Search
  • Follow NativePlanet
Share
» »ಕೈಮೂರು ಶ್ರೇಣಿಯ ನೈಸರ್ಗಿಕ ತಾಣಗಳನ್ನೊಮ್ಮೆ ನೋಡಿ

ಕೈಮೂರು ಶ್ರೇಣಿಯ ನೈಸರ್ಗಿಕ ತಾಣಗಳನ್ನೊಮ್ಮೆ ನೋಡಿ

By Manjula Balaraj Tantry

ಬಿಹಾರವು ಅನೇಕ ಪ್ರಾಚೀನ ಸ್ಥಳಗಳ ನೆಲೆಯಾಗಿದೆ. ಭಾರತದ ಇತಿಹಾಸವು ಇಂತಹ ಸಾಂಸ್ಕ್ರೃತಿಕ ಮತ್ತು ಅತ್ಯಂತ ಪ್ರಾಚೀನ ಸ್ಥಳಗಳ ಸರಹದ್ದಿನಿಂದಲೇ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಆದರೂ ಬಿಹಾರವು ಕೆಲವು ಬೆಟ್ಟಗಳ ಶ್ರೇಣಿಗಳು ಮತ್ತು ಜಲಪಾತಗಳನ್ನು ತನ್ನಲ್ಲಿ ಹೊಂದಿದೆ ಎಂಬುದು ಕೆಲವರಿಗೆ ಇನ್ನೂ ತಿಳಿಯದೇ ಇರುವ ಸಂಗತಿಯಾಗಿದೆ. ನೀವೆಂದಾದರೂ ನೈಸರ್ಗಿಕ ಸೌಂದರ್ಯತೆಯು ಇನ್ನೂ ತನ್ನ ಹೊಸತೆನ್ನುವಂತಹ ರೂಪದಲ್ಲಿರುವುದನ್ನು ನೋಡಿರುವಿರ? ಇಲ್ಲವಾದಲ್ಲಿ, ಈ ಲೇಖನವು ನಿಮಗಾಗಿ, ಬಿಹಾರಿನ ಕೈಮೂರ್ ಜಿಲ್ಲೆಯಲ್ಲಿರುವ ನೈಸರ್ಗಿಕ ಸ್ಥಳಗಳ ಬಗ್ಗೆ ಓದಿ.

ಕೈಮೂರ್ ಶ್ರೇಣಿ

ಕೈಮೂರ್ ಶ್ರೇಣಿ

ಮಧ್ಯ ಪ್ರದೇಶದಿಂದ ಪ್ರಾರಂಭವಾಗಿ ಬಿಹಾರದವರೆಗೆ 483 ಕಿ.ಮೀ. ದೂರದವರೆಗೆ ಹರಡಿಕೊಂಡಿರುವ. ಬಿಹಾರದ ಅತ್ಯಂತ ಶ್ರೀಮಂತ ಪ್ರದೇಶಗಳಲ್ಲಿ ಕೈಮೂರ್ ಶ್ರೇಣಿಯೂ ಒಂದು. ಇದು ವಿಂಧ್ಯಾ ಪರ್ವತ ಶ್ರೇಣಿಯ ಭಾಗವಾಗಿದೆ. ದಟ್ಟವಾದ ಕಾಡುಗಳು ಮತ್ತು ಹಚ್ಚ ಹಸಿರು ಬಯಲು ಪ್ರದೇಶಗಳಿಂದ ಆವೃತವಾಗಿರುವ ಕೈಮೂರ್ ಶ್ರೇಣಿಯು ಅನೇಕ ಧುಮ್ಮಿಕ್ಕುವಂತಹ ಜಲಪಾತಗಳಿಗೂ ನೆಲೆಯಾಗಿದೆ. ಹಲವಾರು ನದಿಗಳಿಗೆ ತನ್ನ ಭೂಪ್ರದೇಶವನ್ನು ಕೆಳಕ್ಕೆ ಹರಿಯಲು ದಾರಿಗಳನ್ನು ನೀಡುವ ಮೂಲಕ, ಕೈಮೂರ್ ಶ್ರೇಣಿಯು ವನ್ಯಜೀವಿ ಮತ್ತು ನೈಸರ್ಗಿಕ ಸಸ್ಯವರ್ಗದ ಶ್ರೀಮಂತಿಕೆಯಿಂದಾಗಿ ಬಿಹಾರ ರಾಜ್ಯದ ಅನ್ವೇಷಣೆಗೆ ಯೋಗ್ಯವಾದ ಒಂದು ನಿರ್ದಿಷ್ಟ ಸ್ಥಳವಾಗಿದೆ. ಕೈಮೂರ್ ಶ್ರೇಣಿಯ ಬೆಟ್ಟಗಳಲ್ಲಿ ಹಲವಾರು ಇತಿಹಾಸಪೂರ್ವ ಶಿಲೆಯಲ್ಲಿ ಕೆತ್ತಲಾದ (ರಾಕ್ ಕಟ್) ವರ್ಣಚಿತ್ರಗಳನ್ನು ಸಹ ನೀವು ಕಾಣಬಹುದು.

