• Follow NativePlanet
Share
Menu
» »ಮೈಸೂರಿನಿಂದ ಹಾರ್ಸ್ಲಿ ಬೆಟ್ಟಗಳ ಕಡೆಗೆ ಬೆಟ್ಟಗಳ ಮಧ್ಯೆ ಒಂದು ಹಿತಕರವಾದ ಪ್ರಯಾಣ!

ಮೈಸೂರಿನಿಂದ ಹಾರ್ಸ್ಲಿ ಬೆಟ್ಟಗಳ ಕಡೆಗೆ ಬೆಟ್ಟಗಳ ಮಧ್ಯೆ ಒಂದು ಹಿತಕರವಾದ ಪ್ರಯಾಣ!

Posted By: Manjula Balaraj Tantry

ಜನಪ್ರಿಯ ರಜಾ ತಾಣಗಳಲ್ಲಿ ಒಂದಾದ ಆಂಧ್ರಪ್ರದೇಶದ ಹಾರ್ಸ್ಲಿ ಹಿಲ್ಸ್ ಅತ್ಯುತ್ತಮ ಪ್ರವಾಸಿ ತಾಣವಾಗಿದೆ.ಬೆಟ್ಟದ ಸುತ್ತಲೂ ದಟ್ಟವಾದ ಕಾಡುಗಳಿವೆ.ಇವುಗಳ ಸೌಂದರ್ಯವು ಹಲವಾರು ಗಿಡಮೂಲಿಕೆಯ ಮರಗಳನ್ನು ಸುತ್ತಲೂ ಹೊಂದಿದೆ. ಹಾರ್ಸ್ಲೀ ಬೆಟ್ಟಕ್ಕೆ ಪ್ರಯಾಣ ಮಾಡುವಾಗ ಇಲ್ಲಿಯ ತಾಜಾ ಗಾಳಿ, ಸುಂದರ ನೋಟ, ಹಿತಕರವಾದ ರಸ್ತೆಗಳು ಇವು ಪ್ರಯಾಣಿಗರಿಗೆ ಆನಂದ ಮತ್ತು ಶಾಂತಿಯುತ ವಾತಾವರಣವನ್ನು ಒದಗಿಸುತ್ತದೆ. ಇಲ್ಲಿನ ಅರಣ್ಯಗಳು ಗುಲ್ಮೋಹರ್, ಅಲಮಂದ, ರೀತಾ, ಆಮ್ಲಾ, ಬೀಡಿ ಎಲೆಗಳು, ನೀಲಿ ಗಮ್, ಯೂಕಲಿಪ್ಟಸ್ ಮತ್ತು ಶ್ರೀಗಂಧದ ಮರಗಳಿಂದ ಅಲಂಕರಿಸಲ್ಪಟ್ಟಿವೆ.

ಹಾರ್ಸ್ಲೀ ಬೆಟ್ಟಗಳ ಕಡೆಗೆ ಪ್ರಯಾಣವು ಒಂದು ಸ್ವರ್ಗವೇ ಸರಿ. ಈ ಬೆಟ್ಟಗಳ ಸುತ್ತ ಮರಗಳು, ಸಸ್ಯಗಳು ಇದರ ಸೌಂದರ್ಯತೆಯನ್ನು ಇನ್ನೂ ಹೆಚ್ಚಿಸುತ್ತವೆ. ಇಲ್ಲಿ ವಾತಾವರಣವು ವರ್ಷವಿಡೀ ಹಿತಕರವಾಗಿರುತ್ತದೆ. ಈ ಬೆಟ್ಟಕ್ಕೆ ಆಗಿನ ಕಾಲದ ಕಲೆಕ್ಟರ್ ಆದ ಡಬ್ಲೂ . ಡಿ ಹಾರ್ಸ್ಲೆ ಅವರ ಹೆಸರನ್ನು ಇಡಲಾಗಿದ್ದು ಇದು ಸಮುದ್ರ ಮಟ್ಟದಿಂದ 1,265 ಮೀಟರ್ ಎತ್ತರದಲ್ಲಿದೆ.

