Search
  • Follow NativePlanet
Share
» »ನಿಪಾಹ್ ವೈರಸ್ ; ಕೇರಳದ ಈ ನಾಲ್ಕು ಜಿಲ್ಲೆಗಳಿಗೆ ಪ್ರವಾಸ ಹೋಗ್ಲೇಬೇಡಿ

ನಿಪಾಹ್ ವೈರಸ್ ; ಕೇರಳದ ಈ ನಾಲ್ಕು ಜಿಲ್ಲೆಗಳಿಗೆ ಪ್ರವಾಸ ಹೋಗ್ಲೇಬೇಡಿ

ಕೇರಳವು ಭಾರತದಲ್ಲೇ ಒಂದು ಉತ್ತಮ ಪರ್ಯಾಟನಾ ತಾಣವನ್ನು ಹೊಂದಿರುವ ರಾಜ್ಯವಾಗಿದೆ. ಇದು ತನ್ನ ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಆದರೆ ಇದೀಗ ಪ್ರವಾಸಿಗರು ಕೇರಳಕ್ಕೆ ಹೋಗಲು ಹೆದರುತ್ತಿದ್ದಾರೆ. ಅದಕ್ಕೆ ಕಾರಣ ನಿಪಾಹ್ ವೈರಸ್. ಕೇರಳ ಸರ್ಕಾರವು ಪ್ರವಾಸಿಗರಿಗೆ ಕೇರಳದ ನಾಲ್ಕು ಜಿಲ್ಲೆಗಳಿಗೆ ಹೋಗದಂತೆ ಸೂಚಿಸಿದೆ.

ನಿಪಾಹ್‌ ವೈರಸ್‌ಗೆ ತುತ್ತಾಗಿರುವ ಕೇರಳದಲ್ಲಿ ನಡೆಯುತ್ತೆ ಬಾವಲಿ ಹಿಡಿಯುವ ಹಬ್ಬ ; ಏನಿದರ ವಿಶೇಷತೆನಿಪಾಹ್‌ ವೈರಸ್‌ಗೆ ತುತ್ತಾಗಿರುವ ಕೇರಳದಲ್ಲಿ ನಡೆಯುತ್ತೆ ಬಾವಲಿ ಹಿಡಿಯುವ ಹಬ್ಬ ; ಏನಿದರ ವಿಶೇಷತೆ

ನಿಪಾಹ್ ವೈರಸ್ ಎಂದರೆ ಏನು?

ನಿಪಾಹ್ ವೈರಸ್ ಎಂದರೆ ಏನು?

ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ, ನಿಪಾಹ್ ವೈರಸ್ ಬಾವಲಿಗಳಿಂದ ಹಣ್ಣುಗಳು, ಹೂಗಳ ಮುಖಾಂತರ ಮನುಷ್ಯರು ಹಾಗೂ ಪ್ರಾಣಿಗಳನ್ನು ಆಕ್ರಮಿಸುತ್ತದೆ. 1998ರಲ್ಲಿ ಮಲೇಶಿಯಾದ ಕಾಮಪುಂಗ್ ಸುಂಗಯಿ ನಿಪಾಹ್ ಹಳ್ಳಿಯಲ್ಲಿ ಈ ವೈರಸ್‌ನ್ನು ಮೊದಲ ಬಾರಿಗೆ ಪತ್ತೆ ಹಚ್ಚಲಾಗಿತ್ತು. ಮಲೇಶಿಯಾದಲ್ಲಿ ಈ ವೈರಸ್ ಪತ್ತೆಯಾಗಿದ್ದಾಗ ಈ ಸಾಂಕ್ರಾಮಿಕ ರೋಗಕ್ಕೆ ಒಳಗಾದ ಸುಮಾರು 50% ರೋಗಿಗಳು ಸಾವನ್ನಪ್ಪಿದ್ದರು. ನಂತರ 2004ರಲ್ಲಿ ಬಾಂಗ್ಲಾದೇಶದಲ್ಲಿ ಕಂಡುಬಂದಿತ್ತು. ಇದೀಗ ಕೇರಳದಲ್ಲಿ ಕಾಣಿಸಿಕೊಂಡಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಹೋಗಬಾರದು?

ಯಾವೆಲ್ಲಾ ಜಿಲ್ಲೆಗಳಿಗೆ ಹೋಗಬಾರದು?

