Search
  • Follow NativePlanet
Share
» »"ಕೈ ಕೊಟ್ಟ ಶಿವ" ದೇವಾಲಯದ ಕಥೆ!

"ಕೈ ಕೊಟ್ಟ ಶಿವ" ದೇವಾಲಯದ ಕಥೆ!

By Vijay

ಏನಪ್ಪಾ ಇದು, ಮನುಷ್ಯ ಮನುಷ್ಯನಿಗೆ ಕೈಕೊಡುವುದು ಸಾಮಾನ್ಯ. ಇದೆಂತಹ ಘೋರ ಕಲಿಯುಗವಪ್ಪಾ ದೇವರೂ ಸಹ ಕೈಕೊಡಹತ್ತಿದನೆ ಎಂದು ಗೊಂದಲಗೊಳ್ಳದಿರಿ. ಇದು ನೀವು ತಿಳಿದಿರುವ "ಹಾಗೆ" ಕೈ ಕೊಡುವುದಲ್ಲ! ಬದಲಾಗಿ ಶಿವನ ಭಕ್ತನೊಬ್ಬನಿಗೆ ಶಿವ ಪ್ರತ್ಯಕ್ಷನಾಗಿ ಕಡಿದು ಹೋಗಿದ್ದ ಅವನ ಕೈಯನ್ನು ಮತ್ತೆ ಹಿಂತಿರುಗಿಸಿ ಕೊಟ್ಟು ಅಲ್ಲಿಯೆ ನೆಲೆಸಿರುವ ಶಿವನ ದೇವಾಲಯದ ಕಥೆ ಇದು.

ಎರಡು ವಿಶೇಷ ಫಲಗಳಿಗಾಗಿ ಭಕ್ತರು ಶಿವನ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಒಂದು ಸತಿ-ಪತಿಗಳ ಕಲಹವಾದರೆ ಇನ್ನೊಂದು ಮನಸ್ಸು ಸಂಕಟಪಡುತ್ತಿದ್ದರೆ ಅದಕ್ಕೆ ನೆಮ್ಮದಿ ಲಭಿಸುವಂತೆ ಮಾಡಿಕೊಳ್ಳಲು. ಇದಕ್ಕೆ ಸಂಬಂಧಿಸಿದಂತೆ ದೇವಾಲಯವು ರೋಚಕವಾದ ಹಿನ್ನೆಲೆಯನ್ನು ಒಳಗೊಂಡಿದೆ.

ಚಿತ್ರಕೃಪೆ: Ssriram mt

ಒಂದೊಮ್ಮೆ ಚೋಳ ದೊರೆಯಾದ ಎರಡನೇಯ ಕುಲೊತುಂಗ ಚೋಳನು ಬೇರೆ ಸ್ಥಳವೊಂದರಲ್ಲಿದ್ದ ಶಿವನನ್ನು ಪೂಜಿಸಲೆಂದು ತನ್ನ ಆನೆಯ ಮೇಲೆ ಹೊರಟಿದ್ದನು. ಮಾರ್ಗ ಮಧ್ಯದಲ್ಲಿ ದಟ್ಟವಾದ ಬಳ್ಳಿಗಳ ಜಾಡೊಂದರಲ್ಲಿ ಆನೆ ಕಾಲು ಸಿಕ್ಕು ಅದು ಮುನ್ನಡೆಯದಂತಾಯಿತು. ರಾಜನು ಎಷ್ಟೆ ಪ್ರಯತ್ನಿಸಿದರೂ ಆನೆಗೆ ಆ ಬಳ್ಳಿಯ ಗಟ್ಟಿಯಾದ ಆಲಿಂಗನದಿಂದ ಹೊರ ಬರಲಾಗಲೆ ಇಲ್ಲ.

ಕೊನೆಗೆ ರಜನು, ಆನೆ ಇಳಿದು ತನ್ನ ಖಡಗವನ್ನು ಹೊರತೆಗೆದು ಜಾಗರೂಕತೆಯಿಂದ ಕೇವಲ ಬಳ್ಳಿಗಲನ್ನು ಮಾತ್ರವೆ ಕತ್ತರಿಸಲು ಪ್ರಾರಂಭಿಸಿದ. ಆದರೆ ಇದ್ದಕ್ಕಿದ್ದಂತೆ ಆತನ ಖಡಗವು ರಕ್ತಸಿಕ್ತವಾಗಿದುದನ್ನು ಗಮನಿಸಿದ. ಆನೆಯ ಕಾಲುಗಳಿಗೇನಾದರೂ ಗಾಯ ಮಾಡಿದೆನಾ ಎಂದು ಗಮನಿಸಿದ. ಆದರೆ ಆನೆಗೆ ಕಿಂಚಿತ್ತೂ ಗಾಯವಾಗಿರಲಿಲ್ಲ.

ಚಿತ್ರಕೃಪೆ: Ssriram mt

ಹಾಗಾದರೆ ಕತ್ತಿಗೆ ಹತ್ತಿದ ರಕ್ತ ಯಾರದ್ದು ಎಂದು ಆಶಚರ್ಯದಿಂದ ಎಲ್ಲ ಬಳ್ಳಿಗಳನ್ನು ತೆಗೆದುಹಾಕಿ ನೋಡಿದಾಗ ಅಲ್ಲೊಂದು ಶಿವಲಿಂಗವಿದ್ದು ಅದರಿಂದ ರಕ್ತ ಚಿಮ್ಮುತ್ತಿರುವುದನ್ನು ಕಂಡ. ಶಿವಲಿಂಗಕ್ಕೆ ಹಾನಿ ಮಾಡಿದುದರ ಪಶ್ಚಾತಾಪವಾಗಿ ತನ್ನ ತಪ್ಪು ಮನ್ನಿಸಲು ಯೋಗ್ಯವಲ್ಲವೆಂದು ಬಗೆದು ಅದೆ ಕ್ಷಣದಲ್ಲಿ ಅದೆ ಕತ್ತಿಯಿಂದ ತನ್ನ ಒಂದು ಕೈಯನ್ನೆ ಕಡಿದುಕೊಂಡ.

ಹೀಗಾದ ತಕ್ಷಣದಲ್ಲೆ ಶಿವನು ಅತಿ ಪ್ರಸನ್ನನಾಗಿ ಪಾರ್ವತಿ ಸಮೇತನಾಗಿ ಅವನ ಮುಂದೆ ಪ್ರತ್ಯಕ್ಷನಾದ. ತಾನು ಶಿವನಿಗೆ ಹಾನಿಯುಂಟು ಮಾಡಿರುವ ಕುರಿತು ರಾಜ ಆಗಲೂ ಸಹ ಕೊರಗುತ್ತಲೆ ಇದ್ದ. ಇದನ್ನು ಗಮನಿಸಿದ ಪಾರ್ವತಿಯು ಅವನಿಗೆ ಸಮಾಧಾನ ಹೇಳಿ ಮನಸ್ಸಿಗೆ ನೆಮ್ಮದಿ ಸಿಗುವಂತೆ ಮಾಡಿದಳು. ಈ ಒಂದು ಸಂದರ್ಭದಲ್ಲಿ ತಮಿಳಿನ ಕುಲಿರ್ವಿತಲ್ ಎಂಬ ಪದದ ಅರ್ಥ ದುಖಗಳಿಂದ ಸಮಾಧಾನ ಪಡೆಯುವುದೆಂದಾಗುತ್ತದೆ.

ಚಿತ್ರಕೃಪೆ: Rajeev Nair

ಹಾಗಾಗಿ ಇಲ್ಲಿ ಪಾರ್ವತಿ ದೇವಿಯನ್ನು ಕುಲಿರ್ವಿತ ನಾಯಕಿ ಎಂದು ಆರಾಧಿಸಲಾಗುತ್ತದೆ. ಇನ್ನೂ ಶಿವನು ಆತನ ಕಡಿದುಹೋದ ಕೈಯನ್ನು ಮತ್ತೆ ಹಿಂತಿರುಗಿಸಿ ಕೊಟ್ಟ. ಆದರಿಂದ ಕೈ ತಂದ ಪಿರನ್ ಎಂದು ಆರಾಧಿಸಲಾಗುತ್ತದೆ. ಇದಲ್ಲದೆ ಒತ್ತಾಂಡೇಶ್ವರ ಶಿವನ ದೇವಾಲಯ ಎಂತಲೂ ಇದನ್ನು ಜನಪ್ರೀಯವಾಗಿ ಕರೆಯಲಾಗುತ್ತದೆ.

ವಿಶೇಷವೆಂದರೆ ಇಲ್ಲಿ ಶಿವ-ಪಾರ್ವತಿಯರು ಒಬ್ಬರಿಗೊಬ್ಬರು ನೋದುವ ಭಂಗಿಯಲ್ಲಿದ್ದಾರೆ. ಆ ಕಾರಣದಿಂದಾಗಿ ಸತಿ-ಪತಿಗಳ ಮಧ್ಯ ಮನಸ್ತಾಪ, ಕಲಹಗಳಿದ್ದವರು ಇಲ್ಲಿ ಬಂದು ಪ್ರಾರ್ಥಿಸಿದರೆ ಅವರಿಗೆ ಒಳಿತುಂಟಾಗಿ ಮತ್ತೆ ಒಂದಾಗುತ್ತಾರೆ ಎಂಬ ನಂಬಿಕೆಯಿದೆ. ಅಲ್ಲದೆ ಕಷ್ಟಗಳು, ದುಖಗಳಿಂದ ಮನಸ್ಸು ಜರ್ಜರಿತರಾದವರು ಇಲ್ಲಿ ಬಂದು ಪ್ರಾರ್ಥಿಸಿದರೆ ಸಮಾಧಾನ ಸಿಗುತ್ತದೆ ಎಂಬ ನಂಬಿಕೆಯೂ ಇದೆ.

ಚಿತ್ರಕೃಪೆ: Ssriram mt

ಈ ದೇವಾಲಯವು ತಮಿಳುನಾಡಿನ ಚೆನ್ನೈ ನಗರದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿದೆ. ತಿರುವಲ್ಲೂರು ಜಿಲ್ಲೆಯ ತಿರುಮಳಸಾಯಿ ಎಂಬ ಹಳ್ಳಿಯಲ್ಲಿ ಒತ್ತಾಂಡೀಶ್ವರನ ಈ ದೇವಾಲಯವಿದೆ. ದೇವಾಲಯದಾವರಣದಲ್ಲಿ ಶನಿ ದೇವರು, ಗಣೇಶ ಹಾಗೂ ಇತರೆ ಸನ್ನಿಧಿಗಳಿವೆ.

ಒಬ್ಬ ಬೇಡಿದ್ದನ್ನು ಕೊಟ್ಟರೆ ಇನ್ನೊಬ್ಬ ಬೇಡವಾದ್ದನ್ನು ತೆಗೆಯುತ್ತಾನೆ!

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more