ಸಾಹಸ ಚಟುವಟಿಕೆಯ ಕೇಂದ್ರಗಳು ಇಲ್ಲಿ ಸಾಕಷ್ಟಿದ್ದು ಸಾಹಸಿಗಳು ಇಲ್ಲಿ ಖಂಡಿತವಾಗಿಯೂ ಪ್ರಯತ್ನ ಮಾಡಬೇಕು ಏಕೆಂದರೆ ಇದು ಜೋರ್ಬಿಂಗ್ ಮಾಡುವ ಭಾರತದ ಕೆಲವೇ ಕೆಲವು ತಾಣಗಳಲ್ಲೊಂದಾಗಿದೆ. ರಾಪೆಲ್ಲಿಂಗ್ ಮತ್ತು ಟ್ರಕ್ಕಿಂಗ್ ಇಲ್ಲಿ ಮಾಡಬಹುದಾದ ಇತರ ಆಯ್ಕೆಗಳಾಗಿವೆ.

ಕಾಡುಗಳ ಮಧ್ಯೆ ಆಶ್ರಯ ಪಡೆದಿರುವ ಹಿಮಕರಡಿಗಳು, ಕಾಡು ನಾಯಿಗಳು, ಸಂಬಾರಾಗಳು ಮತ್ತು ಚಿರತೆಗಳನ್ನೂ ಸಹ ಕಾಣಬಹುದು ಬೆಂಗಳೂರು ಮತ್ತು ತಿರುಪತಿಯಿಂದ ಹಾರ್ಸ್ಲೆ ಬೆಟ್ಟಗಳಿಗೆ ಸಂಪರ್ಕವು ಉತ್ತಮವಾಗಿದೆ. ಆದ್ದರಿಂದ ಪ್ರಕೃತಿ ಪ್ರೇಮಿಗಳಿಗೆ ಇದೊಂದು ಉತ್ತಮ ರಜಾ ತಾಣವಾಗಿದೆ.

ಹಾರ್ಸ್ಲೆ ಹಿಲ್ಸ್ಗೆ ಭೇಟಿ ನೀಡಲು ಅತ್ಯುತ್ತಮ ಸಮಯ

ಹಾರ್ಸ್ಲೆ ಹಿಲ್ಸ್ಗೆ ಭೇಟಿ ನೀಡಲು ಅತ್ಯುತ್ತಮ ಸಮಯ

ನವೆಂಬರ್ನಿಂದ ಮಾರ್ಚ್ ವರೆಗೆ ಈ ಮೋಡಿಮಾಡುವ ಮತ್ತು ಆಕರ್ಷಕ ತಾಣವನ್ನು ಭೇಟಿ ಮಾಡಲು ಸೂಕ್ತ ಸಮಯ. ಈ ಸಮಯದಲ್ಲಿ ತಾಪಮಾನವು 10 ಡಿಗ್ರಿ ಸೆಲ್ಶಿಯಸ್ನಿಂದ 22 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ. ಜೂನ್ ನಿಂದ ಸೆಪ್ಟಂಬರ್ ಮಧ್ಯದಲ್ಲಿ ಮಧ್ಯಮ ಮಳೆಯಿಂದಾಗಿ ಮಳೆಗಾಲವು ಪ್ರಕಾಶಮಾನವಾಗಿದ್ದು ಮತ್ತು ಇಲ್ಲಿ ಬೆಳಕು ಚೆಲ್ಲುತ್ತದೆ. ಬೇಸಿಗೆಯು ತುಲನಾತ್ಮಕವಾಗಿ ಬಿಸಿಯಿರುವುದರಿಂದ ಪ್ರವಾಸಿಗರು ಇಲ್ಲಿಗೆ ಈ ಸಮಯದಲ್ಲಿ ಈ ಸ್ಥಳಕ್ಕೆ ಬರುವುದು ಕಡಿಮೆ.

PC: Shyamal

ಹಾರ್ಸ್ಲೇ ಬೆಟ್ಟಕ್ಕೆ ಹೋಗುವುದು ಹೇಗೆ?

ಹಾರ್ಸ್ಲೇ ಬೆಟ್ಟಕ್ಕೆ ಹೋಗುವುದು ಹೇಗೆ?

