Search
  • Follow NativePlanet
Share
» »ಪ್ರಾಣಿ ಪ್ರಿಯರಿಗಾಗಿ ಬೆಂಗಳೂರಿನಲ್ಲಿದೆ ವಿಶೇಷ ಪ್ರಾಣಿ ಸಂಗ್ರಹಾಲಯ

ಪ್ರಾಣಿ ಪ್ರಿಯರಿಗಾಗಿ ಬೆಂಗಳೂರಿನಲ್ಲಿದೆ ವಿಶೇಷ ಪ್ರಾಣಿ ಸಂಗ್ರಹಾಲಯ

ನಮಗೆಲ್ಲಾ ತಿಳಿದಿರುವಂತೆ ಪ್ರಾಣಿ ಸಂಗ್ರಹಾಲಯಗಳಲ್ಲಿ ವನ್ಯ ಜೀವಿಗಳನ್ನು ಕಾಣಬಹುದು, ಅಲ್ಲದೆ ದೂರದಲ್ಲಿ ನಿಂತು ವೀಕ್ಷಿಸಿ ಆನಂದಿಸಬಹುದು. ಆದರೆ ಇಲ್ಲೊಂದು ವಿಶೇಷ ಪ್ರಾಣಿ ಸಂಗ್ರಹಾಲಯವಿದೆ, ಇಲ್ಲಿ ಪ್ರಾಣಿಗಳನ್ನು ಮುಟ್ಟಬಹುದು ಮತ್ತು ಅವುಗಳೊಂದಿಗೆ ಕಾಲ ಕಳೆಯಬಹುದು. ಈ ಪ್ರಾಣಿ ಉದ್ಯಾನವನವು ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಅಭಯಾರಣ್ಯವಾಗಿದೆ.

ಈ ಸ್ಥಳವು ನಿಮಗೆ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿವಿಧ ಪಕ್ಷಿಗಳು ಹಾಗೂ ಪ್ರಾಣಿಗಳೊಂದಿಗೆ ಅನ್ಯೋನ್ಯತೆಯನ್ನು ಅನುಭವಿಸಲು ಅವಕಾಶವನ್ನು ನೀಡುತ್ತದೆ. ಇಲ್ಲಿ ನೀವು ವಿಶೇಷವಾಗಿ ಪ್ರಾಣಿಗಳಿಗೆ ಆಹಾರ ನೀಡಬಹುದು ಮತ್ತು ಸ್ನಾನ ಮಾಡಿಸಬಹುದು. ಕುಟುಂಬದೊಂದಿಗೆ ವಾರಾಂತ್ಯದಲ್ಲಿ ಭೇಟಿ ನೀಡಲು ಸೂಕ್ತ ಸ್ಥಳವಿದಾಗಿದ್ದು, ಈ ಸ್ಥಳದ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

Prani : The Pet Sanctuary in Bengaluru; Attractions, Entry Fee, Timings and How to Reach

ಪ್ರಾಣಿ : ದ ಪೆಟ್ ಸ್ಯಾಂಚುರಿ :

ಮೇಲೆ ತಿಳಿಸಿದಂತೆ ಪ್ರಾಣಿಗಳೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶವನ್ನು ಒದಗಿಸುವ ಪ್ರಾಣಿ ಸಂಗ್ರಹಾಲಯವೇ 'ಪ್ರಾಣಿ : ದ ಪೆಟ್ ಸ್ಯಾಂಚುರಿ'. ಪ್ರಾಣಿ - ಪೆಟ್ ಅಭಯಾರಣ್ಯವು ಒಂದು ರೀತಿಯ ಅನುಭವವನ್ನು ನೀಡುವ ಉದ್ಯಾನವಾಗಿದೆ. ಮನುಷ್ಯರು ಮತ್ತು ಪ್ರಾಣಿಗಳು ಸುರಕ್ಷಿತವಾಗಿ ಈ ಜಗತ್ತಿನಲ್ಲಿ ಸಹಬಾಳ್ವೆ ನಡೆಸಬಹುದು ಎಂಬುದನ್ನು ಈ ಸಂಗ್ರಹಾಲಯವು ಎತ್ತಿ ಹಿಡಿಯುತ್ತದೆ.
ಇಂದಿನ ಅನೇಕ ಮಕ್ಕಳು ಕುದುರೆಯನ್ನು ನೋಡಿಲ್ಲ / ಮುದ್ದಿಸಿಲ್ಲ ಅಥವಾ ಕುರಿ ಮತ್ತು ಮೇಕೆ ನಡುವಿನ ವ್ಯತ್ಯಾಸವನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳಿಗೆ ಪ್ರಾಣಿಗಳ ಜಗತ್ತಿನ ಪರಿಚಯ ನೀಡುವ ನಿಟ್ಟಿನಲ್ಲಿ ಈ ಸ್ಥಳವನ್ನು ನಿರ್ಮಿಸಲಾಗಿದೆ ಎಂದು ಅಧಿಕೃತವಾಗಿ ಹೇಳಲಾಗಿದೆ.

ಇಲ್ಲಿ 1.5 ಗಂಟೆಗಳ ಕಾಲ ಶೈಕ್ಷಣಿಕ ಪ್ರವಾಸವನ್ನು ಪಡೆಯಬಹುದು. ಇಲ್ಲಿ ನೀವು 40ಕ್ಕೂ ಅಧಿಕ ಜಾತಿಗಳಲ್ಲಿ ಮತ್ತು 700ಕ್ಕೂ ಅಧಿಕ ಸಂರಕ್ಷಿಸಿದ ಪಕ್ಷಿಗಳು ಮತ್ತು ಪ್ರಾಣಿಗಳೊಂದಿಗೆ ಸಂವಹನ ನಡೆಸಬಹುದು.

Prani : The Pet Sanctuary in Bengaluru; Attractions, Entry Fee, Timings and How to Reach

ಎಲ್ಲಿದೆ ? :

ಸೋಮನಹಳ್ಳಿ ಗ್ರಾಮ, ಕನಕಪುರ ರಸ್ತೆ ಸುಂಕದಕಟ್ಟೆ, ಬೆಂಗಳೂರು

ಭೇಟಿಯ ವಿವರಗಳು :

ಬುಕಿಂಗ್: ಸೋಮವಾರದಿಂದ ಶುಕ್ರವಾರದವರೆಗೆ ಆನ್‌ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು.

ಸಮಯ: 9:30 ರಿಂದ ಸಂಜೆ 5 ರವರೆಗೆ

ಪ್ರವೇಶ ಶುಲ್ಕ: ಪ್ರತಿ ವ್ಯಕ್ತಿಗೆ 400/-ರೂ

'ಪ್ರಾಣಿ'ಯನ್ನು ತಲುಪುವುದು ಹೇಗೆ ? :

ಮಾರ್ಗ : ಬನಶಂಕರಿಯಿಂದ ಸುಮಾರು 25 ಕಿ.ಮೀ. ಗೂಗಲ್ ನಕ್ಷೆಗಳನ್ನು ಅನುಸರಿಸಿ ನೀವು ಈ ಜಾಗಕ್ಕೆ ತಲುಪಬೇಕು. ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲಿವಿಂಗ್ ಅನ್ನು ದಾಟಿ ಸುಮಾರು 5 ಕಿಮೀ ನಂತರ ಎಡಕ್ಕೆ ತಿರುಗಬೇಕು. ತದನಂತರ ಸೋಮನಹಳ್ಳಿ ಎಂಬ ಗ್ರಾಮದಲ್ಲಿ ಈ ಜಾಗವಿದೆ.

ಇತರೆ ಆಯ್ಕೆಗಳು: ಕನಕಪುರ ರಸ್ತೆಯಲ್ಲಿ ಸಾಕಷ್ಟು ಬಸ್‌ಗಳು ಲಭ್ಯವಿವೆ, ಕೊನೆಯ 4-5 ಕಿಮೀಗಳಲ್ಲಿ ನೀವು ಸ್ಥಳೀಯ ಆಟೋವನ್ನು ಪಡೆಯಲು ಪ್ರಯತ್ನಿಸಬಹುದು. ಕೆಲವು ಬಸ್ಸುಗಳು ಇನ್ನೂ ಹತ್ತಿರ ಹೋಗುತ್ತವೆ, ಆದರೆ ನಿಗಧಿತ ಸಮಯದ ಬಸ್‌ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಈ ಜಾಗಕ್ಕೆ ತಲುಪಲು ಚಾಲನೆ ಮಾಡುವುದು ಅಥವಾ ಟ್ಯಾಕ್ಸಿ ತೆಗೆದುಕೊಳ್ಳುವುದು ಉತ್ತಮ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X