Search
  • Follow NativePlanet
Share
» »ಪಾಂಡುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಪಾಂಡವರ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?

ಪಾಂಡುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಪಾಂಡವರ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?

ದಂತಕಥೆಯ ಪ್ರಕಾರ, ಮಹಾಭಾರತ ಪಾಂಡವರ ಪಿತಾಮಹ ಪಾಂಡು ಉತ್ತರಖಂಡದಲ್ಲಿರುವ ಪಾಂಡುಕೇಶ್ವರ ದೇವಸ್ಥಾನವನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ತಮ್ಮ ಹಿರಿಯ ಸಹೋದರ ಧೃತರಾಷ್ಟ್ರನಿಗೆ ತನ್ನ ಸಿಂಹಾಸನವನ್ನು ಕೊಟ್ಟ ನಂತರ ಪಾಂಡುಕೇಶ್ವರದಲ್ಲಿ ತನ್ನ ಪತ್ನಿಯರಾದ ಕುಂತಿ ಮತ್ತು ಮದ್ರಿಯವರೊಂದಿಗೆ ವಾಸಿಸುತ್ತಿದ್ದರು.

ಜಿಂಕೆಯನ್ನು ಕೊಂದ ಪಾಂಡು

ಒಂದು ದಿನ ಪಾಂಡು ಕಾಡಿನಲ್ಲಿ ಬೇಟೆಯಾಡುತ್ತಾ ಜಿಂಕೆ ರೂಪದಲ್ಲಿದ್ದ ಋಷಿಯನ್ನು ಸಾಯಿಸುತ್ತಾನೆ. ಋಷಿ ಸಾಯುವಾಗ ಪಾಂಡುವಿಗೆ ಒಂದು ಶಾಪವನ್ನು ನೀಡುತ್ತಾನೆ. ಅದೇನೆಂದರೆ ಜೀವನದಲ್ಲಿ ಯಾವತ್ತೂ ಯಾರೊಂದಿಗೆಯೂ ಪ್ರೇಮ ಸಲ್ಲಾಪ ಮಾಡಬಾರದು, ಒಂದು ವೇಳೆ ಮಾಡಿದರೆ ಸಾವನ್ನಪ್ಪುವುದಾಗಿ ಶಾಪ ನೀಡುತ್ತಾರೆ.

ಋಷಿಯ ಶಾಪ

ಋಷಿಯ ಶಾಪ

PC: youtube

ಋಷಿಯನ್ನು ಕೊಂದ ಪಾಪದಿಂದ ಮುಕ್ತಿ ಪಡೆಯಲು, ಪಾಂಡು ವಿಷ್ಣುವಿನ ಕಂಚಿನ ವಿಗ್ರಹವನ್ನು ಯೋಗಾಧ್ಯಾನ್ ಬದ್ರಿ ದೇವಾಲಯದಲ್ಲಿ ಸ್ಥಾಪಿಸಿ ಧ್ಯಾನದಲ್ಲಿ ಮಗ್ನನಾದನು. ಇದೇ ಸಂದರ್ಭದಲ್ಲಿ ಕುಂತಿ ಹಾಗೂ ಮದ್ರಿ ಪಾಂಡವರಿಗೆ ಜನ್ಮ ನೀಡುತ್ತಾರೆ. ಹೀಗೆ ಒಂದು ದಿನ ಮಾದ್ರಿ ಅಲಕನಂದ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಪಾಂಡು ಆಕೆಯನ್ನು ನೋಡಿ ಮೋಹಗೊಳ್ಳುತ್ತಾನೆ. ತಕ್ಷಣ ಸನ್ಯಾಸಿಯ ಶಾಪದಂತೆ ಆತ ಸಾವನ್ನಪ್ಪುತ್ತಾನೆ.

