Search
  • Follow NativePlanet
Share
ಮುಖಪುಟ » ಸ್ಥಳಗಳು» ಕೈಮೂರ್

ಕೈಮೂರ್: ಆನಂದದ ನಗರ

30

ಬಿಹಾರದ ಅತ್ಯಂತ ಸುಂದರವಾದ ಮತ್ತು ಪಾರಂಪರಿಕ ನಗರಗಳಲ್ಲಿ ಕೈಮೂರ್ ಬಹಳ್ ಮಹತ್ವದ ಸ್ಥಾನ ಪಡೆದಿದೆ. ಜಿಲ್ಲಾ ಕೇಂದ್ರ ಸ್ಥಳವನ್ನಾಗಿ ಭಬುವಾ ವನ್ನು ಪಡೆದಿರುವ ಜಿಲ್ಲೆ ಕೈಮೂರ್ ಬಿಹಾರದ ಪಶ್ಚಿಮ ಭಾಗದಲ್ಲಿ ಇದೆ. ಇಲ್ಲಿನ ಪ್ರಸ್ಥಭೂಮಿ ಮತ್ತು ಬಯಲು ಪ್ರದೇಶವನ್ನು ಕೈಮೂರ್ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಇಲ್ಲಿನ ಬಯಲು ಪ್ರದೇಶ ಮೆಕ್ಕಲು ಮಣ್ಣಿನಿಂದ ಆವೃತ್ತವಾಗಿದ್ದರೆ ಪ್ರಸ್ಥಭೂಮಿ ಕಲ್ಲುಗಳಿಂದ ಕೂಡಿದೆ. ಕರ್ಮನಾಶ, ದುರ್ಗಾವತಿ, ಮತ್ತು  ಕುದ್ರಾ ನದಿಗಳು ಈ ಜಿಲ್ಲೆಯ ಗಡಿಗಳಾಗಿವೆ.

ಕ್ರಿ. ಪೂ. 6 ಮತ್ತು ಕ್ರಿ. ಪೂ 5 ರ ಹೊತ್ತಿನಲ್ಲಿ ಕೈಮೂರ್ ಮಗಧ ರಾಜ್ಯದ ಒಂದ ಭಾಗವಾಗಿತ್ತು. ಇದನ್ನು ಮೌರ್ಯರ ಹಿಂದಿನ ಮತ್ತು ಗುಪ್ತರ ನಂತರದ ದೊರೆಗಳು ಆಲ್ವಿಕೆ ನಡೆಸಿದ್ದರು. ಕೈಮೂರ್ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೀಡಿದ ಕೊಡುಗೆಯೂ ಬಹಳ ಅಪಾರವಾಗಿದೆ.

ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಕೈಮೂರ್ ವನ್ಯಜೀವಿ ಧಾಮ, ಬೈದ್ಯನಾಥ್, ಮಾ ಮುಂಡೇಶ್ವರಿ ದೇವಾಲಯ, ಚೋರ್ಘಾಟಿಯಾ, ಕರ್ಮಾನಾಸಾ ನದಿ, ಸಿದ್ಧಾಂತ್ ದೇವಾಲಯ ಮತ್ತು ಇನ್ನಿತರ ಸ್ಥಳಗಳು. ಇದು ಎಲ್ಲಾ ತರಹದ ಆಸಕ್ತಿಯುಳ್ಳ ಜನರಿಗೂ ಒಂದಲ್ಲ ಒಂದು ವಿಷಯವನ್ನು ಹೊಂದಿದೆ ಇಲ್ಲಿಗೆ ಬಂದ ಯಾರೂ ನಿರಾಸರಾಗಿ ಹೊಗುವ  ಅಗತ್ಯವಿಲ್ಲ.

ದೇವಾಲಯಗಳು, ಕೋಟೆಗಳು, ಬೆಟ್ಟಗಳು, ಅರಣ್ಯ, ಜಲಪಾತಗಳು ಮತ್ತು ಇನ್ನಿತರ ಮನಮೋಹಕ ಸ್ಥಳಗಳ ತಾಣ ಕೈಮೂರ್ ಆಗಿದೆ. ಇಲ್ಲಿ ವಾಯುಗುಣದಲ್ಲೂ ಸಾಕಷ್ಟು ವೈವಿಧ್ಯ ಇದೆ. ಇಲ್ಲಿನ ಬೇಸಗೆಗಳು ಸುಡುವಂತಿದ್ದರೆ ಚಳಿಗಾಲ ಬಹಳವೇ ತಣ್ಣಗಿರುತ್ತದೆ ಹಾಗೂ ಅಕ್ಟೋಬರ್ ನಿಂದ ಮಾರ್ಚ ತನಕದ ಅವಧಿಯನ್ನು ಭೇಟಿಗೆ ಅತ್ಯುತ್ತಮವಾದ ಅವಧಿಯನ್ನಾಗಿ ಮಾಡುತ್ತದೆ. ಇಲ್ಲಿ ರೈಲು ಸಂಪರ್ಕ ಸಮರ್ಪಕವಾಗಿದೆ ರಸ್ತೆಗಳು ಕೂಡ ಉತ್ತಮ ಸ್ಥಿತಿಯಲ್ಲಿವೆ. ಹಾಗೂ ವಿಮಾನ ಮಾರ್ಗದಲ್ಲಿ ತಲುಪುವವರಿಗಾಗಿ ವಾರಣಾಸಿ, ಗಯಾ ಮತ್ತು ಪಟ್ನಾ ದಲ್ಲಿ ವಿಮಾನ ನಿಲ್ದಾಣಗಳಿವೆ. ಹಲವು ಹಿಂದೂ ಹಬ್ಬಗಳು ಮತ್ತು ಉತ್ಸವಗಳಿಗೆ ಕೈಮೂರ್ ಪ್ರಧಾನ ಸ್ಥಳವಾಗಿದೆ. ದೊಡ್ಡ ಸಂಖ್ಯೆಯ ಹಿಂದೂ ಯಾತ್ರಿಗಳು ಇಲ್ಲಿ ಹಬ್ಬಗಳನ್ನು ಆಚರಿಸಲು ಆಗಮಿಸುತ್ತಾರೆ.

