• Follow NativePlanet
Share
» »ವರ್ಷವನ್ನು ಅದ್ಬುತ ರೀತಿಯಲ್ಲಿ ಕೊನೆಗೊಳಿಸಲು ಭಾರತದಲ್ಲಿ ಭೇಟಿ ಮಾಡಬಹುದಾದ ಸ್ಥಳಗಳು!

ವರ್ಷವನ್ನು ಅದ್ಬುತ ರೀತಿಯಲ್ಲಿ ಕೊನೆಗೊಳಿಸಲು ಭಾರತದಲ್ಲಿ ಭೇಟಿ ಮಾಡಬಹುದಾದ ಸ್ಥಳಗಳು!

Posted By: Manjula Balaraj Tantry

2017ರ ವರ್ಷವು ಇನ್ನೇನು ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತಿದೆ ಮತ್ತು ಹೊಸ ವರ್ಷದ ಆಗಮನವನ್ನು ನಮ್ಮದೇ ಆದ ಶೈಲಿಯಲ್ಲಿ ಆಚರಿಸಲು ನಾವು ಆಚರಿಸುತ್ತೇವೆ. ಕೆಲವರು ಮನೆಯ ನಾಲ್ಕು ಗೋಡೆಗಳ ಮಧ್ಯೆ ಆಚರಿಸಿದರೆ ಇನ್ನು ಕೆಲವರು ವಿವಿಧ ಸ್ಥಳಗಳಲ್ಲಿ ಹೊಸವರ್ಷವನ್ನು ಸ್ವಾಗತಿಸುತ್ತಾರೆ.

ಡಿಸೆಂಬರ್ ತಿಂಗಳು ಬಂದಾಯಿತು ಆದುದರಿಂದ ಹೊಸವರ್ಷದ ಹಿಂದಿನ ದಿನದ ಸಂಭ್ರಮಾಚರಣೆಯನ್ನು ಹೇಗೆ ಮತ್ತು ಎಲ್ಲಿ ಮಾಡುವುದು ಎಂದು ಯೋಚಿಸುವ ಸಮಯ ಇದಾಗಿದೆ. ಕೆಲವರು ಮನೆಯೊಳಗಡೆ ಆಚರಿಸಲು ಇಚ್ಚಿಸುತ್ತಾರೆ.

ಆದರೆ ಇನ್ನೂ ಕೆಲವರು ತಮಗೆ ಅನುಕೂಲವಾಗುವ ದೇಶದ ಮೂಲೆ ಮೂಲೆಯ ಯಾವುದಾದರೂ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಆಚರಿಸಲು ಇಚ್ಚೆ ಪಡುತ್ತಾರೆ. ಅವುಗಳಲ್ಲಿ ಭಾರತವು ಅನೇಕ ಕಡಲತೀರಗಳು, ಗಿರಿಧಾಮಗಳು ಪರಂಪರೆಯ ದೇವಾಲಯಗಳು ಇತ್ಯಾದಿಗಳನ್ನು ಹೊಂದಿರುವ ದೇಶವಾಗಿದೆ.

ಆದುದರಿಂದ ನಿಮ್ಮ ಬ್ಯಾಗುಗಳನ್ನು ತುಂಬಿಸಿಕೊಂಡು ನಿಮ್ಮ ತಿರುಗಾಟದ ಪ್ರವೃತ್ತಿಯನ್ನು ತೀರಿಸಿಕೊಂಡು 2017ಕ್ಕೆ ವಿದಾಯ ಹೇಳಿ. ನೀವು ಒಂದೋ ಕಡಲು ಪ್ರಿಯರು ಅಥವಾ ಪರ್ವತಗಳನ್ನು ಪ್ರೀತಿಸುವವರಾಗಿದ್ದಲ್ಲಿ ಇಲ್ಲಿ ಎಲ್ಲಾ ತರಹದ ಪ್ರವಾಸಿಗರನ್ನು ರಜಾದಿನಗಳಲ್ಲಿ ಆಕರ್ಷಿಸುವಂತ ಯೋಜನೆಗಳ ಪಟ್ಟಿಯೇ ಇದೆ.

