲ್ ಕಿಟ್‌ನ್ನು ನಿಮ್ಮ ಜೊತೆಗಿಟ್ಟುಕೊಳ್ಳುವುದು ಅತೀ ಮುಖ್ಯ. ಸಾಮಾನ್ಯವಾಗಿ ಬಹುತೇಕರಿಗೆ ಪ್ರಯಾಣದ ವೇಳೆ, ವಾಕರಿಕೆ, ತಲೆನೋವು, ಹೊಟ್ಟೆನೋವು, ಜ್ವರ, ಶೀತ, ಅಲರ್ಜಿಯಂತಹ ಸಣ್ಣ ಪುಟ್ಟ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ನೀವು ದಾರಿ ಮಧ್ಯೆ ಮೆಎಇಕಲ್‌ ಶಾಫ್‌ ಅನ್ನೋ ಅಥವಾ ಕ್ಲಿನಿಕ್‌ನ್ನು ಹುಡುಕುತ್ತಾ ಇರಲು ಸಾಧ್ಯವಾಗೋದಿಲ್ಲ. ಕೆಲವೊಮ್ಮೆ ನೀವು ನಿರ್ಜನ ಪ್ರದೇಶದಲ್ಲಿರುತ್ತೀರಿ. ಅದಂತಹ ಸಂದರ್ಭದಲ್ಲಿ ಈ ಮೆಡಿಕಲ್ ಕಿಟ್ ನಿಮ್ಮೊಂದಿಗಿದ್ದರೆ ಬಹಳ ಅನುಕೂಲವಾಗುತ್ತದೆ. ಮಕ್ಕಳೊಂದಿಗೆ ನೀವು ಪ್ರಯಾಣಿಸುತ್ತಿದ್ದೀರೆಂದಾರೆ ಈ ಔಷಧಿಯನ್ನೆಲ್ಲಾ ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಅತ್ಯವಶ್ಯಕ.

ತುರ್ತು ಅವಶ್ಯಕ ವಸ್ತುಗಳು

ತುರ್ತು ಅವಶ್ಯಕ ವಸ್ತುಗಳೆಂದರೆ ನಮಗೆ ಯಾವುದೇ ಸಂದರ್ಭದಲ್ಲಾದರೂ ಅಗತ್ಯ ಬೀಳುವಂತಹ ವಸ್ತುಗಳು. ಉದಾಹರಣೆಗೆ ಟಾರ್ಚ್‌ ಲೈಟ್, ಫಸ್ಟ್‌ ಎಡ್‌ ಕಿಟ್, ನೀರಿನ ಬಾಟಲ್, ಬೆಡ್‌ಶೀಟ್, ರೈನ್‌ ಕೋಟ್‌, ಸ್ಯಾನಿಟೈಜರ್ ಮುಂತಾದ ಸಣ್ಣ ಪುಟ್ಟ ಅಗತ್ಯದ ವಸ್ತುಗಳನ್ನು ನಿಮ್ಮೊಂದಿಗಿಟ್ಟುಕೊಳ್ಳಿ.

