Search
  • Follow NativePlanet
Share
» »ನಂದಾ ದೇವಿ ಎಂಬ ರಮಣೀಯ ಪರ್ವತ

ನಂದಾ ದೇವಿ ಎಂಬ ರಮಣೀಯ ಪರ್ವತ

By Vijay

ಪರ್ವತ, ಶಿಖರಗಳು ಮನುಷ್ಯನಲ್ಲಿ ಯಾವಾಗಲೂ ಕುತೂಹಲ ಉಂಟು ಮಾಡುವ ಪ್ರಾಕೃತಿಕ ರಚನೆಗಳಾಗಿವೆ. ಅಷ್ಟೆ ಅಲ್ಲ, ನಮ್ಮ ಸನಾತನ ಹಿಂದೂ ಧರ್ಮದ ಪುರಾಣ, ಪುಣ್ಯ ಕಥೆಗಳಲ್ಲಿ ಪರ್ವತಗಳಿಗೂ ಸಹ ವಿಶೇಷವಾದ ಸ್ಥಾನಮಾನಗಳನ್ನು ಕೊಟ್ಟಿರುವುದನ್ನು ನಾವು ಗಮನಿಸಬಹುದಾಗಿದೆ.

ವಿಶೇಷ ಲೇಖನ : ಅತಿ ಎತ್ತರದ ಗಿರಿ ಶಿಖರಗಳು

ನಂದಾ ದೇವಿ ಎಂಬ ರಮಣೀಯ ಪರ್ವತ

sporadic

ನಂದಾದೇವಿ ಭಾರತದಲ್ಲಿ ಕಂಡುಬರುವ ಪರ್ವತಗಳಲ್ಲಿ ಎರಡನೆಯ ಅತಿ ಎತ್ತರದ ಪರ್ವತ ಶಿಖರವಾಗಿದೆ. ಇನ್ನು ಕೇವಲ ಭಾರತ ದೇಶದ ಪರೀಧಿಯಲ್ಲಿ ಮಾತ್ರವೆ ಇರುವ ಪರ್ವತಗಳಿಗೆ ಹೋಲಿಸಿದಾಗ ನಂದಾ ದೇವಿ ಪರ್ವತ ಅತ್ಯುನ್ನತ ಪರ್ವತವಾಗಿ ಹೊರ ಹೊಮ್ಮುತ್ತದೆ. ಕಂಚನಜುಂಗಾ ಈ ನಿಟ್ಟಿನಲ್ಲಿ ಮೊದಲ ಪರ್ವತವಾಗಿದ್ದು ನೇಪಾಳದವರೆಗೂ ಚಾಚಿದೆ.

ನಂದಾ ದೇವಿ ಎಂಬ ರಮಣೀಯ ಪರ್ವತ

Paul Hamilton

ನಂದಾ ದೇವಿ ಪರ್ವತವು ಉತ್ತರಾಖಂಡ ರಾಜ್ಯದ ಕುಮಾವೂನ್ ಹಿಮಾಲಯ ಪ್ರದೇಶದ ರಿಷಿಗಂಗಾ ಕಣಿವೆಯ ಪಶ್ಚಿಮಕ್ಕೆ ಮತ್ತು ಗೋರಿಗಂಗಾ ಕಣಿವೆಯ ಪೂರ್ವಕ್ಕೆ ನೆಲೆ ನಿಂತಿರುವುದನ್ನು ಕಾಣಬಹುದಾಗಿದೆ. ಮೂಲತಃ ನಂದಾದೇವಿ ಪರ್ವತದಲ್ಲಿ ಎರಡು ಶಿಖರಗಳನ್ನು ಕಾಣಬಹುದಾಗಿದೆ. ಇವುಗಳನ್ನು ಪ್ರತ್ಯೇಕವಾಗಿ ನಂದಾದೇವಿ ಈಸ್ಟ್ ಹಾಗೂ ನಂದಾದೇವಿ ವೆಸ್ಟ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

