• Follow NativePlanet
Share
» »ಹಿಂದೂವನ್ ನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು ಮತ್ತು ಈ ಸ್ಥಳಗಳು ನಿಮ್ಮನ್ನು ಅಚ್ಚರಗೊಳಿಸುವಲ್ಲಿ ಸಂದೇಹವಿಲ್ಲ

ಹಿಂದೂವನ್ ನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು ಮತ್ತು ಈ ಸ್ಥಳಗಳು ನಿಮ್ಮನ್ನು ಅಚ್ಚರಗೊಳಿಸುವಲ್ಲಿ ಸಂದೇಹವಿಲ್ಲ

Posted By: Manjula Balaraj Tantry

ರಾಜಸ್ಥಾನದ ಐತಿಹಾಸಿಕ ಪಟ್ಟಣಗಳಲ್ಲೊಂದಾದ ಹಿಂದೂವನ್ ಇದು ತನ್ನಲ್ಲಿರುವ ದೇವಾಲಯಗಳು ಮತ್ತು ಕೆಲವು ಸ್ಥಳಗಳಿಗೆ ಪುರಾಣಗಳ ಯುಗದಿಂದಲೂ ಸ್ಥಳೀಯರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಹಿಂದೂವನ್ ನಗರಕ್ಕೆ ಭೇಟಿ ಕೊಟ್ಟು ಈ ನಗರವನ್ನು ಅನ್ವೇಷಣೆ ಮಾಡಿದರೆ ಹೇಗೆ? ಕೆಲವು ಭೇಟಿ ಮಾಡಲೇ ಬೇಕಾದ ಸ್ಥಳಗಳಲ್ಲಿ ಹಿಂದೂವನ್ ಕೋಟೆ, ಜಚ್ಚಾ ಕಿ ಬವೋರಿ, ಮಾಥೀಯ ಮಹಲ್, ನರಸಿಂಗಜಿ ದೇವಾಲಯ ಮತ್ತು ಇನ್ನೂ ಅನೇಕ ಐತಿಹಾಸಿಕ ಸೌಂದರ್ಯತೆಗಳನ್ನು ಒಳಗೊಂಡಿದೆ.

ಮರಳುಗಲ್ಲುಗಳ ಕೈಗಾರಿಕಾ ನೆಲೆಯಾಗಿದ್ದು ಇಲ್ಲಿ ತಯಾರಾಗುವ ಮಾರ್ಬಲ್ ಮತ್ತು ಕಲ್ಲುಗಳು ಪ್ರಪಂಚದಾದ್ಯಂತ ಪ್ರಸಿದ್ದಿಯನ್ನು ಪಡೆದಿದೆ ಆದುದರಿಂದ ಈ ನಗರವನ್ನು ಕಲ್ಲುಗಳ ನಗರವೆಂದೂ ಕೂಡಾ ಕರೆಯಲಾಗುತ್ತದೆ. ಹಿಂದೂವನ್ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿದೆ.

ಈ ಜಾಗವು ನರಸಿಂಹ ದೇವರ ಮತ್ತು ಹಿರಣ್ಯಕಶಿಪುವಿನ ಕಾಲದ ಸಂಬಂಧವನ್ನು ಹೊಂದಿದ್ದು ಜನಪ್ರಿಯವಾಗಿದೆ ಮತ್ತು ಅನೇಕ ಪ್ರಾಚೀನ ದೇವಾಲಯಗಳು ಅವುಗಳಲ್ಲಿ ಪ್ರಹ್ಲಾದ್ ಕುಂಡ್ ನಂತಹ ಧಾರ್ಮಿಕ ಕೇಂದ್ರಗಳನ್ನು ಹೊಂದಿದ್ದು ಹಿಂದಿನ ಕಾಲದ ನಿಜಾಂಶವನ್ನು ಪ್ರತಿಬಿಂಬಿಸುತ್ತದೆ.

ಪ್ರಾಚೀನ ದೇವಾಲಯಗಳ ಭೇಟಿ ಹೊರತಾಗಿಯೂ ನೀವು ಇಲ್ಲಿಯ ಪ್ರಾಚೀನ ಕಾಲದ ಸ್ಥಳಗಳಲ್ಲಿ ಮತ್ತು ಪ್ರಾಚೀನ ವೈಭವವನ್ನು ಸಾರುವ ಇತಿಹಾಸದ ಪುಟಕ್ಕೆ ಸೇರಿರುವ ಕೆಲವು ಕೋಟೆಗಳಲ್ಲಿ ತಿರುಗಾಡಿ ತಿಳಿಯಬಹುದಾಗಿದೆ. ಆದುದರಿಂದ ಹಿಂದೂವನ್ ಗೆ ಒಂದು ಪ್ರವಾಸಕ್ಕೆ ಯೋಜಿಸಿದರೆ ಹೇಗೆ? ಹಿಂದೂವನ್ ನಲ್ಲಿ ಭೇಟಿ ಮಾಡಬಹುದಾದ ಪ್ರಮುಖ ಸ್ಥಳಗಳ ಪಟ್ಟಿ ಮಾಡಲಾಗಿದೆ.

