Search
  • Follow NativePlanet
Share
» »ಕಾಳರಾತ್ರಿಯನ್ನು ಆರಾಧಿಸಿದ್ರೆ ದುಷ್ಟಶಕ್ತಿ ಮೈಮೇಲೆ ನಿಲ್ಲೋದಿಲ್ಲವಂತೆ

ಕಾಳರಾತ್ರಿಯನ್ನು ಆರಾಧಿಸಿದ್ರೆ ದುಷ್ಟಶಕ್ತಿ ಮೈಮೇಲೆ ನಿಲ್ಲೋದಿಲ್ಲವಂತೆ

ನವರಾತ್ರಿಯ ಏಳನೇ ದಿನದಂದು ದುರ್ಗೆಯ ಏಳನೇ ಸ್ವರೂಪವಾದ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾಳರಾತ್ರಿಯ ವಿಶೇಷ ಮಂದಿರವೊಂದು ವಾರಣಾಸಿಯಲ್ಲಿದೆ. ಈ ಮಂದಿರದಿಂದಾಗಿ ಒಂದು ಬೀದಿಗೆ ಕಾಳಿಕಾ ಬೀದಿ ಎಂಬ ಹೆಸರಿಡಲಾಗಿದೆ. ವಾರಣಾಸಿಯಲ್ಲಿರುವ ಕಾಳರಾತ್ರಿ ಮಂದಿರಕ್ಕೆ ನವರಾತ್ರಿ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ರಕ್ಷೆಯ ದೇವಿ

ರಕ್ಷೆಯ ದೇವಿ

PC: Jonoikobangali

ಈ ದೇವಾಲಯದಲ್ಲಿ ದೇವಿಯ ಭವ್ಯ ಸ್ವರೂಪದ ದರ್ಶನವಾಗುತ್ತದೆ. ಜನರು ಒಂದು ದಿನ ಮೊದಲೇ ದೇವಿಯ ದರ್ಶನಕ್ಕಾಗಿ ಕಾದು ಕುಳಿತಿರುತ್ತಾರೆ. ಕಾಳರಾತ್ರಿಯನ್ನು ಶತ್ರು ನಾಶಕ ಅಥವಾ ರಕ್ಷೆಯ ದೇವಿ ಎನ್ನಲಾಗುತ್ತದೆ.

ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

ದುಷ್ಟಶಕ್ತಿ ಪ್ರವೇಶಿಸಲಾಗೋದಿಲ್ಲ

ದುಷ್ಟಶಕ್ತಿ ಪ್ರವೇಶಿಸಲಾಗೋದಿಲ್ಲ

PC: Mukerjee

ಯಾವುದೇ ವ್ಯಕ್ತಿಯ ಮೇಲೆ ಕೆಟ್ಟ ಶಕ್ತಿ ಇದ್ದರೆ ಆ ದೇವಸ್ಥಾನದಲ್ಲಿ ನಿಲ್ಲೋದು ಅಸಾಧ್ಯವಂತೆ. ಆ ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ದುಷ್ಟ ಶಕ್ತಿ ಗೋಚರಿಸುತ್ತದಂತೆ.

ತೆಂಗಿನಕಾಯಿ ಬಲಿ

ತೆಂಗಿನಕಾಯಿ ಬಲಿ

PC:Mughal Artist

ಇಲ್ಲಿ ದೇವಿಗೆ ಹಳೆಯ ಸಂಪ್ರದಾಯದ ಪ್ರಕಾರ ಬಲಿ ನೀಡಲಾಗುತ್ತದೆ. ತೆಂಗಿನಕಾಯಿಯನ್ನೇ ಜೀವ ಎಂದು ತಿಳಿದು ಬಲಿ ನೀಡಲಾಗುತ್ತದೆ. ಜನರು ತೆಂಗಿನಕಾಯಿಯನ್ನು ಅರ್ಪಿಸಿ ತಮ್ಮ ಮನೋಕಾಮನೆಯನ್ನು ಬೇಡುತ್ತಾರೆ. ಅಷ್ಟೇ ಅಲ್ಲದೆ ದೇವಿಗೆ ಶಾಲು, ದಾಸವಾಳ ಹೂವಿನ ಮಾಲೆಯನ್ನು ಅರ್ಪಿಸುತ್ತಾರೆ ಜೊತೆಗೆ ಮೃಷ್ಟಾನ್ನದ ನೈವೇದ್ಯವನ್ನು ಅರ್ಪಿಸುತ್ತಾರೆ.