ಮುನ್ರೋ ದ್ವೀಪ

ಮುನ್ರೋ ದ್ವೀಪ

PC: Silver Blue

ಚಳಿಗಾಲದ ಬೆಚ್ಚನೆಯ ಅನುಭವವನ್ನು ಪಡೆಯಬೇಕಾದಲ್ಲಿ ಕೇರಳದ ಮುನ್ರೋ ದ್ವೀಪದ ಕಡೆಗೆ ನಿಮ್ಮ ಪ್ರಯಾಣ ಬೆಳೆಸಿ ಇದು ಎರಡು ನದಿಗಳ ಸಂಗಮದಲ್ಲಿದೆ ಮತ್ತು ಕೆಲವು ಸುಂದರವಾದ ಹಿನ್ನೀರು ಪ್ರದೇಶಗಳಿಗೂ ನೆಲೆಯಾಗಿದೆ.ಈ ದ್ವೀಪವೂ ಇನ್ನೂ ಕೂಡಾ ತನ್ನ ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವುದು ವಿಶೇಷ.

ಇಲ್ಲಿ ಕೆಲವು ಶಿಲಾಯುಗಗಳ ಕಾಲದಲ್ಲಿ ಉಪಯೋಗಿಸುತ್ತಿದ್ದ ಉಪಕರಣಗಳನ್ನು ನೋಡಬಹುದು. ಇಲ್ಲಿ ಪ್ರಪ್ರಥಮವಾಗಿ ವಾಸಮಾಡಿದ ಕೊಲೋನಿಯೆಲ್ ಜೋನ್ ಮನ್ರೋ ಅವರ ಹೆಸರನ್ನೇ ಈ ದ್ವೀಪಕ್ಕೆ ಇಡಲಾಗಿದೆ.

ಈ ಸ್ಥಳವು ಹಲವಾರು ಕಟ್ಟಡಗಳಿಗೆ ನೆಲೆಯಾಗಿದೆ, ಇದು ಕೆಲವು ಹಳೆಯ ವಾಸ್ತುಶೈಲಿಯನ್ನು ಚಿತ್ರಿಸುತ್ತದೆ, ಇದು ದೇಶದಲ್ಲಿ ಡಚ್ ಆಡಳಿತದ ಪರಂಪರೆಯನ್ನು ಮರುಕಳಿಸುತ್ತದೆ.

ಸಾರಾನಾಥ್

ಸಾರಾನಾಥ್

PC: Sudiptorana

ಈ ಜಾಗವು ಅನೇಕ ದೇವಾಲಯಗಳು ಮಠಗಳನ್ನು ಭೇಟಿ ಮಾಡಿಸುತ್ತದೆ ಇವುಗಳನ್ನು ಸ್ವತಃ ಬುದ್ದನೇ ಭೇಟಿ ಮಾಡಿದ್ದರು ಎಂದು ಹೇಳಲಾಗುತ್ತದೆ. ಸಾರನಾಥವು ಬೌದ್ಧ ಹಾಗೂ ಜೈನ ಧರ್ಮದವರ ಒಂದು ಮುಖ್ಯವಾದ ಯಾತ್ರಾ ತಾಣವಾಗಿದೆ.

ಈ ಸ್ಥಳಕ್ಕೆ ಭೇಟಿ ನೀಡುವ ಸಂಧರ್ಭದಲ್ಲಿ ಎರಡೂ ಧರ್ಮದ ಗುರುಗಳು ಸಾಮರಸ್ಯದಿಂದ ಇರುವುದನ್ನು ನೋಡಿ ಅಚ್ಚರಿ ಪಡಬೇಡಿ. ಈ ಸ್ಥಳದಲ್ಲಿರುವಾಗ ಇಲ್ಲಿಯ ಅನೇಕ ದೇವಾಲಯಗಳು, ಸ್ತೂಪಗಳು ಮತ್ತು ಪ್ರಖ್ಯಾತ ಅಶೋಕ ಸ್ತಂಭವನ್ನು ನೋಡಲು ಮರೆಯದಿರಿ.