ಕೈಮೂರ್ ವನ್ಯಜೀವಿ ಅಭಯಾರಣ್ಯ

ಕೈಮೂರ್ ವನ್ಯಜೀವಿ ಅಭಯಾರಣ್ಯ

ಬಿಹಾರದ ಕೈಮೂರ್ ನಲ್ಲಿರುವ ಇನ್ನೊಂದು ಸೌಂದರ್ಯತೆಯೆಂದರೆ ವನ್ಯಜೀವಿ ಅಭಯಾರಣ್ಯ ಇರುವುದು. ಇದು ಅನೇಕ ಅಳಿವಂಚಿನಲ್ಲಿರುವ ಅನೇಕ ಅಪರೂಪದ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಇದು ಕೈಮೂರು ಜಿಲ್ಲಿಯ ಭಾಬುವಾಭಬುವಾ ನಗರದ ಹತ್ತಿರದಲ್ಲಿದೆ. ಇಲ್ಲಿ ಪ್ರಾಣಿಗಳು ಮತ್ತು ಸಸ್ಯಗಳನ್ನು ಪತ್ತೆ ಹಚ್ಚುವುದಲ್ಲದೆ ಅನೇಕ ಸರೋವರಗಳನ್ನು ಕೂಡಾ ಇದರ ಗಡಿಯಲ್ಲಿ ಕಾಣಬಹುದಾಗಿದೆ ಅವುಗಳಲ್ಲಿ ಅನುಪಮ್ ಸರೋವರವೂ ಒಂದು. ಈ ಸುಂದರವಾದ ಅಭಯಾರಣ್ಯದಲ್ಲಿ ಕಂಡುಬರುವ ಪ್ರಮುಖ ಜಾತಿಯ ಪ್ರಾಣಿಗಳೆಂದರೆ ಬಂಗಾಳ ಹುಲಿಗಳು, ಕರಡಿಗಳು ಮತ್ತು ನೀಲ್ ಗೈಗಳು. ಇ ಸಂರಕ್ಷಿತವಾದ ಪ್ರದೇಶವು ಅನೇಕ ವರ್ಣಮಯ ಪಕ್ಷಿಗಳನ್ನೂ ಹೊಂದಿದೆ. ಅವುಗಳಲ್ಲಿ ಕ್ವಿಲ್, ಸ್ವಾಲೋ, ಮತ್ತು ಫಾಲ್ಕನ್ ಮುಂತಾದುವುಗಳು ಸೇರಿದ್ದು ಈ ಪಕ್ಷಿಗಳು ಈ ಪ್ರದೇಶವನ್ನು ತಮ್ಮ ಕಲರವವು ಸುಗಮವಾಗಿ ಕೇಳಿ ಬರುವಂತೆ ಮಾಡುತ್ತವೆ.

