Search
  • Follow NativePlanet
Share
» »ಕರ್ನಾಟಕದ ಸುಪ್ರಸಿದ್ದ 7 ಅಣೆಕಟ್ಟುಗಳಿವು

ಕರ್ನಾಟಕದ ಸುಪ್ರಸಿದ್ದ 7 ಅಣೆಕಟ್ಟುಗಳಿವು

ಪ್ರವಾಸವೆಂದರೆ ನಮ್ಮಲ್ಲಿ ಸಾಮಾನ್ಯವಾಗಿ ಗಿರಿಧಾಮಗಳು, ಬೀಚ್ ಗಳು, ದೇವಾಲಯಗಳು ಇತ್ಯಾದಿಗಳು ಬರುತ್ತವೆ ಇವು ಪ್ರವಾಸೋದ್ಯಮದ ಸಾಮಾನ್ಯವಾದ ಆಯ್ಕೆಗಳಾಗಿವೆ. ಜಲಾಶಯಗಳು ಮತ್ತು ಹಿನ್ನಿರಿನ ಸ್ಥಳಗಳಿಗೆ ಭೇಟಿ ಕೊಡುವುದೂ ಅತ್ಯಂತ ಆಸಕ್ತಿದಾಯಕ ವಿಷಯಗಳು ಆದರೆ ಅಣೆಕಟ್ಟಿಗೆ ಪ್ರವಾಸ ಮಾಡುವುದೆಂದರೆ ಸ್ವಲ್ಪ ವಿಭಿನ್ನವಾದ ವಿಷಯ ಅಲ್ಲವೆ? ಕರ್ನಾಟಕದಲ್ಲಿ ಅಂತಹುದೇ ಹಲವಾರು ಅಣೆಕಟ್ಟುಗಳಿದ್ದು ಇವು ಆಪ್ಭೀಟ್ ಪ್ರವಾಸಕ್ಕೆ ಬೇಕಾದಷ್ಟು ಆಯ್ಕೆಯನ್ನು ಒದಗಿಸುತ್ತದೆ.

ಕರ್ನಾಟಕದಲ್ಲಿ ಕೆಲವು ಜನಪ್ರಿಯ ಸ್ಥಳಗಳಿಗೆ ಪ್ರವಾಸ ಮಾಡುವಾಗ ಜೊತೆಗೆ ಅಲ್ಲಿಯ ಅಣೆಕಟ್ಟಿನ ಪ್ರದೇಶವನ್ನೂ ಭೇಟಿಯ ಪಟ್ಟಿಗೆ ಸೇರಿಸಿಕೊಳ್ಳಿ. ಜಲಾಶಯಗಳು ಮತ್ತು ಹಿನ್ನೀರಿನ ಕೆಲವು ಸ್ಥಳಗಳೂ ಕೂಡಾ ಭೇಟಿಗೆ ಆಸಕ್ತಿದಾಯಕವಾಗಿವೆ. ಕರ್ನಾಟಕದ ಈ ಅತ್ಯಂತ ಪ್ರಸಿದ್ದ ಅಣೆಕಟ್ಟುಗಳು ಪ್ರವಾಸಿಗರಿಗೆ ಕೆಲವು ಆಫ್ಬೀಟ್ ಪ್ರವಾಸಿ ಆಯ್ಕೆಗಳನ್ನು ಒದಗಿಸುತ್ತವೆ.

ಕೆಲವು ಜಲಾಶಯಗಳಲ್ಲಿ ಕೊರಾಕಲ್ ಸವಾರಿ, ಬೋಟಿಂಗ್ಮ್ ವನ್ಯಜೀವಿ ಪ್ರಯಾಣ ಇತ್ಯಾದಿಗಳ ಸೌಕರ್ಯಗಳೂ ಇವೆ. ಈ ಸ್ಥಳಗಳು ಕರ್ನಾಟಕ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿದೆ.

ಕರ್ನಾಟಕದ ಕೆಲವು ಸುಂದರವಾದ ಅಣೆಕಟ್ಟುಗಳಿರುವ ಸ್ಥಳಗಳಿಗೆ ಪ್ರವಾಸ ಮಾಡೋಣ

ಕೃಷ್ಣರಾಜ ಸಾಗರ ಅಣೆಕಟ್ಟು (ಕೆ ಆರ್ ಎಸ್)

ಕೃಷ್ಣರಾಜ ಸಾಗರ ಅಣೆಕಟ್ಟು (ಕೆ ಆರ್ ಎಸ್)

ಮೈಸೂರಿನಲ್ಲಿ ಕೆ ಆರ್ ಎಸ್ ಅಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು ಇದು ಕರ್ನಾಟಕದ ಅತ್ಯಂತ ಪ್ರಸಿದ್ದ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದನ್ನು ಸರ್. ಎಂ. ವಿಶ್ವೇಶ್ವರಯ್ಯನವರು 1924.ರಲ್ಲಿ ನಿರ್ಮಿಸಿದರು.

