Search
  • Follow NativePlanet
Share
» »ಶಬ್ಧಗಳು ಮಾಡುವ ಬೆಟ್ಟಗಳು..!

ಶಬ್ಧಗಳು ಮಾಡುವ ಬೆಟ್ಟಗಳು..!

By Sowmyabhai

ತಮಿಳುನಾಡು..ದೇವಾಲಯಗಳ ಭೂಮಿಯಾಗಿ ಪ್ರಸಿದ್ಧಿಯನ್ನು ಹೊಂದಿದೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೇ. ಈ ರಾಜ್ಯದ್ಲಲಿ ಎಲ್ಲರೂ ದೇವಾಲಯವನ್ನು ಕಾಣುವ ಸಲುವಾಗಿ ಭೇಟಿ ನೀಡುತ್ತಿರುತ್ತಾರೆ. ಈ ಪ್ರದೇಶದಲ್ಲಿ ಪ್ರಸಿದ್ಧಿ ಹೊಂದಿರುವ ಕೊಡೈಕೆನಾಲ್, ಕೂನೂರ್‍ನಂತಹ ಗಿರಿಧಾಮಗಳು ಕೂಡ ಇಲ್ಲಿವೆ. ಊಟಿ, ಕೂನೂರ್‍ಗಳನ್ನು ಯಾವುದೇ ರೀತಿಯಲ್ಲಿಯೂ ಅವಕಾಶ ವಂಚಿತರಾಗಲೂ ಪ್ರವಾಸಿಗರು ಇಷ್ಟ ಪಡುವುದಿಲ್ಲ. ಅಲ್ಲಿ ಕೋಟಗಿರಿ ಗಿರಿಧಾಮವು ಕೂಡ ಇದೆ. ಲಾಂಗ್ ಟ್ರಿಪ್ ಹಾಕಿಕೊಳ್ಳುವವರಿಗೆ ಕೋಟಗಿರಿಯನ್ನು ತಪ್ಪದೇ ಭೇಟಿ ನೀಡಿ ಬನ್ನಿ.

ಇದು ಕೂಡ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ, ಸಮುದ್ರಮಟ್ಟಕ್ಕೆ ಸುಮಾರು 1793 ಮೀಟರ್ ಎತ್ತರದಲ್ಲಿದೆ. ಉಳಿದ ಗಿರಿಧಾಮಗಳಿಗೆ ಹೋಲಿಸಿದರೆ ಇದು ಸ್ವಲ್ಪ ಚಿಕ್ಕದಾಗಿದೆ. ಆದರೂ ಸಹ ವಾತಾವರಣದ ಯಾವುದೇ ವ್ಯತ್ಯಾಸ ಇರುವುದಿಲ್ಲ. ಕೋಟಗಿರಿ ಎಂದರೆ ಪರ್ವತ ಎಂಬ ಅರ್ಥವೇ ಆಗಿದೆ. ಪೂರ್ವದಲ್ಲಿ ಕೊಟಲ ಎಂಬ ಸ್ಥಳೀಯ ಗಿರಿಜನ ಇಲ್ಲಿ ವಾಸವಿದ್ದರು. ಇವರು ಸಾಮಾನ್ಯವಾಗಿ ಹೊರಗಿನ ಪ್ರಪಂಚಕ್ಕೆ ಬರಲು ಇಷ್ಟಪಡುವುದಿಲ್ಲ.

ಕೋಟಗಿರಿ ಟ್ರೆಕ್ಕಿಂಗ್‍ಗಳಿಗೆ ಪ್ರಸಿದ್ಧಿ. ಇಲ್ಲಿ ಗಮ್ಯಸ್ಥಾನಗಳಿಗೆ ಸೇರಿಕೊಳ್ಳುವುದಕ್ಕೆ ಅನೇಕ ಟ್ರೆಕ್ಕಿಂಗ್ ಮಾರ್ಗಗಳು ಇವೆ. ವ್ಯೂ ಪಾಯಿಂಟ್, ಜಲಪಾತ, ಪಾರ್ಕ್‍ಗಳು, ದೇವಾಲಯಗಳು ಮೊದಲಾದ ಆಕರ್ಷಣೆಗಳು ಇಲ್ಲಿವೆ.

