Search
  • Follow NativePlanet
Share
» »ಮಹಾರಾಷ್ಟ್ರದಲ್ಲಿರುವ ಪಿಸೋಲ್ ಕೋಟೆಗೊಮ್ಮೆ ಹೋಗಿ ಬನ್ನಿ

ಮಹಾರಾಷ್ಟ್ರದಲ್ಲಿರುವ ಪಿಸೋಲ್ ಕೋಟೆಗೊಮ್ಮೆ ಹೋಗಿ ಬನ್ನಿ

ಮಹಾರಾಷ್ಟ್ರದ ಕೋಟೆಗಳು ಕೇವಲ ಚಾರಣಕ್ಕೆ ಯೋಗ್ಯವಾದ ಹಾದಿಗಳನ್ನು ಹೊಂದಿರುವುದು ಮಾತ್ರವಲ್ಲದೆ ಸುತ್ತಲೂ ಸುಂದರವಾದ ಪರಿಸರವನ್ನು ಹೊಂದಿದ್ದು ಅನೇಕ ಆಸಕ್ತಿದಾಯಕ ಐತಿಹಾಸಿಕ ಸ್ಥಳಗಳನ್ನೂ ಹೊಂದಿದೆ. ಆದುದರಿಂದ ಈ ಸ್ಥಳಗಳು ಕೇವಲ ಇತಿಹಾಸ ಪ್ರಿಯರು ಮತ್ತು ಆಪ್ಭೀಟ್ ಪ್ರವಾಸಿಗರಲ್ಲೂ ಅತ್ಯಂತ ಜನಪ್ರಿಯತೆಯನ್ನು ಹೊಂದಿದೆ.

ಗೋದಾವರಿ ನದಿ ದಡದಲ್ಲಿರುವ ಒಂದು ಸುಂದರ ನಗರವಾಗಿರುವ ನಾಸಿಕ್ ನಲ್ಲಿ ಶತಮಾನಗಳಿಂದಲೂ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿರುವ ಅನೇಕ ಯಾತ್ರಾ ಸ್ಥಳದಿಂದಾಗಿ ಈ ನಗರವನ್ನು ಮಹಾರಾಷ್ಟ್ರದ ಆಧ್ಯಾತ್ಮಿಕತೆಗಳ ರಾಜಧಾನಿ ಎನ್ನಬಹುದು. ಇದು ಅನೇಕ ಬೆಟ್ಟದ ಮೇಲಿರುವ ಕೋಟೆಗಳಿಗೂ ನೆಲೆಯಾಗಿದ್ದು ಅನೇಕ ವರ್ಷಗಳಿಂದಲೂ ಚಾರಣ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿದೆ.

ಅಂತಹುದೇ ಆಸಕ್ತಿದಾಯಕ ಕೋಟೆಗಳಲ್ಲಿ ಪಿಸೋಲಾ ಕೋಟೆಯೂ ಕೂಡಾ ಒಂದು. ಈ ಭವ್ಯವಾದ ಕೋಟೆಯ ಸೌಂದರ್ಯತೆಯ ಬಗ್ಗೆ ತಿಳಿಯಲು ಈ ಕೋಟೆಯ ಕಡೆಗೆ ಒಂದು ನೋಟ ಹರಿಸೋಣ . ಇಲ್ಲಿಗೆ ಹೋಗುವುದು ಹೇಗೆ ಮತ್ತು ಇಲ್ಲಿಗೆ ಭೇಟಿ ಕೊಡುವ ಕಾರಣದ ಬಗ್ಗೆ ತಿಳಿಯೋಣ.

ಪಿಸೋಲಾ ಕೋಟೆಯನ್ನು ಭೇಟಿ ಕೊಡಲು ಸೂಕ್ತ ಸಮಯ

ಪಿಸೋಲಾ ಕೋಟೆಯನ್ನು ಭೇಟಿ ಕೊಡಲು ಸೂಕ್ತ ಸಮಯ

Ccmarathe

ಪಿಸೋಲಾ ಕೋಟೆಯ ಪ್ರದೇಶವು ಬೇಸಿಗೆಯಲ್ಲಿ ವಿಪರೀತ ತಾಪಮಾನವನ್ನು ಹೊಂದಿರುವುದರಿಂದ ಈ ಸಮಯದಲ್ಲಿ ಭೇಟಿಕೊಡುವುದು ಅಷ್ಟೊಂದು ಸೂಕ್ತವಲ್ಲ ಎನ್ನಬಹುದು. ಈ ಸ್ಥಳಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ಕೊನೆಯವರೆಗೆ ಇಲ್ಲಿಯ ಹವಾಮಾನವು ಅನುಕೂಲಕರ ಮತ್ತು ಅಹ್ಲಾದಕರವಾಗಿದ್ದು ಭೇಟಿಗೆ ಯೋಗ್ಯವಾಗಿದೆ.