ವಿಷ್ಣುವಿನ ಕಂಚಿನ ಮೂರ್ತಿ

ಪಾಂಡುಕೇಶ್ವರದಲ್ಲಿ ಎರಡು ಪ್ರಸಿದ್ಧ ದೇವಾಲಯಗಳಿವೆ. ಸಪ್ತಾ ಬದ್ರಿ ಮಂದಿರಗಳಲ್ಲಿ ಒಂದಾಗಿರುವ ಯೋಗಧ್ಯಾನ್ ಬದ್ರಿ ದೇವಾಲಯ ಮತ್ತು ವಾಸುದೇವ ದೇವಾಲಯ. ಪಾಂಡು ವಿಷ್ಣುವಿನ ಕಂಚಿನ ಮೂರ್ತಿಯನ್ನು ಯೋಗಾಧ್ಯಾನ್ ಬದ್ರಿ ಮಂದಿರದಲ್ಲಿ ಸ್ಥಾಪಿಸಿದರೆಂದು ನಂಬಲಾಗಿದೆ. ಇಲ್ಲಿ ಕಂಡುಬರುವ ಹಿತ್ತಾಳೆ ಪ್ಲೇಟ್ ಶಾಸನಗಳು ಕಟಿಯುರಿ ರಾಜರ ಆಳ್ವಿಕೆಯನ್ನು ಸೂಚಿಸುತ್ತದೆ ಮತ್ತು ಈ ಪ್ರದೇಶವನ್ನು ಪಂಚಲ್ ದೇಶ್ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಉತ್ತರಾಖಂಡ ಎಂದು ಕರೆಯಲಾಗುತ್ತದೆ.

ಧ್ಯಾನ ಮುದ್ರೆಯಲ್ಲಿರುವ ಮೂರ್ತಿ

ಧ್ಯಾನ ಮುದ್ರೆಯಲ್ಲಿರುವ ಮೂರ್ತಿ

PC: youtube

ಇಲ್ಲಿ ಪ್ರತಿಷ್ಟಾಪಿಸಲಾಗಿರುವ ವಿಷ್ಣುವಿನ ಕಂಚಿನ ಮೂರ್ತಿಯು ಧ್ಯಾನ ಮುದ್ರೆಯಲ್ಲಿದೆ. ಹಾಗಾಗಿ ಇದನ್ನು ಯೋಗಧ್ಯಾನ ಎಂದು ಹೆಸರಿಡಲಾಯಿತು. ಈ ವಿಗ್ರಹವನ್ನು ಸಾಲಿಗ್ರಾಮ್ ಕಲ್ಲಿನಿಂದ ಕೆತ್ತಲಾಗಿದೆ. ದಂತಕಥೆಯ ಪ್ರಕಾರ, ಮಹಾಭಾರತದ ಯುದ್ಧದಲ್ಲಿ ತಮ್ಮ ಸೋದರರಾದ ಕೌರವರನ್ನು ಸೋಲಿಸಿ ಕೊಂದ ನಂತರ ಪಾಂಡವರು, ಹಸ್ತಿನಾಪುರವನ್ನು ರಾಜ ಪರಿಕ್ಷಿತ್‌ಗೆ ಹಸ್ತಾಂತರಿಸಿ ಅಲ್ಲಿಂದ ಇಲ್ಲಿಗೆ ಹೊರಟರು ಎನ್ನಲಾಗುತ್ತದೆ.

ಯೋಗಧ್ಯಾನ ಬದ್ರಿ ದೇವಸ್ಥಾನ

ಯೋಗಧ್ಯಾನ ಬದ್ರಿ ದೇವಸ್ಥಾನ

ಚಳಿಗಾಲದಲ್ಲಿ ಬದ್ರಿನಾಥ್ ಮುಚ್ಚಲ್ಪಟ್ಟಾಗ ಉತ್ಸವ ಮೂರ್ತಿಗೆ ಯೋಗಧ್ಯಾನ ಬದ್ರಿ ದೇವಸ್ಥಾನವೇ ಮನೆ. ಬದ್ರಿನಾಥ ದೇವಾಲಯ ತೆರೆಯುವಾಗ ಪವಿತ್ರ ಮೆರವಣಿಗೆ ಇಲ್ಲಿಂದಲೇ ಆರಂಭವಾಗುತ್ತದೆ. ವಾಸುದೇವ ದೇವಸ್ಥಾನವನ್ನು ಪಾಂಡವರು ನಿರ್ಮಿಸಿದ್ದಾರೆ ಎಂದು ನಂಬಲಾಗಿದೆ. 12 ವರ್ಷಗಳ ರಾಜ್ಯದಿಂದ ಹೊರಗಿದ್ದ ಪಾಂಡವರು ಪಾಂಡುಕೇಶ್ವರವನ್ನು ತಲುಪಿದರು. ಅಲ್ಲೇ ತಂದೆ ಪಾಂಡುವಿನ ಅಂತ್ಯಕ್ರಿಯೆಯನ್ನು ಮಾಡಿದರು.

