Search
  • Follow NativePlanet
Share
ಮುಖಪುಟ » ಸ್ಥಳಗಳು» ಕೃಷ್ಣನಗರ್

ಕೃಷ್ಣನಗರ್ - ಸಾಂಸ್ಕೃತಿಕತೆ ಮತ್ತು ಕಲಾತ್ಮಕತೆಯ ನೆಲೆವೀಡು

8

ಪಶ್ಚಿಮ ಬೆಂಗಾಲದ ಕೃಷ್ಣನಗರ್ ತನ್ನ ಸಂಪ್ರದಾಯ , ಕಲೆ ಮತ್ತು ವಾಸ್ತುಶಿಲ್ಪದ ಕಾರಣವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ರಾಜಧಾನಿ ಕೊಲ್ಕಟಾದಿಂದ ಕೇವಲ 118 ಕಿ.ಮೀ ಗಳಷ್ಟು ದೂರದಲ್ಲಿ ಜಲಂಗಿ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ ಈ ಕೃಷ್ಣನಗರ್.  ಈ ಪಟ್ಟಣವು ತನ್ನ ಪರಂಪರೆಯಿಂದ ಮತ್ತು ಪ್ರಾಚೀನತೆಯಿಂದ ಗಮನ ಸೆಳೆಯುತ್ತಿದೆ.

ಸ್ಥಳೀಯವಾಗಿ "ಖೋರೆ" ಎಂದು ಕರೆಯಲ್ಪಡುವ ಈ ಸ್ಥಳಕ್ಕೆ ರಾಜ ಕೃಷ್ಣ ಚಂದ್ರರೈಗಳ ಹೆಸರನ್ನು ಇಡಲಾಗಿದೆ. ಇವರು ಒಬ್ಬ ಶ್ರೇಷ್ಠ ಕಲೆ ಮತ್ತು ವಾಸ್ತುಶಿಲ್ಪದ ಪೋಷಕರಾಗಿದ್ದರು. ಅದಕ್ಕೆ ಸಾಕ್ಷಿಯೆನ್ನುವಂತೆ ಈ ಸ್ಥಳದಲ್ಲಿ ಸಂಸ್ಕೃತಿ ಮತ್ತು ಕಲೆಯ ಶ್ರೀಮಂತ ನಿದರ್ಶನಗಳನ್ನು ನಾವು ನೋಡಬಹುದು. ಇಲ್ಲಿನ ಮಣ್ಣಿನ ಮಾದರಿಗಳು ಮತ್ತು ಧಾರ್ಮಿಕ ಉತ್ಸವಗಳು ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿವೆ.

ಹವಾಮಾನ, ಕುಶಲ ವಸ್ತುಗಳು ಮತ್ತು ಪಾಕಶಾಸ್ತ್ರದ ಆದರಾತಿಥ್ಯ

ಕೃಷ್ಣನಗರದ ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ. ಹಾಗಾಗಿ ಇಲ್ಲಿಗೆ ವರ್ಷದ ಯಾವುದೇ ಭಾಗದಲ್ಲಿ ಬೇಕಾದರು ಬರಬಹುದು. ಈ ನಗರವು ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡಿರುವ ನಗರವಾಗಿದೆ. ಪ್ರಸ್ತುತ ಇಲ್ಲಿನ ಸ್ಥಳೀಯ ಜನರು ಸಾಹಿತ್ಯದ ಕೊಡು ಕೊಳ್ಳುವಿಕೆಯ ಸಂಸ್ಕೃತಿಯನ್ನು ಉಳಿಸಿ,ಬೆಳೆಸಿಕೊಂಡು ಬರುತ್ತಿದ್ದಾರೆ.

ಘುರ್ನಿ ಎಂಬ ಉಪನಗರವು ಇಲ್ಲಿನ ಸಂಸ್ಕೃತಿಯ ಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರನಿರ್ವಹಿಸುತ್ತಿದೆ. ಘುರ್ನಿಯ ಬೀದಿ ಬೀದಿಗಳಲ್ಲಿ ಕಲಾವಿದರು ಮಣ್ಣಿನ ಅದ್ಭುತವಾದ ಕುಶಲವಸ್ತುಗಳನ್ನು ತಯಾರಿಸುವಲ್ಲಿ ಮಗ್ನರಾಗಿರುವುದನ್ನು ನಾವು ನೋಡಬಹುದು. ಇಲ್ಲಿ ಈ ಕಲಾವಿದರು ಮಣ್ಣಿನ ಕಲಾಕೃತಿಗಳನ್ನು ಮನೆಯ ಮುಂದಿನ ತೆರೆದ ಬಯಲಿನಲ್ಲಿ ಮಾಡುತ್ತಿರುತಾರೆ.

