Search
  • Follow NativePlanet
Share
» »ಕೊಯಮತ್ತೂರು-ಬೆಂಗಳೂರಿಗೆ ಬಂದಿದೆ ಡಬಲ್ ಡೆಕ್ಕರ್ ರೈಲು

ಕೊಯಮತ್ತೂರು-ಬೆಂಗಳೂರಿಗೆ ಬಂದಿದೆ ಡಬಲ್ ಡೆಕ್ಕರ್ ರೈಲು

ಮುಂಬೈ ಸುತ್ತಾಡಿರೋರಿಗೆ ಡಬಲ್ ಡೆಕ್ಕರ್ ಬಸ್‌ನ ಅನುಭವವಿರಬಹುದು. ಆದರೆ ಇದೀಗ ಕರ್ನಾಟಕದ ಜನತೆಗೂ ಡಬ್ಬಲ್‌ ಡೆಕ್ಕರ್‌ನಲ್ಲಿ ಓಡಾಡುವ ಸೌಭಾಗ್ಯ ಒದಗಿ ಬಂದಿದೆ. ಹಾಗಾದ್ರೆ ಕರ್ನಾಟಕಕ್ಕೆ ಡಬಲ್ ಡೆಕ್ಕರ್ ಬಸ್‌ ಬರುತ್ತಾ ಅಂತಾ ತಿಳಿಯಬೇಡಿ. ಇಲ್ಲಿ ನಾವು ಮಾತನಾಡುತ್ತಿರುವುದು ಡಬಲ್ ಡೆಕ್ಕರ್ ರೈಲಿನ ಬಗ್ಗೆ.

ಕೊಯಮತ್ತೂರು-ಬೆಂಗಳೂರು

ಕೊಯಮತ್ತೂರು-ಬೆಂಗಳೂರು

ಹೌದು ಕೊಯಮತ್ತೂರು-ಬೆಂಗಳೂರು UDAY ಎಕ್ಸ್ಪ್ರೆಸ್ ಎಕ್ಸ್‌ಪ್ರೆಸ್‌ ಡಬಲ್‌ಡೆಕ್ಕರ್‌ ಎಸಿ ರೈಲು ಪ್ರಾರಂಭವಾಗಿದೆ. ರೈಲು ಸಂಪರ್ಕದ ವಿಸ್ತರಣೆಯನ್ನು ಮುಂದುವರೆಸಿಕೊಂಡು, ಬೆಂಗಳೂರಿನಿಂದ ಕೊಯಮತ್ತೂರುವರೆಗೆ ಪ್ರಯಾಣಿಕರ ಲಭ್ಯತೆ ಮತ್ತು ಸೌಕರ್ಯವನ್ನು ಹೆಚ್ಚಿಸುವತ್ತ ಗಮನ ನೀಡಿರುವ ಭಾರತೀಯ ರೈಲ್ವೆಯು ಉತ್ಕೃಷ್ಟ ಡಬಲ್ ಡೆಕ್ಕರ್‌ ಏರ್‌ ಕಂಡೀಶನ್ಡ್‌ ಯಾತ್ರಿ ಎಕ್ಸ್‌ಪ್ರೆಸ್‌ (UDAY Express ) ನ್ನು ಬಿಡುಗಡೆ ಮಾಡಿದೆ. ಜೂನ್‌ 10ರಂದು ಡಬಲ್ ಡೆಕ್ಕರ್‌ ಎಸಿ ರೈಲಿಗೆ ಚಾಲನೆ ದೊರೆತಿದೆ.

ತಾಜ್‌ಮಹಲ್ ನಿರ್ಮಿಸಲು ಆ ಕಾಲದಲ್ಲಿ ಶಹಜಹಾನ್ ಎಷ್ಟು ಖರ್ಚು ಮಾಡಿದ್ದರು ಗೊತ್ತಾ?

ಈ ರೈಲಿನ ವಿಶೇಷತೆ ಏನು?

ಈ ರೈಲಿನ ವಿಶೇಷತೆ ಏನು?