ಕರ್ಕಾಟ್ ಜಲಪಾತ

ಕರ್ಕಾಟ್ ಜಲಪಾತ

ಕರ್ಕಾಟ್ ಜಲಪಾತವು ಬಿಹಾರ ರಾಜ್ಯದ ಒಂದು ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದಾಗಿದೆ. ಇದು ಕೈಮೂರ್ ಶ್ರೇಣಿಯಲ್ಲಿದ್ದು ಜಲಪಾತದ ಸುತ್ತ ಮುತ್ತಲಿನ ಪರಿಸರವು ಶಾಂತವಾಗಿ ಮತ್ತು ರೋಮಾಂಚಕವಾಗಿದೆ. ಇದು ಒಂದು ವಿಭಜಿತ ಜಲಪಾತವಾಗಿರುವುದರಿಂದ, ತಳದಲ್ಲಿ ರಚಿಸಲಾದ ದೊಡ್ಡ ಕೊಳವು ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ದೋಣಿವಿಹಾರ, ಈಜು ಮತ್ತು ಅದರ ನೀರಿನಲ್ಲಿ ಮೀನುಗಾರಿಕೆಗೆ ಹೋಗಲು ಅವಕಾಶ ನೀಡುತ್ತದೆ. ಬಿಹಾರಿನ ಈ ಜಲಪಾತದ ರೂಪದ ಅದ್ಬುತವನ್ನು ನೋಡಿದ ಮೇಲೆ ನೀವು ಖಚಿತವಾಗಿಯು ಆಶ್ಚರ್ಯಚಕಿತರಾಗುವುದಲ್ಲಿ ಸಂಶಯವಿಲ್ಲ.

ತೆಲ್ಹಾರ್ ಜಲಪಾತ

ತೆಲ್ಹಾರ್ ಜಲಪಾತ

ಕೈಮೂರ್ ನ ಭವ್ಯವಾದ ಹಸಿರಿನ ಸೌಂದರ್ಯತೆಯ ಮಧ್ಯೆ ಇರುವ ಇನ್ನೊಂದು ಸೌಂದರ್ಯವೆಂದರೆ ಅದು ತೆಲ್ಹಾರ್ ಜಲಪಾತ. ಇದು ದುರ್ಗಾವತಿ ನದಿಯ ಮೂಲದಲ್ಲಿ ನೆಲೆಸಿದ್ದು ಇದರ ಆರಾಮದಾಯಕ ಮತ್ತು ಹಿತವಾದ ಪರಿಸರದ ಕಾರಣದಿಂದಾಗಿ ಈ ಜಲಪಾತವು ಬಿಹಾರಿನಲ್ಲಿ ಒಂದು ಸೂಕ್ತವಾದ ಪಿಕ್ನಿಕ್ ತಾಣವೆನಿಸಿದೆ. ನೀವು ಇಲ್ಲಿಗೆ ಹತ್ತಿರವಿರುವ ಬೆಟ್ಟಗಳು ಮತ್ತು ಅನೇಕ ದೇವಾಲಯಗಳಿಗೂ ಭೇಟಿ ಕೊಡಬಹುದಾಗಿದೆ ದೇವಾಲಯಗಳಲ್ಲಿ ಮಾ ಮುಂದೇಶ್ವರಿ ದೇವಾಲಯವು ಸೇರಿದೆ. ಈ ಜಲಪಾತಗಳ ಶಾಂತಿಯುತವಾದ ಮತ್ತು ಹಿತವಾದ ನೀರಿನ ಸೌಂದರ್ಯತೆಯನ್ನು ಅನ್ವೇಷಿಸುವುದರ ಹೊರತಾಗಿಯೂ ನೀವು ಇಲ್ಲಿ ಕೆಲವು ಸುಂದರವಾದ ಪಕ್ಷಿಗಳನ್ನು ನೋಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X