ರಸ್ತೆಯ ಮೂಲಕ ಮೈಸೂರಿನಿಂದ ಹಾರ್ಸ್ಲೇ ಬೆಟ್ಟಕ್ಕೆ ಮಾರ್ಗ 1ರ ಮೂಲಕ ಪ್ರಯಾಣ ಮಾಡುವುದಾದರೆ ಸುಮಾರು 307 ಕಿ.ಮೀ ದೂರ ಇರುತ್ತದೆ ಮತ್ತು ಮಾರ್ಗ2 ರ ಮೂಲಕ ಪ್ರಯಾಣ ಮಾಡುವುದಾದರೆ ಸುಮಾರು 327 ಕಿ.ಮೀ ದೂರವಿದೆ. ಮಾರ್ಗಗಳ ವಿವರ ಈ ಕೆಳಗಿನಂತಿವೆ.

ಮಾರ್ಗ 1: ಮೈಸೂರು - ಬೆಂಗಳೂರು ಮೈಸೂರು ರಸ್ತೆಯಿಂದ ರಾ. ಹೆ 150ಎ - ರಾ.ಹೆ 48 - ರಾ.ಹೆ 44 - ಚಿಕ್ಕಬಳ್ಳಾಪುರ ರಸ್ತೆ - ಹೊಸಕೋಟೆ ಚಿಂತಾಮಣಿ ರಸ್ತೆ - ಕಡಪಾ ಬೆಂಗಳೂರು ಹೆದ್ದಾರಿ - ಗೌಣಿಪಳ್ಳಿ - ಮದನಪಲ್ಲಿ ರಸ್ತೆ - ಹಾರ್ಸ್ಲೆ ಹಿಲ್ಸ್

ಮಾರ್ಗ 2: ಮೈಸೂರು - ಬೆಂಗಳೂರು ಮೈಸೂರು ರಸ್ತೆ ಮೂಲಕ ರಾ.ಹೆ 275 - ಕುಣಿಗಲ್ ಮದೂರ್ ರಸ್ತೆ ಮೂಲಕ ರಾ.ಹೆ 75 - ಚಿಕ್ಕಬಳ್ಳಾಪುರ ಮಾರ್ಗ ಮೂಲಕ ರಾ.ಹೆ 648 - ಮದನಪಲ್ಲಿ ರಸ್ತೆ - ಹಾರ್ಸ್ಲೆ ಹಿಲ್ಸ್

ಮಾರ್ಗ 1 ರ ಮೂಲಕ ಪ್ರಯಾಣಿಸಿದರೆ 6 ಗಂ 30 ನಿ ತಲುಪಲು ಕಾಲಾವಕಾಶ ಬೇಕಾಗುತ್ತದೆ. ಮತ್ತು ಮಾರ್ಗ 2ರ ಮೂಲಕ ಪ್ರಯಾಣಿಸಿದರೆ ತಲುಪಲು ಸುಮಾರು 7 ತಾಸುಗಳು ಬೇಕಾಗುವುದು ಆದುದರಿಂದ ಮಾರ್ಗ 1ರ ಮೂಲಕ ಪ್ರಯಾಣಿಸುವುದರಿಂದ ಬೇಗ ತಲುಪಬಹುದು.

ಮೈಸೂರು ಹಾರ್ಸ್ಲೆ ಬೆಟ್ಟಕ್ಕೆ ಪ್ರಯಾಣದ ದಾರಿಯಲ್ಲಿರುವ ಕೆಲವು ನಿಲ್ದಾಣಗಳು


PC: NAYASHA WIKI

ರಾಮನಗರ

ರಾಮನಗರ

ಮೈಸೂರಿನಿಂದ ಬೆಳಿಗ್ಗೆ ಬೇಗ ಹೊರಡಬೇಕು ಮೈಸೂರಿನಿಂದ 98 ಕಿ.ಮೀ ದೂರದಲ್ಲಿರುವ ವಿನಾಯಕ ಮೈಲಾರಿಯಲ್ಲಿ ಸೊಗಸಾದ ಸಾಂಪ್ರದಾಯಿಕ ಉಪಹಾರವನ್ನು ಮಾಡಿ ನಂತರ ರೇಷ್ಮೆ ಕೊಕೂನ್ ಗಳ ನಗರವಾದ ರಾಮನಗರವನ್ನು ತಲುಪುವಿರಿ.

