Search
  • Follow NativePlanet
Share
» »ನೀಲಮಾಧವ : ಜಗನ್ನಾಥನ ಮೂಲ ರೂಪ!

ನೀಲಮಾಧವ : ಜಗನ್ನಾಥನ ಮೂಲ ರೂಪ!

By Vijay

ಪ್ರಸ್ತುತ ಒಡಿಶಾ ರಾಜ್ಯದ ಪ್ರಧಾನ ದೇವತೆ ಜಗನ್ನಾಥ. ವಿಷ್ಣುವಿನ ಅವತಾರವಾದ ಜಗನ್ನಾಥನ ಕುರಿತು ಅನೇಕ ಕಥೆಗಳು, ವಿಚಾರಗಳು, ಪವಾಡಗಳು, ಕಾಲ್ಪನಿಕ ಕಥೆಗಳು, ಆಚಾರ-ವಿಚಾರಗಳು ಒಡಿಶಾದ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವುದನ್ನು ಕಾಣಬಹುದು.

ಹೀಗೆ ಹಲವಾರು ಶತಮಾನಗಳ ನಂತರ ರೂಪಗೊಂಡ ಜಗನ್ನಾಥನ ಮೂಲ ರೂಪವೆ ಬೇರೆ ಎಂದು ನಂಬಲಾಗಿದೆ ಹಾಗೂ ಆ ಮೂಲ ಅವತಾರದಲ್ಲಿ ಜಗನ್ನಾಥನನ್ನು ನೀಲಮಾಧವನೆಂದು ಪೂಜಿಸಲಾಗುತ್ತದೆ. ಮಹಾನದಿ ತಟದ ಬಳಿ ಇರುವ ಬ್ರಹ್ಮಾದ್ರಿ ಬೆಟ್ಟಗಳ ಗುಹಾ ಪ್ರದೇಶವೊಂದರಿಂದ ನಿಲಮಾಧವನ ಕುರಿತು ಕಥೆ ತೆರದುಕೊಳುತ್ತದೆ. ಆ ಪ್ರದೇಶವೆ ಇಂದಿನ ನಯಾಗರ್ ಜಿಲ್ಲೆಯ ಕಾಂತಿಲೊ.

ನೀಲಮಾಧವ : ಜಗನ್ನಾಥನ ಮೂಲ ರೂಪ!

ಚಿತ್ರಕೃಪೆ: Sidsahu

ಹಿಂದೆ ಇಲ್ಲಿ ಸಬರ ಸಮುದಾಯದ ನಾಯಕನಾದ ಬಿಸ್ವಬಾಬು ಎಂಬಾತನು ಕಿತುಂಗ್ ಎಂಬ ದೇವನನ್ನು ಪೂಜಿಸುತ್ತಿದ್ದನು. ಸ್ಥಳ ಪುರಾಣದ ಪ್ರಕಾರ, ಇಂದ್ರನೀಲ ಕಲ್ಲಿನಲ್ಲಿ ಈ ದೇವತೆಯ ವಿಗ್ರಹವಿದ್ದು ಅದನ್ನು ನೀಲಮಾಧಬ ಅಥವಾ ನೀಲಮಾಧವ ಎಂದು ಕರೆಯುತ್ತಿದ್ದರು.

ಇದಕ್ಕೆ ಸಂಬಂಧಿಸಿದ ಕಥೆಯೂ ರೋಚಕವಾಗಿದೆ. ಮಾಲವ ಸಾಮ್ರಾಜ್ಯದ ದೊರೆಯಾದ ಇಂದ್ರದ್ಯುಮ್ನನಿಗೆ ಕನಸಿನಲ್ಲಿ ಒಮ್ಮೆ ನೀಲಮಾಧವನ ದರ್ಶನವಾಯಿತು. ತದನಂತರ ರಾಜ ತನ್ನ ಆಸ್ಥಾನ ಪಂಡಿತರನ್ನು ಕರೆದು ಅದರ ಕುರಿತು ವಿಚಾರಿಸಿದ. ಒಬ್ಬ ಪಂಡಿತನು ಉತ್ಕಲ ಎಂಬಲ್ಲಿ ನೀಲಮಾಧವನನ್ನು ಪೂಜಿಸಲಾಗುವ ವಿಚಾರ ತಿಳಿಸಿದ.

ನೀಲಮಾಧವ : ಜಗನ್ನಾಥನ ಮೂಲ ರೂಪ!

ಚಿತ್ರಕೃಪೆ: Krupasindhu Muduli

ರಾಜ, ಬಿದ್ಯಾಪತಿ ಎಂಬ ಪಂಡಿತನೋರ್ವನನ್ನು ಕರೆದು ಆ ನೀಲಮಾಧವನಿರುವ ಸ್ಥಳ ಹುಡುಕುವ ಜವಾಬ್ದಾರಿ ವಹಿಸಿದ. ಈಗ ಬಿದ್ಯಾಪತಿ ಬರಿಗಾಲಿನಲ್ಲಿ ತನ್ನ ಕಾರ್ಯಕ್ಕೆ ಸಿದ್ಧನಾಗಿ ಕಾಡಿನೊಳಗೆ ಪ್ರವೇಶಿಸಿ ಅಲೆಯತೊಡಗಿದ ಹಲವಾರು ದಿನಗಳ ನಂತರ ಬಿಸ್ವಬಾಬುವಿನ ಗ್ರಾಮಕ್ಕೆ ಪ್ರವೇಶಿಸಿ ಅವನಿಂದ ಆತಿಥ್ಯ ಸ್ವೀಕರಿಸಿದ. ಆ ನಾಯಕನ ಮಗಳಾದ ಸೌಂದರ್ಯವತಿ ಲಲಿತಾ ಬಿದ್ಯಾಪತಿಯ ಮೋಹ ಪಾಶಕ್ಕೆ ಬಿದ್ದಳು.