ನರಸಿಂಗಾಜಿ ದೇವಾಲಯ

ನರಸಿಂಗಾಜಿ ದೇವಾಲಯ

ರಾಜಸ್ಥಾನದ ಅತ್ಯಂತ ಹಳೆಯ ದೇವಾಲಯವಾದ ನರಸಿಂಗ್ ಜಿ ದೇವಾಲಯವು ಪ್ರಾಚೀನ ದೇವಾಲಯವಾಗಿದ್ದು ಇದು ವಿಷ್ಣುವಿನ ಅವತಾರವಾದ ನರಸಿಂಹ ದೇವರಿಗೆ ಅರ್ಪಿತವಾದುದಾಗಿದೆ. ಹಿರಣ್ಯಕಶಿಪು ರಾಕ್ಷಸನನ್ನು ಕೊಂದು ತನ್ನ ಭಕ್ತರನ್ನು ದುಷ್ಕೃತ್ಯಗಳಿಂದ ಉಳಿಸಿಕೊಂಡ ಎಂದು ಹೇಳಲಾಗುತ್ತದೆ. ಈ ಸಣ್ಣ ದೇವಸ್ಥಾನವು ಗುಹೆಯ ಒಳಗೆ ತನ್ನ ದೇವತೆಯನ್ನು ಹೊಂದಿದೆ ಮತ್ತು ಹಿಂದೂ ಭಕ್ತರಲ್ಲಿ ಅತ್ಯಂತ ಜನಪ್ರಿಯವಾಗಿದ್ದು ನರಸಿಂಹ ಭಗವಂತನನ್ನು ಪೂಜಿಸಲು ಇಲ್ಲಿಗೆ ಬರುತ್ತಾರೆ.

ಮಾಥಿಯಾ ಮಹಲ್

ಮಾಥಿಯಾ ಮಹಲ್

PC- Abhiguru51

ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾದ ಇನ್ನೊಂದು ಅದ್ಬುತ ವಾಸ್ತುಶಿಲ್ಪ ರಚನೆಯಾದ ಮಾಥಿಯಾ ಮಹಲ್ ಖಚಿತವಾಗಿಯೂ ಒಂದು ಭೇಟಿ ನೀಡಲೇ ಬೇಕಾದ ಸ್ಥಳವಾಗಿದೆ. ನೀವು ಹಿಂದೂವನ್ ನ ಇತಿಹಾಸವನ್ನು ಅನ್ವೇಷಿಸಬೇಕಾದಲ್ಲಿ ಇಲ್ಲಿಗೆ ಭೇಟಿ ಕೊಡಿ.

ಪರಿಶುದ್ದತೆಯ ಸಾರವನ್ನು ಇಲ್ಲಿಯ ಕೆಂಪು ಗೋಡೆಗಳಲ್ಲಿ ಕಾಣಬಹುದಾಗಿದ್ದು ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ಇದು ಮೂರು ಅಂತಸ್ಥನ್ನು ಒಳಗೊಂಡ ವೈಭವೋಪೇತ ಶೈಲಿಯಲ್ಲಿ ನಿರ್ಮಿಸಲಾಗಿದೆ.ಈ ಸುಂದರವಾದ ಸ್ಥಳವು ಕಠಿಣವಾದ ಗೋಡೆಗಳ ಜೊತೆಗೆ ಮತ್ತು ಪೌರಾಣಿಕ ಸೆಳವಿನಲ್ಲಿ ಒಳಹೊಕ್ಕು ಇಲ್ಲಿಯ ಸೌಂದರ್ಯತೆಯಲ್ಲಿ ಹೋದರೆ ಹೇಗೆ?