ಇಲ್ಲಿಗೆ ಮಾನ್ಸೂನ್ ಮಳೆಗಾಲದ ಸಮಯದಲ್ಲಿಯೂ ಕೂಡಾ ಇಲ್ಲಿಗೆ ಭೇಟಿ ನೀಡಬಹುದು. ಈ ಸಮಯದಲ್ಲಿ ಕೋಟೆಯ ಸುತ್ತಮುತ್ತಲಿನ ಪ್ರದೇಶವು ತಾಜಾತನದಿಂದ ಕಂಗೊಳಿಸುತ್ತಿರುತ್ತದೆ.

ಪಿಸೋಲಾ ಕೋಟೆಯ ಸುತ್ತಮುತ್ತಲಿನ ಪ್ರದೇಶ ಮತ್ತು ಅದರ ಇತಿಹಾಸದ ಬಗ್ಗೆ

ಪಿಸೋಲಾ ಕೋಟೆಯ ಸುತ್ತಮುತ್ತಲಿನ ಪ್ರದೇಶ ಮತ್ತು ಅದರ ಇತಿಹಾಸದ ಬಗ್ಗೆ

ಪಿಸೋಲಾ ಕೋಟೆಯು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿರುವ ತಹರಾಬಾದ್ ನಲ್ಲಿದೆ ಮತ್ತು ಈ ಕೋಟೆಯು ಇಲ್ಲಿನ ಪ್ರದೇಶದ ಅತ್ಯಂತ ಸುಂದರವಾದ ಕೋಟೆಗಳಲ್ಲೊಂದೆನಿಸಿದೆ. ಈ ಕೋಟೆಯು ಹಸಿರು ಸಸ್ಯವರ್ಗ ಮತ್ತು ಗದ್ದೆಗಳನ್ನೊಳಗೊಂಡ ಭೂಪ್ರದೇಶದಿಂದ ಸುತ್ತುವರಿದಿದ್ದು ಹಲವಾರು ಶತಮಾನಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ.

ಈ ಕೋಟೆಯ ರಚನೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದಿಲ್ಲವಾದರೂ ಇದನ್ನು ಭಾರತದ ಮದ್ಯಕಾಲೀನ ಯುಗದಲ್ಲಿ ನಿರ್ಮಿಸಲಾಗಿರಬಹುದೆಂದು ಹೇಳಲಾಗುತ್ತದೆ. ಇದು ಈ ರಾಜ್ಯದಲ್ಲಿಯ ಒಂದು ಮಹತ್ವದ ಸ್ಥಳವಾಗಿದೆ. ಇಂದು ಈ ಕೋಟೆಯು ಅವಶೇಷಗಳ ದಾರಿಯಲ್ಲಿದೆ ಮತ್ತು ರಾಜ್ಯ ಸರಕಾರದ ಹಿಡಿತದಲ್ಲಿದೆ.

ಇದು ಸುಮಾರು 3500 ಅಡಿಗಳಷ್ಟು ಎತ್ತರದಲ್ಲಿರುವುದರಿಂದ ಟ್ರಕ್ಕಿಂಗ್ ಮತ್ತು ಕ್ಯಾಂಪಿಂಗ್ ಮಾಡುವವರಿಗೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಇದರ ತಪ್ಪಲಿನಲ್ಲಿರುವ ವಾಡಿ ಪಿಸೋಲ್ ಹಳ್ಳಿಯಿಂದ ಈ ಕೋಟೆಗೆ ಟ್ರಕ್ಕಿಂಗ್ ಪ್ರಾರಂಭ ಮಾಡುವ ಸ್ಥಳವಾಗಿದೆ. ಈ ಹಳ್ಳಿಯಿಂದ ಕೋಟೆಯ ಹತ್ತಿರ ತಲುಪಲು ಸುಮಾರು ಒಂದು ಗಂಟೆಗಳ ಸಮಯ ಬೇಕಾಗುವುದು.

ಪಿಸೊಲಾ ಕೋಟೆಗಳನ್ನು ಏಕೆ ಭೇಟಿ ಕೊಡಬೇಕು?

ಪಿಸೊಲಾ ಕೋಟೆಗಳನ್ನು ಏಕೆ ಭೇಟಿ ಕೊಡಬೇಕು?