ಹಾಗಾದರೆ ಕೈಮೂರ್ ಭೇಟಿಗೆ ಉತ್ತಮವಾದ ಅವಧಿ ಯಾವುದು?

ಕೈಮೂರ್ ಎಲ್ಲಾ ಋತುಮಾನಗಳನ್ನೂ ಬಹಳ ತೀವ್ರವಾಗಿ ಅನುಭವಿಸುತ್ತದೆ. ಇದು ಪ್ರವಾಸಿಗಳ ಯೋಜನೆಗಳನ್ನು ಬುಡಮೇಲು ಮಾಡುವ ಸಾಧ್ಯತೆಗಳಿವೆ. ಅಕ್ಟೋಬರ್ ನಿಂದ ಮಾರ್ಚ್  ತಿಂಗಳ ಕಾಲ ಇಲ್ಲಿನ ಭೇಟಿಗೆ ಸರಿಯಾದ ಸಮಯ. ಈ ಅವಧಿಯಲ್ಲಿ ಅತಿ ಕಡಿಮೆ ವಾಯುಗುಣ ವೈಪರಿತ್ಯಗಳನ್ನು ಕಾಣಬಹುದಾಗಿದೆ.

ಕೈಮೂರ್ ಅನ್ನು ತಲುಪುವುದು ಹೇಗೆ?

ರಸ್ತೆ ಮತ್ತು ರೈಲು ಮಾರ್ಗವಾಗಿ ನೇರವಾಗಿ ಕೈಮೂರ್ ಅನ್ನು ತಲುಪಬಹುದಾಗಿದೆ. ವಾರಣಾಸಿ ಕೈಮೂರ್ ಗೆ ಅತ್ಯಂತ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ.

ಕೈಮೂರ್ ಪ್ರಸಿದ್ಧವಾಗಿದೆ

ಕೈಮೂರ್ ಹವಾಮಾನ

ಉತ್ತಮ ಸಮಯ ಕೈಮೂರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೈಮೂರ್

  • ರಸ್ತೆಯ ಮೂಲಕ
    ಕೈಮೂರ್ ಪಟ್ನಾ ದಿಂದ 180 ಕಿ.ಮೀ ಮತ್ತು ವಾರಣಾಸಿ ಯಿಂದ 60 ಕಿ.ಮೀ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 30 ಕೈಮೂರ್ ಅನ್ನು ಆಗ್ರಾದ ಮೂಲಕವಾಗಿ ರಾಜಧಾನಿ ಪಟ್ನಾ ಗೆ ಸಂಪರ್ಕಿಸುತ್ತದೆ. ಇದನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಇನ್ನೂ ಕೆಲವು ರಾಜ್ಯ ಹೆದ್ದಾರಿಗಳು ಇವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮೊಹಾನಿಯಾ ಇಲ್ಲಿನ ಒಂದೇ ಒಂದು ಪ್ರಮುಖ ರೈಲ್ವೆ ನಿಲ್ದಾಣವಾಗಿದೆ. ಮುಘಲ್ ಸರಿ ಪ್ರದೇಶದಲ್ಲಿರುವ ಈ ಹೌರಾ ನವದೆಹಲಿ ಗ್ರಾಂಡ್ ಕಾರ್ಡ್ ರಸ್ತೆಯಲ್ಲಿರುವ ಈ ನಿಲ್ದಾನವನ್ನು ಭಬುವಾ ರಸ್ತೆ ಎಂದೂ ಕರೆಯಲಾಗುತ್ತದೆ. ದೇಶದ ಎಲ್ಲಾ ಪ್ರಮುಖ ರಾಜ್ಯಗಳ ಪ್ರಮುಖ ನಗರಗಳಿಂದ ಬರುವ ರೈಲುಗಳು ಈ ನಿಲ್ದಾಣದ ಮೂಲಕವೇ ಹಾದು ಹೋಗುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೈಮೂರ್ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇಲ್ಲಿಗೆ ವಾಯು ಮಾರ್ಗವಾಗಿ ಬರಲು ಇಚ್ಛಿಸುವ ಪ್ರಯಾಣಿಕರು ವಾರಣಾಸಿಯ ಮೂಲಕ ಕೈಮೂರ್ ಗೆ ತಲುಪಬಹುದಾಗಿದೆ. ವಿಮಾನ ನಿಲ್ದಾಣಗಳಿರುವ ನಗರಗಳಲ್ಲಿ ವಾರಣಾಸಿ ಅತ್ಯಂತ ಸಮೀಪವಿರುವ ನಗರವಾಗಿದ್ದು 60 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu