Search
  • Follow NativePlanet
Share
» »ನಾಗರಪಂಚಮಿಯಂದು ಇಲ್ಲಿ ಪೂಜಿಸದರೆ ಶೀಘ್ರವಾಗಿ ಸಂತಾನ ಫಲ ಪಡೆಯಬಹುದು

ನಾಗರಪಂಚಮಿಯಂದು ಇಲ್ಲಿ ಪೂಜಿಸದರೆ ಶೀಘ್ರವಾಗಿ ಸಂತಾನ ಫಲ ಪಡೆಯಬಹುದು

ನಾಗಪಂಚಮಿ ಬರುತ್ತಿದೆ. ಹೀಗಾಗಿ ನಾಗಗಳು ದೇಶದ ಪ್ರಮುಖ ದೇವತೆಗಳಾಗಿದ್ದು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಾಲಯಗಳಿಗೆ ಹೋಗುತ್ತಾರೆ. ನಾಗಗಳು ಕೂಡ ಭಕ್ತರ ಇಚ್ಛೆಯನ್ನು ಆರಾಧಿಸುತ್ತಾರೆ. ಈ ನಾಗ ದೇವತೆಗಳ ದೇವಾಲಯಗಳು ಭಾರತ‌ ದೇಶದಾದ್ಯಂತ ಇರುವುದನ್ನು ಕಾಣಬಹುದು. ನಾಗ ಪಂಚಮಿಯಂದು ವಿಶೇಷವಾಗಿ ಭಕ್ತರು ನಾಗಗಳಿಗೆ ಆರಾಧನೆಯನ್ನು ಮಾಡಿ ನಾಗದೇವತೆಗಳಿಂದ ಕ್ರಪಾಕಾಟಾಕ್ಷಕ್ಕೆ ಪಾತ್ರರಾಗುತ್ತಾರೆ.

ಅದರಲ್ಲಿಯೂ ಸಂತಾನ ಪ್ರಾಪ್ತಿಗಾಗಿ ಭಕ್ತರು ನಾಗ ದೇವತೆಗಳಿಗೆ ಆರಾಧನೆ ಮಾಡುತ್ತಾರೆ. ಒಂದು ನಾಗ ದೇವತೆಗಳ‌ ಮಹಿಮಾನ್ವಿತವಾದ ದೇವಾಲಯವಿದೆ. ಆ‌ ನಾಗ ದೇವತೆಯ ದೇವಾಲಯದ ಒಂದು ವೃಕ್ಷಕ್ಕೆ ಕ್ಕೆ ತೊಟ್ಟಿಲನ್ನು ಕಟ್ಟಿದರೆ ಸಂತಾನ ಪ್ರಾಪ್ತಿಯಾಗುತ್ತದೆಯಂತೆ.

ಈ ದೇವಾಲಯದ ವಿಶೇಷದ ಬಗ್ಗೆ ಸಂಕ್ಷಿಪ್ತವಾಗಿ ಲೇಖನದ ಮೂಲಕ ತಿಳಿದುಕೊಳ್ಳಿ.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ತಮಿಳುನಾಡಿನ ಪ್ರಮುಖ ಪ್ರವಾಸಿತಾಣವಾದ ಕನ್ಯಾಕುಮಾರಿಯಿಂದ ಸುಮಾರು 21 ಕಿ.ಮೀ ದೂರದಲ್ಲಿ ನಾಗರಕೋಯಿಲ್ ಪಟ್ಟಣವಿದೆ. ಇಲ್ಲಿ ಅತ್ಯಂತ ಪ್ರಾಚೀನವಾದ ನಾಗರ್ ಕೋಯಿಲ್ ದೇವಾಲಯವಿದೆ.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ಈ ದೇವಾಲಯದ ನಿರ್ಮಾಣ ಯಾವಾಗ ನಡೆಯಿತು ಎಂಬುದಕ್ಕೆ ಯಾವುದೇ ಸರಿಯಾದ ಆಧಾರಗಳಿಲ್ಲ. ಆದರೆ ಆಗಿನ ಕಾಲದಲ್ಲಿ ಈ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಚೇರ, ಚೋಳ, ಪಾಂಡ್ಯ ರಾಜ್ಯವಂಶಕ್ಕೆ ಸೇರಿದವರೆಲ್ಲಾ ಈ ದೇವಾಲಯದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ಈ ದೇವಾಲಯ ಅನೇಕ ಅದ್ಭುತಗಳ ನಿಲಯ. ಇಲ್ಲಿ ಮುಖ್ಯವಾಗಿ ಇಬ್ಬರು ದೇವತೆಗಳು ನೆಲೆಸಿದ್ದಾರೆ. ಒಬ್ಬರು ಶ್ರೀಕೃಷ್ಣ ಹಾಗು ಮತ್ತೊಂದು ನಾಗರಾಜ. ಇಲ್ಲಿನ ಶ್ರೀ ಕೃಷ್ಣನನ್ನು ಆನಂದ ಕೃಷ್ಣನ ಹೆಸರಿನಿಂದ ಆರಾಧಿಸುತ್ತಾರೆ.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ಇನ್ನು ಇಲ್ಲಿನ ನಾಗರಾಜನನ್ನು ಸರ್ಪರಾಜನಾದ ವಾಸುಕಿಯಾಗಿ ಭಾವಿಸುತ್ತಾರೆ. ಇವರಿಬ್ಬರೇ ಅಲ್ಲದೇ ಈ ದೇವಾಲಯದಲ್ಲಿ ಶಿವನು, ಸುಬ್ರಹ್ಮಣ್ಯಸ್ವಾಮಿ, ವಿನಾಯಕ, ದೇವಿ ತದಿತರ ಉಪದೇವಾಲಯಗಳು ಕೂಡ ನೋಡಬಹುದು.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರಾಜನ ದೇವಾಲಯದ ಮುಂದೆ ದೊಡ್ಡ ಕೊಳವಿದೆ. ಅದರಲ್ಲಿ ಭಕ್ತರು ಸ್ನಾನಗಳನ್ನು ಮಾಡಿ ನಾಗರಾಜನನ್ನು ದರ್ಶಿಸಿಕೊಳ್ಳುತ್ತಾರೆ. ಕೊಳದ ಪಕ್ಕದಲ್ಲಿಯೇ ದೊಡ್ಡ ಅಶ್ವಥಕಟ್ಟೆ ಕೂಡ ಇದೆ.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ಆ ಕಟ್ಟೆಯ ಮೇಲೆ ಹೆಚ್ಚು ಸಂಖ್ಯೆಯಲ್ಲಿ ನಾಗರಾಜನ ಪ್ರತಿಮೆಗಳನ್ನು ಕಾಣಬಹುದು. ಕೇವಲ ಈ ಅಶ್ವಥ ಕಟ್ಟೆಯ ಮೇಲೆಯೇ ಅಲ್ಲದೇ ದೇವಾಲಯವೆಲ್ಲಾ ಅನೇಕ ನಾಗರಾಜನ ಪ್ರತಿಮೆಗಳು ಇವೆ.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ಇಲ್ಲಿ ನಾಗರಾಜ ಪ್ರತಿಮೆಗಳನ್ನು ಪ್ರತಿಷ್ಟಾಪಿಸಿ, ದೇವಾಲಯದಲ್ಲಿನ ವೃಕ್ಷಕ್ಕೆ ಉಯ್ಯಾಲೆ ಮುಡುಪಾಗಿ ಕಟ್ಟಿದರೆ ತಪ್ಪದೇ ಸಂತಾನವಾಗುತ್ತದೆ ಎಂದು ಸ್ಥಳೀಯ ಭಕ್ತರ ಪ್ರಬಲವಾದ ನಂಬಿಕೆಯಾಗಿದೆ.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ಅದ್ದರಿಂದಲೇ ಈ ದೇವಾಲಯಕ್ಕೆ ಭೇಟಿ ನೀಡಿದರೆ ಕೇವಲ ತಮಿಳುನಾಡಿನ ಪ್ರಜೆಗಳೇ ಅಲ್ಲದೇ ದಕ್ಷಿಣ ಭಾರತದಲ್ಲಿನ ಅನೇಕ ಪ್ರದೇಶಗಳಿಂದ ಭಕ್ತರು ಇಲ್ಲಿಗೆ ನಿತ್ಯವು ಭೇಟಿ ನೀಡುತ್ತಿರುತ್ತಾರೆ.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರಾಜ ಗರ್ಭಗುಡಿಯಲ್ಲಿ ತೀರ್ಥವು ಅತ್ಯಂತ ಪವಿತ್ರವಾದುದು ಎಂದು ಭಾವಿಸುತ್ತಾರೆ. ಈ ದೇವಾಲಯದಲ್ಲಿ ಅಂದಿನಕಾಲದಿಂದಲೂ ನಂಬೂದ್ರಿ ಬ್ರಾಹ್ಮಣರೇ ಅರ್ಚಕರಾಗಿ ವಿಧಿಗಳನ್ನು ನಿರ್ವಹಿಸುತ್ತಿರುವುದು ಗಮರ್ನಾಹ. ಈ ದೇವಾಲಯದಲ್ಲಿ ಪ್ರತಿ ದಿನ ಬೆಳ್ಳಗೆ 4 ಗಂಟೆಯಿಂದ ಮಧ್ಯಾಹ್ನ 11:30ರವರೆಗೆ ದರ್ಶನ ಭಾಗ್ಯ ಪಡೆಯಬಹುದು. ಇನ್ನು ಸಂಜೆ 5 ಗಂಟೆಯಿಂದ ರಾತ್ರಿ 8:30 ಗಂಟೆಯವರೆಗೆ ಸ್ವಾಮಿಯನ್ನು ದರ್ಶಿಸಿಕೊಳ್ಳಬಹುದು.

ನಾಗರ ಕೋಯಿಲ್ ನಾಗರಾಜ ದೇವಾಲಯ

ನಾಗರ ಕೋಯಿಲ್ ನಾಗರಾಜ ದೇವಾಲಯ

ತಿರುವನಂತಪುರದ ವಿಮಾನ ನಿಲ್ದಾಣದಿಂದ ನಾಗರ ಕೋಯಿಲ್‍ಗೆ ಸುಮಾರು 80 ಕಿ.ಮೀ ದೂರದಲ್ಲಿದೆ. ಅದೇ ವಿಧವಾಗಿ ಕನ್ಯಾಕುಮಾರಿ ರೈಲ್ವೆನಿಲ್ದಾಣದಿಂದ ಇಲ್ಲಿಗೆ 20 ಕಿ.ಮೀ ದೂರದಲ್ಲಿದೆ. ತಿರುವನಂತಪುರ, ಕನ್ಯಾಕುಮಾರಿ, ತಿರುನಲ್ವೆಲಿ ಪಟ್ಟಣಗಳಿಂದ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ನಾಗರ ಕೋಯಿಲ್‍ಗೆ ಸುಲಭವಾಗಿ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X