Search
  • Follow NativePlanet
Share
» »ಕುಮಟಾದ ಸುತ್ತಮುತ್ತಲಿನ ಈ ಆಕರ್ಷಣೀಯ ತಾಣಗಳನ್ನು ನೋಡಿದ್ದೀರಾ?

ಕುಮಟಾದ ಸುತ್ತಮುತ್ತಲಿನ ಈ ಆಕರ್ಷಣೀಯ ತಾಣಗಳನ್ನು ನೋಡಿದ್ದೀರಾ?

ಕುಮಟಾ ಎಂಬುದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ನಗರವಾಗಿದೆ. ಭಟ್ಕಳದಿಂದ 58 ಕಿ.ಮೀ ದೂರದಲ್ಲಿರುವ ಕುಮಟಾವು ಒಂದು ಪ್ರಮುಖ ಪ್ರೇಕ್ಷಣೀಯ ತಾಣವಾಗಿದೆ. ಇದು ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರದಿಂದ 72.7 ಕಿಮೀ ದೂರದಲ್ಲಿದೆ. ಮುಂಬೈ ಮತ್ತು ಮಂಗಳೂರು ನಡುವೆ ಚಲಿಸುವ ಕೊಂಕಣ ರೈಲ್ವೇ ಮಾರ್ಗದಲ್ಲಿ ಇದು ಪ್ರಮುಖ ಕೇಂದ್ರವಾಗಿದೆ. ಕುಮಟಾದಲ್ಲಿ ನೋಡಬೇಕಾದಂತಹ ಹಲವು ತಾಣಗಳಿವೆ, ಅವುಗಳು ಯಾವುವು ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ.

ಕುಮಟಾ ಬೀಚ್‌

ಕುಮಟಾ ಬೀಚ್‌

PC: Kamat~com

ಅರೇಬಿಯನ್‌ ಸಮುದ್ರದ ತೀರದಲ್ಲಿರುವ ಕುಮಟಾ ಬೀಚ್‌ ಹೆಚ್ಚು ಜನಪ್ರಿಯವಾಗಿದ್ದು, ಇದು ಕುಮಟಾದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಇತರ ಬೀಚ್‌ಗಳಿಗೆ ಹೋಲಿಸಿದರೆ ಈ ಸಮುದ್ರ ತೀರವು ವಿಶಾಲವಾಗಿದೆ. ಸಮುದ್ರ ತೀರದ ಸುತ್ತ ಹಳ್ಳಿಗಳು ಸುತ್ತುವರಿದಿವೆ. ಸಮುದ್ರ ತೀರಕ್ಕೆ ನಿಮ್ಮನ್ನು ಕರೆದುಕೊಂಡು ಹೋಗಲು ರಸ್ತೆ ಕೂಡಾ ಇದೆ. ಪ್ರವಾಸಿಗರು ಲೈಟ್‌ ಹೌಸ್‌, ಬತ್ತದ ಗದ್ದೆ ಮತ್ತು ತೆಂಗು ತೋಟವನ್ನು ಸಮುದ್ರ ತೀರದ ಸುತ್ತ ಕಾಣಬಹುದು. ಬೀಚ್‌ನಿಂದ ಸುಂದರ ನೋಟವನ್ನು ಪ್ರವಾಸಿಗರು ವೀಕ್ಷಿಸಬಹುದು ಮತ್ತು ಹಳ್ಳಿಯಲ್ಲಿರುವ ಹಳೆಯದಾದ ಒಂದು ಚರ್ಚ್‌‌ನ್ನು ಕೂಡಾ ಪ್ರವಾಸಿಗರು ವೀಕ್ಷಿಸಬಹುದು.