ಜಚ್ಚಾ ಕಿ ಬಾವೋರಿ

ಜಚ್ಚಾ ಕಿ ಬಾವೋರಿ

PC- Abhiguru51

ಪ್ರಹ್ಲಾದ್ ಕುಂಡ್ ಬಳಿಯಿರುವ ಜಚ್ಚಾ ಕಿ ಬಾವರಿ 14 ನೇ ಶತಮಾನದ ಕಾಲದಿಂದಲೂ ರಾಜಸ್ತಾನದ ಅತ್ಯಂತ ಹಳೆಯ ಸ್ಟೆಪ್ ವೆಲ್ ಗಳಲ್ಲಿ ಒಂದಾಗಿದೆ. ಲಖ್ಖಿ ಬಂಜಾರ ಆಜ್ಞೆಯಡಿಯಲ್ಲಿ ನಿರ್ಮಿಸಲಾದ ಈ ಸ್ಟೆಪ್ ವೆಲ್ ರಚನೆಗೆ ಸಂಬಂಧಿಸಿದ ಹಲವಾರು ಕಥೆಗಳು ಮತ್ತು ದಂತಕಥೆಗಳು ಇವೆ.

ಜಚ್ಚಾ ಕಿ ಬಾವೊರಿಯು ಒಂದು ಶ್ಲಾಘನೀಯ ವಾಸ್ತುಶೈಲಿಯ ಕೆಲಸವಾಗಿದೆ ಮತ್ತು ಅದರ ವಿನ್ಯಾಸ ಮತ್ತು ಮಾದರಿಗಳು ಆಕಾರ ಮತ್ತು ಮಾಡಲಾದ ರಚನೆಗಳು. ವಿನ್ಯಾಸಕಾರರಲ್ಲಿ ಪ್ರಸಿದ್ಧವಾಗಿದೆ

ಈ ಸ್ಟೆಪ್ ವೆಲ್ ನ ನೀರು ತುಂಬಾ ಶುದ್ಧವಾಗಿದೆ ಎಂದು ನಂಬಲಾಗಿದೆ ಅದುದರಿಂದ ಬಟ್ಟೆಯನ್ನು ತೊಳೆದುಕೊಳ್ಳಲು ಸೋಪ್ ಅನ್ನು ಬಳಸಬೇಕಾಗಿಲ್ಲ.ಎಂದು ಹೇಳಲಾಗುತ್ತದೆ. ಆದುದರಿಂದ ಇಂದು ಜಚ್ಚಾ ಕಿ ಬಾವೋರಿ ಟ್ಯಾಂಕ್ ರೂಪದಲ್ಲಿ ನೀರು ಸಂಗ್ರಹಿಸಲು ಬಳಸಲಾಗುತ್ತದೆ.

ಶ್ರೀ ಮಹಾವೀರ್ ಜಿ

ಶ್ರೀ ಮಹಾವೀರ್ ಜಿ

PC- Pratyk321

ಶ್ರೀ ಮಹಾವೀರ್ ಜಿ ಒಂದು ಪ್ರಾಚೀನ ದೇವಾಲಯವಾಗಿದ್ದು, ಇಲ್ಲಿಯ ಮುಖ್ಯ ದೇವರು ಮಹಾವೀರ ಆಗಿದ್ದು ಇದು 300 ವರ್ಷ ಹಳೆಯದಾಗಿದೆ.ಈ ಜೈನ ದೇವಾಲಯಗಳ ಸಂಕೀರ್ಣವು ಜೈನ ಧರ್ಮದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಮತ್ತು ಸಾವಿರಾರು ದೇವತೆಗಳು ಮತ್ತು ಜೈನರು ಮುಖ್ಯ ದೇವತೆಗೆ ತಮ್ಮ ಗೌರವಗಳನ್ನು ಸಲ್ಲಿಸಲು ಪ್ರತಿ ತಿಂಗಳು ಬರುತ್ತಾರೆ.

ಇದು ವಾಸ್ತುಶಿಲ್ಪದ ಅದ್ಭುತ ಮತ್ತು ನಿಶ್ಕಲ್ಮಷ ಕಲಾತ್ಮಕತೆಗಾಗಿ ಪ್ರವಾಸಿಗರ ನಡುವೆ ಜನಪ್ರಿಯವಾಗಿದೆ. ಭವ್ಯ ಸಭಾಂಗಣಗಳು, ವಿಶಾಲವಾದ ಹುಲ್ಲುಹಾಸುಗಳು ಮತ್ತು ಸುಂದರವಾದ ಶಿಲ್ಪಗಳು ದೇವಾಲಯದ ಅಸ್ತಿತ್ವದಲ್ಲಿರುವ ಮೋಡಿಯನ್ನು ಹೆಚ್ಚಿಸುವ ಪ್ರಮುಖ ವಿಷಯಗಳಾಗಿವೆ. ಶ್ರೀ ಮಹಾವೀರ್ ಜಿ ಯ ಪವಿತ್ರ ಸಭಾಂಗಣದಲ್ಲಿ ದೈವತ್ವದ ಉಪಸ್ಥಿತಿಯನ್ನು ಅನುಭವಿಸುವುದು ಹೇಗಿರುತ್ತದೆ?

