Search
  • Follow NativePlanet
Share
» »ಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯ

ಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯ

ಭಾರತ ದೇಶದಲ್ಲಿ ಅನೇಕ ರೀತಿಯ ರಹಸ್ಯಗಳು ಅಡಗಿವೆ . ಇಂದಿಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಸ್ಥಳಗಳೂ ಇಂದಿಗೂ ಇವೆ. ಅವುಗಳಲ್ಲಿ ಕೋಟೆಗಳು, ಅರಮನೆಗಳು, ದೇವಾಲಯಗಳು , ಕೆರೆಗಳೂ ಸೇರಿವೆ. ನೀವು ನಿಧಿ, ಸಂಪತ್ತಿನ ಬಗ್ಗೆ ಕೇಳಿರುವಿರಿ. ಬೆಲೆಬಾಳುವ ವಜ್ರ ವೈಡೂರ್ಯಗಳು , ಸಂಪತ್ತು ನೆಲದೊಳಗೆ ಹುದುಗಿಹೋಗಿರುವ ಅನೇಕ ಅಜ್ಞಾತ ಸ್ಥಳಗಳು ಇಂದಿಗೂ ಭಾರತದದಲ್ಲಿವೆ. ಆದರೆ ಅವುಗಳು ಎಲ್ಲಿವೆ ಎನ್ನುವುದು ಯಾರಿಗೂ ತಿಳಿದಿಲ್ಲ.

ಇಲ್ಲಿಗೆ ಭೇಟಿ ನೀಡಿದರೆ ಕುಜ ದೋಷವಿದ್ದವರಿಗೂ ಕಂಕಣ ಭಾಗ್ಯ ಕೂಡುತ್ತೆಇಲ್ಲಿಗೆ ಭೇಟಿ ನೀಡಿದರೆ ಕುಜ ದೋಷವಿದ್ದವರಿಗೂ ಕಂಕಣ ಭಾಗ್ಯ ಕೂಡುತ್ತೆ

ಸಂಪತ್ತು, ನಿಧಿಗಳಿವೆ ಎನ್ನುವ ಕೆಲವು ಸ್ಥಳಗಳನ್ನು ಹುಡುಕಲಾಗಿದೆ. ಆದರೆ ಆ ರಹಸ್ಯ ಮಾರ್ಗಗಳವರೆಗೆ ಯಾರಿಂದಲೂ ತಲುಪಲಾಗುತ್ತಿಲ್ಲ. ಇಂದು ನಾವು ಒಂದು ರಹಸ್ಯಕರ ಸರೋವರದ ಬಗ್ಗೆ ತಿಳಿಸಲಿದ್ದೇವೆ . ಅದರೊಳಗೆ ನಾಗಮಣಿ ಇದೆ ಎಂದು ಹೇಳಲಾಗುತ್ತದೆ.

ಐತಿಹಾಸಿಕ ಕುಸುಮ ಸರೋವರ

ಐತಿಹಾಸಿಕ ಕುಸುಮ ಸರೋವರ

PC- Ekabhishek

ಭಾರತದ ಉತ್ತರ ಪ್ರದೇಶದ ಮಥುರದಲ್ಲಿ ಈ ಸರೋವರವಿದೆ. ಈ ಸರೋವರವು ಗೋವರ್ಧನದ ರಾಧಾಕುಂಡದ ನಡುವೆ ಇರುವ ಪವಿತ್ರ ಗೋವರ್ಧನ ಗುಡ್ಡ ಹಾಗೂ ಐತಿಹಾಸಿಕ ಕಲ್ಲಿನ ಸ್ಮಾರಕವಿದೆ. ಸ್ಮಾರಕದ ಸಮೀಪ ನಾರದ ಕುಂಡವಿದೆ. ಅಲ್ಲಿ ನಾರದ ಭಕ್ತಿ ಸೂತ್ರ ಚಂದ ಬರೆದಿದ್ದರು ಎನ್ನಲಾಗುತ್ತದೆ. ಅಲ್ಲೇ ಶ್ರೀ ರಾಧಾ ವಾನ ಬಿಹಾರಿ ಮಂದಿರವೂ ಇದೆ.

ರಹಸ್ಯಮಯ ಕೆರೆ

ರಹಸ್ಯಮಯ ಕೆರೆ

PC- William Henry Bake

ಒಂದು ಪವಿತ್ರ ಸ್ಥಳದ ಜೊತೆಗೆ ಕುಸುಮ ಸರೋವರ ಇದೊಂದು ರಹಸ್ಯಮಯ ಕರೆಯೂ ಆಗಿದೆ. ಈ ಕರೆಯಲ್ಲಿ ಇಚ್ಛಾಧಾರಿ ನಾಗನ ನಾಗಮಣಿ ಇದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಈ ಬಗ್ಗೆ ಜನರಿಗೆ ತಿಳಿದಾಗ ಆ ಮಣಿಯನ್ನು ಪಡೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಯಾರೂ ಕೂಡಾ ಸರೋವರದ ಆಚೆಗೆ ತಲುಪಲು ಸಾಧ್ಯವಾಗಿಲ್ಲ. ಈ ಮಣಿಯನ್ನು ಪಡೆಯುವ ಆಸೆಯಿಂದ ಅನೇಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಈ ಮಣಿಯ ತಂಟೆಗೆ ಬಂದವರಲ್ಲಿ ಕೆಲವರು ಕುಷ್ಠರೋಗಿಗಳಾಗಿದ್ದರೆ ಇನ್ನೂ ಕೆಲವರು ದೃಷ್ಠಿಹೀನರಾಗಿದ್ದಾರೆ.

ತಪ್ಪಿಯೂ ಇಲ್ಲಿ ಸ್ನಾನ ಮಾಡಬೇಡಿ

ತಪ್ಪಿಯೂ ಇಲ್ಲಿ ಸ್ನಾನ ಮಾಡಬೇಡಿ

PC- Aman.arch

ಕುಸುಮ ಸರೋವರ ನೋಡಲು ಎಷ್ಟು ಆಕರ್ಷಣೀಯ ಹಾಗೂ ಸುಂದರವಾಗಿದೆಯೋ ಅಷ್ಟೇ ರಹಸ್ಯಮಯ ಹಾಗೂ ಅಪಾಯಕಾರಿಯಾಗಿದೆ. ಹಲವಾರು ವರ್ಷಗಳಿಂದ ಅದೇ ಸ್ಥಿತಿಯಲ್ಲಿರುವ ಈ ಸರೋವರದ ನೀರು ಮಲಿನವಾಗಿದೆ. ಹಾಗಾಗಿ ಇದರಲ್ಲಿ ಸ್ನಾನ ಮಾಡದಂತೆ ಎಚ್ಚರಿಕೆಯನ್ನೂ ನೀಡುತ್ತಾರೆ. ಅಲ್ಲಿಗೆ ಬರುವ ಭಕ್ತರು ಸರೋವರದ ಒಳಗೆ ಹೋಗುವುದಿಲ್ಲ ಹೊರಗಿನಿಂದಲೇ ನೋಡಿ ಹೋಗುತ್ತಾರೆ. ರಾತ್ರಿ ಹೊತ್ತಿನಲ್ಲಿ ಈ ಸರೋವರ ಬಹಳ ಸುಂದರವಾಗಿ ಕಾಣಿಸುತ್ತದೆ.

ಸರೋವರದ ಇತಿಹಾಸ

ಸರೋವರದ ಇತಿಹಾಸ

PC-Nizil Shah

ನಾಲ್ಕು ಕಡೆಯಿಂದಲೂ ಮಣ್ಣಿನಿಂದ ನಿರ್ಮಿಸಲಾಗಿರುವ ಈ ಐತಿಹಾಸಿಕ ಕರೆಯನ್ನು ರಾಜ ವೀರ ಸಿಂಹ ೧೬೭೫ರಲ್ಲಿ ನಿರ್ಮಿಸಿದನು. ನಂತರ ರಾಜ ಸೂರಜ್ ಮಲ್ ತನ್ನ ಪತ್ನಿ ಕಿಶೋರಿಗಾಗಿ ಈ ಕೆರೆಗೆ ಸುಂದರವಾದ ರೂಪ ನೀಡಿದನು. ನಂತರ ಸೂರಜ್‌ ಮಲ್‌ನ ಮರಣದ ನಂತರ ಆತನ ಮಗ ತಂದೆಯ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಿದನು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC- DIPU1

ಈ ಸರೋವರ ಉತ್ತರ ಪ್ರದೇಶದ ಮಥುರದಲ್ಲಿದೆ. ಇಲ್ಲಿ ನೀವು ಮಥುರದ ಒಳಗೆ ಟ್ಯಾಕ್ಸಿ, ರಿಕ್ಷಾದ ಮೂಲಕ ತಲುಪಬಹುದು. ಮಥುರ ಜಂಕ್ಷನ್‌ನಿಂದ ಈ ಸರೋವರ ಸುಮಾರು ೨೬ಕಿ.ಮೀ ದೂರದಲ್ಲಿದೆ. ರೈಲಿನ ಮೂಲಕವೂ ಇಲ್ಲಿಗೆ ಬರಬಹುದು. ವಿಮಾನದಲ್ಲಿ ಬರುವುದಾದರೆ ದೆಹಲಿ ಏರ್‌ಪೋರ್ಟ್ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ.

 ರಾಸಲೀಲೆಗೂ ಹೆಸರುವಾಸಿ

ರಾಸಲೀಲೆಗೂ ಹೆಸರುವಾಸಿ

PC: Gyanendra_Singh_Chau...

ಈ ಸ್ಥಳವು ನೋಡಲು ಬಹಳ ಸುಂದರವಾಗಿದೆ. ಇದು ಪರ್ಯಾಟಕರನ್ನು ತಮ್ಮತ್ತ ಸೆಳೆಯುತ್ತದೆ. ಇಲ್ಲಿ ಕೃಷ್ಣ ರಾಧಾಳನ್ನು ಭೆಟಿಯಾಗುತ್ತಿದ್ದನು ಎನ್ನಲಾಗುತ್ತದೆ. ಇದು ರಾಸಲೀಲೆಗೂ ಹೆಸರುವಾಸಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X