ಮಿರ್ಜಾನ ಕೋಟೆ

ಮಿರ್ಜಾನ ಕೋಟೆ

PC:Nvvchar

ಅಘನಾಶಿನಿ ನದಿ ದಡದಲ್ಲಿರುವ ಮಿರ್ಜಾನ ಕೋಟೆಯು ಸುಮಾರು 4.1 ಹೆಕ್ಟೇರು ವೈಶಾಲ್ಯತೆಯನ್ನು ಹೊಂದಿದೆ. ತನ್ನ ಸುಂದರವಾದ ವಾಸ್ತುಶಿಲ್ಪಕ್ಕೆ ಈ ಕೋಟೆ ಹೆಸರಾಗಿದ್ದು, ಎರಡು ಹಂತದ ಗೋಡೆಯನ್ನು ಹೊಂದಿದೆ. ಕೆಂಪುಕಲ್ಲಿನಿಂದ ಮಾಡಿದ ಗೋಡೆಗಳು ಅತೀ ಎತ್ತರವಾಗಿದ್ದು, ಬುರುಜುಗಳನ್ನು ಹೊಂದಿದೆ. ಮಿರ್ಜಾನ ಕೋಟೆಯು ಒಂದು ಕಾಲದಲ್ಲಿ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿತ್ತು ಮತ್ತು ಹಲವು ಕಥೆಗಳು ಈ ಕೋಟೆಗೆ ಸಂಬಂಧಿಸಿದಂತೆ ಹೆಣೆದುಕೊಂಡಿವೆ. ಕೋಟೆಗೆ ಒಂದು ಮುಖ್ಯವಾದ ಮತ್ತು ಇನ್ನು ಮೂರು ಹೆಚ್ಚಿನ ದ್ವಾರವಿದೆ. ಕೋಟೆಯ ಒಳಗೆ ಅಂತರಸಂಪರ್ಕವನ್ನು ಹೊಂದಿರುವ ಬಾವಿಳಿವೆ. ಕೋಟೆಯ ಇಡೀ ರಚನೆಯನ್ನು ಈ ಬಾವಿಗಳು ಸುತ್ತುವರಿದಿವೆ.ಐತಿಹ್ಯಗಳ ಪ್ರಕಾರ 16ನೇ ಶತಮಾನದಲ್ಲಿ ಗೇರಸೊಪ್ಪೆಯ ರಾಣಿ ಚೆನ್ನಭೈರದೇವಿಯು ಈ ಕೋಟೆಯನ್ನು ಕಟ್ಟಿದಳು ಮತ್ತು ಸುಮಾರು 54 ವರ್ಷಗಳ ಕಾಲ ಈ ಕೋಟೆಯಲ್ಲೇ ವಾಸಿಸಿದ್ದಳು ಎನ್ನಲಾಗುತ್ತದೆ.

ಯಾನಾ

ಯಾನಾ

PC: Vinodtiwari2608

ಯಾನಾ ಎಂಬುದು ಪ್ರಕೃತಿಯ ಪ್ರತಿಯೊಂದು ಅಂಶದೊಂದಿಗೆ ವಿಶೇಷ ರಚನೆಯೊಂದಿಗೆ ತನ್ನ ಸೌಂದರ್ಯವನ್ನು ಹೆಚ್ಚಿಸುವ ಸ್ಥಳವಾಗಿದೆ. ಇದು ಕುಮಟಾದಿಂದ 28 ಕಿ.ಮೀ ದೂರದಲ್ಲಿದೆ. ಪ್ರತಿ ರಚನೆಯು 90 ಮೀಟರ್ ಮತ್ತು 120 ಮೀಟರ್ ಎತ್ತರದಲ್ಲಿದೆ ಮತ್ತು ಮೋಹಿನಿ ಶಿಖರಾ ಮತ್ತು ಭೈರವೇಶ್ವರ ಶಿಖರ ಎಂದು ಕ್ರಮವಾಗಿ ಕರೆಯಲ್ಪಡುತ್ತದೆ. ಕಾಡಿನ ದಟ್ಟವಾದ ಕವರ್, ಭೈರೇಶ್ವರ ದೇವಸ್ಥಾನ ಮತ್ತು ರಚನೆಯೊಳಗೆ ಅಡಗಿದ ಗುಹೆಗಳಿಂದ ಅಲಂಕರಿಸಲ್ಪಟ್ಟಿದೆ, ಯಾನಾ ಸಹ ಒಂದು ಸುಂದರ ಟ್ರೆಕ್ಕಿಂಗ್ ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಇದು ಅನೇಕ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಮಹಾಲಸಾ ನಾರಾಯಣಿ ದೇವಸ್ಥಾನ