ಧೋನಿಯ ಹುಟ್ಟೂರಿನಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿದ್ದೀರಾ?

 ಶತ್ರುಗಳ ನಾಶ

ಶತ್ರುಗಳ ನಾಶ

ಕಾಳರಾತ್ರಿಯು ಚಾಮುಂಡ, ಚಂಡಿಯ ಸ್ವರೂಪಳಾಗಿದ್ದು ಶತ್ರುಗಳನ್ನು ನಾಶ ಮಾಡುತ್ತಾಳೆ. ಅಜ್ಞಾತ ಶತ್ರುಗಳನ್ನೂ ನಾಶ ಮಾಡುತ್ತಾಳೆ. ದಾಸವಾಳ ಹೂ ಹಾಗೂ ತೆಂಗಿನಕಾಯಿ ಅರ್ಪಿಸುವ ಸಂಪ್ರದಾಯ ಬಹಳ ಅನಾದಿಕಾಲದಿಂದಲೂ ಬಂದಿದ್ದು ಎನ್ನಲಾಗುತ್ತದೆ. ಆದರೆ ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು ಎನ್ನುವುದನ್ನು ಹೇಳಲು ಸಾಧ್ಯವಿಲ್ಲ.

ಇಂಧೋರ್‌ನ ಕಾಳರಾತ್ರಿ

ಇಂಧೋರ್‌ನ ಕಾಳರಾತ್ರಿ

ಮಧ್ಯಪ್ರದೇಶದ ಇಂಧೋರ್‌ನಲ್ಲಿ ಕಾಳರಾತ್ರಿಯ ಮಂದಿರವೊಂದಿದೆ. ಇಲ್ಲಿ ಫೂಜೆ ಮಾಡಿದ್ರೆ ಮಕ್ಕಳಾಗದ ದಂಪತಿಗಳಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತಂತೆ. ಇಲ್ಲಿಗೆ ಬರುವ ಮಾತೆಯರು ಸಂತಾನ ಪ್ರಾಪ್ತಿಗಾಗಿ ಮೂರು ತೆಂಗಿನಕಾಯಿಯನ್ನು ದೇವಿಗೆ ಅರ್ಪಿಸಿ ಸಂತಾನ ಪ್ರಾಪ್ತಿಗೆ ಬೇಡಿಕೊಳ್ಳುತ್ತಾರೆ.

ಕಾತ್ಯಾಯಿನಿ ವೃತ ಮಾಡಿದ್ರೆ ಇಷ್ಟಪಟ್ಟ ಬಾಳಸಂಗಾತಿ ಸಿಗ್ತಾರಂತೆ

ಸಂತಾನ ಪ್ರಾಪ್ತಿ

ಸಂತಾನ ಪ್ರಾಪ್ತಿ

ಇಲ್ಲಿಯ ಪೂಜಾರಿ ಭಕ್ತರಿಗೆ ಒಂದು ಮಂತ್ರಿಸಿದ ದಾರವನ್ನು ನೀಡುತ್ತಾರೆ. ಅದನ್ನು ಕೊರಳಿಗೆ ಕಟ್ಟಬೇಕು. ಒಂದು ವೇಳೆ ನಿಮ್ಮ ಮನೋಕಾಮನೆ ಪೂರ್ಣವಾದರೆ ನಿಯಮದ ಪ್ರಕಾರ ಐದು ತೆಂಗಿನಕಾಯಿಯನ್ನು ದೇವಾಲಯದ ಮರಕ್ಕೆ ಕಟ್ಟಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X