Search
  • Follow NativePlanet
Share
» »ವಿದೇಶಿಗರನ್ನು ಮರುಳು ಮಾಡಬಲ್ಲ ಭಾರತದ ಪ್ರಮುಖ 5 ಸ್ಥಳಗಳು.

ವಿದೇಶಿಗರನ್ನು ಮರುಳು ಮಾಡಬಲ್ಲ ಭಾರತದ ಪ್ರಮುಖ 5 ಸ್ಥಳಗಳು.

By Manjula Balaraj Tantry

ಜಗತ್ತಿನಾದ್ಯಂತ ಪ್ರವಾಸಿಗರು ಹೆಚ್ಚಾಗಿ ಭೇಟಿ ಕೊಡುವ ಸ್ಥಳಗಳಲ್ಲಿ ಭಾರತವೂ ಕೂಡಾ ಪ್ರಮುಖವಾದುದಾಗಿದೆ. ದೇಶದಾದ್ಯಂತ ಬೇರೆ ಬೇರೆ ಭಾಗಗಳಲ್ಲಿ ಜಗತ್ತಿನ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿ ಕಾಣಸಿಗುತ್ತಾರೆ.

ಭಾರತವು ಸುಂದರವಾದ ಪ್ರಕೃತಿ ಮತ್ತು ಸಾಂಸ್ಕೃತಿಕ ಹಿನ್ನಲೆಯುಳ್ಳ ಸುಂದರವಾದ ದೇಶವಾಗಿದೆ. ಇಲ್ಲಿಯ ಕಡಲತೀರಗಳು , ಆಕರ್ಷಣೀಯವಾದ ಗಿರಿಧಾಮಗಳು ಮತ್ತು ಭವ್ಯವಾದ ಸ್ಮಾರಕಗಳು ದೇಶಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ ಅಲ್ಲದೆ ಜಗತ್ತಿನಾದ್ಯಂತ ಜನರನ್ನು ಆಕರ್ಷಿಸುತ್ತದೆ.

ಹಾಗೆಯೇ ಭಾರತದಲ್ಲಿ ಕೆಲವು ಸುಂದರವಾದ ಸ್ಥಳಗಳಿವೆ ಅವುಗಳು ವಿದೇಶೀ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ ಮತ್ತು ಅವರನ್ನು ಅಲ್ಲಿಯೇ ಬಹಳ ಸಮಯಗಳವರೆಗೆ ಉಳಿಯುವಂತೆ ಪ್ರೇರೇಪಿಸುತ್ತದೆ.

ದಕ್ಷಿಣದಲ್ಲಿನ ನಿರ್ಮಲವಾದ ಕಡಲತೀರದಿಂದ ಹಿಡಿದು ಉತ್ತರದ ಬೃಹತ್ ಪರ್ವತಗಳವರೆಗೆ, ಪಶ್ಚಿಮ ಘಟ್ಟಗಳ ಸಮೃದ್ಧ ಹಸಿರು ಪ್ರದೇಶದಿಂದ ಪೂರ್ವದಲ್ಲಿ ವನ್ಯಜೀವಿಗಳವರೆಗೆ, ಇವೆಲ್ಲವನ್ನು ಒಳಗೊಂಡಿರುವ ಭಾರತವು ನಿಜವಾಗಿಯೂ ತನ್ನನ್ನು ಪ್ರೀತಿಸುವಂತೆ ಮಾಡುತ್ತದೆ ಎನ್ನುವುದು ಸುಳ್ಳಲ್ಲ,

ಈ ಎಲ್ಲಾ ಸೌಂದರ್ಯತೆಗಳನ್ನು ಒಳಗೊಂಡಿರುವ ಭಾರತವನ್ನು ಇಲ್ಲಿಯ ಜನರು ಪ್ರೀತಿಸುವುದು ಮಾತ್ರವಲ್ಲದೆ ಅದಕ್ಕೆ ಸಮನಾಗಿ ವಿದೇಶಿಗರು ಕೂಡ ಇಲ್ಲಿ ಉಳಿಯಲು ಒಲವು ತೋರಿಸುತ್ತಾರೆ. ಇಲ್ಲಿ ಕೆಲವು ಅಂತಹ ಸ್ಥಳಗಳಿವೆ ಇವು ವಿದೇಶಿ ಪ್ರವಾಸಿಗರನ್ನು ಮರುಳು ಮಾಡುತ್ತದೆ.

ಕೇರಳ

ಕೇರಳ

PC: Sarath Kuchi

ವಿದೇಶೀ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳಲ್ಲಿ ಕೇರಳವು ಭಾರತದ ಪ್ರಮುಖ ರಾಜ್ಯವಾಗಿದೆ. ಇಲ್ಲಿಯ ಸುಂದರವಾದ ಕಡಲತೀರಗಳು, ಆಯುರ್ವೇದದ ರೆಸಾರ್ಟ್ ಗಳು, ಸ್ಪಾಗಳು, ಹಿನ್ನೀರಿನ ನೆಲೆಗಳು ಇತ್ಯಾದಿಗಳು ವಿದೇಶೀ ಪ್ರವಾಸಿಗರ ಪ್ರಮುಖವಾದ ಆಕರ್ಷಣೆಗಳಾಗಿವೆ.

