Search
  • Follow NativePlanet
Share
» »ಬೆಂಗಳೂರಿನ ಹತ್ತಿರದ ಪಿಕ್ನಿಕ್ ತಾಣಗಳು

ಬೆಂಗಳೂರಿನ ಹತ್ತಿರದ ಪಿಕ್ನಿಕ್ ತಾಣಗಳು

By Manjula Balaraj Tantry

ಎಲ್ಲರಿಗೂ ತಮ್ಮ ತಮ್ಮ ಕುಟುಂಬ ಮೊದಲ ಆದ್ಯತೆಯಾಗಿರುತ್ತದೆ. ನಾವು ಯಾವಾಗಲೂ ನಮ್ಮ ಕುಟುಂಬದವರೊಂದಿಗೆ ಉತ್ತಮವಾಗಿ ಸಮಯ ಕಳೆಯಲು ಬಯಸುವುದು ಸಹಜ ಅದು ಅದು ಊಟದ ರೂಪದಲ್ಲಿ ಅಥವಾ ಪ್ರಯಾಣ , ಪಿಕ್ನಿಕ್ ಮುಂತಾದ ರೂಪಗಳಲ್ಲಾಗಿರಬಹುದು. ಕುಟುಂಬದೊಂದಿಗೆ ಖುಷಿಯಾದ ಕ್ಷಣಗಳು ಶಾಶ್ವತವಾದದ್ದಾಗಿರುತ್ತದೆ ಮತ್ತು ಎಂದಿಗೂ ಮರೆಯಾಗುವುದಿಲ್ಲ.

ಗಾರ್ಡನ್ ಸಿಟಿ ಎಂದೇ ಕರೆಯಲ್ಪಡುವ ಬೆಂಗಳೂರು ತನ್ನ ಸುತ್ತ ಮುತ್ತ ಅನೇಕ ಸುಂದರವಾದ ತಾಣಗಳನ್ನು ಹೊಂದಿದೆ. ಇಲ್ಲಿ ನೀವು ನಿಮ್ಮ ಉತ್ತಮ ಸಮಯಗಳನ್ನು ಸಂತೋಷದಿಂದ ಕಳೆಯಬಹುದು ಮತ್ತು ಇಲ್ಲಿ ಕಳೆದಂತಹ ಸಮಯಗಳನ್ನು ಮುಂದೆ ನೆನಪು ಮಾಡಿಕೊಳ್ಳಬಹುದಾಗಿದೆ. 2-3 ರಿಂದ ಮೂರು ಗಂಟೆಗಳ ಒಳಗಾಗಿ ನೀವು ತಲುಪುವಂತಹ ಸ್ಥಳಗಳನ್ನು ಹುಡುಕುತ್ತಿದ್ದಲ್ಲಿ ಇಲ್ಲಿ ಓದಿ. ಮತ್ತು ಬೆಂಗಳೂರಿನ ಆಸುಪಾಸಿನ ಸ್ಥಳಗಳಲ್ಲಿ ಪಿಕ್ನಿಕ್ ಮಾಡಬಹುದಾದಂತಹ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ.

ದೊಡ್ಡ ಆಲದ ಮರ ದೂರ - 25 ಕಿಮೀ.

ದೊಡ್ಡ ಆಲದ ಮರ ದೂರ - 25 ಕಿಮೀ.

ದೊಡ್ಡ ಆಲದ ಮರ ಎಂದೂ ಕರೆಯಲ್ಪಡುವ ಇದು ಬೆಂಗಳೂರಿನ ಸುತ್ತಲಿರುವ ಒಂದು ಪ್ರಸಿದ್ದ ತಾಣವಾಗಿದೆ. ಇಲ್ಲಿ ದಟ್ಟ ಮರದ ಆವರಣದ ನೆರಳಿನಲ್ಲಿ ಕುಟುಂಬದವರೊಂದಿಗೆ ಸಮಯ ಕಳೆಯಬಹುದಾಗಿದೆ. ಇದು 3 ಎಕರೆ ಭೂಮಿಯಲ್ಲಿ ಹರಡಿದ್ದು, 400 ವರ್ಷ ಹಳೆಯದಾಗಿರುವ ಈ ಮರವು ಕರ್ನಾಟಕದ ಅತೀ ದೊಡ್ಡ ಮರವೆಂದು ಪರಿಗಣಿಸಲಾಗಿದೆ.

ಇಲ್ಲಿಯ ತಂಪಾದ ಗಾಳಿ ಮತ್ತು ಆಹ್ಲಾದಕರ ವಾತಾವರಣ ಆಟ ಆಡಲು, ಉಪಹಾರ ಸೇವಿಸಲು, ಮತ್ತು ನೃತ್ಯ ಮಾಡಲು ಅತ್ತ್ಯುತ್ತಮ ವಾಗಿದ್ದು ಈ ಸ್ಥಳವನ್ನು ಸುಂದರವಾದ ಪಿಕ್ನಿಕ್ ತಾಣವನ್ನಾಗಿ ಮಾಡಿದೆ. ನೀವು ಬೆಂಗಳೂರು ಬಿಟ್ಟು ದೂರ ಹೋಗಲು ಬಯಸದಿದ್ದಲ್ಲಿ ಮತ್ತು ನಿಮ್ಮ ಕುಟುಂಬದವರ ಜೊತೆ ಸಮಯ ಕಳೆಯಲು ಬಯಸಿದಲ್ಲಿ ನಿಮ್ಮ ಸಾಮಗ್ರಿಗಳನ್ನು ಪ್ಯಾಕ್ ಮಾಡಿಕೊಳ್ಳಿ ಮತ್ತು ಸುಂದರವಾದ ಆಲದ ಮರದ ಕೆಳಗೆ ಸಂತೋಷವಾಗಿ ಸಮಯ ಕಳೆಯಿರಿ. ಅತ್ಯುತ್ತಮ ಸಮಯ - ಅಕ್ಟೋಬರ್ ನಿಂದ ಮಾರ್ಚ್.

PC: Sreejithk2000

ಮುಥ್ಯಲ ಮಡುವು ದೂರ - 43 ಕಿ.ಮೀ

ಮುಥ್ಯಲ ಮಡುವು ದೂರ - 43 ಕಿ.ಮೀ

ಬೆಂಗಳೂರಿನ ಸುತ್ತ ಮುತ್ತಲಿರುವ ಪಿಕ್ನಿಕ್ ತಾಣಗಳಲ್ಲಿ ಇದೊಂದು ಸುಂದರವಾದ ಸ್ಥಳವೆನಿಸಿದೆ. ಇದನ್ನು ಪರ್ಲ್ ವ್ಯಾಲಿ ಎಂದೂ ಕರೆಯಲಾಗುತ್ತದೆ. ಇದು ಬೆಟ್ಟಗಳ ನಡುವೆಯಿದ್ದು, ಈ ಸ್ಥಳವು ಹಚ್ಚ ಹಸಿರಿನಿಂದ ತುಂಬಿದೆ. ಕೆಳಗೆ ಬೀಳುವ ಬಹುಪದರದ ಜಲಪಾತವು ಸುತ್ತಮುತ್ತಲಿನ ನೋಟವನ್ನು ಹೆಚ್ಚು ಆಕರ್ಷಕವಾಗಿದ್ದು ಅಚ್ಚರಿ ಉಂಟು ಮಾಡುತ್ತದೆ. ಬೆರಗುಗೊಳಿಸುವ ನೀರಿನ ಕ್ಯಾಸ್ಕೇಡ್ನಿಂದ ರಚಿಸಿದ ತಾಜಾ ಕೊಳವು ಖಂಡಿತವಾಗಿಯೂ ನಿಮಗೆ ಕೆಲವು ನೀರಿನಲ್ಲಿ ಸಮಯವನ್ನು ಕಳೆಯುವಂತೆ ಮಾಡುತ್ತದೆ.

ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳ ಬಹುದಾದಂತಹ ಪಿಕ್ನಿಕ್ ತಾಣವನ್ನು ನೀವು ಹುಡುಕುತ್ತಿದ್ದರೆ ಪರ್ಲ್ ವ್ಯಾಲಿ ಖಂಡಿತವಾಗಿಯೂ ನಿಮಗೆ ಒಂದು ಸುಂದರ ಅನುಭವವನ್ನು ಕೊಡುತ್ತದೆ.

ಅತ್ಯುತ್ತಮ ಸಮಯ - ಸೆಪ್ಟೆಂಬರ್ ನಿಂದ ಮಾರ್ಚ್

PC: Mishrasasmita

ಚಿಕ್ಕಬಳ್ಳಾಪುರ ದೂರ - 60 ಕಿಮೀ

ಚಿಕ್ಕಬಳ್ಳಾಪುರ ದೂರ - 60 ಕಿಮೀ

ನಿಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಸಮಯ ಕಳೆಯಬಹುದಾದಂತಹ ಮತ್ತೊಂದು ಸ್ಥಳವೆಂದರೆ ಚಿಕ್ಕಬಳ್ಳಾಪುರ ಈ ಪ್ರದೇಶವು ದೃಶ್ಯ ಮತ್ತು ಟ್ರೆಕ್ಕಿಂಗ್ ಗೆ ಹೆಸರುವಾಸಿಯಾಗಿದೆ. ಇದು ಐದು ಬೆಟ್ಟಗಳ ಮಧ್ಯದಲ್ಲಿ ನೆಲೆಸಿದ್ದು ಸುತ್ತಲೂ ಸೌಂದರ್ಯದಿಂದ ಕೂಡಿದೆ. ಈ ಸ್ಥಳವು ಪ್ರಕೃತಿಯ ಮಡಿಲಲ್ಲಿ ಆರಾಮವಾಗಿ ಕುಳಿತುಕೊಂಡು ಸಮಯವನ್ನು ಸುಂದರವಾಗಿ ಸಂತೋಷದಿಂದ ಕಳೆಯಲು ಎದುರು ನೋಡುತ್ತಿರುವ ಪ್ರತಿಯೊಬ್ಬರಿಗೂ ಖಂಡಿತವಾಗಿಯೂ ಹೇಳಿ ಮಾಡಿಸಿದಂತಿದೆ.

ಇಲ್ಲಿ ಹತ್ತಿರದಲ್ಲಿರುವ ದೇವಾಲಯಗಳಿಗೂ ಭೇಟಿ ನೀಡಿ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಆಧ್ಯಾತ್ಮಿಕವಾಗಿಯೂ ಸಮಯ ಕಳೆಯಬಹುದು. ಈ ಜಾಗವು ಪಿಕ್ನಿಕ್ ಗೆ ಬೇಕಾದಂತಹ ಎಲ್ಲಾ ವಿಷಯಗಳನ್ನು ತನ್ನಲ್ಲಿ ಹೊಂದಿದೆ.

PC: Jayaprakash Narayan MK

 ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ದೂರ - 36 ಕಿ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ದೂರ - 36 ಕಿ

ನೀವು ವನ್ಯಜೀವಿಗಳ ಮೋಡಿ ಮತ್ತು ಶ್ರೀಮಂತಿಕೆಯನ್ನು ಅನುಭವಿಸ ಬಯಸಿದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ಕೊಡಿ. ನೀವು ವನ್ಯಜೀವಿಗಳ ವೈವಿಧ್ಯತೆಯನ್ನು ಆನಂದಿಸಬಹುದು ಮತ್ತು ಅದರ ಆಕರ್ಷಣೆಯಿಂದ ಆಕರ್ಷಿತರಾಗಬಹುದು. ಇಲ್ಲಿ ಅನ್ವೇಷಿಸಬೇಕಾದಂತಹ ಅನೇಕ ವಿಷಯಗಳಿವೆ. ದೃಶ್ಯ ವೀಕ್ಷಣೆಗೆ ಹೆಸರುವಾಸಿಯಾದ ಈ ಸ್ಥಳವು ಸುತ್ತಲೂ ಸುವಾಸನೆಯ ವಾತಾವರಣದೊಂದಿಗೆ ನಿಮ್ಮ ಪಿಕ್ನಿಕ್ ಗೆ ಒಂದು ಸೂಕ್ತವಾದ ತಾಣವಾಗಿದೆ.