ನೀವು ಚಾರುಣಿಗರಲ್ಲೊಬ್ಬರಾಗಿದ್ದು ಮತ್ತು ಆಪ್ಭೀಟ್ ತಾಣಗಳಿಗಾಗಿ ನೋಡುತ್ತಿದ್ದಲ್ಲಿ ಪಿಸೋಲಾ ಕೋಟೆಯು ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ. ಇಲ್ಲಿ ಟ್ರಕ್ಕಿಂಗ್ ಮಾತ್ರವಲ್ಲದೆ ಈ ಕೋಟೆಯ ಇತಿಹಾಸದ ಬಗ್ಗೆಯೂ ಕೂಡಾ ನೀವು ಅನ್ವೇಷಣೆ ಮಾಡಬಹುದಾಗಿದೆ. ಕೋಟೆಯ ಮೇಲ್ಬಾಗದಿಂದ ಹತ್ತಿರದ ಹಳ್ಳಿಗಳ ಹಾಗೂ ಸುತ್ತಮುತ್ತಲಿನ ಸೊಂಪಾದ ಹಸಿರು ಪ್ರದೇಶದ ನಯನ ಮನೋಹರ ದೃಶ್ಯವನ್ನು ನೋಡಬಹುದು.

ಆದುದರಿಂದ ಇದು ಛಾಯಾಗ್ರಾಹಕರಿಗೂ ಇಷ್ಟವಾಗುವಂತಹ ಸುಂದರವಾದ ಸ್ಥಳವೆನಿಸಿದೆ. ಈ ಕೋಟೆಯು ಶಿಥಿಲಾವಸ್ಥೆಯಲ್ಲಿದ್ದರೂ ನೀವು ಇನ್ನೂ ಕೂಡ ಕೆಲವು ಗುಹೆಗಳು ಮತ್ತು ಮಸೀದಿಗಳನ್ನು ಕಾಣಬಹುದಾಗಿದೆ. ಇಲ್ಲಿಯ ಶಾಂತಿಯುತವಾದ ವಾತಾವರಣದಿಂದಾಗಿ ಇದು ಅನೇಕ ಕಾಂಪ್ ಮಾಡುವವರನ್ನೂ ಕೂಡಾ ಆಕರ್ಷಿಸುತ್ತದೆ.

ಪಿಸೋಲ್ ಕೋಟೆಯನ್ನು ತಲುಪುವುದು ಹೇಗೆ?

ಪಿಸೋಲ್ ಕೋಟೆಯನ್ನು ತಲುಪುವುದು ಹೇಗೆ?

ವಾಯು ಮಾರ್ಗ: ಇಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು 125 ಕಿ.ಮೀ ಅಂತರದಲ್ಲಿರುವ ನಾಸಿಕ್ ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ ನೀವು ಕೋಟೆಯ ತಪ್ಪಲಿಗೆ ಬಾಡಿಗೆ ಕ್ಯಾಬ್ ಮೂಲಕ ಪ್ರಯಾಣಿಸಬಹುದಾಗಿದೆ. ತಪ್ಪಲಿನಿಂದ ಟ್ರಕ್ಕಿಂಗ್ ಮಾಡುವುದರ ಮೂಲಕ ಕೋಟೆಯ ಹತ್ತಿರಕ್ಕೆ ಹೋಗಬಹುದಾಗಿದೆ.

ರೈಲು ಮಾರ್ಗ: ಕೋಟೆಗೆ ಹತ್ತಿರವಿರುವ ಪ್ರಮುಖ ರೈಲ್ವೇ ನಿಲ್ದಾಣವು ನಾಸಿಕ್ ನಲ್ಲಿದೆ. ಆದುದರಿಂದ ನೀವು ಧುಲೆ ರೈಲ್ವೇ ನಿಲ್ದಾಣಕ್ಕೆ ನೇರವಾಗಿ ರೈಲಿನ ಮೂಲಕ ಪ್ರಯಾಣಿಸಬಹುದು. ಈ ನಿಲ್ದಾಣವು ಪಿಸೋಲಾ ಕೋಟೆಯಿಂದ ಸುಮಾರು 80 ಕಿ.ಮೀ ಅಂತರದಲ್ಲಿದೆ ಮತ್ತು ನಂತರ ಅಲ್ಲಿಂದ ಕೋಟೆಯ ತಪ್ಪಲಿಗೆ ಬಾಡಿಗೆ ವಾಹನದ ಮೂಲಕ ತಲುಪಬಹುದಾಗಿದೆ.

ರಸ್ತೆ ಮೂಲಕ : ಈ ಕೋಟೆಯ ಸುತ್ತಲಿನ ಪ್ರದೇಶವು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ ಆದ್ದರಿಂದ ನೀವು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ನೀವು ಕೋಟೆಗೆ ನೇರವಾಗಿ ಬಸ್ಸು ಮೂಲಕ ಮಾಲೆಗಾಂವ್ ಗೆ ತಲುಪಬಹುದು ಮತ್ತು ಅಲ್ಲಿಂದ ಬಾಡಿಗೆ ಕ್ಯಾಬ್ ಅನ್ನು ಹಿಡಿಯಬಹುದು. ಮಾಲೆಗಾಂವ್ ಕೋಟೆಗೆ ಸುಮಾರು 50 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X