ಮಹಾಲಸಾ ನಾರಾಯಣಿ ದೇವಸ್ಥಾನ

ಮಹಾಲಸಾ ದೇವಸ್ಥಾನವನ್ನು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದು ಸುಮಾರು 1565ರಲ್ಲಿ ಕುಮಟಾದ ಪೈ ಕುಟುಂಬದಿಂದ ನಿರ್ಮಿಸಲ್ಪಟ್ಟಿದೆ. ಗುರವ್ ಎಂಬ ಅರ್ಚಕರ ಕುಟುಂಬದವರಿಂದ ಈ ದೇವಸ್ಥಾನವು ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇವರು ಕಂಚಿನ ಶ್ರೀ ಮಹಾಲಸಾ ಮೂರ್ತಿಯನ್ನು ಗೋವಾದ ವೆರ್ನಾದಿಂದ ತಂದಿದ್ದರು ಎಂದು ಹೇಳಲಾಗುತ್ತದೆ. ಶ್ರೀ ಮಹಾಲಸಾ ಮೂರ್ತಿಯು ಮಣ್ಣಿನ ಕುಡಿಕೆಯಲ್ಲಿ ಇಡಲಾಗಿತ್ತು ನಂತರದಲ್ಲಿ ಇದನ್ನು ದೇವಸ್ಥಾನದ ಒಳಗೆ ಪ್ರತಿಷ್ಠಾಪಿಸಲಾಯಿತು.

ಉಪ್ಪಿನ ಗಣಪತಿ ದೇವಸ್ಥಾನ

ಉಪ್ಪಿನ ಗಣಪತಿ ದೇವಸ್ಥಾನ

ಕುಮಟಾಗೆ ಪ್ರವಾಸಮಾಡುವ ಪ್ರವಾಸಿಗರು ಉಪ್ಪಿನ ಗಣಪತಿ ದೇವಸ್ಥಾನವನ್ನು ಕೂಡಾ ವೀಕ್ಷಿಸ ಬಹುದು. ಇದನ್ನು ವಿನಾಯಕ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಗಣೇಶ ಮೂರ್ತಿಯ ಮೂಲಕ ವಿಜಯನಗರ ಆಡಳಿತಗಾರರು ಶಿವನಿಗೆ ಅರ್ಪಿಸಿದ ದೇವಸ್ಥಾನವಿದು. ಸಮೀಪದ ಹಳ್ಳಿಯಿಂದ ಈ ಮೂರ್ತಿಯನ್ನು ತಂದು ಇಲ್ಲಿ ಸ್ಥಾಪಿಸಲಾಗಿತ್ತು ಎನ್ನಲಾಗುತ್ತದೆ.

ಬಾಡ ಬೀಚ್‌

ಬಾಡ ಬೀಚ್‌

ಬಾಡ ಸಮುದ್ರ ತೀರವು ಈ ಸುತ್ತಲಿನ ಬೀಚ್‌ಗಳಲ್ಲೇ ಅತ್ಯಂತ ಸ್ವಚ್ಛವಾದದ್ದು. ಕುಮಟಾದ ತಮ್ಮ ಪ್ರವಾಸದಲ್ಲಿ ಪ್ರವಾಸಿಗರು ಈ ಸಮುದ್ರ ತೀರವನ್ನು ಭೇಟಿ ಮಾಡಲೇಬೇಕು. ಕರ್ಕಿಯಿಂದ ಗೋಕರ್ಣಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಪ್ರವಾಸಿಗರು ಬಾಡ ಬೀಚ್‌ನ್ನು ನೋಡಬಹುದು. ಒಂದು ಕಡೆ ಕಲ್ಲು ಬಂಡೆಯಿದ್ದು ಇನ್ನೆರಡು ಕಡೆಯಿಂದ ಗುಡ್ಡಗಳು ಈ ಬೀಚನ್ನು ಸುತ್ತುವರಿದಿದೆ.

