Search
  • Follow NativePlanet
Share
» »ರೈಲಿಗೂ ಬಂತು ವಿಮಾನದ ರೂಲ್ಸ್‌..ಲಿಮಿಟ್‌ಗಿಂತ ಹೆಚ್ಚು ಲಗೇಜ್ ಕೊಂಡೋದ್ರೆ ಫೈನ್

ರೈಲಿಗೂ ಬಂತು ವಿಮಾನದ ರೂಲ್ಸ್‌..ಲಿಮಿಟ್‌ಗಿಂತ ಹೆಚ್ಚು ಲಗೇಜ್ ಕೊಂಡೋದ್ರೆ ಫೈನ್

ರೈಲಿನಲ್ಲಿ ಓಡಾಡದವರು ಯಾರೂ ಇಲ್ಲ ಅಂತಾನೇ ಹೇಳಬಹುದು. ರೈಲಿನಲ್ಲಿ ಖರ್ಚು ಕಡಿಮೆ. ಹಾಗೆಯೇ ಸಾಮಾನನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಾಗಿಸಬಹುದು. ರೈಲಿನಲ್ಲಿ ಒಂದಿಷ್ಟು ಲಗೇಜ್‌ ತುಂಬಿಸಿಕೊಂಡು , ಅದನ್ನು ರೈಲಿಗೆ ಏರಿಸಲು ಹಾಗೂ ಇಳಿಸಲು ಕೂಲಿಯಾಳುಗಳಿಗೆ ಒಂದಿಷ್ಟು ದುಡ್ಡು ಕೊಡುವ ಕಾಲ ಹೋಗಿದೆ. ಇದೀಗ ಏನಿದ್ದರು ಲಿಮೆಟೆಡ್ ಲಗೇಜ್ ಅಷ್ಟೇ.

ವಿಮಾನದ ರೂಲ್ಸ್‌ ರೈಲಿನಲ್ಲೂ

ವಿಮಾನದ ರೂಲ್ಸ್‌ ರೈಲಿನಲ್ಲೂ

ವಿಮಾನದಲ್ಲಿ ಪ್ರಯಾಣಿಸಿರುವವರಿಗೆ ತಿಳಿದಿರುತ್ತೆ, ಅಗತ್ಯಕ್ಕಿಂತ ಹೆಚ್ಚಿನ ಲಗೇಜ್ ಕೊಂಡೊಯ್ಯುವಂತಿಲ್ಲ. ಒಬ್ಬರಿಗೆ ಇಷ್ಟೇ ತೂಕದ ಲಗೇಜ್ ಎಂದು ನಿಗಧಿಸಿರುತ್ತಾರೆ. ಅದರಷ್ಟೇ ನಾವು ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋದರೆ ನಿಮ್ಮ ಸಾಮಾನನ್ನು ಬ್ಯಾಗ್‌ನಿಂದ ಹೊರಗೆ ತೆಗೆಸಿ ಏರ್‌ಪೋರ್ಟ್‌ನಲ್ಲಿ ಬಿಸಾಡಿ ಬಿಡುತ್ತಾರೆ.

ಸೀಮಿತ ಲಗೇಜ್

ಸೀಮಿತ ಲಗೇಜ್

ಇದೀಗ ಇಂತಹದ್ದೇ ರೂಲ್ಸ್ ರೈಲ್ವೆಗೂ ಬಂದಿದೆ. ಓರ್ವ ವ್ಯಕ್ತಿಗೆ ಸೀಮಿತವಾಗಿರುವಷ್ಟೇ ಲಗೇಜ್ ಕೊಂಡೊಯ್ಯಬೇಕು. ಒಂದು ವೇಳೆ ಅದಕ್ಕಿಂತಲೂ ಹೆಚ್ಚಿನ ಲಗೇಜ್ ಕೊಂಡೊಯ್ಯುವುದು ಕಂಡು ಬಂದಲ್ಲಿ ಫೈನ್ ಕಟ್ಟಬೇಕಾಗುತ್ತದೆ. ರೈಲ್ವೆ ಇಲಾಖೆಯ ಈ ನಿಯಮ ಬಹಳ ಹಿಂದಿನಿಂದಲೇ ಇದೆ. ಆದರೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರಲಿಲ್ಲ.

