Search
  • Follow NativePlanet
Share
» »ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

By Vijay

ಇದು ಬಾಲ ಮುರುಗನ ಅಂದರೆ ಶಿವನ ಪುತ್ರ ಕಾರ್ತಿಕೇಯನಿಗೆ ಮುಡಿಪಾದ ದೇವಾಲಯ. ತಮಿಳು ಸಾಹಿತ್ಯದಲ್ಲಿ ಬೆಟ್ಟ ಪ್ರದೇಶಗಳನ್ನು ಕುರಿಂಜಿ ಎಂದು ಸಂಬೋಧಿಸಲಾಗಿದೆ ಹಾಗೂ ಕುರಿಂಜಿಯ ಅಧಿ ದೇವತೆಯಾಗಿ ಮುರುಗನನ್ನು ಹೆಚ್ಚಾಗಿ ಆರಾಧಿಸಲಾಗುತ್ತದೆ. ಅಂತೆಯೆ ತಮಿಳುನಾಡಿನಲ್ಲಿರುವ ಬೆಟ್ಟದ ಮೇಲಿರುವ ದೇವಾಲಯಗಳ ಬಹುತೇಕ ದೇವಾಲಯಗಳು ಶಣ್ಮುಖನಿಗೆ ಅಂದರೆ ಮುರುಗನಿಗೆ ಮುಡಿಪಾಗಿರುವುದನ್ನು ಗಮನಿಸಬಹುದು.

ಕದ್ದಿರಾಂಪುರದ ಮುರುಗನ್ ದೇವಾಲಯ

ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿರುವ ಈ ದೇವಾಲಯವೂ ಸಹ ಚಿಕ್ಕ ಬೆಟ್ಟವೊಂದರ ಮೇಲೆ ನೆಲೆಸಿದ್ದು ಬಾಲ ಮುರುಗನಿಗೆ ಮುಡಿಪಾಗಿದೆ. ಇಲ್ಲಿಯೂ ಸಾಕಷ್ಟು ವಿಧಿ ವಿಧಾನಗಳಿರುವ ಪೂಜೆ ಪುನಸ್ಕಾರಗಳನ್ನು ಅನುಸರಿಸಲಾಗುತ್ತದೆ. ಅದಾಗ್ಯೂ ಇಲ್ಲಿ ಎಲ್ಲ ದೇವಾಲಯಗಳಲ್ಲಿ ಕಾಣಸಿಗದಂತಹ ಒಂದು ವಿಶಿಷ್ಟ ಆಚರಣೆಯಿದೆ.

ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

ಚಿತ್ರಕೃಪೆ: Vanmeeganathan1994

ಆ ಆಚರಣೆಯೆ ಶತ್ರು ಸಂಹಾರ ತೀರಿಸಿದೈ ಅರ್ಚನೆ. ಸ-ರ-ವ-ನ-ಭ-ವ ಎಂಬ ಆರು ಸ್ವರಗಳನ್ನು ಉಚ್ಛರಿಸುವುದರ ಮೂಲಕ ಸುಬ್ರಹ್ಮಣ್ಯಸ್ವಾಮಿಯ ಆವಾಹನೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಅರ್ಚಕರ ಜೊತೆ ಜೊತೆಯಾಗಿಯೆ ನೆರೆದ ಭಕ್ತರೂ ಸಹ ಈ ಬೀಜಾಕ್ಷರಿ ಮಂತ್ರ ಉಚ್ಛರಿಸುತ್ತ ಸುಬ್ರಹ್ಮಣ್ಯನನ್ನು ಆರಾಧಿಸಬಹುದಾಗಿದೆ.

ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

ಚಿತ್ರಕೃಪೆ: Pudupalayam

ಈ ಒಂದು ಆಚರಣೆಗೆ ನೀವು ಸಾಕ್ಷಿಯಾಗಬೇಕಿದ್ದಲ್ಲಿ ನೀವು ಮುಂಜಾನೆಯ ಎಂಟು ಘಂಟೆಯ ಹೊತ್ತಿಗೆಲ್ಲ ದೇವಾಲಯದಲ್ಲಿ ನೆರೆದಿರಬೇಕು. ಪ್ರತಿ ಮಂಗಳವಾರಗಲಂದು ಈ ವಿಶೇಷವಾದ ಅರ್ಚನೆಯಿರುತ್ತದೆ. ಈ ಸಂದರ್ಭದಲ್ಲಿ ಸಾಕಷ್ಟು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದರ ಫಲವೆಂದರೆ ದುಷ್ಟತೆಯ ಹಾಗೂ ಶತ್ರುಗಳ ನಾಶ ಮತ್ತು ಮದುವೆ ಹಾಗೂ ಸಂತಾನ ಭಾಗ್ಯ.

ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

ಚಿತ್ರಕೃಪೆ: Pudupalayam

ಇವುಗಳಲ್ಲದೆ ಈ ದೇವಾಲಯದಲ್ಲಿ ಇನ್ನೂ ಅನೇಕ ಇತರೆ ಉತ್ಸವಗಳು ಬಲು ಅದ್ದೂರಿಯಾಗಿ ನಡೆಯುತ್ತವೆ. ಹೀಗೆ ಹಲವು ವಿಶೇಷತೆಗಳುಳ್ಳ ಈ ದೇವಾಲಯವನ್ನು ಪಚೈಮಲೈ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಎಂದು ಕರೆಯುತ್ತಾರೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಎರಡನೇಯ ದೊಡ್ಡ ಪಟ್ಟಣವಾದ ಗೋಬಿಚೆಟ್ಟಿಪಾಳ್ಯಂ ಬಳಿಯಿರುವ ಪಚೈಮಲೈ ಎಂಬ ಬೆಟ್ಟದ ಮೇಲೆ ಈ ದೇವಾಲಯ ಸ್ಥಿತವಿದೆ.

ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

1980 ರಸಮಯದಲ್ಲಿ, ಚಿತ್ರಕೃಪೆ: Pudupalayam

ಒಂದೊಮ್ಮೆ ದುರ್ವಾಸ ಮಹರ್ಷಿಗಳು ಗೋಬಿಚೆಟ್ಟಿಪಾಳ್ಯಂನ ಹದಿನೆಂಟು ಕಿ.ಮೀ ದೂರದಲ್ಲಿರುವ ಸ್ಥಳವೊಂದಕ್ಕೆ ಬಂದು ಶಿವನ ಕುರಿತು ತಪಸ್ಸು ಮಾಡಲು ಯೋಜಿಸಿದ್ದರು. ಆಗ ಅವರಿಗೆ ಶಿವನನ್ನು ಕುರಿತು ಯೋಗ್ಯವಾದ ಸ್ಥಳವೊಂದು ಹತ್ತಿರದಲ್ಲೆ ಇರುವುದರ ಕುರಿತು ಅನಿಸಲಾಗಿ ಅದನ್ನು ಹುಡುಕ ಹೊರಟರು.

ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

ಚಿತ್ರಕೃಪೆ: Pudupalayam

ಇನ್ನೊಂದು ವಿಷಯವೆಂದರೆ ದುರ್ವಾಸ ಮಹರ್ಷಿಗಳಿಗೆ ಶಿವನ ತಪಸ್ಸು ಮಾಡುವಾಗ ನಿತ್ಯವೂ ಕಾರ್ತಿಕೇಯನ ದರ್ಶನವಾಗತೊಡಗಿದರೆ ಉತ್ತಮವೆಂದು ಅಂದುಕೊಂಡಿದ್ದರು. ಅದರಂತೆ ಕಾರ್ತಿಕೇಯನು ನೆಲೆಸಿರುವ ಈ ಸ್ಥಳದ ಕುರಿತು ಪರಿಚಯ ಉಂಟಾಗಿ ಅದರಿಂದ ಸಾಕಷ್ಟು ಪ್ರಸನ್ನರಾದ ಅವರು ತಪಗೈದರು.

ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

ಚಿತ್ರಕೃಪೆ: Vanmeeganathan1994

ಹೀಗೆ ಸಮಯ ಕಳೆದಂತೆ ಈ ದೇಗುಲ ಹಾಗೂ ಕ್ಷೇತ್ರದ ಮಹತ್ವ ಮರೆತೆ ಹೋಯಿತು. ಆದರೆ 1954 ರಲ್ಲಿ ನಡೆದ ಘಟನೆಯೊಂದು ಈ ದೇವಾಲಯ ಕಳೆದುಹೋಗಿದ್ದ ತನ್ನ ವೈಭವವನ್ನು ಮತ್ತೆ ಪಡೆಯುವಂತಾಯಿತು. ಇದು ಸ್ವಾಮಿಯ ಪವಾಡವಲ್ಲದೆ ಮತ್ತಿನ್ನೇನು! ಎಂದು ಹಲವು ಭಕ್ತರು ಕೊಂಡಾಡುತ್ತಾರೆ.

ಶ್ರೀಕ್ಷೇತ್ರ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ

ಪಿ ಕೆ ಕುಪ್ಪಸ್ವಾಮಿ ಗೌಂಡರ್ ಎಂಬುವವರೊಬ್ಬರು 1954 ಈ ಸ್ಥಳಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯನ ದರ್ಶನ ಪಡೆದಿದ್ದರು. ಹೀಗೆ ದರ್ಶನವಾದ ನಂತರ ಅವರ ಜೀವನದ ದಿಕ್ಕೆ ಬದಲಾಗಿ ಹೋಯಿತು. ಸಾಕಷ್ಟು ಅಭಿವೃದ್ಧಿಗಳನ್ನು, ಸಂತೋಷಗಳನ್ನು ಪಡೆದರು. ಈ ದೇವಾಲಯಕ್ಕೆ ಬಂದಾಗ ಅತೀವ ಆನಂದ ಉಂಟಾಗುತ್ತಿತ್ತು. ಹೀಗಾಗಿ ಇಲ್ಲಿ ನಿತ್ಯ ಪೂಜೆ ನಡೆಯುವಂತೆ ಮಾಡಬೆಕೆಂಬ ಸದುದ್ದೇಶದಿಂದ ಈ ದೇವಾಲಯವನ್ನು ಭವ್ಯವಾಗಿ ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ನಿಭಾಯಿಸಿದರು. ಅಂದಿನಿಂದ ಇಂದಿನವರೆಗೆ ಇದು ಅದ್ಭುತ ಕ್ಷೇತ್ರವಾಗಿ ಭಕ್ತರನ್ನು ಸೆಳೆಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X