ಈ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಈ ಪ್ರಾಂತ್ಯವನ್ನು ಆಳುತ್ತಿದ್ದ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರ ಹೆಸರನ್ನೇ ಇಡಲಾಗಿದೆ.

ಈ ಜಲಾಶಯವು ಮೈಸೂರು ಬೆಂಗಳೂರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ ಮತ್ತು ನಂತರ ಇದು ತಮಿಳುನಾಡಿನ ಕಡೆಗೆ ಹರಿಯುತ್ತದೆ.

ಕೆ ಆರ್ ಎಸ್ ಅಣೆಕಟ್ಟಿನ ಜೊತೆಗೆ ಬೃಂದಾವನ ಉದ್ಯಾನವನವು ಮೈಸೂರಿನ ಜನಪ್ರಿಯ ಆಕರ್ಷಣೆಗಳಾಗಿವೆ.

 ತುಂಗಾಭದ್ರಾ ಅಣೆಕಟ್ಟು

ತುಂಗಾಭದ್ರಾ ಅಣೆಕಟ್ಟು

ತುಂಗಭದ್ರಾ ಅಣೆಕಟ್ಟು ಕರ್ನಾಟಕದ ಅತ್ಯಂಟ ದೊಡ್ಡ ಅಣೆಕಟ್ಟು ಎಂದು ಪರಿಗಣಿಸಲ್ಪಟ್ಟಿದೆ. ಈ ಬಹುಪಯೋಗಿ ಅಣೆಕಟ್ಟನ್ನು ಹೊಸಪೇಟೆಯಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಈ ಅಣೆಕಟ್ಟಿಗೆ 33 ದ್ವಾರಗಳಿದ್ದು ಪ್ರಮುಖವಾಗಿ ಕೃಷಿ ನೀರಾವರಿ, ಕುಡಿಯುವ ನೀರಿಗೆ ಮತ್ತು ವಿದ್ಯುತ್ ಉತ್ಪಾದನೆಗೆ ಇದರ ನೀರನ್ನು ಉಪಯೋಗಿಸಲಾಗುತ್ತದೆ.

ಅಣೆಕಟ್ಟಿನಿಂದ ಸುಮಾರು 25 ಕಿಮೀ ದೂರದಲ್ಲಿರುವ ಹಂಪಿಯು ಅದರ ಸಮೀಪವಿರುವ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.

ವಾಣಿ ವಿಲಾಸ ಸಾಗರ

ವಾಣಿ ವಿಲಾಸ ಸಾಗರ

ವಾಣಿ ವಿಲಾಸ ಸಾಗರ ಅಣೆಕಟ್ಟು ಕರ್ನಾಟಕದ ಅತ್ಯಂತ ಹಳೆಯದಾದ ಅಣೆಕಟ್ಟಾಗಿದೆ. ಇದು ಚಿತ್ರದುರ್ಗದಲ್ಲಿ ನೆಲೆಸಿದ್ದು, ವೇದಾವತಿ ನದಿಗೆ ಅಡ್ಡಲಾಗಿ ಸ್ವಾತಂತ್ರ್ಯಕ್ಕೆ ಪೂರ್ವದಲ್ಲಿಯೇ ನಿರ್ಮಿಸಲಾಗಿತ್ತು.

ಈ ಅಣೆಕಟ್ಟೆಯು 'ಮಾರಿಕಣಿವೆ' ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಈ ನಡುವೆ ಈ ಸ್ಥಳವು ನಿಧಾನವಾಗಿ ಪ್ರವಾಸಿ ಆಕರ್ಷಣೆಯನ್ನು ಪಡೆಯುತ್ತಿದೆ.

ಚಿತ್ರದುರ್ಗ ಕೋಟೆಗೆ ಭೇಟಿ ಕೊಡುವವರ್ ವಾಣಿ ವಿಲಾಸ ಸಾಗರವನ್ನೂ ತಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.

ಪಂಚವಟಿ, ಔಷಧೀಯ ಸಸ್ಯಗಳ ಉದ್ಯಾನವನವೂ ಅಣೆಕಟ್ಟಿನ ಹತ್ತಿರದಲ್ಲಿ ನೆಲೆಸಿದೆ. ಇದನ್ನು ಪರಿಸರ ಪ್ರವಾಸೋದ್ಯಮವನ್ನು ಸುಧಾರಿಸಲು ಅಭಿವೃದ್ಧಿಪಡಿಸಲಾಗುತ್ತಿದೆ

ಸುಪಾ ಅಣೇಕಟ್ಟು

ಸುಪಾ ಅಣೇಕಟ್ಟು

ಸುಪಾ ಅಣೆಕಟ್ಟು ಉತ್ತರ ಕರ್ನಾಟಕದಲ್ಲಿದ್ದು ಇದು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಅಣೆಕಟ್ಟನ್ನು ವಿದ್ಯತ್ ಉತ್ಪಾದನೆಗಾಗಿ ಉಪಯೋಗಿಸಲಾಗುತ್ತದೆ.

ಇದನ್ನು ಈಗ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಿರ್ವಹಿಸುತ್ತಿದೆ.

 ಅಲಮಟ್ಟಿ ಅಣೆಕಟ್ಟು

ಅಲಮಟ್ಟಿ ಅಣೆಕಟ್ಟು

ಆಲಮಟ್ಟಿ ಅಣೆಕಟ್ಟನ್ನು ಜಲವಿದ್ಯುತ್ ಯೋಜನೆ ಮತ್ತು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಯ ಭಾಗವಾಗಿ ನಿರ್ಮಿಸಲಾಗಿದೆ.

ಇದು ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ, ಪ್ರವಾಸೋದ್ಯಮವನ್ನು ಹೆಚ್ಚಿಸಲು ಅಣೆಕಟ್ಟಿನ ಸುತ್ತಲೂ ತೋಟಗಳನ್ನು ರಚಿಸಲಾಗಿದೆ. ಅಲ್ಲದೆ ಪ್ರವಾಸಿಗರನ್ನು ರಂಜಿಸಲು ದೋಣಿ ವಿಹಾರ, ಸಂಗೀತ ಕಾರಂಜಿಗಳು ಇತ್ಯಾದಿಗಳ ವ್ಯವಸ್ಥೆಯೂ ಇಲ್ಲಿದೆ. ಆಲಮಟ್ಟಿ ಅಣೆಕಟ್ಟು ವಿಜಯಪುರದಿಂದ (ಬಿಜಾಪುರ) ಸುಮಾರು 71 ಕಿಮೀ ದೂರದಲ್ಲಿದೆ.

 ಹೇಮಾವತಿ ಅಣೆಕಟ್ಟು

ಹೇಮಾವತಿ ಅಣೆಕಟ್ಟು

ಕಾವೇರಿ ನದಿಯ ಉಪನದಿಯಾಗಿರುವ ಹೇಮಾವತಿ ನದಿಗೆ ಅಡ್ದಲಾಗಿ 1979 ರಲ್ಲಿ ಹೇಮಾವತಿ ಅಣೆಕಟ್ಟನ್ನು ನಿರ್ಮಿಸಲಾಯಿತು. ಇದನ್ನು ನಿರ್ಮಿಸುವಾಗ, ನೀರಿನ ಮಟ್ಟವು ಶೆಟ್ಟಿ ಹಳ್ಳಿ ರೋಸರಿ ಚರ್ಚ್ ಎಂಬ ಪ್ರಾಚೀನ ಚರ್ಚ್ ಅನ್ನು ಮುಳುಗಿಸಿತು. ಇಂದು ಅದರ ಒಂದು ಭಾಗ ನೀರು ಕಡಿಮೆಯಾದಾಗ ಮಾತ್ರ ಗೋಚರಿಸುತ್ತದೆ.

ಕಬಿನಿ ಅಣೆಕಟ್ಟು

ಕಬಿನಿ ಅಣೆಕಟ್ಟು

ಕಬಿನಿ ಅಣೆಕಟ್ಟಿನ ಹಿನ್ನಿರಿನ ಭಾಗವು ಶ್ರೀಮಂತ ವನ್ಯಜೀವಿ ವಿಭಾಗವನ್ನು ಹೊಂದಿದ್ದು ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನವು ಕಬಿನಿ ಅರಣ್ಯ ಮೀಸಲು ಪ್ರದೇಶದ ಒಂದು ಭಾಗವಾಗಿದೆ.

ಕಬಿನಿ ಅಣೆಕಟ್ಟು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಬೀಚನಹಳ್ಳಿ ಗ್ರಾಮದ ಬಳಿ ನಿರ್ಮಿಸಲಾದ ಸಣ್ಣ ಅಣೆಕಟ್ಟಾಗಿದೆ.

ಕಬಿನಿಯು ವಯನಾಡಿನಲ್ಲಿ ಹುಟ್ಟುತ್ತದೆ ಮತ್ತು ಬಾಣಾಸುರ ಸಾಗರ್ ಅಣೆಕಟ್ಟನ್ನು ಇದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದೆ. ಕಾವೇರಿ ನದಿಯನ್ನು ಸೇರಲು ನದಿಯು ಕರ್ನಾಟಕದ ಕಡೆಗೆ ಹರಿಯುತ್ತದೆ.ಕಬಿನಿ ವನ್ಯಜೀವಿ ಧಾಮ ಮತ್ತು ಜಲಾಶಯವು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X