ಹೈಕಿಂಗ್, ಟ್ರೆಕ್ಕಿಂಗ್ ಮತ್ತು ಸ್ವಲ್ಪಮಟ್ಟಿಗೆ ಛಾಯಾಗ್ರಹಣವನ್ನು ಮಾಡಲು ಮತ್ತು ಶಾಶ್ವತವಾದ ಕ್ಷಣಗಳನ್ನು ಇಲ್ಲಿ ಸೆರೆಹಿಡಿಯಬಹುದು. ಅತ್ಯುತ್ತಮ ಸಮಯ - ವರ್ಷವಿಡೀ

PC- Ramyajagadish

 ನಂದಿ ಬೆಟ್ಟ ದೂರ - 62 ಕಿ

ನಂದಿ ಬೆಟ್ಟ ದೂರ - 62 ಕಿ

ಬೆಟ್ಟದ ಮೇಲೆ ಹೋಗಿ ಸೂರ್ಯನ ಮೊದಲ ಮತ್ತು ಕೊನೆಯ ಕಿರಣಗಳಿಂದ ಪ್ರಕಾಶಿಸು ನೋಟ ಹೇಗಿರಬಹುದು? ನಂದಿ ಬೆಟ್ಟ ಅಂತಹ ಒಂದು ಸ್ಥಳವಾಗಿದ್ದು ಇಲ್ಲಿ ಮೋಡಗಳು ನಿಮ್ಮ ಪಕ್ಕದಲ್ಲಿಯೇ ಚಲಿಸುವಂತೆ ಕಾಣುತ್ತದೆ. ಇದು ಮಂತ್ರಮುಗ್ದಗೊಳಿಸುವ ನೋಟಗಳಾದ ಸೂರ್ರೋದಯ ಮತ್ತು ಸೂರ್ಯಾಸ್ತಮಾನದ ನೋಟವನ್ನು ನಮಗೆ ನೀಡುತ್ತದೆ. ಈ ಸ್ಥಳದ ಸುತ್ತಲೂ ಮೋಡಿ ಮಾಡುವಂತಿದ್ದು ಧ್ಯಾನ ಅಥವಾ ಸೌಂದರ್ಯವು ಅನ್ವೇಷಿಸಲು ಯೋಗ್ಯವಾದುದಾಗಿದೆ.

ಇಲ್ಲಿಯ ಪ್ರಕೃತಿಯಲ್ಲಿ ಸಮಯ ಕಳೆಯುವುದರ ಜೊತೆಗೆಬೆಟ್ಟಗಳ ತುದಿಯಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ದೇವಾಲಯಗಳು ಮತ್ತು ಬೇಸಿಗೆಯ ಅರಮನೆಗೆ ಸಹ ಭೇಟಿ ಮಾಡಬಹುದು. ಈ ಸ್ಥಳವು ಖಂಡಿತವಾಗಿಯೂ ಒಂದು ಸಂಪೂರ್ಣ ಪ್ಯಾಕೇಜ್ ಆಗಿದೆ ಮತ್ತು ಇದು ನಿಮ್ಮ ಮುಂದಿನ ಪಿಕ್ನಿಕ್ ತಾಣವಾಗಿರಬೇಕು

ಅತ್ಯುತ್ತಮ ಸಮಯ - ಅಕ್ಟೋಬರ್ ನಿಂದ ಜೂನ್ ಆದುದರಿಂದ, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮವಾಗಿ ಮತ್ತು ಮೋಜಿನಿಂದ ಸಮಯವನ್ನು ಕಳೆಯಬಹುದಾದಂತಹ ಒಂದು ಪಿಕ್ನಿಕ್ ತಾಣವಾಗಿದೆ. ಈ ಸಮಯವು ಈ ಸ್ಥಳಕ್ಕೆ ಭೇಟಿ ನೀಡಬಹುದಾದಂತಹ ಸೂಕ್ತ ಸಮಯವಾಗಿದೆ. ಎಲ್ಲರನ್ನು ಒಟ್ಟು ಸೇರಿಸಿ ಮತ್ತು ಈ ಸುಂದರವಾದ ಮತ್ತು ಮೋಡಿಮಾಡುವಂತಹ ಈ ಸ್ಥಳಕ್ಕೆ ಭೇಟಿ ಕೊಡಿ.

PC- Viswasagar27


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more