Search
  • Follow NativePlanet
Share
» »ಮುತ್ತಿನ ನಗರದಲ್ಲಿನ ಪ್ರಮುಖ ಪ್ರವಾಸಿ ತಾಣಗಳಿವು

ಮುತ್ತಿನ ನಗರದಲ್ಲಿನ ಪ್ರಮುಖ ಪ್ರವಾಸಿ ತಾಣಗಳಿವು

By Manjula Balaraj Tantry

ಭಾರತದ ಅತೀ ದೊಡ್ಡ ನಗರಗಳಲ್ಲಿ ಹೈದರಾಬಾದ್ ಎಲ್ಲಾ ತರಹದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತದೆ. ಇಲ್ಲಿ ನೈಸರ್ಗಿಕ ತಾಣಗಳಿಂದ ಹಿಡಿದು ಮನೋರಂಜನೆಯ ಕೇಂದ್ರಗಳವರೆಗೆ ಮತ್ತು ಐತಿಹಾಸಿಕ ಸ್ಥಳಗಳಿಂದ ಹಿಡಿದು ವಾಸ್ತುಶಿಲ್ಪ ಅದ್ಬುತಗಳವರೆಗೆ ನೀವು ಇದರ ಗಡಿಯೊಳಗೆ ಎಲ್ಲವನ್ನೂ ಕಾಣಬಹುದಾಗಿದೆ. ಆದುದರಿಂದ ಈ ಸೌಂದರ್ಯತೆಯು ನೀಡುವ ಮುದವನ್ನು ಏಕೆ ಅನುಭವಿಸಬಾರದು? ಇಂದು ಹೈದರಾಬಾದ್ ದೇಶದಲ್ಲಿ ಅತೀ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲೊಂದೆನಿಸಿದೆ.

ಒಂದುಕಡೆ, ನೀವು ಇಲ್ಲಿಯ ಪ್ರಾಚೀನ ಸ್ಮಾರಕಗಳ ಮೂಲಕ ಇತಿಹಾಸವನ್ನು ಅನ್ವೇಷಣೆ ಮಾಡಬಹುದಾದರೆ ಇನ್ನೊಂದೆಡೆ ಇಲ್ಲಿಯ ಉದ್ಯಾನವನಗಳು ಮತ್ತು ಸರೋವರಗಳಿಗೆ ಭೇಟಿ ನೀಡುವುದರ ಮೂಲಕ ನಿಮ್ಮ ವಾರಾಂತ್ಯವನ್ನು ಆರಾಮದಾಯಕವಾಗಿ ಕಳೆಯಬಹುದಾಗಿದೆ. ಇಲ್ಲಿ ನಾವು ಹೈದರಾಬಾದಿನ ಅಗ್ರ 5 ಪಿಕ್ನಿಕ್ ತಾಣಗಳ ಪಟ್ಟಿ ಮಾಡಿದ್ದೇವೆ ಇಲ್ಲಿ ನಿಮ್ಮನ್ನು ನೀವು ವಾರಾಂತ್ಯದಲ್ಲಿ ಪುನಶ್ಚೇತನಗೊಳಿಸಿಕೊಳ್ಳಬಹುದು ಮತ್ತು ನಗರದ ಸದ್ದು ಗದ್ದಲಯುಕ್ತ ಜೀವನದಿಂದ ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಳ್ಳಬಹುದಾಗಿದೆ. ಇವುಗಳ ಬಗ್ಗೆ ಇನ್ನಷ್ಟು ಓದಿ ತಿಳಿಯಿರಿ

ಹುಸೇನ್ ಸಾಗರ್ ಸರೋವರ ಮತ್ತು ಲುಂಬಿನಿ ಉದ್ಯಾನವನ

ಹುಸೇನ್ ಸಾಗರ್ ಸರೋವರ ಮತ್ತು ಲುಂಬಿನಿ ಉದ್ಯಾನವನ

PC: Nikhilb239

ನಗರದ ಹೃದಯ ಭಾಗದಲ್ಲಿರುವ ಹುಸೇನ್ ಸಾಗರ್ ಸರೋವರ ಮತ್ತು ಲುಂಬಿನಿ ಉದ್ಯಾನವನ ಹೈದರಾಬಾದಿನಲ್ಲಿಯ ಅತ್ಯಂತ ಹೆಚ್ಚು ಪ್ರವಾಸಿಗರಿಂದ ಭೇಟಿ ಕೊಡಲ್ಪಡುವ ಸ್ಥಳವಾಗಿದೆ. ಇತ್ತೀಚಿನ ವರದಿಯ ಪ್ರಕಾರ ಈ ಜಾಗವು ಪ್ರತೀನಿತ್ಯ ಸಾವಿರಾರು ಸ್ಥಳೀಯರು ಮತ್ತು ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ ಎನ್ನಲಾಗಿದೆ.

ಲುಂಬಿನಿ ಉದ್ಯಾನವನವು ಹುಸೇನ್ ಸಾಗರ್ ಸರೋವರದ ಪಕ್ಕದಲ್ಲಿಯೇ ನೆಲೆಸಿದ್ದು, ಇದು ಅನೇಕ ವಿಧದ ಕಾರಂಜಿ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಈ ಉದ್ಯಾನವನದ ಒಳಭಾಗದಲ್ಲಿ ನೀವು ಸುಂದರವಾದ ಕೃತಕ ಜಲಪಾತದಲ್ಲಿಯೂ ಕೂಡಾ ಆನಂದಿಸಬಹುದಾಗಿದೆ. ಹುಸೇನ್ ಸಾಗರ್ ಸರೋವರವು ಹೃದಯಾಕಾರದಲ್ಲಿ ನಿರ್ಮಿತವಾಗಿದ್ದು ಇದನ್ನು 16ನೇ ಶತಮಾನದಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.

ಈ ಸರೋವರದ ಮಧ್ಯಭಾಗದಲ್ಲಿ ದೊಡ್ಡದಾದ ಗೌತಮ ಬುದ್ದನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಇದನ್ನು ದೋಣಿ ವಿಹಾರ ಮಾಡುವ ಮೂಲಕ ನೋಡಬಹುದಾಗಿದೆ. ಇಲ್ಲಿ ಮಾಡಬಹುದಾದ ಮುಖ್ಯ ಚಟುವಟಿಕೆಗಳೆಂದರೆ ಇಲ್ಲಿಯ ಸುಂದರವಾದ ಉದ್ಯಾನವನದಲ್ಲಿ ವಿಶ್ರಾಂತಿ ಪಡೆಯುವುದು. ರಾತ್ರಿಯಾಗುತ್ತಿದ್ದಂತೆ ಇಲ್ಲಿ ನಕ್ಷತ್ರವೀಕ್ಷಣೆ ಮಾಡುವುದು ಛಾಯಾಗ್ರಹಣ ಮತ್ತು ದೋಣಿವಿಹಾರ. ನಿಮ್ಮ ಕುಟುಂಬದ ಜೊತೆ ಈ ವಾರಾಂತ್ಯದಲ್ಲಿ ವಿಶ್ರಾಂತಿ ಪಡೆಯಲು ಇದೊಂದು ಸುಂದರವಾದ ಸ್ಥಳವಲ್ಲವೆ?

ನೆಹರೂ ಝೂವಲಾಜಿಕಲ್ ಪಾರ್ಕ್

ನೆಹರೂ ಝೂವಲಾಜಿಕಲ್ ಪಾರ್ಕ್

PC: Prado7

ನೀವು ನಿಮ್ಮ ವಾರಾಂತ್ಯವನ್ನು ನಿಮ್ಮ ಮಕ್ಕಳ ಜೊತೆ ಸುಂದರವಾಗಿ ಕಳೆಯಬೇಕೆಂದಿದಲ್ಲಿ ಇಲ್ಲಿಯ ನೆಹರು ಝುವಾಲಾಜಿಕಲ್ ಪಾರ್ಕ್ ನೀವು ಭೇಟಿ ನೀಡಬಹುದಾದ ಅತ್ಯುತ್ತಮವಾದ ಸ್ಥಳವಾಗಿದೆ. ಇದು 1963ರಲ್ಲಿ ನಿರ್ಮಾಣಗೊಳಿಸಲಾಗಿದ್ದು ಸುಮಾರು 380 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿದೆ.

ಈ ಸುಂದರವಾದ ಪಾರ್ಕ್ ಅನೇಕ ಜಾತಿಯ ಪಕ್ಷಿಗಳು ಪ್ರಾಣಿಗಳು ಮತ್ತು ಸಸ್ಯಗಳನ್ನು ಹೊಂದಿದೆ. ಆದುದರಿಂದ ಇದು ಮಕ್ಕಳಿಗೆ ಅಚ್ಚುಮೆಚ್ಚೆನಿಸಿದೆ. ನೀವು ಇಲ್ಲಿ ವನ್ಯಜೀವಿ ಸಫಾರಿ ಕೂಡಾ ಆನಂದಿಸಬಹುದಾಗಿದೆ ಮತ್ತು ಕೆಲವು ಅಪರೂಪದ ಜಾತಿಯ ಸ್ಥಳೀಯ ಸಸ್ಯಗಳು ಮತ್ತು ಪ್ರಾಣಿಗಳನ್ನು ನೋಡಬಹುದಾಗಿದೆ.

ಇದು ಸೋಮವಾರದಂದು ಮುಚ್ಚಲ್ಪಟ್ಟಿದ್ದರೂ ಕೂಡ ನಗರದ ಹೆಚ್ಚು ಭೇಟಿ ಕೊಡಲ್ಪಡುವ ಪ್ರವಾಸಿ ಸ್ಥಳಗಳಲ್ಲಿ ಒಂದೆನಿಸಿದೆ. ಇಲ್ಲಿ ಅಪರೂಪದ ಜಾತಿಯ ಪ್ರಾಣಿಗಳಲ್ಲಿ, ಸೂರ್ಯ ಕರಡಿ, ಬಿಳಿ ಹುಲಿ, ಭಾರತೀಯ ಗೌರ್ ಮತ್ತು ಚಿರತೆ ಇತ್ಯಾದಿಗಳನ್ನು ಹೊಂದಿದೆ. ನೀವು ವನ್ಯಜೀವಿಗಳ ಸೌಂದರ್ಯತೆಯನ್ನು ಸೆರೆಹಿಡಿಯಲು ಇಷ್ಟಪಟ್ಟರೆ ನೀವು ಇಲ್ಲಿ ಛಾಯಾಗ್ರಹಣ ಕೂಡಾ ಮಾಡಬಹುದಾಗಿದೆ.

ಗೋಲ್ಕೊಂಡಾ ಕೋಟೆ

ಗೋಲ್ಕೊಂಡಾ ಕೋಟೆ

Bernard Gagnon

ಗೋಲ್ಕಂಡಾ ಕೋಟೆಯು 17ನೇ ಶತಮಾನದಲ್ಲಿ ಕಾಕತೀಯ ಆಡಳಿತದವರಿಂದ ತಮ್ಮ ಸಾಮ್ರ್ಯಾಜ್ಯವನ್ನು ದಾಳಿಕೋರರಿಂದ ರಕ್ಷಿಸುವ ಸಲುವಾಗಿ ನಿರ್ಮಿತವಾಗಿದ್ದು ಇದು ದೇಶದ ಅತ್ಯಂತ ಪ್ರಸಿದ್ದ ಐತಿಹಾಸಿಕ ಸ್ಮಾರಕಗಳಲ್ಲೊಂದೆನಿಸಿದೆ. ಜಗತ್ತಿನ ಅತ್ಯಂತ ಪ್ರಸಿದ್ದವಾದ ಮತ್ತು ದೊಡ್ಡದಾದ ಕಟ್ ವಜ್ರವಾದ ಕೊಹಿನೂರ್ ಇದೇ ಜಾಗದಲ್ಲಿ ಕಂಡು ಬಂದಿರುವುದೆಂದು ನಿಮಗೆ ಗೊತ್ತಿದೆಯೇ ?

ಇಂದು ಒಂದು ಜನಪ್ರಿಯ ವಾರಾಂತ್ಯದ ಸ್ಥಳವೆನಿಸಿದ್ದು ದೇಶದಾದ್ಯಂತದ ಎಲ್ಲಾ ರಾಜ್ಯದ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಇಲ್ಲಿ ಸೊಂಪಾದ ಹಸಿರುಮಯ ಉದ್ಯಾನವನವು ಹರಡಿದ್ದು ಸ್ಥಳೀಯರನ್ನೂ ಕೂಡಾ ತಮ್ಮ ವಾರಾಂತ್ಯವನ್ನು ಈ ಗೋಲ್ಕಂಡಾ ಕೋಟೆಯಲ್ಲಿ ಕಳೆಯುವಂತೆ ಸೆಳೆಯುತ್ತದೆ.

ನೀವು ಇತಿಹಾಸ ಪ್ರಿಯರಾಗಿರುವುದರ ಜೊತೆಗೆ ಸುಂದರ ಉದ್ಯಾನವನದಲ್ಲಿ ಆನಂದಿಸಲು ಬಯಸಿದಲ್ಲಿ ಈ ಸ್ಮಾರಕವಿರುವ ಸೌಂದರ್ಯತೆಯು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಈ ಕೋಟೆಯ ಆವರಣದಲ್ಲಿ ಅನೇಕ ಭವ್ಯವಾದ ಸ್ಮಾರಕಗಳಿವೆ ಅವುಗಳಲ್ಲಿ ಮಸೀದಿಗಳು ಮತ್ತು ಅರಮನೆಗಳೂ ಕೂಡಾ ಸೇರಿದೆ.

ರಾಮೋಜಿ ಫಿಲಂ ಸಿಟಿ

ರಾಮೋಜಿ ಫಿಲಂ ಸಿಟಿ

PC: Vinayaraj

ನಿಮ್ಮ ಮೈಮನಸ್ಸು ಮತ್ತು ಆತ್ಮವನ್ನು ಪುನಶ್ಚೇತನಗೊಳಿಸಲು ಒಂದು ಅತ್ಯಂತ ಸೂಕ್ತವಾದ ಸ್ಥಳವೆಂದರೆ ಅದು ರಾಮೋಜಿ ಫಿಲಂ ಸಿಟಿ ಇದು ಸುಮಾರು 2000 ಎಕರೆಗಳಷ್ಟು ಜಾಗದಲ್ಲಿ ಹರಡಿಕೊಂಡಿದ್ದು ಇದು ಹೈದರಾಬಾದಿನಲ್ಲಿ ಮಾತ್ರವಲ್ಲದೆ ತೆಲಂಗಾಣದಲ್ಲಿಯೂ ಇದು ಅತ್ಯಂತ ಹೆಚ್ಚು ಪ್ರವಾಸಿಗರಿಂದ ಭೇಟಿ ನೀಡಲ್ಪಡುವ ಸ್ಥಳಗಳಲ್ಲೊಂದಾಗಿದೆ.