ಪ್ರಯಾಣಿಕನಿಗೆ ಈ ಸಣ್ಣ ಹಾಗೂ ಪ್ರಶಾಂತವಾದ ನಗರವು ಶಾಂತಿಯನ್ನು ಕೊಡುತ್ತದೆ. ನಿಮಗೆ ಸ್ವಲ್ಪ ಸಮಯವಿದ್ದಲ್ಲಿ, ರಾಮದೇವರ ಬೆಟ್ಟ ದಲ್ಲಿ ಅರ್ಧ ದಿನ ಟ್ರಕ್ಕಿಂಗ್ ನ ಒಂದು ಅನುಭವವನ್ನು ಪಡೆಯಿರಿ. ನಿಮಗೆ ಸಮಯದ ಅಭಾವ ಇಲ್ಲದೇ ಇದ್ದಲ್ಲಿ ಇಲ್ಲಿಯ ಆರು ಇನ್ನಿತರ ಬೆಟ್ಟಗಳಲ್ಲಿ ಟ್ರಕ್ಕಿಂಗ್ ಮತ್ತು ಕ್ಯಾಂಪ್ ಮಾಡಬಹುದು.

ಕೆಲವು ನಿರ್ನಾಮದ ಅಂಚಿನಲ್ಲಿರುವ ಪಕ್ಷಿಗಳನ್ನು ಇಲ್ಲಿ ಕಾಣಬಹುದು , ರಾಮದೇವರಬೆಟ್ಟ ರಣಹದ್ದು ಅಭಯಾರಣ್ಯದಲ್ಲಿ ಗಾಲಾ ಸಮಯವನ್ನು ಕಳೆಯಬಹುದು . ಈ ಸುಂದರವಾದ ಪಟ್ಟಣವು ರೇಷ್ಮೆ ಕೃಷಿಗಾಗಿ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ತಯಾರಿಸಿದ ರೇಷ್ಮೆ ಪ್ರಪಂಚದ ಪ್ರಸಿದ್ಧ ಮೈಸೂರು ಸೀರೆಗಳಿಗೆ ಪ್ರಾಥಮಿಕ ಕಚ್ಚಾ ವಸ್ತುವಾಗಿದೆ. ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಇಲ್ಲಿದೆ!

ಅರ್ಕೇಶ್ವವರ ದೇವಸ್ಥಾನ, ಮಲ್ಲೇಶ್ವರ ದೇವಸ್ಥಾನ, ಬನ್ನಿ ಮಹಾಕಾಳಿ ದೇವಸ್ಥಾನ ಮತ್ತು ಚಾಮುಂಡೇಶ್ವರಿ ದೇವಸ್ಥಾನಗಳು ನೀವು ಶಾಂತಿಯನ್ನು ಪಡೆಯಬಹುದಾದ ಕೆಲವು ಆಧ್ಯಾತ್ಮಿಕ ಕೇಂದ್ರಗಳಾಗಿವೆ.


PC: Vaibhavcho

ದೇವನಹಳ್ಳಿ

ದೇವನಹಳ್ಳಿ

ರಾಮನಗರದಿಂದ ಸುಮಾರು 92 ಕಿ.ಮೀ ದೂರದಲ್ಲಿ ಬೆಂಗಳೂರಿನಿಂದ ಕೇವಲ ಒಂದು ಗಂಟೆಯ ಪ್ರಯಾಣಿಸಿದರೆ ಐತಿಹಾಸಿಕ ನಗರವಾದ ದೇವನಹಳ್ಳಿ ಸಿಗುತ್ತದೆ. ಇದು ಟಿಪ್ಪು ಸುಲ್ತಾನನ ಜನ್ಮ ಸ್ಥಳವಾಗಿದೆ. ದೇವನಹಳ್ಳಿ 15 ನೇ ಶತಮಾನದಲ್ಲಿ ಆಳ್ವಿಕೆಯಲ್ಲಿದ್ದ ರಾಜವಂಶಗಳ ಭವ್ಯವಾದ ಕೋಟೆಯನ್ನು ಹೊಂದಿದೆ.

ಕೋಟೆಯೊಳಗಿನ ಎಲ್ಲಾ ಇತರ ದೇವಸ್ಥಾನಗಳ ಪೈಕಿ ವೇಣುಗೋಪಾಲ ಸ್ವಾಮಿ ದೇವಾಲಯವು ಭೇಟಿ ಕೊಡಬೇಕಾದ ಅತ್ಯಂತ ಪುರಾತನ ದೇವಾಲಯವಾಗಿದೆ. ಈ ದೇವಾಲಯದ ಗೋಡೆಗಳ ಮೇಲೆ ರಾಮಾಯಣದ ಕಥೆಗಳನ್ನೊಳಗೊಂಡ ಸುಂದರ ದೃಶ್ಯಗಳಿಂದ ಅಲಂಕರಿಸಲ್ಪಟ್ಟಿದೆ. ಟಿಪ್ಪು ಸುಲ್ತಾನ್ ಅವರ ಸ್ಮಾರಕ ಮತ್ತು ಅವರು ವಿಶ್ರಾಂತಿ ಪಡೆಯುತ್ತಿದ್ದ ಅವರ ಖಾಸಗಿ ಉದ್ಯಾನವನಕ್ಕೆ ಭೇಟಿ ಕೊಡಿ.

PC: Tinucherian


ಚಿಂತಾಮಣಿ

ಚಿಂತಾಮಣಿ

51 ಕಿ.ಮೀ. ಚಾಲನೆಯ ನಂತರ, ನೀವು ಟೊಮಾಟೋ ಮತ್ತು ರೇಷ್ಮೆಗಳ ನಗರವಾದ ಚಿಂತಾಮಣಿಗೆ ನೀವು ತಲುಪುವಿರಿ. ಈ ಶಾಂತ ಮತ್ತು ಧಾರ್ಮಿಕ ಮಹತ್ವ ಇರುವ ಗ್ರಾಮಕ್ಕೆ ಮರಾಠಾ ಮುಖ್ಯಸ್ಥ ಚಿಂತಾಮಣಿ ರಾವ್ ಅವರ ಹೆಸರನ್ನಿಡಲಾಗಿದೆ. ಕೈಲಾಸಗಿರಿ ಮತ್ತು ಅಂಬಾಜಿ ದುರ್ಗಾ ಗುಹಾ ದೇವಸ್ಥಾನವು ನಿಮ್ಮ ಪಟ್ಟಿಯಲ್ಲಿ ಚಿಂತಾಮಣಿಯನ್ನು ದಾಟುವ ಮೊದಲು ಸೇರಿಸಿಕೊಳ್ಳಿ.

ಆಂಧ್ರಪ್ರದೇಶದ ಮತ್ತೊಂದು ಆಕರ್ಷಕ ರಾಜ್ಯದಲ್ಲಿ ಮತ್ತು ನಿಮ್ಮ ಗಮ್ಯಸ್ಥಾನವನ್ನು ತಲುಪಲು 75 ಕಿ.ಮೀ ಹೆಚ್ಚಿಗೆ ಚಾಲನೆ ಮಾಡಿ - ಹಾರ್ಸ್ಲೆ ಹಿಲ್ಸ್! ನಿಮ್ಮ ಗಮ್ಯಸ್ಥಾನವನ್ನು ತಲುಪಲು 75 ಕಿ.ಮೀ ಹೆಚ್ಚಿಗೆ ಪ್ರಯಾಣ ಮಾಡಿದರೆ ಆಂಧ್ರಪ್ರದೇಶ ರಾಜ್ಯದ ಇನ್ನೊಂದು ಆಕರ್ಷಕ ಸ್ಥಳವಾದ ಹಾರ್ಸ್ಲೇ ಬೆಟ್ಟವನ್ನು ತಲುಪುವಿರಿ!

PC: Samson Joseph

ಸಾರಿಗೆಯ ಇತರ ವಿಧಾನಗಳ ಮೂಲಕ ತಲುಪುವುದು

ಸಾರಿಗೆಯ ಇತರ ವಿಧಾನಗಳ ಮೂಲಕ ತಲುಪುವುದು

ರೈಲಿನ ಮೂಲಕ : ಮದನಾಪಲ್ಲಿ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಹಾರ್ಸ್ಲೇ ಬೆಟ್ಟವು ಇಲ್ಲಿಂದ 26 ಕಿ.ಮೀ ಅಂತರದಲ್ಲಿದೆ. ಮದನಾಪಲ್ಲಿಗೆ ರೈಲು ಸಂಪರ್ಕವು ನವ ದೆಹಲಿ, ಬೆಂಗಳೂರು, ಮೈಸೂರು, ಲಕ್ನೋ, ಚೆನ್ನೈ, ಪಾಟ್ನಾ, ಕನ್ಯಾಕುಮಾರಿ ಮತ್ತು ಗಯಾ ನಗರಗಳಿಂದ ರೈಲ್ವೇ ಸಂಪರ್ಕವು ಅನುಕೂಲವಾಗಿದೆ.