2016 ರ ರೈಲ್ವೆ ಬಜೆಟ್ ಇದರ ಘೋಷಣೆಯಾಗಿತ್ತು. UDAY ಎಕ್ಸ್ಪ್ರೆಸ್ ರೈಲುಗಳು, ತಮ್ಮ ಹೆಚ್ಚಿದ ಸಾಮರ್ಥ್ಯದೊಂದಿಗೆ, ವ್ಯವಸ್ಥಿತ ಮಾರ್ಗದಲ್ಲಿ ದಟ್ಟಣೆಯನ್ನು ನಿವಾರಿಸಲು ವ್ಯವಸ್ಥೆಯಲ್ಲಿ ಪರಿಚಯಿಸಲು ಯೋಜಿಸಲಾಗಿದೆ. ಈ ರೈಲು ಹೆಚ್ಚುವರಿ ಮಿನಿ ಪ್ಯಾಂಟ್ರಿಗಳೊಂದಿಗೆ ಹೊಸ ಬಾಹ್ಯ ನೋಟವನ್ನು ಹೊಂದಿದೆ. ಮೊದಲ ಸ್ವಯಂಚಾಲಿತ ಆಹಾರ ವಿತರಣಾ ಯಂತ್ರ ಕೂಡಾ ಇದೆ. ವಿಭಜಿತ ಎಲ್ಇಡಿ ದೀಪ, 8 ಡಬಲ್ ಡೆಕ್ಕರ್ ಕೋಚ್‌ಗಳು ಇವೆ.

ವೈಫೈ ಸೌಲಭ್ಯ

ವೈಫೈ ಸೌಲಭ್ಯ

ವೈಫೈ ಆಧಾರಿತ ಇನ್ಫೋಟೈನ್ಮೆಂಟ್, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದ, ಪ್ಯಾಂಟ್ರಿ ಪ್ರದೇಶಕ್ಕೆ 3 ಬದಲಾಯಿಸಬಹುದಾದ ಕೋಚ್‌ಗಳು, ಊಟದ ಪ್ರದೇಶದಲ್ಲಿ ಸ್ವಯಂಚಾಲಿತ ಆಹಾರ ವಿತರಣಾ ಯಂತ್ರವನ್ನು ಒಳಗೊಂಡಿದೆ.

 ಎಲ್‌ಸಿಡಿ ಸ್ಕ್ರೀನ್‌ಗಳು

ಎಲ್‌ಸಿಡಿ ಸ್ಕ್ರೀನ್‌ಗಳು

ಮುಂಬರುವ ಗಮ್ಯಸ್ಥಾನವನ್ನು ಪ್ರದರ್ಶಿಸಲು ಪ್ರತಿ ಕೋಚ್‌ನಲ್ಲಿ ಎಲ್ಸಿಡಿ ಪರದೆಗಳಿವೆ. ಪ್ರಯಾಣಿಕರಿಗೆ ಸ್ನ್ಯಾಕ್ ಟೇಬಲ್‌ಗಳೊಂದಿಗೆ ಪೌಡರ್ ಕೋಟೆಡ್‌ ಸೀಟ್‌ಗಳಿವೆ. 120 ಪ್ರಯಾಣಿಕರಿಗೆ (5ಕೋಚ್‌ಗಳು) ಹಾಗೂ ಇತರ 3 ಕೋಚ್‌ಗಳಿಗೆ 104 ಪ್ರಯಾಣಿಕರ ಆಸನಗಳಿವೆ.