ನಿಪಾಹ್ ವೈರಸ್‌ಗೆ ತುತ್ತಾಗಿರುವ ಕೇರಳ ನಾಲ್ಕು ಜಿಲ್ಲೆಗಳಾದ ಕೋಜಿಕೋಡ್, ಮಲಪ್ಪುರಂ, ವಯನಾಡ್ ಹಾಗೂ ಕಣ್ಣೂರಿಗೆ ಹೋಗದಂತೆ ಕೇರಳ ಸರ್ಕಾರ ಸಲಹೆ ನೀಡಿದೆ. ಈ ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಕೇರಳ ಉಳಿದ ಸ್ಥಳಗಳಲ್ಲಿ ಆರಾಮವಾಗಿ ಓಡಾಡಬಹುದೆಂದು ಕೇರಳದ ಆರೋಗ್ಯಮಂತ್ರಿ ರಾಜೀವ್ ಸದಾನಂದ್ ತಿಳಿಸಿದ್ದಾರೆ. ಕೇರಳದ ಕೋಜಿಕೋಡ್‌ನಲ್ಲಿ ಈವರೆಗೆ 15ನಿಪಾಹ್ ವೈರಸ್ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಪ್ರವಾಸಿಗರು ಈ ಜಿಲ್ಲೆಗಳಿಗೆ ಹೋಗದೇ ಇರೋದು ಒಳ್ಳೆಯದು.

ನಿಪಾಹ್‌ನ ಲಕ್ಷಣಗಳೇನು?

ನಿಪಾಹ್‌ನ ಲಕ್ಷಣಗಳೇನು?

ನಿಪಾಹ್‌ನ ಲಕ್ಷಣಗಳೇನು?ಈ ವೈರಸ್‌ಗೆ ತುತ್ತಾಗಿರುವ ವ್ಯಕ್ತಿಗೆ ಉಸಿರಾಡಲೂ ತೊಂದರೆಯಾಗುತ್ತದೆ. ಮೆದುಳಿನಲ್ಲಿ ಉರಿಯುಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದಲ್ಲಿ ರೋಗಿ ಸಾವನ್ನಪ್ಪುತ್ತಾರೆ.

ನಿಪಾಹ್‌ನ ಲಕ್ಷಣಗಳೇನು?ಈ ವೈರಸ್‌ಗೆ ತುತ್ತಾಗಿರುವ ವ್ಯಕ್ತಿಗೆ ಉಸಿರಾಡಲೂ ತೊಂದರೆಯಾಗುತ್ತದೆ. ಮೆದುಳಿನಲ್ಲಿ ಉರಿಯುಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದಲ್ಲಿ ರೋಗಿ ಸಾವನ್ನಪ್ಪುತ್ತಾರೆ. ವ್ಯಾಕ್ಸಿನ್ ಇನ್ನೂ ನಡೆದಿಲ್ಲ

ನಿಪಾಹ್‌ನ ಲಕ್ಷಣಗಳೇನು?ಈ ವೈರಸ್‌ಗೆ ತುತ್ತಾಗಿರುವ ವ್ಯಕ್ತಿಗೆ ಉಸಿರಾಡಲೂ ತೊಂದರೆಯಾಗುತ್ತದೆ. ಮೆದುಳಿನಲ್ಲಿ ಉರಿಯುಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದಲ್ಲಿ ರೋಗಿ ಸಾವನ್ನಪ್ಪುತ್ತಾರೆ. ವ್ಯಾಕ್ಸಿನ್ ಇನ್ನೂ ನಡೆದಿಲ್ಲ

ವಿಶ್ವ ಆರೋಗ್ಯ ಕೇಂದ್ರದ ಪ್ರಕಾರ ಈ ವೈರಸ್‌ನ ಚಿಕಿತ್ಸೆಗೆ ಮನುಷ್ಯರಿಗೆ ಆಗಲಿ ಅಥವಾ ಪ್ರಾಣಿಗಳಿಗೆ ಆಗಲೀ ಯಾವುದೇ ತರಹದ ವ್ಯಾಕ್ಸಿನ್‌ನ್ನು ಕಂಡುಹಿಡಿಯಲಾಗಲಿಲ್ಲ.

ಮರದಿಂದ ಬಿದ್ದಿರುವ ಹಣ್ಣುಗಳನ್ನು ತಿನ್ನಬೇಡಿ

ಮರದಿಂದ ಬಿದ್ದಿರುವ ಹಣ್ಣುಗಳನ್ನು ತಿನ್ನಬೇಡಿ

ಈ ವೈರಸ್‌ನಿಂದ ತಪ್ಪಿಸಿಕೊಳ್ಳಲು ಮರದಿಂದ ಬಿದ್ದಿರುವ ಯಾವುದೇ ಹಣ್ಣುಗಳನ್ನು ತಿನ್ನಬೇಡಿ. ಹಂದಿ, ಕುದುರೆ ಹಾಗೂ ಇನ್ನಿತರ ರೋಗಗ್ರಸ್ಥ ಪ್ರಾಣಿಗಳಿಂದ ದೂರವಿರಿ. ಈಗಾಗಲೇ ನಿಪಾಹ್ ವೈರಸ್ ತುತ್ತಾಗಿರುವ ವ್ಯಕ್ತಿಗಳಿಂದ ದೂರವಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X