ಬಸ್ಸು ಪ್ರಯಾಣ : ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್ಆರ್ಟಿಸಿ) ಮೂಲಕ ರಾಜ್ಯದ ಇತರೆ ಭಾಗಗಳೊಂದಿಗೆ ಹೋರ್ಸ್ಲೇ ಹಿಲ್ಸ್ ಉತ್ತಮ ಸಂಪರ್ಕ ಹೊಂದಿದೆ. ಬಸ್ಸಿನ ಮೂಲಕ ಪ್ರಯಾಣವು ಕಡಿಮೆ ವೆಚ್ಚದ್ದಾಗಿದ್ದರೂ ನಿಮ್ಮಲ್ಲಿ ಲಗೇಜು ಹೆಚ್ಚಾಗಿದ್ದರೆ ಬಸ್ಸಿನ ಮೂಲಕ ಪ್ರಯಾಣವು ಸೂಕ್ತವೆನಿಸುವುದಿಲ್ಲ. ಬಸ್ ಗಳು ನೇರವಾಗಿ ಮದನಪಲ್ಲಿ ಮತ್ತು ಹಾರ್ಸ್ಲೆ ಹಿಲ್ಸ್ ನಡುವೆ ಚಲಿಸುತ್ತವೆ.

ವಾಯು ಮಾರ್ಗಮೂಲಕ: ಬೆಂಗಳೂರಿನ ನಿಲುಗಡೆಯಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹಾರ್ಸ್ಲೆ ಬೆಟ್ಟದ ಸಮೀಪದ ವಿಮಾನ ನಿಲ್ದಾಣವಾಗಿದೆ. ಈ ಎರಡರ ನಡುವಿನ ಅಂತರವು ಸುಮಾರು 144 ಕಿ.ಮೀ.

PC: Official Website

ಹಾರ್ಸ್ಲೇ ಬೆಟ್ಟದ ಸುತ್ತಮುತ್ತಲಿನ ಆಕರ್ಷಣೆಗಳು

ಹಾರ್ಸ್ಲೇ ಬೆಟ್ಟದ ಸುತ್ತಮುತ್ತಲಿನ ಆಕರ್ಷಣೆಗಳು

ಯೂಕಲಿಪ್ಟಸ್ ಮರಗಳಿಂದ ಆವೃತವಾದ ಗಂಗೋತ್ರಿ ಸರೋವರ ಆದ ರೀತಿಯಲ್ಲಿ ಪ್ರಶಾಂತವಾಗಿದೆ.ಇದು ಪ್ರಶಾಂತವಾದ ಮತ್ತು ಶಾಂತಿಯುತವಾದ ಈ ಜಾಗವು ನಿಮ್ಮ ಪ್ರೀತಿ ಪಾತ್ರರ ಜೊತೆಯಲ್ಲಿ ಉತ್ತಮ ಸಮಯ ಕಳೆಯಲು ಉತ್ತಮವಾದ ಸ್ಥಳವಾಗಿದೆ. ಈ ಪ್ರಕೃತಿಯ ಸೌಂದರ್ಯವನ್ನು ಸವಿಯುವುದನ್ನು ಪ್ರಕೃತಿ ಅಭಿಮಾನಿಗಳು ತಪ್ಪಿಸಿಕೊಳ್ಳಬಾರದು. ಬೇಸಿಗೆಯಲ್ಲಿ ಈ ಸರೋವರವು ಒಣಗುತ್ತದೆ ಮತ್ತು ಮಾನ್ಸೂನ್ ಮಳೆಗಾಲದಲ್ಲಿ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.


PC: Official Website

ಗಾಳಿ ಬಂಡಾಲು

ಗಾಳಿ ಬಂಡಾಲು

ನೀವು ಈ ಅತ್ಯದ್ಬುತವಾದ ಸ್ಥಳಕ್ಕೆ ಕಾಲಿರಿಸಿದ ಕೂಡಲೇ ನಿಮ್ಮ ಮೈಗೆ ತಣ್ಣನೆಯ ಗಾಳಿ ಸೋಕುವ ಅನುಭವವಾಗುತ್ತದೆ. ವಿಂಡೀ ರಾಕ್ ಎಂದು ಅಡ್ಡಹೆಸರಿರುವ ಈ ಬೆಟ್ಟದ ಮೇಲೆ ಅಡ್ಡಾಡುತ್ತಾ ಕಣಿವೆಗಳ ಸುಂದರ ಮೋಡಿ ಮಾಡುವ ದೃಶ್ಯವನ್ನು ವೀಕ್ಷಿಸಬಹುದು. ಗಾಲಿ ಬಂಡಾಳವು ನೈಸರ್ಗಿಕ ಸರೋವರಗಳು ಮತ್ತು ಉದ್ಯಾನಗಳಿಂದ ಸುತ್ತುವರಿದಿದೆ. ಗಾಳಿಯು ಶಾಂತಿಯ ಪ್ರೇಮಿಗಳನ್ನು ನಿರಂತರವಾಗಿ ಆಕರ್ಷಿಸುತ್ತದೆ.

PC: Yercaud-elango

ಮಲ್ಲಮ್ಮ ದೇವಾಲಯ

ಮಲ್ಲಮ್ಮ ದೇವಾಲಯ

ದೇವಿ ಮಲ್ಲಮ್ಮನಿಗೆ ಅರ್ಪಿತವಾದ ಮಲ್ಲಮ್ಮ ದೇವಾಲಯವು ಹಾರ್ಸ್ಲೇ ಬೆಟ್ಟದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದೆ. ಬೆಟ್ಟದ ಮೇಲಿರುವ ಈ ದೇವಾಲಯವು ಪ್ರವಾಸಿಗರಿಂದ ಹೆಚ್ಚಿನ ಪ್ರಮಾಣದಲ್ಲಿ ಭೇಟಿಕೊಡಲ್ಪಡುವ ತಾಣವಾಗಿದೆ. ಬುಡಕಟ್ಟು ಜನರನ್ನು ಗುಣಪಡಿಸಲು ಮಲ್ಲಮ್ಮ ಎಂಬ ಸಣ್ಣ ಹುಡುಗಿ ಇದ್ದಳು ಅವಳನ್ನು ಆನೆಗಳು ನೋಡಿಕೊಳ್ಳುತ್ತಿದ್ದವು ಈ ಹುಡುಗಿಯು ಒಮ್ಮೆ ಅಚಾನಕವಾಗಿ ಮಾಯವಾದಳು ಅಲ್ಲಿಯ ಸ್ಥಳೀಯರು ಮತ್ತು ಅವಳ ಭಕ್ತರು ಅವಳನ್ನು ದೇವಿಯೆಂದು ನಂಬ ತೊಡಗಿದರು ಮತ್ತು ಅವಳ ಸ್ಮರಣಾರ್ಥವಾಗಿ ದೇವಾಲಯವನ್ನು ಕಟ್ಟಲಾಯಿತು.

ಹಾರ್ಸ್ಲೇ ಬೆಟ್ಟ ದ ಝೂ

ಹಾರ್ಸ್ಲೇ ಬೆಟ್ಟ ದ ಝೂ

ಕಡೆಯದಾಗಿ ಇಲ್ಲಿಂದ ಹೊರಡುವ ಮೊದಲು ಝೂ ಅನ್ನು ನೋಡಲು ಮರೆಯದಿರಿ. ಇಲ್ಲಿ ದಟ್ಟವಾದ ಸಸ್ಯಗಳು ಎಲ್ಲಾ ಕಡೆ ಹರಡಿಕೊಂಡಿದೆ ಮತ್ತು ಕೆಲವು ಪ್ರಾಣಿಗಳು ಅಲ್ಲಿ ಇಲ್ಲಿ ಓಡಾಡುವುದನ್ನು ನೋಡಬಹುದು. ಮೃಗಾಲಯವು ಕುಟುಂಬದೊಂದಿಗೆ ಒಂದು ದಿನಕ್ಕೆ ಪರಿಪೂರ್ಣ ಆಯ್ಕೆಯಾಗಿದೆ. ಪ್ರಾಣಿಸಂಗ್ರಹಾಲಯದಲ್ಲಿ ನೋಡಲು ಪ್ರಕೃತಿ ಮತ್ತು ವನ್ಯಜೀವಿಗಳೂ ಇವೆ.

PC: Mithun1111


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