Search
  • Follow NativePlanet
Share
» »ಕುದುರೆ ಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ

ಕುದುರೆ ಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ

By Vijay

ಶ್ರೀವೈಷ್ಣವರು ನಡೆದುಕೊಳ್ಳುವ ಪರಮ ಪಾವನ ಮಠವಾಗಿದೆ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠ. ಈ ಮಠದ ಅನುಯಾಯಿಗಳು ಆರಾಧಿಸುವ ಪ್ರಧಾನ ದೇವರೆ ವಿಷ್ಣುವಿನ ಅವತಾರವಾದ ಶ್ರೀ ಲಕ್ಷ್ಮಿ ಹಯಗ್ರೀವ ಸ್ವಾಮಿ. ಕ್ರಿ.ಶ 1378 ರಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಮಠವು ವೇದಾಂತ ದೇಸಿಕ ಸ್ವಾಮಿಗಳ ಶಿಷ್ಯರಾಗಿದ್ದ ಶ್ರೀ ಶ್ರೀ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಜೀಯಾರ್ ಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟಿದೆ.

ಬೆಂಗಳೂರು, ಮೈಸೂರಿನಲ್ಲಿರುವ ಮುಖ್ಯ ಧಾರ್ಮಿಕ ಕ್ಷೇತ್ರಗಳು

ಮೈಸೂರಿನಲ್ಲಿ ತನ್ನ ಮುಖ್ಯ ಕೇಂದ್ರವನ್ನು ಹೊಂದಿರುವ ಈ ಶ್ರೀವೈಷ್ಣವ ಮಠವು ಮೈಸೂರಿನ ರಾಜವಂಶದೊಂದಿದೆ 1399 ರಿಂದಲೂ ಬಹು ಹತ್ತಿರದ ನಂಟನ್ನು ಹೊಂದಿದ್ದು ಆ ಒಂದು ಕಾರಣದಿಂದಾಗಿಯೆ ಮೈಸೂರು ಅರಮನೆಯನ್ನು ಈ ಮಠವಿರುವ ಸ್ಥಳದ ಬಳಿಯಲ್ಲೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಕುದುರೆಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ

ಚಿತ್ರಕೃಪೆ: Bhelki

ಇನ್ನೂ ಹಯಗ್ರೀವ ಸ್ವಾಮಿಯನ್ನು ವಿಷ್ಣುವಿನ ಅವತಾರವೆ ಎನ್ನಲಾಗಿದೆ. ಅಲ್ಲದೆ ಕೆಲ ಮತದವರು ಹಯಗ್ರೀವ ಸ್ವಾಮಿಯು ನಾರಾಯಣನ ದಶಾವತಾರಗಳಲ್ಲಿ ಒಂದೆಂದೆ ನಂಬುತ್ತಾರೆ. ದೈಹಿಕವಾಗಿ ಹಯಗ್ರೀವ ಸ್ವಾಮಿಯು ಕುದುರೆಯ ಮುಖ, ಕುತ್ತಿಗೆ ಹೊಂದಿದ್ದರೆ ಮಿಕ್ಕೆಲ್ಲವು ಮನುಷ್ಯನ ದೇಹ ರಚನೆಯಾಗಿರುವ ರೂಪ.

ಪ್ರಮುಖವಾಗಿ ಹಯಗ್ರೀವ ಸ್ವಾಮಿಯನ್ನು ಜ್ಞಾನ ಹಾಗೂ ಬುದ್ಧಿಯ ಅಧಿ ದೇವನನ್ನಾಗಿ ಪೂಜಿಸಲಾಗುತ್ತದೆ. ಕೆಲವೆಡೆ ಉಲ್ಲೇಖಿಸಿರುವಂತೆ ಸ್ವತಃ ಸರಸ್ವತಿಯೆ ಹಯಗ್ರೀವ ಸ್ವಮಿಯನ್ನು ಪೂಜಿಸುತ್ತಾಳೆನ್ನಲಾಗಿದೆ. ಹಾಗಾಗಿ ಶ್ರೀ ವೈಷ್ಣವರಲ್ಲಿ ಓದುವ ಕಾರ್ಯ, ಶೈಕ್ಷಣಿಕ ಜೀವನದ ಪ್ರಾರಂಭಕ್ಕೆ ಮೊದಲು ಹಯಗ್ರೀವ ಸನ್ನಿಧಿಗೆ ತೆರಳಿ ವಿಶೇಷವಾದ ಪೂಜೆಗಳನ್ನು ಮೊದಲಿಗೆ ನೆರವೇರಿಸಲಾಗುತ್ತದೆ.

ಕುದುರೆಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ

ಪರಕಾಲ ಮಠ, ಮೈಸೂರು, ಚಿತ್ರಕೃಪೆ: Christopher J. Fynn

ಈ ವಿಷಯದಲ್ಲಿ ತಮಿಳುನಾಡಿನಲ್ಲಿರುವ ಶ್ರೀರಂನ ದೇವಸ್ಥಾನ ಬಲು ಜನಪ್ರೀಯವಾಗಿದೆ. ಶ್ರೀರಂಗಂನ ದೇವಸ್ಥಾನ ಆವರಣದಲ್ಲಿ ಹಯಗ್ರೀವ ಸ್ವಾಮಿಯ ಸನ್ನಿಧಿಯೂ ಸಹ ಇದ್ದು ಅಲ್ಲಿ ಶಿಕ್ಷಣಾಧ್ಯಯನ ಪ್ರಾರಂಭಿಸುವ ಮೊದಲು ಅಶೀರ್ವದಿಸುವಂತೆ ಕೋರಿ ಹಯಗ್ರೀವ ಸ್ವಾಮಿಯನ್ನು ಅಚ್ಚುಕಟ್ಟಾದ ವಿಧಿ ವಿಧಾನಗಳ ಮೂಲಕ ಪೂಜಿಸಲಾಗುತ್ತದೆ.

ಇನ್ನೊಂದೆಡೆ ಹಯಗ್ರೀವ ದುಷ್ಟ ಶಕ್ತಿಗಳ ನಿಗ್ರಹಕನಾಗಿದ್ದು ಸದಾ ಅಂಧಕಾರವನ್ನು ಹೊಡೆದೋಡಿಸುತ್ತ ರಥದ ಮೇಲೆ ಲಕ್ಷ್ಮಿ ಸಮೇತನಾಗಿ ಕುಳಿತು ವಿಹರಿಸುತ್ತಿರುತ್ತಾನೆನ್ನಲಾಗಿದೆ. ಹೀಗಾಗಿ ಹಯಗ್ರೀವ ಸ್ವಾಮಿಯು ದುಷ್ಟ ಶಕ್ತಿಗಳ ನಾಶಕನೂ ಹೌದು ಜ್ಞಾನ ಮತ್ತು ಬುದ್ಧಿ ಶಕ್ತಿಗಳ ಪ್ರತಿರೂಪನೂ ಹೌದು.

ಕುದುರೆಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ

ಲಕ್ಷ್ಮಿ-ಹಯಗ್ರೀವ ವಿಗ್ರಹಗಳು, ಪರಕಾಲ ಮಠ, ಚಿತ್ರಕೃಪೆ: Venkatarangan T.N.C.

ಒಂದು ಕಥೆಯ ಪ್ರಕಾರ, ಹಿಂದೆ ಬ್ರಹ್ಮನು ಸೃಷ್ಟಿಯನ್ನು ರಚಿಸುತ್ತಿದ್ದ ಸಮಯದಲ್ಲಿ ಮಧು-ಕೈತಭನೆಂಬ ಇಬ್ಬರು ಅಸುರರು ವೇದ ಶಾಸ್ತ್ರಗಳನ್ನೆಲ್ಲ ಅಪಹರಿಸಿಕೊಂಡು ಹೋದರು. ಇದರಿಂದ ಚಿಂತೆಗೊಳಗಾದ ಬ್ರಹ್ಮ ದೇವರಿಗೆ ಸ್ವಾಂತನಿಸುತ್ತ ವಿಷ್ಣು ರುಪವೊಂದನ್ನು ತಾಳಿ ಆ ಇಬ್ಬರು ಅಸುರರನ್ನು ಹನ್ನೆರಡು ತುಂಡುಗಳಲ್ಲಿ ಕತ್ತರಿಸಿ ಸಂಹರಿಸಿದನು.

ಮೈಸೂರು ಹಾಗೂ ಸುತ್ತಮುತ್ತಲಿನ ಸಮಗ್ರ ಪ್ರವಾಸಿ ತಾಣಗಳು

ಈ ರೀತಿಯಾಗಿ ಹೊಸ ರೂಪ ತಾಳಿದ ವಿಷ್ಣುವೆ ಹಯಗ್ರೀವ ಸ್ವಾಮಿ ಎನ್ನಲಾಗಿದೆ ಹಾಗೂ ಆ ರಾಕ್ಷಸರ ಹನ್ನೆರಡು ತುಂಡುಗಳು ಇಂದಿಗೂ ಭೂಮಿಯ ಮೇಲಿರುವ ಹನ್ನೆರಡು ಭೂಕಂಪಗಳ ಫಲಕಗಳನ್ನು ಸೂಚಿಸುತ್ತವೆ ಎನ್ನಲಾಗಿದೆ. ಈ ರೀತಿಯಾಗಿ ವಿಷ್ಣು ದೇವರು ಹಯಗ್ರೀವನಾಗಿ ಅಂಧಕಾರ ತೊಲಗಿಸುವ ಜ್ಯೋತಿಯಾಗಿ, ಪರಕಾಲ ಮಠದ ಪರಮ ಅಧಿ ದೇವನಾಗಿ ಪೂಜಿಸಲ್ಪಡುತ್ತಾನೆ.

ಮೈಸೂರಿಗಿರುವ ರೈಲುಗಳ ವೇಳಾಪಟ್ಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X