ಮಿತಿಗಿಂತ ಹೆಚ್ಚಿದ್ದಲ್ಲಿ ದಂಢ ತೆರಬೇಕು

ಮಿತಿಗಿಂತ ಹೆಚ್ಚಿದ್ದಲ್ಲಿ ದಂಢ ತೆರಬೇಕು

ರೈಲಿನ ಪ್ರತ್ಯೇಕ ಕೋಚ್‌ನಲ್ಲಿ ನಿರ್ಧಿಷ್ಟ ಮಿತಿಯಷ್ಟು ಲಗೇಜ್‌ನ್ನು ಉಚಿತವಾಗಿ ಕೊಂಡೊಯ್ಯಬಹುದು. ಒಂದು ವೇಳೆ ನಿಮ್ಮ ಸಾಮಾನು ನಿರ್ಧಿಷ್ಟ ಲಗೇಜ್‌ನ ಮಿತಿಗಿಂತ ಹೆಚ್ಚಿದ್ದಲ್ಲಿ ನೀವು ಫೈನ್ ಕಟ್ಟಬೇಕು. ನಿಮಗೆ ಇನ್ನೂ ಹೆಚ್ಚಿನ ಲಗೇಜ್‌ನ್ನು ಕೊಂಡೊಯ್ಯಬೇಕೆಂದಿದ್ದಲ್ಲಿ ಲಗೇಜ್‌ನ್ನು ಪಾರ್ಸೆಲ್‌ ರೂಪದಲ್ಲಿ ಪ್ಯಾಕ್ ಮಾಡಿ ರೈಲ್ವೆ ಗೆ ಕಳಿಸಬೇಕು.

ಎಷ್ಟು ಲಗೇಜ್‌ನ್ನು ಉಚಿತವಾಗಿ ಕೊಂಡೊಯ್ಯಬಹುದು

ಎಷ್ಟು ಲಗೇಜ್‌ನ್ನು ಉಚಿತವಾಗಿ ಕೊಂಡೊಯ್ಯಬಹುದು

ಎಸಿ ಫಸ್ಟ್ ಕ್ಲಾಸ್ ಶ್ರೇಣಿಯಲ್ಲಿ ಲಗೇಜ್‌ನ ಮಿತಿ 70 ಕಿ.ಲೋ. ಇದರ ಜೊತೆ 15 ಕಿ.ಲೋ ವರೆಗೆ ಹೆಚ್ಚಿಗೆ ಕೊಂಡೊಯ್ಯಬಹುದು.. ಇದಕ್ಕಿಂತಲೂ ಹೆಚ್ಚಿನ ಸಾಮಾನನ್ನು ಕೊಂಡೊಯ್ಯಬೇಕಾದರೆ ಹೆಚ್ಚಿಗೆ ಹಣವನ್ನು ನೀಡಬೇಕು.
ಎಸಿ 2ನೇ ಶ್ರೇಣಿಯಲ್ಲಿ 50 ಕಿ.ಲೋ ಲಗೇಜ್ ಕೊಂಡೊಯ್ಯಬಹುದು. ಅದರ ಜೊತೆ 10 ಕಿ.ಲೋ ಹೆಚ್ಚಿಗೆ ಕೊಂಡೊಯ್ಯಬಹುದು.

ಹೆಚ್ಚಿಗೆ ಹಣ ಪಾವತಿಸಬೇಕು

ಹೆಚ್ಚಿಗೆ ಹಣ ಪಾವತಿಸಬೇಕು

ಎಸಿ 3ನೇ ಶ್ರೇಣಿಯಲ್ಲಿ 40 ಕಿ.ಲೋ ಲಗೇಜ್ ಕೊಂಡೊಯ್ಯಬಹುದು. ಅದರ ಜೊತೆ 10 ಕಿ.ಲೋ ಹೆಚ್ಚಿಗೆ ಕೊಂಡೊಯ್ಯಬಹುದು. ಸ್ಲೀಪರ್ ಕ್ಲಾಸ್‌ನಲ್ಲಿ 40 ಕೆ.ಜಿ ಕಿ.ಲೋ ಲಗೇಜ್ ಕೊಂಡೊಯ್ಯಬಹುದು. ಅದರ ಜೊತೆ 10 ಕಿ.ಲೋ ಹೆಚ್ಚಿಗೆ ಕೊಂಡೊಯ್ಯಬಹುದು. ಇದಕ್ಕಿಂತಲೂ ಹೆಚ್ಚಿನ ಲಗೇಜ್ ಕೊಂಡೊಯ್ಯಬೇಕಾದರೆ ಹೆಚ್ಚಿಗೆ ಹಣ ಪಾವತಿಸಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X