ಅಲ್ವೆಕೊಡಿ ಬೀಚ್

ಅಲ್ವೆಕೊಡಿ ಬೀಚ್

ಕುಮಟಾದ ಹತ್ತಿರ ಇರುವ ಅಲ್ವೆಕೊಡಿ ಗ್ರಾಮದಲ್ಲಿರುವ ಗುಪ್ತ ಸಮುದ್ರವು ಪ್ರಾಚೀನ ಮತ್ತು ಸ್ಫಟಿಕ ಸ್ಪಷ್ಟವಾಗಿದೆ. ಸುದೀರ್ಘವಾದ ಅಂಕುಡೊಂಕಾದ ಮಾರ್ಗಗಳ ಮೂಲಕ ಪ್ರಯಾಣಿಸುವಾಗ, ಅಂತಿಮ ಫಲಿತಾಂಶವು ಸೂರ್ಯನ ಕಿರಣಗಳ ನೆರಳಿನಲ್ಲಿ ಹೊಳೆಯುವ ಬಿಳಿ ಮರಳ ತೀರದ ಅಲಂಕರಿಸಲ್ಪಟ್ಟ ಒಂದು ತಾಣವಾಗಿದೆ. ಇದು ಬ್ರಹ್ಮ ದೇವರಾ ಗುಡ್ಡದಲ್ಲಿನ ಹಳೆಯ ಲೈಟ್ಹೌಸ್ ಹತ್ತಿರದಲ್ಲಿದೆ.

ವೆಂಕಟರಮಣ ದೇವಸ್ಥಾನ

ವೆಂಕಟರಮಣ ದೇವಸ್ಥಾನ

ಕುಮಟಾಗೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಸಮಯ ಸಿಕ್ಕಲ್ಲಿ ಕುಮಟಾದ ವೆಂಕಟರಮಣ ದೇವಸ್ಥಾನವನ್ನು ವೀಕ್ಷಿಸಬಹುದು. ವೆಂಕಟರಮಣ ಮತ್ತು ಗೋಪಾಲಕೃಷ್ಣ ಇಲ್ಲಿನ ಪ್ರಮುಖ ದೇವರು. ಸತ್ಯಭಾಮೆ, ಲಕ್ಷ್ಮೀ ಮತ್ತು ಮುಖ್ಯಪ್ರಾಣ ದೇವರೂ ಕೂಡಾ ಇಲ್ಲಿನ ಇನ್ನಿತರ ಪ್ರಮುಖ ದೇವರುಗಳು. ರಥೋತ್ಸವ ಹಬ್ಬವನ್ನು ಫೆಬ್ರವರಿಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ತಲುಪುವುದು ಹೇಗೆ?

ಕುಮಟಾ ರಸ್ತೆ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ 66 (NH 66-ಪನ್ವೆಲ್-ಕೊಚ್ಚಿ-ಕನ್ಯಾಕುಮಾರಿ) ಅತಿ ಉದ್ದದ ಹೆದ್ದಾರಿಗಳಲ್ಲಿಒಂದಾಗಿದೆ. ಕುಮಟಾ ಮೂಲಕ ಹಾದುಹೋಗುತ್ತದೆ. ಕುಮಟಾ ರಾಜ್ಯ ಹೆದ್ದಾರಿ -142 (ಎನ್‌.ಹೆಚ್ 142 - ಕುಮಟಾ-ಶಿರಸಿ) ಮತ್ತು ಕುಮಟಾ-ಸಿದ್ದಾಪುರ ರಸ್ತೆಯಲ್ಲಿ ಕೂಡ ಸಂಪರ್ಕ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X