ಗೋಕರ್ಣ

ಗೋಕರ್ಣ

PC: Sudhakarbichali

ಗೋವದ ಜನ ನಿರ್ಭೀತಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ಗೋಕರ್ಣಕ್ಕೆ ಭೇಟಿ ಕೊಡಬಹುದು. ಗೋಕರ್ಣವು ಹೆಚ್ಚು ವಿಶ್ರಾಂತಿ ಮತ್ತು ವಿರಮಿಸಿಕೊಳ್ಳ ಬಹುದಾದಂತಹ ಕರಾವಳಿಯ ಪಟ್ಟಣವಾಗಿದೆ. ಇಲ್ಲಿ ಪ್ರಾಚೀನ ಮಹಾಬಲೇಶ್ವರ ದೇವಾಲಯವಿರುವುದರಿಂದ ಗೋಕರ್ಣವು ಹೆಚ್ಚಿನ ಪ್ರಮಾಣದಲ್ಲಿ ಹಿಂದೂಗಳನ್ನು ಆಕರ್ಷಿಸುತ್ತದೆ.

ಆದರೂ ಇತ್ತೀಚಿನ ದಿನಗಳಲ್ಲಿ ಇಲ್ಲಿನ ಸುಂದರವಾದ ಕಡಲತೀರಗಳಿಂದಾಗಿ ಜನರು ಹೆಚ್ಚಿನ ಪ್ರಮಾಣದಲ್ಲಿ ಅಯ್ಕೆ ಮಾಡುವಂತಹ ಪಟ್ಟಣವಾಗಿ ಪರಿವರ್ತನೆಗೊಂಡಿದೆ. ಇಲ್ಲಿ ಹಲವಾರು ಕಡಲತೀರಗಳನ್ನು ಅನ್ವೇಷಿಸುವ ಹೊರತಾಗಿ, ಸರ್ಫಿಂಗ್ ನಲ್ಲಿ ಕ್ರ್ಯಾಶ್ ಕೋರ್ಸ್ ಅನ್ನು ಕೈಗೊಳ್ಳಬಹುದು.

ದಾವ್ಕಿ

ದಾವ್ಕಿ

PC: Diablo0769

ಒಬ್ಬರ ಕನಸಿನಂತೆ ನೀರು ಸ್ಪಟಿಕದಂತೆ ಶುದ್ದವಾಗಿದ್ದು ಇಲ್ಲಿಯ ಬೋಟ್ ಗಳು ಗಾಳಿಯಲ್ಲಿ ತೇಲಾಡುವಂತೆ ಕಾಣುವಂತೆ ಇರುವ ಜಾಗಗಳ ಭೇಟಿ ಕೊಡಲು ಇಚ್ಚೆ ಇದ್ದಲ್ಲಿ ದಾವ್ಕಿ ಒಂದು ಅಂತಹ ಜಾಗ ಇಲ್ಲಿ ನಿಮ್ಮ ಕನಸು ನನಸಾಗುವ ಅವಕಾಶವನ್ನು ಕಾಣುವಿರಿ.

ಈ ಸ್ವಚ್ಚವಾದ ನದಿಯ ಸುತ್ತಲೂ ಪರ್ವತಗಳು ಆವರಿಸಿಕೊಂಡಿದ್ದು, ಅಂಚುಗಳ ಸುತ್ತಲೂ ಬಾಗಿಕೊಂಡಿರುವ ದ್ವಾಕಿಯು ನಿಜವಾಗಿಯೂ ಮಂತ್ರಮುಗ್ದರನ್ನಾಗಿಸುತ್ತದೆ. ಮತ್ತು ಕಣ್ಣು ಗಳ ಮುಂದೆ ಅಚ್ಚರಿಗಳೇ ಕಾಣಸಿಗುತ್ತವೆ.