ಹೀಗೆ ಇಬ್ಬರು ಪರಸ್ಪರ ಒಪ್ಪಿಗೆ ಸೂಚಿಸಿ ತಂದೆಯಾದ ಬಿಸ್ವಬಾಬುವಿನ ಸಮ್ಮತಿಯ ಮೆರೆಗೆ ಮದುವೆಯಾದರು. ಹೀಗೆ ಕೆಲವು ದಿನಗಳ ನಂತರ ಲಲಿತಾ ತನ್ನ ತಂದೆಯು ನೀಲಮಾಧವನ ವಿಗ್ರಹವನ್ನು ದಟ್ಟಾರಣ್ಯದ ಮಧ್ಯದಲ್ಲಿರುವ ಗುಹೆಯೊಂದರಲ್ಲಿ ಪೂಜಿಸುವ ವಿಷಯ ತಿಳಿಸಿದಳು. ಇದರಿಂದ ಸಂತಸಗೊಂಡ ಬಿದ್ಯಾಪತಿ ಅವಳನ್ನು ಕುರಿತು ತನ್ನನ್ನು ಅಲ್ಲಿ ಕರೆದೊಯ್ಯಲು ವಿನಂತಿಸಿದ.

ನೀಲಮಾಧವ : ಜಗನ್ನಾಥನ ಮೂಲ ರೂಪ!

ಚಿತ್ರಕೃಪೆ: Krupasindhu Muduli

ಆದರೆ ಲಲಿತಾ ಒಂದು ಷರತ್ತನ್ನು ವಿಧಿಸಿ ಅದರ ಪ್ರಕಾರವಾಗಿ ಬಿದ್ಯಾಪತಿಯ ಕಣ್ಣಿಗೆ ಪಟ್ಟಿಯನ್ನು ಕಟ್ಟಿ ಕರೆದುಕೊಂಡು ಹೋದಳು. ಆದರೆ ಬಿದ್ಯಾಪತಿಯು ಸಾಸಿವೆ ಕಾಳುಗಳನ್ನು ತಾನು ನಡೆಯುತ್ತಿರುವ ಪಥದಲ್ಲಿ ಒಂದೊಂದಾಗಿ ಬೀಳಿಸುತ್ತ ಸಾಗಿದನು. ಅದು ಮಳೆಗಾಲದ ಸಮಯ ಅಲ್ಲೆಲ್ಲೂ ಸಾಸಿವೆ ಮರಗಳಿರಲಿಲ್ಲ. ಹಾಗಾಗಿ ಸಾಲಾಗಿ ಬೆಳೆದ ಗಿಡಗಳಿಂದ ಸ್ಥಳ ಹುಡುಕುವುದು ಬಿದ್ಯಾಪತಿಯ ಉಪಾಯವಾಗಿತ್ತು.

ಅದರಂತೆ ಅವನು ತನ್ನ ರಾಜ್ಯಕ್ಕೆ ಮರಳಿ, ನಡೆದ ಸಂಗತಿಯನ್ನು ರಾಜನಿಗೆ ಹೇಳಿ ಇಬ್ಬರೂ ಸೈನ್ಯದ ಸಮೇತ ಆ ಸ್ಥಳವನ್ನು ಹುಡುಕಲು ಹೊರಟರು. ಈ ಸಂದರ್ಭದಲ್ಲಿ ಆಕಾಶವಾಣಿಯೊಂದು ಉಂಟಾಗಿ ಆ ನಿಲಮಾಧವನ ಮೂರ್ತಿಯು ಸಮುದ್ರದಲ್ಲಿ ತೇಲುತ್ತಿರುವುದರ ವಿಷಯ ತಿಳಿಯಿತು.

ಮನಸೆಳೆವ ಜಗನ್ನಾಥ ಪುರಿ ಮಂದಿರ ಮತ್ತು ರಥ ಯಾತ್ರೆ

ಕೊನೆಗೆ ಎಲ್ಲರೂ ಒಂದಾಗಿ ಪುರಿಗೆ ತಲುಪಿ ಅಲ್ಲಿನ ಸಮುದ್ರದಲ್ಲಿ ನಿಲಮಾಧವನ ವಿಗ್ರಹವು ಕಟ್ಟಿಗೆಯ ಮೂರ್ತಿಯಲ್ಲಿ ಪರಿವರ್ತಿತವಾಗಿರುವುದನ್ನು ಕಂಡರು. ಅಂದಿನಿಂದ ಆ ನೀಲ ಮಾಅಧವನೆ ಕಟ್ಟಿಗೆಯಲ್ಲಿ ಕೆತ್ತಲಾಗುವ ಜಗನ್ನಾಥನಾಗಿ ಭಕ್ತರನ್ನು ಹರಸುತ್ತಿದ್ದನೆ ಎಂಬ ನಂಬಿಕೆಯಿದೆ. ಈ ನಿಲಮಾಧವನ ದೇವಾಲಯ ಪ್ರಸ್ತುತ ಕಾಂತಿಲೊ ಎಂಬ ಸ್ಥಳದಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more