ನೀವು ಊಹೆಯೂ ಮಾಡಲಾಗದಂತಹ ಕೆಲವು ವಿಸ್ಮಯಗಳನ್ನು ಕೇರಳವು ನಿಮಗೆ ನೀಡುತ್ತದೆ. ಇಲ್ಲಿಯ ಕಡಲ ತೀರಗಳಾದ ಕೋವಲಮ್ , ವರ್ಕಲಾ, ಬೇಕಲ್ ಇತ್ಯಾದಿಗಳು ಪ್ರಮುಖವಾದುದಾಗಿದೆ. ಚಹಾ ಮತ್ತು ಮಸಾಲೆ ತೋಟಗಳೊಂದಿಗೆ ಸುತ್ತುವರಿದ ಈ ರಾಜ್ಯವು ಒಂದು ಗಿರಿಧಾಮಗಳಿಗೆ ತ್ವರಿತವಾಗಿ ರೂಪಾಂತರಗೊಳ್ಳುತ್ತದೆ.

ನೀವು ಪ್ರಕೃತಿಯನ್ನು ಎಲ್ಲದಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವವರಾಗಿದ್ದಲ್ಲಿ, ಅಲೆಪ್ಪಿಯ ಹಿನ್ನೀರಿನ ಪ್ರಯಾಣವನ್ನು ರಾತ್ರಿಯಲ್ಲಿ ಪ್ರಯತ್ನಿಸಿ ನಂತರ ವಯನಾಡಿನ ದಟ್ಟ ಕಾಡುಗಳತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ ಈ ಪ್ರದೇಶವು ವಿವಿಧ ಸಸ್ಯ ಹಾಗೂ ಪ್ರಾಣಿಗಳಿಂದ ಕೂಡಿದೆ.

ಆಗ್ರಾ

ಆಗ್ರಾ

PC: Joel Godwin

ಆಗ್ರಾದಲ್ಲಿ ತಾಜ್ ಮಹಲ್ ಮಾತ್ರ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವೆನ್ನುವುದು ತಪ್ಪಾಗುವುದು. ಯಾಕೆಂದರೆ, ಆಗ್ರಾದಲ್ಲಿ ತಾಜ್ ಮಹಲ್ ಮಾತ್ರವಲ್ಲದೆ ಭೇಟಿ ನೀಡಬಹುದಾದಂತಹ ಇನ್ನೂ ಅನೇಕ ಸ್ಥಳಗಳಿವೆ. ಮತ್ತೊಂದು ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಸೈಟ್ ಆದ - ಆಗ್ರಾ ಕೋಟೆ, ಅದರ ಜೊತೆಗೆ ಮೆಹ್ತಾಬ್ ಭಾಗ್, ಫತೇಪುರ್ ಸಿಕ್ರಿ, ಮೊಘಲ್ ಚಕ್ರವರ್ತಿಗಳು ಮಾತ್ರವಲ್ಲದೆ ಇತರ ಅನೇಕ ರಾಜರುಗಳಿಂದ ನಿರ್ಮಿಸಲ್ಪಟ್ಟ ಅನೇಕ ಸ್ಮಾರಕಗಳಿವೆ.

ಹಂಪಿ

ಹಂಪಿ

PC: Jean-Pierre Dalbéra

ಇತಿಹಾಸ ಮತ್ತು ಪರಂಪರೆ ಇವು ಹಂಪಿಯ ಪ್ರವಾಸೋದ್ಯಮದ ಪ್ರಮುಖ ಅಂಶಗಳು. ಹಿಪ್ಪಿ ಐಲ್ಯಾಂಡ್ (ದ್ವೀಪ)ದಂತಹ ಪ್ರದೇಶಗಳು ಜಗತ್ತಿನಾದ್ಯಂತದ ಪ್ರವಾಸಿಗರು ಮೋಜು ಮಾಡುವ ಸ್ಥಳವಾಗಿದ್ದು, ವಿಶೇಷವಾಗಿ ಅಲ್ಲಿಯ ಶಾಂತವಾದ ಪರಿಸರ ಮತ್ತು ಪುರಾತನ ದೇವಾಲಯಗಳು ಮತ್ತು ಪುರಾತನ ಅವಶೇಷಗಳ ಮಧ್ಯೆ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಪ್ರವಾಸಿಗರು ಇಲ್ಲಿ ಭೇಟಿ ಕೊಡುತ್ತಾರೆ.