1.ಕೊಡನಾಡ್

1.ಕೊಡನಾಡ್

PC: Hari Prasad Sridhar

ಇದನ್ನು ತೆರಮಿನಲ್ ಕಂಟ್ರಿ ಎಂದು ಕರೆಯುತ್ತಾರೆ. ಇದು ಕೋಟಗಿರಿಯಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಕೋಟಗಿರಿಯ ಸೌಂದರ್ಯವೆಲ್ಲಾ ಈ ವ್ಯೂ ಪಾಯಿಂಟ್‍ನಿಂದ ನೋಡಬಹುದು. ಸಾಗರ್ ಡ್ಯಾಂ, ಹಚ್ಚ ಹಸಿರಿನಿಂದ ಮೈದಾನಗಳು, ಮೋಯರ್ ನದಿ, ರಂಗನಾಥಸ್ವಾಮಿ ಶಿಖರಗಳು ಇಲ್ಲಿವೆ.

2.ರಂಗಸ್ವಾಮಿ ಶಿಖರ

2.ರಂಗಸ್ವಾಮಿ ಶಿಖರ

PC: Buvanesh Subramani

ರಂಗಸ್ವಾಮಿ ಶಿಖರವು ಕೋಟಗಿರಿಯಿಂದ ಸುಮಾರು 24 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1794 ಮೀಟರ್ ಎತ್ತರದಲ್ಲಿದೆ. ಗ್ರಾಮಸ್ಥರಿಗೆ ಇದು ಸ್ಥಳೀಯ ದೇವತಾ ಮೂರ್ತಿಯಾಗಿದ್ದಾನೆ. ನೀಲಗಿರಿ ಪ್ರವಾಸಿಗರಿಗೆ ಈ ಶಿಖರವು ಪ್ರಧಾನವಾದುದು. ಶ್ರೀರಂಗ ಸ್ವಾಮಿ ಪಾದಮುದ್ರೆಗಳು ಶಿಖರದ ಮೇಲೆ ದರ್ಶನವನ್ನು ಪಡೆಯಬಹುದು.

3.ಸ್ನೋ ಗಾರ್ಡನ್

3.ಸ್ನೋ ಗಾರ್ಡನ್

PC: Prof tpms

ಕೋಟಗಿರಿ ಮೆಯನ್ ರೋಡ್. ಇದು ಸಮುದ್ರ ಮಟ್ಟಕ್ಕೆ ಸುಮಾರು 2677 ಮೀಟರ್ ಎತ್ತರದಲ್ಲಿ ಸ್ನೋ ಡೆನ್ ಗಾರ್ಡನ್ ಇದೆ. ಇದು ನೀಲಗಿರಿ ಪರ್ವತದಲ್ಲಿ ದೊಡ್ಡಬೆಟ್ಟದ ನಂತರ ಅಧಿಕ ಎತ್ತರದ ಶಿಖರದಲ್ಲಿ ಸ್ನೋ ಡೆನ್ ಗಾರ್ಡನ್ ಆಗಿದೆ. ರಸ್ತೆ ಮಾರ್ಗದಿಂದ ಇಲ್ಲಿಗೆ ಸುಲಭವಾಗಿ ಸೇರಿಕೊಳ್ಳಬಹುದು.

4.ಲಾಂಗ್ ವುಡ್ ಷೋಲಾ

4.ಲಾಂಗ್ ವುಡ್ ಷೋಲಾ

PC: Michael varun

ಲಾಂಗ್ ವುಡ್ ಷೋಲಾ ಎಂಬುದು ಒಂದು ಅರಣ್ಯ. ಈ ಅರಣ್ಯವು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ, ಪಕ್ಷಿಗಳಿಗೆ ಅವಾಸ ಸ್ಥಾನವಾಗಿದೆ. ಪಕ್ಷಿಗಳನ್ನು ಕಾಣುವುದಕ್ಕೆ ಹಾಗು ಟ್ರೆಕ್ಕಿಂಗ್‍ಗೆ ಕೂಡ ಸೂಕ್ತವಾದ ಸ್ಥಳವಾಗಿದೆ.

5.ನೀಲಗಿರಿ ಮ್ಯೂಜಿಯಂ

5.ನೀಲಗಿರಿ ಮ್ಯೂಜಿಯಂ

PC: Indian Grey Thrush

ಬ್ರಿಟೀಷ್ ಆಳ್ವಿಕೆಯಿಂದ ಕೋಟಗಿರಿಯ ಇತಿಹಾಸವನ್ನು ಗಮನಿಸಬಹುದು. ಇದು ಒಂದು ಬಂಗಲೆಯಲ್ಲಿದೆ. ಇದರಲ್ಲಿ ಜಾನ್ ಸುಲ್ಲಿವರ್ ಮೆಮೋರಿಯಲ್ ಮತ್ತು ನೀಲಗಿರಿ ಡಾಕ್ಯುಮೆಂಟೆಷನ್ ಕೂಡ ಇದೆ. ಇಲ್ಲಿ ವಿಭಿನ್ನವಾದ ಪಕ್ಷಿಗಳನ್ನು ಕೂಡ ಸಂರಕ್ಷಿಸಿ ಇಡಲಾಗಿದೆ.

6.ಜಾನ್ ಸುಲ್ಲಿವನ್ ಮೆಮೊರಿಯಲ್

6.ಜಾನ್ ಸುಲ್ಲಿವನ್ ಮೆಮೊರಿಯಲ್

PC: Hari Prasad Sridhar

ಜಾನ್ ಸುಲ್ಲಿವನ್ ಮೆಮೊರಿಯಲ್ ಕೋಟಗಿರಿಯಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಇದು ಜಾನ್ ಸುಲ್ಲಿವನ್‍ನ ನಿವಾಸ. ಆತನ ಕಾರಣವಾಗಿಯೇ ಇಲ್ಲಿ ಸುಂದರವಾದ ತೋಟಗಳನ್ನು ಕಾಣಬಹುದು. ಪ್ರವೇಶ ಶುಲ್ಕವು 10 ರೂಪಾಯಿಗಳು. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವೇಶಕ್ಕೆ ಅನುಮತಿ ಇದೆ.

7.ನೆಹರು

7.ನೆಹರು

PC: Prof. Mohamed Shareef

ಕೋಟಗಿರಿ ಕೇವಲ 3 ಕಿ.ಮೀ ದೂರದಲ್ಲಿರುವ ನೆಹರು ಪಾರ್ಕ್ ಒಂದು ಖಾಸಗಿ ಪಾರ್ಕ್. ಇದರಲ್ಲಿ ದೇವಾಲಯ, ಮಹಾತ್ಮಗಾಂಧಿ ಸಮಾವೇಶದ ಹಾಲ್‍ಗಳಿವೆ. ಮಕ್ಕಳು ಆಟವಾಡಲು ವಿಶಾಲವಾದ ಮೈದಾನವಿದೆ. ಪ್ರತಿ ವರ್ಷ ಮಾರ್ಚ್‍ನಿಂದ ಜೂನ್ ತಿಂಗಳವರೆಗೆ ಗಲಾಬಿ ಪ್ಲವರ್ ಷೋ ಇರುತ್ತದೆ.

8.ಎಲ್ಕ್ ಫಾಲ್ಸ್

8.ಎಲ್ಕ್ ಫಾಲ್ಸ್

PC:Tutul Chowdhury

ಎಲ್ಕ್ ಫಾಲ್ಸ್ ಕೋಟಗಿರಿಯಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಈ ಜಲಪಾತವು ನಿಮಗೆ ತಪ್ಪದೇ ಆನಂದವನ್ನು ಉಂಟು ಮಾಡುತ್ತದೆ. ಜಲಪಾತದ ಸುತ್ತ ಪ್ರವಾಸಿಗರನ್ನು ಸೆಳೆಯುವ ಆಕರ್ಷಣೆಯನ್ನು ಇಲ್ಲಿ ಕಾಣಬಹುದು.

9.ಸೆಯಂಟ್ ಕೆಥರಿನ್ ವಾಟರ್ ಫಾಲ್ಸ್

9.ಸೆಯಂಟ್ ಕೆಥರಿನ್ ವಾಟರ್ ಫಾಲ್ಸ್

PC: Sandip Bhattacharya

ಈ ಜಲಪಾತಗಳು 2 ಭಾಗವಾಗಿ ಸುಮಾರು 250 ಅಡಿ ಎತ್ತರದಿಂದ ಕೆಳಗೆ ಬೀಳುತ್ತದೆ. ಮೆಟ್ಟುಪಲಯಂನಿಂದ ಕೋಟಗಿರಿ ತೆರಳುವ ಮಾರ್ಗದಲ್ಲಿ ಅರವೇನು ಪ್ರದೇಶದಲ್ಲಿ ಇದೆ. ಈ ಜಲಪಾತವನ್ನು ಪೂರ್ತಿಯಾಗಿ ನೋಡಬೇಕು ಎಂದರೆ, ಡಾಲ್ಫಿನ್ ನೋಸೆ ವ್ಯೂ ಪಾಯಿಂಟ್‍ಗೆ ಹೋಗಬೇಕು. ರಸ್ತೆ ಮಾರ್ಗದಲ್ಲಿ ವಾಟರ್ ಫಾಲ್ಸ್ ಮೇಲಿನ ಭಾಗಕ್ಕೆ ಕೂಡ ಹೋಗಬಹುದು. ಕೋಟಗಿರಿಗೆ ಸುಮಾರು 29 ಕಿ.ಮೀ ದೂರದಲ್ಲಿದೆ.

10.ಹೇಗೆ ಸಾಗಬೇಕು?

10.ಹೇಗೆ ಸಾಗಬೇಕು?

Prof tpms

ವಿಮಾನ ಮಾರ್ಗದ ಮೂಲಕಕೋಟಗಿರಿಯಿಂದ ಕೊಯಂಬತ್ತೂರ್‍ನಿಂದ ಸುಮಾರು 66 ಮೀಟರ್ ದೂರದಲ್ಲಿದೆ. ಇಲ್ಲಿ ವಿಮಾನ ನಿಲ್ದಾಣವು ಕೂಡ ಇದೆ. ಕ್ಯಾಬ್ ಅಥವಾ ಟ್ಯಾಕ್ಸಿಯಲ್ಲಿ ಸುಲಭವಾಗಿ ಸೇರಿಕೊಳ್ಳಬಹುದು.

ರೈಲ್ವೆ ಮಾರ್ಗದ ಮೂಲಕ

ಮೆಟ್ಟುಪಾಲಾಯಂ ಸಮೀಪದ ರೈಲ್ವೆ ನಿಲ್ದಾಣ. ಕೊಯಂಬತ್ತೂರ್‍ವರೆಗೆ ರೈಲಿನಲ್ಲಿ ಸೇರಿಕೊಂಡು ಮೆಟ್ಟುಪಾಲಾಯಂಗೆ ಸೇರಿಕೊಳ್ಳಬಹುದು. ಇಲ್ಲಿನಿಂದ ಮೌಂಟ್‍ನ್ ಟ್ರೈನ್ ಹತ್ತಿ, ಕೂನೂರ್ ಅಥವಾ ಊಟಿಗೆ ಹೋಗಬಹುದು. ಇಲ್ಲಿ ಕೂನೂರ್‍ವರೆಗೆ ತೆರಳಿ ಅಲ್ಲಿನಿಂದ ಸ್ಥಳೀಯ ಬಸ್ಸಿನ ಮೂಲಕ ಅಥವಾ ಟ್ಯಾಕ್ಸಿಯ ಮೂಲಕ ಕೋಟಗಿರಿಗೆ ಸೇರಿಕೊಳ್ಳಬಹುದು.

ರಸ್ತೆ ಮಾರ್ಗದ ಮೂಲಕ

ಕೊಯಂಬತ್ತೂರ್ ಎಲ್ಲಾ ವಿಧದಲ್ಲಿಯೂ ಅನುಕೂಲಕರವಾದುದು. ಕೂನೂರ್‍ನಿಂದ ಆರವೇನು ಮೇಲೆ ಕೋಟಗಿರಿಗೆ ಸೇರಿಕೊಳ್ಳಬಹುದು. ಕೂನೂರ್‍ನಿಂದ 20 ಕಿ.ಮೀ ದೂರದಲ್ಲಿ ಕೋಟಗಿರಿ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more