ಯಾವಾಗ ಭೇಟಿ ನೀಡುವುದು ಸೂಕ್ತ

ಪಾಂಡುಕೇಶ್ವರ ದೇವಾಲಯವು ವರ್ಷವಿಡೀ ತೆರೆದಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಎಪ್ರಿಲ್‌ನಿಂದ ಜೂನ್‌, ಸೆಪ್ಟೆಂಬರ್‌ನಿಂದ ನವಂಬರ್.

ತಲುಪುವುದು ಹೇಗೆ?

ಪಾಂಡುಕೇಶ್ವರ ದೇವಾಲಯವು ಜೋಶೀಮಠ ಹಾಗೂ ಬದ್ರಿನಾಥ ದೇವಸ್ಥಾನದ ನಡುವೆ ಇದೆ. ಜೋಶೀಮಠದಿಂದ 18 ಕಿ.ಮೀ ಹಾಗು ಬದ್ರಿನಾಥನಿಂದ 23 ಕಿ.ಮೀ ದೂರದಲ್ಲಿದೆ. ಜೋಶಿಮಠದಿಂದ ಜೀಪ್, ಟ್ಯಾಕ್ಸಿ ಮೂಲಕ ಪಾಂಡುಕೇಶ್ವರ ವನ್ನು ತಲುಪಬಹುದು. ಸಮೀಪದ ರೈಲು ನಿಲ್ದಾಣವೆಂದರೆ ಡೆಹ್ರಾಡೂನ್ ಇದು 302 ಕಿ.ಮೀ ದೂರದಲ್ಲಿದೆ ರಿಶಿಕೇಶ್‌ ರೈಲು ನಿಲ್ದಾಣ 274 ಕಿ.ಮೀ ದೂರದಲ್ಲಿದೆ. ಡೆಹ್ರಾಡೂನ್‌ನ ಜಾಲಿಗ್ರಾಂಟ್ ಏರ್‌ಪೋರ್ಟ್‌ 290 ಕಿ.ಮೀ ದೂರದಲ್ಲಿದೆ.

ಬದ್ರಿನಾಥ್ ದೇವಸ್ಥಾನ

ಬದ್ರಿನಾಥ್ ದೇವಸ್ಥಾನ

PC:Priyanath

ಅಲಕನಂದ ಪವಿತ್ರ ನದಿಯ ಬಲ ದಂಡೆಯಲ್ಲಿರುವ ಬದ್ರಿನಾರಾಯಣ ದೇವಾಲಯ. ಇದು ಚಾರ್ ಧಾಮಗಳಲ್ಲಿ ಮತ್ತು 108 ದಿವ್ಯ ದೇಶಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಈ ದೇವಸ್ಥಾನವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ದೇವಾಲಯದಲ್ಲಿ ಶ್ರೀ ಬದ್ರಿನಾಥ್ ಎಂದು ಪೂಜಿಸಲಾಗುತ್ತದೆ. ದಂತಕಥೆಗಳ ಪ್ರಕಾರ, ಬದ್ರಿನಾಥ್ ದೇವಾಲಯ ವೈದಿಕ ಯುಗಕ್ಕೂ ಹಿಂದಿನದು. ಆದಾಗ್ಯೂ, ಈಗಿನ ದೇವಾಲಯವು 8 ನೇ ಶತಮಾನದಲ್ಲಿ ಸಂತ-ತತ್ವಜ್ಞಾನಿ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಆದಿ ಶಂಕರರು ಅಲಕಾನಂದ ನದಿಗೆ ಮುಳುಗಿದ ಬದ್ರಿನಾರಾಯಣನ ಸಾಲಿಗ್ರಾಮದ ವಿಗ್ರಹವನ್ನು ಕಂಡುಹಿಡಿದರು. ಅವರು ಈ ವಿಗ್ರಹವನ್ನು ತಪ್ತ ಕುಂಡದ ಸಮೀಪದ ಗುಹೆಯಲ್ಲಿ ಸ್ಥಾಪಿಸಿದರು. ಇದನ್ನು ನಂತರ 16 ನೇ ಶತಮಾನದಲ್ಲಿ ಗಡ್ವಾಲ್ ರಾಜನು ಪ್ರಸ್ತುತ ದೇವಾಲಯಕ್ಕೆ ಸ್ಥಳಾಂತರಿಸಿದರು ಎನ್ನಲಾಗುತ್ತದೆ.

ಗಣೇಶ ಗುಹೆ

ಗಣೇಶ ಗುಹೆ

ಗಣೇಶ ಗುಹೆಯು ಒಂದು ನೈಸರ್ಗಿಕ ಗುಹೆಯಾಗಿದ್ದು, ಬದ್ರಿನಾಥದಲ್ಲಿದೆ. ಪುರಾಣದ ಪ್ರಕಾರ ವ್ಯಾಸ ಮಹರ್ಷಿಗಳು ತಿಳಿಸಿದ ಹಾಗೆ ಗಣೇಶನು ಮಹಾಭಾರವನ್ನು ಬರೆಯಲು ಪ್ರಾರಂಭಿಸಿದ್ದು ಇದೇ ಗುಹೆಯಲ್ಲಿಯಂತೆ. ವ್ಯಾಸ ಗುಹೆ ಇರುವ ಬಳಿಯೇ ಈ ಗಣೇಶ ಗುಹೆಯೂ ಇದೆ. ಇದಕ್ಕೆ ಧಾರ್ಮಿಕ ಮಹತ್ವವೂ ಇದೆ. ಸುತ್ತಲೂ ಹಸಿರು ಮರಗಿಡಗಳಿಂದ ಕೂಡಿದ್ದು ಒಂದು ಸುಂದರ ನೋಟವನ್ನು ನೀಡುತ್ತದೆ. ಮನ ಹಳ್ಳಿಯಲ್ಲಿರುವ ಈ ಗಣೇಶ ಗುಹೆಯು ಬದ್ರಿನಾಥ ಅಣೆಕಟ್ಟಿನಿಂದ ಸುಮಾರು ೪ ಕಿ.ಮೀ ದೂರದಲ್ಲಿದೆ.

ತಪ್ತ ಕುಂಡ

ತಪ್ತ ಕುಂಡ

PC: Priyanath
ಹೆಸರು ಸೂಚಿಸುವಂತೆ ತಪ್ತ ಕುಂಡವು ಬದ್ರಿನಾಥ್ ದೇವಾಲಯ ಮತ್ತು ಅಲಕ್ನಂದಾ ನದಿಯ ನಡುವೆ ಇರುವ ಬಿಸಿನೀರಿನ ಬುಗ್ಗೆಯಾಗಿದೆ. ಈ ಉಷ್ಣ ವಸಂತವು ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ದೇವಸ್ಥಾನದಲ್ಲಿದೆ. ತಪ್ತಕುಂಡವು 45 ಡಿಗ್ರಿ ಉಷ್ಣಾಂಶ ಹೊಂದಿರುವ ನೈಸರ್ಗಿಕ ಬಿಸಿನೀರಿನ ಬುಗ್ಗೆಯಾಗಿದೆ. ಬದರಿನಾಥ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಬಲಬದಿಯಲ್ಲಿ ಈ ಕುಂಡವಿದೆ. ದೇವಾಲಯದಲ್ಲಿರುವ ಈ ಬಿಸಿ ಸಲ್ಫರ್ ಬುಗ್ಗೆಗಳ ತಪ್ತ ಕುಂಡದಲ್ಲಿ ಔಷಧೀಯ ಗುಣಗಳಿವೆ ಎಂದು ಪರಿಗಣಿಸಲಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಸ್ಪ್ರಿಂಗ್ಸ್ನಲ್ಲಿ ಸ್ನಾನ ಮಾಡುವ ಅವಶ್ಯಕತೆಯಿದೆ ಎಂದು ಅನೇಕ ಯಾತ್ರಿಕರು ಪರಿಗಣಿಸುತ್ತಾರೆ . ದೇವಾಲಯದಲ್ಲಿ ಎರಡು ನೀರಿನ ಕೊಳಗಳನ್ನು ನಾರದಾ ಕುಂಡ ಮತ್ತು ಸೂರ್ಯ ಕುಂಡ ಎಂದು ಕರೆಯಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X