ಹಂಪಿ ತನ್ನ ಕಳೆದುಹೋದ ದಿನಗಳ ಅವಶೇಷದೊಂದಿಗೆ ತನ್ನದೇ ಆದ ಜಗತ್ತನ್ನು ಸೃಷ್ಟಿಸುತ್ತದೆ. ಇದು ಯಾತ್ರಿಕರಿಗೆ ಸಂತೋಷ ಕೊಡುವ, ನಿರಾಶ್ರಿತರಿಗೆ ಆಸರೆಯಾಗಿ, ಮತ್ತು ಕಲಾವಿದನಿಗೆ ಕುಂಚವಾಗಿ ಹಾಗೂ ಬರಹಗಾರರಿಗೆ ಸ್ಪೂರ್ತಿ ಕೊಡುವ ಸ್ಥಳವಾಗಿದೆ. ಈ ಸ್ಥಳವು ಏಕಕಾಲದಲ್ಲಿ ಮಿಲಿಯನ್ ಇತರ ವಿಷಗಳಿಗೆ ಸ್ಫೂರ್ತಿಯಾಗುವ ನೆಲೆಯಾಗಿದೆ.

ಗೋವಾ

ಗೋವಾ

PC: Unknown

ಗೋವವು ಭಾರತದ ಮೋಜು ಮಾಡುವ ಪ್ರಭಾವಶಾಲಿ ರಾಜಧಾನಿ ಎಂದು ಹೆಸರುವಾಸಿಯಾಗಿದೆ. ಈ ಸ್ಥಳವು ಅದರ ವಿನೋದ ತುಂಬಿದ ವೈಬ್ ಮತ್ತು ಆಹ್ಲಾದಿಸಬಹುದಾದ ಸಂಸ್ಕೃತಿಗೆ ಹೆಸರುವಾಸಿಯಾಗಿದೆ, ಆದ್ದರಿಂದ ಇದು ಯಾವುದೇ ಋತುವಿನಲ್ಲಿಯೂ ರಜಾದಿನಕ್ಕೆ ತಕ್ಕಂತೆ ಪ್ರವಾಸ ಮಾಡಲು ಅತ್ಯುತ್ತಮ ಸ್ಥಳವಾಗಿದೆ.

ರಾತ್ರಿ ಇಡೀ ನಡೆಯುವ ಬೀಚ್ ಪಾರ್ಟಿಗಳು, ಇಲ್ಲಿ ಅಡಗಿರುವ ಕೋವ್ ಗಳು ಇನ್ನೊಂದು ಆತ್ಮವನ್ನು ನೋಡಿದ ಅನುಭವವಾಗುತ್ತದೆ , ಗೋವಾ ನಿಜವಾಗಿಯೂ ಪ್ರತಿಯೊಬ್ಬರಿಗೂ ಏನನ್ನಾದರೂ ಪಡೆಯುವಂತಹ ಸಂತೋಷಗೊಳಿಸುವಂತಹ ಸ್ಥಳವಾಗಿದೆ.

ರಿಷಿಕೇಶ

ರಿಷಿಕೇಶ

PC: Vishal chand rajwar

ರಿಷಿಕೇಶವು ಜಗತ್ತಿನ ಯೋಗ ಕೇಂದ್ರವೆಂದು ಹೆಸರು ವಾಸಿಯಾಗಿದೆ. ಇಲ್ಲಿಯ ಅಸಂಖ್ಯಾತ ಆಶ್ರಮಗಳು ಮತ್ತು ಧ್ಯಾನ ಕೇಂದ್ರಗಳಿಂದಾಗಿ ಆಧ್ಯಾತ್ಮದ ಒಲವು ಇರುವವರನ್ನು ಅಯಸ್ಕಾಂತದಂತೆ ತನ್ನ ಬಳಿ ಸೆಳೆಯುತ್ತದೆ. ಇದಲ್ಲದೆ ಈ ಸ್ಥಳವು ದೇಶದ ಅತೀ ಪ್ರಸಿದ್ದ ವಾದ ನದಿ ರಾಫ್ಟಿಂಗ್ ಸ್ಥಳಗಳಲ್ಲೊಂದಾಗಿದೆ.

ಪ್ರತೀ ವರ್ಷ ರಿಷಿಕೇಶಕ್ಕೆ ಇಲ್ಲಿಯ ಬಿಳಿ ನೀರಿನ ರಾಫ್ಟಿಂಗ್ ಅನುಭವ ಪಡೆಯಲು ಹೆಚ್ಚಿನ ಸಂಖ್ಯೆ ಯಲ್ಲಿ ಜನರು ಬರುತ್ತಾರೆ. ಇಲ್ಲಿ ರಾಫ್ಟಿಂಗ್ ಎರಡು ಬಗೆಯದಾಗಿರುತ್ತದೆ ಅಪಾಯಕಾರಿಯಿಂದ ಹಿಡಿದು ಸೌಮ್ಯ ವಾದ ರಾಫ್ಟಿಂಗ್ ವರೆಗೆ ಇದೆ. ನಂತರ ಶಿವಪುರಿಯಿಂದ ರಾಮ್ ಜೂಲಾಗೆ ಪ್ರಯಾಣಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X