ಇಲ್ಲಿ ಅವರು ಮನುಷ್ಯನ ಚಿತ್ರಗಳು, ಹಣ್ಣುಗಳು ಮತ್ತು ಪ್ರಾಣಿಗಳ ಚಿತ್ರವನ್ನು ಮಣ್ಣಿನಲ್ಲಿ ತಯಾರಿಸುತ್ತಾರೆ. ಹೀಗೆ ಅಪರೂಪದ ಜೇಡಿ ಮಣ್ಣಿನಲ್ಲಿ ಮೂಡುವ ಕಲೆಯು ಕೃಷ್ಣನಗರಕ್ಕೆ ಇಡೀ ಪಶ್ಚಿಮ ಬಂಗಾಲದಲ್ಲಿ ಒಂದು ಸ್ಥಾನಮಾನವನ್ನು ನೀಡಿದೆ. ಇಲ್ಲಿ ಪ್ರವಾಸಿಗರು ಯಾವಾಗಲು ತುಂಬಿ ತುಳುಕುತ್ತಿರುತ್ತಾರೆ. ಅದರಲ್ಲಿಯೂ ಪ್ರೇಮಿಗಳಿಗೆ ಈ ಸ್ಥಳ ತುಂಬಾ ಅನುಕೂಲಕರವಾಗಿದೆ.

ಇಲ್ಲಿನ ಸಾಂಪ್ರದಾಯಿಕ ಸಿಹಿ ತಿಂಡಿ ತಯಾರಕರು ಇಲ್ಲಿ ಹಲ್ವೈಕರ್ಸ್ ಅಥವಾ ಮೊಯಿರಾಗಳನ್ನು ತಯಾರಿಸುತ್ತಾರೆ.ಸರ್ಭಜ ಮತ್ತು ಸರ್ಪುರಿಯ ತಿಂಡಿಗಳು ಬೆಂಗಾಲದ ಅತ್ಯಂತ ನೆಚ್ಚಿನ ಸಿಹಿತಿಂಡಿಗಳಾಗಿವೆ.

ಕೃಷ್ಣನಗರದ ಸುತ್ತ- ಮುತ್ತ ಇರುವ ಪ್ರವಾಸಿ ತಾಣಗಳು

ರಾಜ್‍ಬರಿ ಅಥವಾ ಕೃಷ್ಣನಗರ ಅರಮನೆಯು ತನ್ನ ವಾಸ್ತುಶಿಲ್ಪದ ಕಾರಣದಿಂದಾಗಿ ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇದರ ಜೊತೆಗೆ ಜೂಲನ್ ಮೇಲಾ ಮತ್ತು ಹೋಲಿ ಅಥವಾ ಬರೊ ಡೊಲ್‍ ಅನ್ನು ಸಹ ಇಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಐತಿಹಾಸಿಕ ಸ್ಮಾರಕವು ಡಿಘಿ ಎಂಬ ನೀರಿನ ತಾಣವನ್ನು ಹೊಂದಿದೆ. ಇಲ್ಲಿನ ಪ್ರಮುಖ ಸಭಾಂಗಣದಲ್ಲಿ ದುರ್ಗಾ ದೇವಿಯ ಮೂರ್ತಿಯನ್ನು ಕೆತ್ತಲಾಗಿದೆ.

ಪೂಜಾಸ್ಥಳಗಳು ಮತ್ತು ಇತ್ಯಾದಿ

ಭಾರೀ ಜನಪ್ರಿಯತೆಯನ್ನು ಗಳಿಸಿರುವ ರೋಮನ್ ಕ್ಯಾಥೋಲಿಕ್ ಚರ್ಚ್ ತನ್ನ ಧಾರ್ಮಿಕ ವಿಚಾರಗಳಿಗಷ್ಟೆ ಅಲ್ಲದೆ ಕೆಲವೊಂದು ಕೆತ್ತನೆಗಳಿಗು ಸಹ ಹೆಸರುವಾಸಿಯಾಗಿದೆ. 1886-88ರಲ್ಲಿ ಸ್ಥಾಪನೆಗೊಂಡ ಈ ಚರ್ಚ, ಏಸು ಕ್ರಿಸ್ತನ ಜೀವನಕ್ಕೆ ಸಂಬಂಧಿಸಿದ ಕೆಲವು ವರ್ಣ ಚಿತ್ರಗಳನ್ನು ಹೊಂದಿದೆ. ಅವುಗಳಿಗೆ ಮರದ ಕಟ್ಟನ್ನು ಸಹ ಹಾಕಲಾಗಿದೆ.ಈ ಚರ್ಚಿನ ಮೂಲೆಯಲ್ಲಿ ಅಲಂಕರಿಕವಾದ ಬಣ್ಣ ಬಣ್ಣದ ಗಾಜಿನ ವರ್ಣಚಿತ್ರಗಳಿಂದ ಕೂಡಿದ ಶೋಭಾಯಮಾನವಾದ ಪ್ರೊಟೆಸ್ಟೆಂಟ್ ಚರ್ಚನ್ನು ಸಹ ನಾವು ನೋಡಬಹುದು.

