Search
  • Follow NativePlanet
Share
» »ಜನರಲ್ ಟಿಕೇಟ್ ಬುಕ್ ಮಾಡೋಕೆ ರೈಲ್ವೆ ಸ್ಟೇಶನ್‌ಗೆ ಹೋಗಬೇಕೂಂತ ಇಲ್ಲ

ಜನರಲ್ ಟಿಕೇಟ್ ಬುಕ್ ಮಾಡೋಕೆ ರೈಲ್ವೆ ಸ್ಟೇಶನ್‌ಗೆ ಹೋಗಬೇಕೂಂತ ಇಲ್ಲ

ರೈಲಿನಲ್ಲಿ ಪ್ರಯಾಣಿಸುವವರು ಪ್ರಯಾಣಕ್ಕೂ ಮುಂಚಿತವಾಗಿಯೇ ಟಿಕೇಟ್ ಬುಕ್ ಮಾಡಬೇಕು ಎನ್ನುವುದು ಗೊತ್ತೇ ಇದೆ. ಸ್ಲೀಪರ್‌ ಇರಲೀ ಅಥವಾ ಎಸಿ ಕೋಚ್‌ ಇರಲೀ ಯಾವುದೇ ಸೀಟಿಗಾದರೂ ಒಂದು ತಿಂಗಳು ಮುಂಚಿತವಾಗಿ ಬುಕ್ ಮಾಡಬೇಕು.

ಬಹಳಷ್ಟು ಬಾರಿ ಮುಂಚಿತವಾಗಿ ಬುಕ್ ಮಾಡಿದ್ರೂ ಟಿಕೇಟ್‌ ಕನ್ಫರ್ಮ್ ಆಗಿರೋದಿಲ್ಲ. ವೈಟಿಂಗ್‌ ಲಿಸ್ಟ್‌ನಲ್ಲಿ ಇರುತ್ತದೆ. ಇನ್ನು ಆಗಿಂದಾಗಲೇ ರೈಲಿನ ಟಿಕೇಟ್ ಬುಕ್ ಮಾಡಬೇಕಾದ್ರೆ ಕೇವಲ ಜನರಲ್ ಟಿಕೇಟ್ ಮಾತ್ರ ಲಭ್ಯವಿರುವುದು. ಅದೂ ಕೂಡಾ ರೈಲ್ವೆ ಸ್ಟೇಶ್‌ನ್‌ನಲ್ಲಿ ಲೈನ್‌ನಲ್ಲಿ ನಿಂತು ಟಿಕೇಟ್ ಕೊಳ್ಳಬೇಕು.

ಜನರಲ್ ಟಿಕೇಟ್ ಬುಕ್ಕಿಂಗ್

ಜನರಲ್ ಟಿಕೇಟ್ ಬುಕ್ಕಿಂಗ್

ರೈಲ್ವೆ ಇಲಾಖೆಯು ಈಗ ಈ ಜನರಲ್ ಟಿಕೇಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಲಭವಾಗಿಸಿದೆ. ರೈಲ್ವೆ ಸ್ಟೇಶನ್‌ನಲ್ಲಿ ದೊಡ್ಡ ಲೈನ್‌ನಲ್ಲಿ ನಿಂತು ಟಿಕೇಟ್ ಖರೀದಿಸುವ ಬದಲು ನೀವು ಮನೆಯಲ್ಲಿ ಕೂತು ನಿಮ್ಮ ಮೊಬೈಲ್ ಮೂಲಕ ಟಿಕೇಟ್ ಬುಕ್ಕಿಂಗ್ ಮಾಡಬಹುದು.

UTA app

UTA app

ರೈಲ್ವೆ ಇಲಾಖೆಯು ಮೊಬೈಲ್ ಎಪ್ಲಿಕೇಶನ್‌ UTA app ಒಂದನ್ನು ಜಾರಿಗೆ ತಂದಿದೆ. ಈ ಎಪ್ಲಿಕೇಶನ್‌ನ್ನು ಮೊತ್ತ ಮೊದಲ ಬಾರಿಗೆ ಮುಂಬೈನಲ್ಲಿ ಜಾರಿಗೆ ತರಲಾಗಿತ್ತು. ಆಂಡ್ರಾಯ್ಡ್ ಹಾಗೂ ವಿಂಡೋಸ್ ಮೊಬೈಲ್ ಬಳಕೆದಾರರಿಗೆ ಈ ಎಪ್ಲಿಕೇಶನ್ ಉಚಿತವಾಗಿದ್ದು , ಸದ್ಯಕ್ಕೆ ಈ ಆಪ್‌ನಿಂದ ಮುಂಬೈ ಹಾಗೂ ಚೆನ್ನೈ ಸಬ್‌ಬ್ರಾಂಚ್‌ನಿಗೆ ಟಿಕೇಟ್ ಬುಕ್ ಮಾಡಬಹುದು. ಇಲ್ಲಿ ಎರಡು ವಿಧಾನಗಳಿಂದ ಟಿಕೇಟ್ ಬುಕ್ ಮಾಡಬಹುದು.

ಪೇಪರ್ ಟಿಕೇಟ್

ಪೇಪರ್ ಟಿಕೇಟ್

ಮೊಬೈಲ್‌ ಮೂಲಕ ಈ ಟಿಕೇಟ್‌ನ್ನು ಬುಕ್ ಮಾಡಬಹುದು. ಇದರಲ್ಲಿ ಬಳಕೆದಾರರಿಗೆ ಯೂಸರ್ ಐಡಿ ಜೊತೆಗೆ ಟಿಕೇಟ್‌ನ ಇನ್ನೊಂದು ಮಾಹಿತಿ ಸಿಗುತ್ತದೆ. ಯೂಸರ್ ಐಡಿ ಮೂಲಕ ಅಟೋಮೆಟಿಕ್ ಟಿಕೇಟ್ ವೆಂಡಿಂಗ್ ಮೇಶಿನ್ ಮೂಲಕ ಟಿಕೇಟ್‌ನ ಪ್ರಿಂಟ್ಔಟ್‌ ತೆಗೆದುಕೊಳ್ಳಬಹುದು. ಇದು ಮುಂಬೈ ಸಬ್‌ಬ್ರಾಂಚ್‌ನಲ್ಲಿ ಮಾತ್ರ ಚಾಲ್ತಿಯಲ್ಲಿದೆ.

ಪೇಪರ್‌ಲೆಸ್ ಟಿಕೇಟ್

ಪೇಪರ್‌ಲೆಸ್ ಟಿಕೇಟ್

ಇದರಲ್ಲಿ ಟಿಕೇಟ್ ಮೊಬೈಲ್ ಎಪ್ಲಿಕೇಶನ್‌ಗೆನೇ ಬರುತ್ತದೆ. ಇದರಲ್ಲಿ ಪ್ರಯಾಣಿಕರಿಗೆ ಟಿಕೇಟ್‌ನ ಹಾರ್ಡ್ ಕಾಫಿ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಪೇಪರ್‌ಲೆಸ್ ಟಿಕೇಟ್ ಪಡೆಯಲು ಪ್ರಯಾಣಿಕರ ಸ್ಮಾರ್ಟ್‌ಫೋನ್‌ ಜಿಪಿಎಸ್ ಇನ್‌ಏಬಲ್ ಆಗಿರುವುದು ಮುಖ್ಯ. ಹಾಗಾದರೆ ಮಾತ್ರ ಪೇಪರ್‌ಲೆಸ್ ಟಿಕೇಟ್ ನಿಮ್ಮ ಮೊಬೈಲ್‌ಗೆ ಬರುತ್ತದೆ.

ರಿಜಿಸ್ಟ್ರೆಡ್ ಬಳಕೆದಾರರಷ್ಟೇ ಬಳಸಬಹುದು

ರಿಜಿಸ್ಟ್ರೆಡ್ ಬಳಕೆದಾರರಷ್ಟೇ ಬಳಸಬಹುದು

ಈ ಎಪ್ಲಿಕೇಶನ್‌ನ್ನು ಸೆಂಟರ್ ಫಾರ್ ರೈಲ್ವೆ ಇನ್ಫರ್ಮೆಶನ್ ಸಿಸ್ಟಮ್ ಡೆವಲಪ್ ಮಾಡಿರುವುದು. ಈ ಸೌಲಭ್ಯವನ್ನು ಪಡೆಯಲು ಪ್ರಯಾಣಿಕರಿಗೆ ರೈಲ್ವೆ ವಾಲೆಟ್‌ ಮೈಂಟೆನ್ ಮಾಡುವುದು ಅಗತ್ಯ. ಪ್ರಯಾಣೀಕರು ಮೊಬೈಲ್ ಫೋನ್ ಜೊತೆಗೆ www.utsonmobile.indianrail.gov.in ಮೂಲಕ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದು. ಅದಕ್ಕಾಗಿ ಪ್ರಯಾಣಿಕರಿಗೆ ತಮ್ಮ ಹೆಸರು, ಮೊಬೈಲ್ ನಂಬರ್, ಟ್ರೈನ್ ಟೈಪ್, ಕ್ಲಾಸ್‌, ಟಿಕೇಟ್ ಟೈಪ್, ಪ್ಯಾಸೆಂಜರ್ ನಂಬರ್ ಮುಂತಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಇದರಲ್ಲಿ ಓಟಿಪಿಯ ಮುಖಾಂತರ ಬಳಕೆದಾರರ ವೇರಿಫೀಕೇಶನ್ ಮಾಡಲಾಗುತ್ತದೆ. ಕೇವಲ ರಿಜಿಸ್ಟ್ರೆಡ್ ಬಳಕೆದಾರರಷ್ಟೇ ಈ ಎಪ್ಲಿಕೇಶನ್‌ನ್ನು ಬಳಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X