ವಿಶೇಷ ಲೇಖನ : ಪ್ಯಾಂಗಾಂಗ್ ಎಂಬ ಮೋಹಕ ಸರೋವರ

ನಂದಾ ದೇವಿ ಎಂಬ ರಮಣೀಯ ಪರ್ವತ

Anirban c8

ನಂದಾದೇವಿ ಪೂರ್ವ ಶಿಖರವು 24,390 ಅಡಿಗಳಷ್ಟು ಎತ್ತರವಿದ್ದರೆ, ನಂದಾದೇವಿ ಪಶ್ಚಿಮ ಶಿಖರವು 25,642 ಅಡಿಗಳಷ್ಟು ಎತ್ತರವನ್ನು ಹೊಂದಿದೆ. ಇವೆರಡನ್ನೂ ಒಟ್ಟಾಗಿ ನಂದಾ ದೇವತೆಯ ಅವಳಿ ಶಿಖರಗಳೆಂದು ಕರೆಯಲಾಗುತ್ತದೆ. ವಿಶ್ವದಲ್ಲೆ 23 ನೇಯ ಅತಿ ಎತ್ತರದ ಶಿಖರವಾಗಿರುವ ನಂದಾದೇವಿಯು ತನ್ನ ಅತಿ ಕಡಿದಾದ ಮೇಲ್ಮೈಗೆ ಹೆಸರುವಾಸಿಯಾಗಿದೆ.

ನಂದಾ ದೇವಿ ಎಂಬ ರಮಣೀಯ ಪರ್ವತ

Ekabhishek

ಪರ್ವತದ ಉತ್ತರಕ್ಕೆ ಉತ್ತರಿ ನಂದಾದೇವಿ ಎಂಬ ಹೆಸರಿನ ಹಿಮನದಿಯಿದೆ. ಈ ಹಿಮನದಿಯು ಮುಂದೆ ಉತ್ತರಿ ರಿಷಿ ಎಂಬ ಇನ್ನೊಂದು ಹಿಮನದಿಯನ್ನು ಕೂಡಿಕೊಳ್ಳುತ್ತದೆ. ಇನ್ನು ಪರ್ವತದ ದಕ್ಷಿಣ ದಿಕ್ಕಿಗೆ ದಖ್ಖನಿ ನಂದಾದೇವಿ ಎಂಬ ಹೆಸರಿನ ಹಿಮನದಿಯಿದೆ. ಇದು ಕೂಡ ಮುಂದೆ ದಖ್ಖನಿ ರಿಷಿ ಹಿಮನದಿಯನ್ನು ಕೂಡಿಕೊಳ್ಳುತ್ತದೆ. ಈ ಎರಡೂ ಹಿಮನದಿಗಳು ಒಟ್ಟಾರೆಯಾಗಿ ಸೇರಿ ರಿಷಿಗಂಗಾ ನದಿಯ ಉಗಮಸ್ಥಳವಾಗಿದೆ.

ನಂದಾ ದೇವಿ ಎಂಬ ರಮಣೀಯ ಪರ್ವತ

Michael Scalet

ನಂದಾದೇವಿ ಪರ್ವತದ ಪೂರ್ವಕ್ಕೆ ಪಾಚು ಹೆಸರಿನ ಹಿಮನದಿ, ನೈರುತ್ಯಕ್ಕೆ ನಂದಾಘಂಟಿ ಹಾಗೂ ಲವಣ ಹಿಮನದಿಗಳಿದ್ದು ಕರಗಿದಾಗ ಇದರ ನೀರು ಮೀಲಂ ಕಣಿವೆಯಲ್ಲಿ ಹರಿಯುತ್ತದೆ. ದಕ್ಷಿಣದಲ್ಲಿ ಪಿಂಡರಿ ಹಿಮನದಿಯಿದ್ದು, ಪಿಂಡರಿ ನದಿಯಲ್ಲಿ ಸೇರಿಕೊಳ್ಳುತ್ತದೆ. ನಂದಾದೇವಿಯ ಪೂರ್ವದ ದಕ್ಷಿಣಕ್ಕೆ ಎತ್ತರದ ರಹದಾರಿ (ಪಾಸ್) ಇದ್ದು ನಂದಾದೇವಿ ಅಭಯಾರಣ್ಯಕ್ಕೆ ಹೆಬ್ಬಾಗಿಲಾಗಿದೆ.

ನಂದಾದೇವಿ ರಾಷ್ಟ್ರೀಯ ಉದ್ಯಾನ / ಅಭಯಾರಣ್ಯದಿಂದ ನಂದಾದೇವಿ ಪರ್ವತದ ಅದ್ವಿತೀಯ ನೋಟಗಳು ನೋಡಲು ಲಭಿಸುತ್ತವೆ.

ವಿಶೇಷ ಲೇಖನ : ಹಿಮಾಲಯನ್ ರಾಷ್ಟ್ರೀಯ ಉದ್ಯಾನ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more