ಕೃಷ್ಣನಗರದಲ್ಲಿರುವ ಮಠಗಳು ಮತ್ತು ದೇವಾಲಯಗಳು ಈ ನಗರದಲ್ಲಿ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಧಾನ ಪಾತ್ರವಹಿಸಿವೆ. ಇವುಗಳ ಜೊತೆಗೆ ಜಲಂಗಿ ಘಾಟ್, ಮಾಯಾಪುರ್, ನಬದ್ವೀಪ್ ಮತ್ತು ಶಾಂತಿಪುರ್ ಎಂಬ ಧಾರ್ಮಿಕ ಕೇಂದ್ರಗಳನ್ನು ನಾವಿಲ್ಲಿ ಸಂದರ್ಶಿಸಬಹುದು. ಇದಲ್ಲದೆ ಕಾಲೇಜ್ ಭೂಮಿ, ಸಾರ್ವಜನಿಕ ಗ್ರಂಥಾಲಯಗಳನ್ನು ಸಹ ನಾವಿಲ್ಲಿ ನೋಡಬಹುದು. ತೋಟಗಾರಿಕೆಯ ಬಗ್ಗೆ ಆಸಕ್ತಿ ಹೊಂದಿರುವವರು ಬಹದೂರ್ ಪುರ್, ಮುರ್ಷಿದಾಬಾದ್ ಮತ್ತು ಬೆಥುವ ಡೌರಿ ಕಾಡುಗಳಿಗೆ ಭೇಟಿ ನೀಡಬಹುದು.

ಕೃಷ್ಣನಗರಕ್ಕೆ ಹೋಗಲು ಯಾವ ಕಾಲ ಉತ್ತಮ

ಕೃಷ್ಣನಗರಕ್ಕೆ ಹೋಗಲು ಚಳಿಗಾಲವು ಹೇಳಿ ಮಾಡಿಸಿದ ಸಮಯವಾಗಿದೆ.

ಕೃಷ್ಣನಗರಕ್ಕೆ ತಲುಪುವುದು ಹೇಗೆ

ಕೃಷ್ಣನಗರಕ್ಕೆ ರಸ್ತೆ ಮತ್ತು ರೈಲಿನ ಸಂಪರ್ಕ ಉತ್ತಮವಾಗಿದೆ

ಕೃಷ್ಣನಗರ್ ಪ್ರಸಿದ್ಧವಾಗಿದೆ

ಕೃಷ್ಣನಗರ್ ಹವಾಮಾನ

ಉತ್ತಮ ಸಮಯ ಕೃಷ್ಣನಗರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೃಷ್ಣನಗರ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ-34ರಲ್ಲಿ ನೆಲೆಗೊಂಡಿರುವ ಕೃಷ್ಣನಗರ್ ನಬದ್ವೀಪ್‍ದಿಂದ ಕೃಷ್ಣನಗರವನ್ನು ಸಂಪರ್ಕಿಸುವ ನಂ 8 ರಸ್ತೆಯ ಮೂಲಕ ತಲುಪಬಹುದು. ಕಸೆಷೊವ್ರಿ, ಮಾ ಲಕ್ಷ್ಮೀ, ಬುಬು, ಟರಮ, ಕ್ಯಮೆಲಿಯನ್, ಶರಿಕ, ಮಾ ಮನಷ, ಬಿಸ್ವರೂಪ್, ನಂದಿನಿ, ಬುರರಾಜ್, ಶರ್ಟಕಿ, ಮಾ ದುರ್ಗಾ ಬಸ್ಸುಗಳ ಮೂಲಕ ಕೃಷ್ಣನಗರಕ್ಕೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸ್ಥಳೀಯ EMU ರೈಲುಗಳು ಕೊಲ್ಕಟಾಗೆ ತಲುಪಲು ಇರುವ ಉತ್ತಮ ಸಂಪರ್ಕ ಸಾಧನಗಳಾಗಿವೆ. ಅಲ್ಲಿಂದ ಕೃಷ್ಣನಗರಕ್ಕೆ ಟ್ಯಕ್ಸಿಗಳ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇದಕ್ಕೆ ಹತ್ತಿರದಲ್ಲಿರುವ ವಾಯುನೆಲೆಯಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun