Search
  • Follow NativePlanet
Share
» »ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !

ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !

ನವರಾತ್ರಿಯ ಪೂಜೆಗಳಲ್ಲಿ ಬ್ರಹ್ಮಚಾರಿಣಿ ದೇವಿಯ ದರ್ಶನ, ಪೂಜೆಗೆ ಬಹಳ ಮಹತ್ವ ನೀಡಲಾಗುತ್ತದೆ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯ ದರ್ಶನದಿಂದ ಭಕ್ತರ ಮನೋಕಾಮನೆಗಳೆಲ್ಲಾ ಈಡೇರುತ್ತದೆ ಎನ್ನಲಾಗುತ್ತದೆ.

ಎಲ್ಲಿದೆ ಬ್ರಹ್ಮಚಾರಿಣಿ ದೇವಸ್ಥಾನ

ಎಲ್ಲಿದೆ ಬ್ರಹ್ಮಚಾರಿಣಿ ದೇವಸ್ಥಾನ

ವಾರಣಾಸಿಯ ಗಂಗಾ ನದಿಯ ದಡದಲ್ಲಿರುವ ದುರ್ಗಾ ಘಾಟ್ ಹತ್ತಿರ ಬ್ರಹ್ಮಚಾರಿಣಿ ದೇವಸ್ಥಾನವಿದೆ. ವಾರಣಾಸಿಯು ಹಲವಾರು ಪ್ರಸಿದ್ಧ ಘಾಟ್‌ಗಳಿಗೆ ನೆಲೆಯಾಗಿದೆ. ಇದು ಧಾರ್ಮಿಕ ಚಟುವಟಿಕೆಗಳು ಮತ್ತು ಉತ್ಸವಗಳಲ್ಲಿ ಸಾಂಪ್ರದಾಯಿಕ ಹಿಂದೂ ಆಚರಣೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳಾಗಿವೆ.

ಆರೋಗ್ಯವಂತರಾಗಿರಬೇಕಾದ್ರೆ ಈ ನಾಗರಾಜನಿಗೆ ಉಪ್ಪನ್ನು ಅರ್ಪಿಸಬೇಕಂತೆ!ಆರೋಗ್ಯವಂತರಾಗಿರಬೇಕಾದ್ರೆ ಈ ನಾಗರಾಜನಿಗೆ ಉಪ್ಪನ್ನು ಅರ್ಪಿಸಬೇಕಂತೆ!

ಕಠೋರ ತಪಸ್ಸು

ಕಠೋರ ತಪಸ್ಸು

ಕಠೋರ ತಪಸ್ಸು ಹಾಗೂ ಧ್ಯಾನದ ದೇವಿಯಾದ ಬ್ರಹ್ಮಚಾರಿಣಿ ರೂಪವು ಪಾರ್ವತಿ ದೇವಿಯು ಶಿವನನ್ನು ಒಲಿಸಲು ಕಠೋರ ತಪಸ್ಸು ಮಾಡಿದ ಸಮಯವಾಗಿದೆ. ಈ ಸಂದರ್ಭದಲ್ಲಿ ಪಾರ್ವತಿ ಮೊದಲಿಗೆ ಕೇವಲ ಹಣ್ಣುಗಳನ್ನು ತಿನ್ನುತ್ತಿದ್ದಳು, ಕೊನೆಗೆ ನಿರಾಹಾರ ತಪಸ್ಸು ಮಾಡಿದ್ದಳು.

 ಬೆಳಗ್ಗಿನಿಂದಲೇ ದರ್ಶನ

ಬೆಳಗ್ಗಿನಿಂದಲೇ ದರ್ಶನ

ನವರಾತ್ರಿಯ ಎರಡನೇ ದಿನ, ಹಲವಾರು ವಾರಣಾಸಿ ಸ್ಥಳೀಯರು ಮತ್ತು ಪ್ರವಾಸಿಗರು ಬ್ರಹ್ಮಚರಿಣಿ ರೂಪದಲ್ಲಿ ದುರ್ಗಾ ದೇವರ ದರ್ಶನ ಪಡೆಯಲು ಬೆಳಗ್ಗಿನಿಂದಲೇ ಬ್ರಹ್ಮಚಾರಿಣಿ ದೇವಸ್ಥಾನದಲ್ಲಿ ಭಕ್ತರು ಬೀಡು ಬಿಟ್ಟಿರುತ್ತಾರೆ.

ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ದರ್ಶನ ಮಾಡಿದ್ರೆ ವೈವಾಹಿಕ ಕಷ್ಟ ದೂರವಾಗುತ್ತಂತೆ!ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ದರ್ಶನ ಮಾಡಿದ್ರೆ ವೈವಾಹಿಕ ಕಷ್ಟ ದೂರವಾಗುತ್ತಂತೆ!

ಹೂವಿನ ಮಾಲೆ, ಶಾಲು ಅರ್ಪಿಸ್ತಾರೆ

ಹೂವಿನ ಮಾಲೆ, ಶಾಲು ಅರ್ಪಿಸ್ತಾರೆ

ಕಾಶಿಯ ಗಂಗಾನದಿಯ ತೀರದಲ್ಲಿ ಬಾಲಾಜಿ ಘಾಟ್‌ನಲ್ಲಿರುವ ಈ ಬ್ರಹ್ಮಚಾರಿಣಿ ಮಂದಿರದಲ್ಲಿ ಭಕ್ತರು ಸರದಿಯಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಾರೆ. ಭಕ್ತರು ದೇವಿಗೆ ಎಳನೀರು, ಶಾಲು, ಹೂವಿನ ಮಾಲೆ ಮುಂತಾದವುಗಳನ್ನು ಶ್ರದ್ಧಾ ಭಕ್ತಿಯಿಂದ ಅರ್ಪಿಸುತ್ತಾರೆ.

ಪರಬ್ರಹ್ಮ ಪ್ರಾಪ್ತಿ

ಪರಬ್ರಹ್ಮ ಪ್ರಾಪ್ತಿ

ಬ್ರಹ್ಮಚಾರಿಣಿ ದುರ್ಗೇಯ ಎರಡನೇ ರೂಪವಾಗಿದೆ. ಈ ದೇವಿಯು ತನ್ನ ಬಲ ಗೈಯಲ್ಲಿ ಜಪ ಮಾಲೆ ಹಾಗೂ ಎಡಗೈಯಲ್ಲಿ ಕಮಂಡಲವಿರುತ್ತದೆ. ದೇವಿಯ ಈ ಸ್ವರೂಪವನ್ನು ಆರಾಧಿಸುವವರಿಗೆ ಸಾಕ್ಷಾತ್ ಪರಬ್ರಹ್ಮ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಜೊತೆಗೆ ಯಶಸ್ಸು ಹಾಗೂ ಕೀರ್ತಿ ದೊರೆಯುತ್ತದೆ.

ಮುರುಡೇಶ್ವರ ಸಮೀಪ ಎಷ್ಟೆಲ್ಲಾ ಬೀಚ್‌ಗಳಿವೆ ಗೊತ್ತಾ? ಮುರುಡೇಶ್ವರ ಸಮೀಪ ಎಷ್ಟೆಲ್ಲಾ ಬೀಚ್‌ಗಳಿವೆ ಗೊತ್ತಾ?

ಮನೋಕಾಮನೆ ಈಡೇರುತ್ತದೆ

ಮನೋಕಾಮನೆ ಈಡೇರುತ್ತದೆ

ಇಲ್ಲಿಯ ದೇವಿಯ ದರ್ಶನ ಪಡೆಯಲು ಕಾಶಿಯಿಂದ ಮಾತ್ರವಲ್ಲ ಇತರ ಜಿಲ್ಲೆಗಳಿಂದಲೂ ಜನರು ಬರುತ್ತಾರೆ. ನವರಾತ್ರಿಯಂದು ಈ ಮಂದಿರದಲ್ಲಿ ಲಕ್ಷಾಂತರ ಜನರು ಬ್ರಹ್ಮಚಾರಿಣಿ ರೂಪವನ್ನು ನೋಡಲು ಆಗಮಿಸುತ್ತಾರೆ. ದೇವಿಯ ಈ ರೂಪದ ದರ್ಶನ ಪಡೆದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತಂತೆ.

ಕೆಂಪು ಕಲ್ಲಿನ ವಾಸ್ತುಶಿಲ್ಪ

ಕೆಂಪು ಕಲ್ಲಿನ ವಾಸ್ತುಶಿಲ್ಪ

ಈ ದೇವಾಲಯಗಳ ಕೆಂಪು ಕಲ್ಲಿನ ವಾಸ್ತುಶಿಲ್ಪವು ಉತ್ತರ ಭಾರತದ ವಿವಿಧ ದೇವಾಲಯಗಳಲ್ಲಿ ಮತ್ತು ಇತರ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕಂಡುಬರುವ ಉತ್ತರ ಭಾರತೀಯ ಶೈಲಿಯ ಮಾದರಿಯದ್ದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X