ಗಂಟೆಗೆ 160 ಕಿ.ಮೀ ವೇಗ

ಗಂಟೆಗೆ 160 ಕಿ.ಮೀ ವೇಗ

ಟ್ರ್ಯಾಕ್ ಚೆನ್ನಾಗಿದ್ದರೆ ಪ್ರತಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹಳದಿ ಮತ್ತು ಆರೆಂಜ್‌ ಬಣ್ಣವು ರೈಲಿಗೆ ರೋಮಾಂಚಕ ನೋಟವನ್ನು ನೀಡುತ್ತದೆ. ಸೀಟ್ ವ್ಯವಸ್ಥೆಯು ಶತಾಬ್ಡಿಯಲ್ಲಿರುವಂತೆಯೇ ಇರಲಿದೆ. ಲಗೇಜ್ ರಾಕ್ಸ್ ಗಳಿವೆ

ಶೌಚಾಲಯಗಳನ್ನು ಶೀಘ್ರದಲ್ಲೇ ಜೈವಿಕ ಶೌಚಾಲಯಗಳಾಗಿ ಪರಿವರ್ತಿಸಲಾಗುವುದು.

 7 ಗಂಟೆಯಲ್ಲಿ ತಲುಪುತ್ತದೆ

7 ಗಂಟೆಯಲ್ಲಿ ತಲುಪುತ್ತದೆ

ಈ ಎಕ್ಸ್ ಪ್ರೆಸ್ ರೈಲು ಕೊಯಮತ್ತೂರು-ಬೆಂಗಳೂರು ಪ್ರಯಾಣವನ್ನು ಪೂರ್ಣಗೊಳಿಸಲು 7 ಗಂಟೆ ತೆಗೆದುಕೊಳ್ಳುತ್ತದೆ. ಕೊಯಮತ್ತೂರಿನಿಂದ ಬೆಳಗ್ಗೆ 5:40 ಗಂಟೆಗೆ ಹೊರಟರೆ(ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳು) ತಿರುಪೂರ್, ಈರೋಡ್, ಮತ್ತು ಸೇಲಂ ಮೂಲಕ ಮಧ್ಯಾಹ್ನ12.40 ಕ್ಕೆ ಬೆಂಗಳೂರು ತಲುಪಲಿದೆ.

ಬೆಳಗ್ಗೆ 2:15 ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು (ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳು) ಮತ್ತು ಕೊಯಮತ್ತೂರಿಗೆ ರಾತ್ರಿ 9 ಗಂಟೆಗೆ (6.45 ಗಂಟೆ ಪ್ರಯಾಣ)ತಲುಪಲಿದೆ.

ಇನ್ನು ಈ ಟ್ರೈನ್‌ನ ಶುಲ್ಕವು ಸಾಮಾನ್ಯ AC ಚೇರ್ ಟ್ರೈನ್‌ಗೆ ಸಮಾನವಾಗಿರುತ್ತದೆ.

UDAY ಎಕ್ಸ್ಪ್ರೆಸ್

UDAY ಎಕ್ಸ್ಪ್ರೆಸ್

ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಕಲ್ಪಿಸುವ ಅನ್ವೇಷಣೆಯಲ್ಲಿದೆ. UDAY ಎಕ್ಸ್ಪ್ರೆಸ್ ಆಗಾಗ ಕರ್ನಾಟಕದಿಂದ ತಮಿಳುನಾಡಿಗೆ ವ್ಯಾಪಾರ ಸಂಬಂಧವಾಗಿ ಪ್ರಯಾಣಿಸುವವರಿಗೆ ಸಹಕಾರಿಯಾಗಲಿದೆ. ಭಾರತೀಯ ರೈಲ್ವೆ ಶೀಘ್ರದಲ್ಲೇ ಇನ್ನೆರಡು ಎಕ್ಸ್ಪ್ರೆಸ್ ರೈಲುಗಳ ಸೇವೆಗಳನ್ನು ಪ್ರಾರಂಭಿಸಿದೆ. ಈಗಾಗಲೇ UDAY ಎಕ್ಸ್ಪ್ರೆಸ್ ರೈಲುಗಳು ಬಾಂದ್ರಾ (ಟಿ) -ಜಾಮನಗರ ಮತ್ತು ವಿಶಾಖಪಟ್ಟಣಂ-ವಿಜಯವಾಡಾ ಮಾರ್ಗದಲ್ಲಿ ಚಲಿಸುತ್ತಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more