ಇದರ ಜನಪ್ರಿಯತೆ ಹೇಗಿದೆಯೆಂದರೆ ಇದನ್ನು ದೇಶದ ಎಲ್ಲಾ ಕಡೆಯ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಇದು ಏಕೆಂದರೆ ಈ ಸ್ಥಳವು ಪ್ರವಾಸಿಗರಿಗೆ ಬೇಕಾದುದನ್ನು ಒದಗಿಸುತ್ತದೆ ಅವುಗಳಲ್ಲಿ ಸಾಹಸಮಯ ಚಟುವಟಿಕೆಗಳಾದ ಪರ್ವತ ಬೈಕ್ ಸವಾರಿ, ಪೈಂಟ್ ಬಾಲ್, ಮತ್ತು ರೋಪ್ ಕೋರ್ಸ್ ಗಳಿಂದ ಹಿಡಿದು ಉದ್ಯಾನವನಗಳು ಮತ್ತು ತೋಟಗಳನ್ನು ಒಳಗೊಂಡಿದೆ.

ಇಲ್ಲಿ ಬಾಹುಬಲಿ ಮತ್ತು ರೇಸ್ ಗುರಮ್ ಇಲ್ಲಿಯೇ ಚಿತ್ರೀಕರಿಸಲಾಗಿದೆ ಎಂಬುದು ನಿಮಗೆ ತಿಳಿದಿದೆಯೇ ? ಇಲ್ಲಿ ವಾಸ್ತವ್ಯ ಹೂಡಲೂ ಕೂಡಾ ಸೌಕರ್ಯಗಳಿವೆ ಇದು ನಿಮ್ಮ ವಾರಾಂತ್ಯ ಕಳೆಯಲು ಸೂಕ್ತವಾದ ಸ್ಥಳವಾಗಿದೆ.

ಎನ್ ಟಿ ಆರ್ ಸ್ಮಾರಕ

ಎನ್ ಟಿ ಆರ್ ಸ್ಮಾರಕ

PC: Saikiranstuffguy

ಮುಖ್ಯ ನಗರದಿಂದ ನೀವು ದೂರ ಹೋಗಲು ಬಯಸುತ್ತಿಲ್ಲವಾಗಿದ್ದು ಆದರೂ ನೈಸರ್ಗಿಕ ಸೌಂದರ್ಯವನ್ನು ಸವಿಯಬೇಕೆಂದಿದ್ದಲ್ಲಿ, ಎನ್ ಟಿ ಆರ್ ಉದ್ಯಾನವನಗಳು ನಿಮ್ಮ ವಾರಾಂತ್ಯ ಕಳೆಯಲು ಸೂಕ್ತವಾದ ಸ್ಥಳವಾಗಿದೆ. ಇದು ಸುಮಾರು 55 ಎಕರೆಗಳ ಪ್ರದೇಶದಲ್ಲಿ ಹಬ್ಬಿದ್ದು ಇದನ್ನು 2001ರಲ್ಲಿ ಚಲನ ಚಿತ್ರ ನಟ ಹಾಗೂ ರಾಜಕಾರಣಿಯಾಗಿದ್ದ ಎನ್ ಟಿ ರಾಮರಾವ್ ಅವರ ಪ್ರೀತಿಯ ಸವಿ ನೆನಪಿಗಾಗಿ ನಿರ್ಮಿತವಾಗಿದೆ.

ಈ ಸ್ಥಳವು ಅನೇಕ ಜಾತಿಯ ಸಸ್ಯಗಳಿಗೆ ನೆಲೆಯಾಗಿದೆ ಇಲ್ಲಿ ಜಲಪಾತಗಳು ರೆಸ್ಟೋರೆಂಟುಗಳು ಮತ್ತು ಇನ್ನಿತರ ಆಕರ್ಷಣೆಗಳನ್ನೂ ಹೊಂದಿದೆ. ಆದುದರಿಂದ ನೀವು ನಿಮ್ಮ ಮನಸ್ಸನ್ನು ಪುನಶ್ಚೇತನಗೊಳಿಸುವಂತಹ ಸ್ಥಳಕ್ಕೆ ಭೇಟಿ ನೀಡುವುದನ್ನು ತಪ್ಪಿಸಲೇ ಬಾರದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more