ಹವಾಮಾನಕ್ಕನುಗುಣವಾಗಿ ಬಟ್ಟೆಗಳು

ಬೆಚ್ಚಗಿನ ಬಟ್ಟೆಗಳು, ಫ್ಲಿಪ್-ಫ್ಲಾಪ್‌ಗಳು, ಕಂಬಳಿಗಳು, ತಲೆ ದಿಂಬು, ವಾಕಿಂಗ್ ಶೂಗಳು, ಟೋಪಿಗಳು, ಸ್ವಿಮ್ಮಿಂಗ್ ಬಟ್ಟೆಯನ್ನೂ ರಸ್ತೆ ಪ್ರವಾಸದ ಸಂದರ್ಭದಲ್ಲಿ ಪ್ಯಾಕ್ ಮಾಡಬೇಕು. ಅನಿರೀಕ್ಷಿತ ಹವಾಮಾನಕ್ಕಾಗಿ ಅಗತ್ಯವಿರುವಂತೆ ನೀವು ಸಿದ್ಧರಾಗಿರಲು ಬೇಕಾದಂತಹ ಎಲ್ಲಾ ಬಟ್ಟೆ ಬರೆಗಳನ್ನು ಕೊಂಡೊಯ್ಯಿರಿ. ಕಂಬಳಿಗಳು ಮತ್ತು ದಿಂಬುಗಳು ದೀರ್ಘಾವಧಿಯ ಕ್ರ್ಯಾಮ್ಡ್-ತರಹದ ಸಾರ್ಡೀನ್ಗಳ ರಸ್ತೆ ಪ್ರವಾಸದಲ್ಲಿ ನಿಮಗೆ ಅಗತ್ಯವಾದ ಉಷ್ಣತೆ ಮತ್ತು ವಿಶ್ರಾಂತಿ ನೀಡುತ್ತದೆ. ಕೆಲವೊಮ್ಮೆ ನೀವು ಯಾವುದೋ ಸ್ಥಳಕ್ಕೆ ಪ್ರಯಾಣಿಸುವಾಗ ಅಲ್ಲಿ ವಾತಾವರಣ ಹೀಗಿರಬಹುದೆಂದು ಊಹಿಸಿಕೊಂಡಿರುತ್ತೀರಿ. ಆದರೆ ಅಲ್ಲಿ ಹೋಗಿ ನೋಡಿದರೆ ವಾತಾವರಣ ಬೇರೆಯೇ ಆಗಿರುತ್ತದೆ.

ಆಹಾರ ಹಾಗೂ ನೀರು

ನೀವು ಯಾವುದೇ ಸ್ಥಳಕ್ಕೆ ರೋಡ್‌ ಟ್ರಿಪ್ ಹೋಗುವಾಗ ಸಾಕಷ್ಟು ಆಹಾರವನ್ನು ತೆಗೆದುಕೊಂಡು ಹೋಗಿ, ಬಿಸ್ಕೆಟ್ ಪ್ಯಾಕೇಟ್‌ಗಳು, ಬ್ರೆಡ್, ಹಣ್ಣುಹಂಪಲುಗಳು ಹೀಗಿ ಸಾಕಷ್ಟು ಆಹಾರಗಳನ್ನು ತೆಗೆದುಕೊಂಡು ಹೋಗಿ. ಕೆಲವೊಮ್ಮೆ ನೀವು ಪ್ರಯಾಣಿಸುತ್ತಿರುವ ಸ್ಥಳದಲ್ಲಿ ಸಮೀಪದಲ್ಲಿ ಯಾವುದೇ ಅಂಗಡಿಗಳು ಸಿಗದಿರಲೂ ಬಹುದು. ಆ ಸಂದರ್ಭದಲ್ಲಿ ನೀವು ನಿಮ್ಮಲ್ಲಿರುವ ಆಹಾರವನ್ನು ಸೇವಿಸಬಹುದು. ನೀರಿನ ಬಾಟಲಿ ಸಾಕಷ್ಟು ತುಂಬಿಸಿ ನಿಮ್ಮ ಕಾರ್‌ನಲ್ಲಿ ಇಟ್ಟುಕೊಳ್ಳುವುದು ಒಳಿತು. ಯಾಕೆಂದರೆ ಹೋದಕಡೆಗಳಲ್ಲೆಲ್ಲಾ ಕುಡಿಯಲು ಯೋಗ್ಯವಾದಂತಹ ನೀರು ಸಿಗುವುದೋ ಇಲ್ಲವೋ ತಿಳಿಯುವುದಿಲ್ಲ.

ಡಾಕ್ಯುಮೆಂಟ್‌ಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ

ರೋಡ್‌ ಟ್ರಿಪ್‌ಗೆ ಹೋಗುವಾಗ ಮುಖ್ಯವಾಗಿ ನಿಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಡಾಕ್ಯುಮೆಂಟ್‌ಗಳನ್ನು ನಿಮ್ಮ ಜೊತೆ ಇಟ್ಟುಕೊಳ್ಳುವುದು ಒಳಿತು. ಕಾರ್‌ಗೆ ಸಂಬಂಧಿಸಿದ ರಿಜಿಸ್ಟ್ರೇಶನ್ ಸರ್ಟಿಫಿಕೇಟ್, ಕಾರ್ ಇನ್ಸೂರೆನ್ಸ್, ಮಾಲಿನ್ಯ ನಿಯಂತ್ರಣ ಸರ್ಟಿಫೀಕೇಟ್, ಚಾಲಕ ಪರವಾನಿಗೆ ಪತ್ರ ಇವುಗಳನ್ನೆಲ್ಲಾ ನಿಮ್ಮ ಜೊತೆಗೆ ಇಟ್ಟುಕೊಳ್ಳಿ. ಇವುಗಳು ಯಾವ ಸಂದರ್ಭದಲ್ಲಿ ಬಳಕೆಗೆ ಬರುತ್ತವೆಯೋ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಮುಂಚಿತವಾಗಿ ಮುನ್ನೆಚ್ಚರಿಕೆಗಾಗಿ ಇವುಗಳನ್ನು ನಿಮ್ಮೊಂದಿಗಿಟ್ಟುಕೊಳ್ಳಿ.

ಗೂಗಲ್ ಮ್ಯಾಪ್

ಈಗಂತೂ ಪ್ರತಿಯೊಬ್ಬರು ಯಾವುದೇ ಗೊತ್ತಿಲ್ಲದ ಸ್ಥಳಕ್ಕೆ ಅಥವಾ ಹೊಸ ಜಾಗಕ್ಕೆ ತೆರಳುವಾಗ ಗೂಗಲ್‌ ಮ್ಯಾಪ್ ಹಾಕುತ್ತಾರೆ. ಹಾಗೆಯೇ ನೀವು ಕೂಡಾ ಪ್ರವಾಸಕ್ಕೆ ಹೋಗುವಾಗ ಹೊಸ ಸ್ಥಳವನ್ನು ಅನ್ವೇಷಿಸುವಾಗ ಗೂಗಲ್ ಮ್ಯಾಪ್‌ನ್ನು ಬಳಸಿದರೆ ನೀವು ರಸ್ತೆ ಗೊತ್ತಾಗದೇ ಪರದಾಡುವ ಸ್ಥಿತಿ ಬರೋದಿಲ್ಲ. ನೀವು ಹೋಗಬೇಕಾದ ಸ್ಥಳ ಹಾಗೂ ನೀವಿರುವ ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಮಾರ್ಕ್ ಮಾಡಿದರೆ ನೀವು ತಲುಪಬೇಕಾದ ಸ್ಥಳಕ್ಕೆ ಹೋಗುವ ದಾರಿ ತೋರಿಸುತ್ತದೆ.

ಕೈಯಲ್ಲಿ ಹಣ ಇಟ್ಟಕೊಳ್ಳಿ

ಬಹುತೇಕರು ಎಲ್ಲಿಗಾದರೂ ಪ್ರವಾಸ ಹೋದಾಗ ಕೈಯಲ್ಲಿ ಹೆಚ್ಚಿನ ಕ್ಯಾಶ್ ಹಿಡಿದುಕೊಳ್ಳೋದಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇ , ದುಡ್ಡು ಕಳೆದುಹೋಗುವ ಪರಿಸ್ಥಿರಿ ಬರೋದಿಲ್ಲ. ಹಾಗಾಗಿ ಡೆಬಿಟ್‌ ಕಾರ್ಡ್, ಕ್ರೆಡಿಟ್ ಕಾರ್ಡ್‌ನ್ನೇ ಇಟ್ಟುಕೊಳ್ಳುತ್ತಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ನಮಗೆ ಹಣದ ಅವಶ್ಯಕತೆ ಇರುತ್ತದೆ. ಟೋಲ್‌ ಗೇಟ್‌ ಫೀಸ್ ನೀಡುವಾಗ ಹಣದ ಅಗತ್ಯ ಇರುತ್ತದೆ. ರಸ್ತೆ ಬದಿಯಲ್ಲಿ ಯಾವುದೋ ಸಣ್ಣ ಪುಟ್ಟ ಅಂಗಡಿಗಳು ಕಂಡುಬಂದಾಗ, ಹೊಸತನ್ನೇನೋ ಟ್ರೈ ಮಾಡಬೇಕೆಂದಾಗ ಕೈಯಲ್ಲಿ ಸ್ವಲ್ಪವಾದರೂ ಹಣ ಇರಲೇಬೇಕು. ಎಲ್ಲದಕ್ಕೂ ಕಾರ್ಡ್ ಬಳಸಲು ಸಾಧ್ಯವಾಗೋದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X