ಓರ್ಚಾ

ಓರ್ಚಾ

PC: Yann

ಓರ್ಚಾವು ಇತಿಹಾಸವನ್ನು ಪ್ರೀತಿಸುವವರಿಗೆ ಬೆರಗುಗೊಳಿಸುವಂತಹ ಮತ್ತು ಆಕರ್ಷಕ ತಾಣವಾಗಿದೆ.ಐತಿಹಾಸಿಕ ಮೌಲ್ಯವನ್ನು ಸಮೃದ್ಧವಾಗಿರಿಸಿಕೊಂಡು ದಟ್ಟವಾದ ಕಾಡಿನ ಸುತ್ತಲೂ ಅದರ ಮೌಲ್ಯಯುತವಾದ ಸ್ಮಾರಕಗಳನ್ನು ರಕ್ಷಿಸುತ್ತಿರುವ, ಓರ್ಚಾವು ನಿಜವಾಗಿಯೂ ಭೇಟಿ ನೀಡಲೇ ಬೇಕಾದ ಸ್ಥಳ.

ಒಂದು ವಿಶಾಲವಾದ ನದಿಯ ಮಧ್ಯದಲ್ಲಿ ದೊಡ್ಡ ಜಲಪಾತಗಳನ್ನು ಅಡ್ಡಲಾಗಿ ಹರಿಯುವ ಸಣ್ಣ ಹಳ್ಳಗಳು ಜಲಚರಗಳ ನಡುವೆ ಹರಿಯುವುದನ್ನು ನೋಡಬಹುದು, ಈ ಎಲ್ಲಾ ಕಾರಣದಿಂದಾಗಿ ಐತಿಹಾಸಿಕ ಪಟ್ಟಣವು ಈ ಜಾಗವನ್ನು ಪ್ರೀತಿಸುವಂತೆ ಮಾಡುತ್ತದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

PC: Unknown

ಅಂಡಮಾನ್ ಮತ್ತು ನಿಕೋಬಾರ್ ದ್ವೀಪವು ವಿಭಿನ್ನ ರೀತಿಯದ್ದಾಗಿದ್ದು ಇಲ್ಲಿನ ಪ್ರವಾಸವು ನೈಸರ್ಗಿಕ ರತ್ನದಲ್ಲಿ ನಿಮ್ಮನ್ನು ಪೂರ್ತಿಯಾಗಿ ಕಳೆದುಹೋಗುವಂತೆ ಮಾಡುತ್ತದೆ.

ಇದು ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ, ಸ್ಕೂಬಾ ಡೈವಿಂಗ್, ಸ್ನೋರ್ಕೆಲಿಂಗ್ ಮುಂತಾದ ವಿವಿಧ ನೀರಿನ ಕ್ರೀಡಾ ಚಟುವಟಿಕೆಗಳು ಸಹಾ ಇಲ್ಲಿ ಪ್ರಮುಖವಾದುದಾಗಿದೆ. ಈ ದ್ವಿಪವು ನೀರಿನ ಅಡಿಯಲ್ಲಿರುವ ಹವಳದ ನಿಕ್ಷೇಪಗಳಿಗೆ ಪ್ರಸಿದ್ದವಾಗಿದೆ. ಭಾರತದ ಏಕೈಕ ಸಕ್ರೀಯವಾಗಿರುವ ಜ್ವಾಲಾಮುಖಿಯನ್ನು ವೀಕ್ಷಿಸಲು ಅಥವಾ ಈ ದ್ವೀಪದ ಸ್ಥಳೀಯ ಬುಡಕಟ್ಟು ಜನಾಂಗದವರನ್ನು ಭೇಟಿ ಮಾಡಲು ದೋಣಿ ಸವಾರಿ ಮಾಡಿಕೊಂಡು ಹೋಗಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