ಶ್ರೀ ರಘುನಾಥ್ ಜೀ ದೇವಾಲಯ

ಶ್ರೀ ರಘುನಾಥ್ ಜೀ ದೇವಾಲಯ

PC- Abhiguru51

ಕಲ್ಲಿನ ನಗರವೆಂದು ಕರೆಯಲಾಗುವ ಹಿಂದೂವನ್ ನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದೆನಿಸಿದ ಶ್ರಿ ರಘುನಾಥ ಜಿ ದೇವಾಲಯವು 650 ವರ್ಷಗಳಷ್ಟು ಹಳೆಯದಾಗಿದ್ದು ಇದು ರಾಮ ದೇವರು ಹಾಗೂ ದೇವಿ ಸೀತೆಗೆ ಅರ್ಪಿತವಾದುದಾಗಿದೆ. ರಾಮನ ಭಕ್ತನಾದ ಈ ದೇವಾಲಯವು ತುಳಸಿದಾಸ್ ಜೀ ಅವರಿಂದ ಸ್ಥಾಪಿಸಲಾಗಿದೆ.

ಅಂದಿನಿಂದ, ನಗರ ಮತ್ತು ಸುತ್ತಮುತ್ತಲಿನ ಎಲ್ಲಾ ಹಿಂದೂ ಭಕ್ತರಿಗೆ ಅದು ಪ್ರಮುಖ ಪೂಜಾ ಸ್ಥಳವಾಗಿದೆ. ಇಂದು, ಈ ಅದ್ಭುತ ದೇವಸ್ಥಾನ ದೀಪಾವಳಿ ಮತ್ತು ರಾಮ್ ನವಮಿ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಭಕ್ತರು ಮತ್ತು ಪ್ರವಾಸಿಗರನ್ನು ಸಾಕ್ಷಿಯಾಗಿದೆ. ಇಂದು, ಈ ಅದ್ಭುತ ದೇವಸ್ಥಾನ ದೀಪಾವಳಿ ಮತ್ತು ರಾಮನವಮಿ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಭಕ್ತರು ಮತ್ತು ಪ್ರವಾಸಿಗರನ್ನು ಹೊಂದಿರುವುದಕ್ಕೆ ಸಾಕ್ಷಿಯಾಗಿದೆ

ಹಿಂದೂವನ್ ಕೋಟೆ

ಹಿಂದೂವನ್ ಕೋಟೆ

ಕೋಟೆಯು ಅದರ ಗತಕಾಲದ ಅವಶೇಷಗಳ ಅವಧಿಯ ಮೂಲಕ ಹಾದು ಹೋದರೂ, ಅದರ ನಾಶವಾದ ಗಡಿಗಳಲ್ಲಿ ಅನ್ವೇಷಿಸಲು ಸಾಕಷ್ಟು ಇರುತ್ತದೆ.ನೀವು ಇತಿಹಾಸದ ಪ್ರೇಮಿಯಾಗಿದ್ದರೆ ಮತ್ತು ಯಾವುದೇ ದೇಶ, ಅಥವಾ ರಾಜ್ಯದ ಅಪಾರವಾದ ಭವ್ಯತೆಗಳನ್ನು ಅನ್ವೇಷಿಸುವ ಇಚ್ಚೆ ಉಳ್ಳವರಾಗಿದ್ದಲ್ಲಿ, ಹಿಂದೂವನ್ ಕೋಟೆ ನಿಮ್ಮ ಗಮ್ಯಸ್ಥಾನವಾಗಿದೆ.

14 ನೇ ಶತಮಾನದಲ್ಲಿ ಕೆಂಪು ಕಲ್ಲಿನಲ್ಲಿ,ಸುಣ್ಣ ಮತ್ತು ಅಮೃತಶಿಲೆಯಲ್ಲಿ ಕಟ್ಟಲಾದ ಹಿಂದೂವನ್ ಕೋಟೆಯು ನೀವು ಭೇಟಿ ನೀಡಲೇ ಬೇಕಾದ ಸ್ಥಳವಾಗಿದೆ ಮತ್ತು ಈ ಜಾಗವು ಖಚಿತವಾಗಿಯೂ ಅನ್ವೇಷಕರು ತಪ್ಪಿಸಲೇ ಬಾರದ ಸ್ಥಳವಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