Search
  • Follow NativePlanet
Share
» »ಹರಿದ್ವಾರದ ಪುಣ್ಯದಾಯಕ ತ್ರಿಸಿದ್ಧಪೀಠಗಳು

ಹರಿದ್ವಾರದ ಪುಣ್ಯದಾಯಕ ತ್ರಿಸಿದ್ಧಪೀಠಗಳು

By Vijay

ದೇವನಾಡು ಎಂದೆ ಜನಜನಿತವಾದ ಉತ್ತರಾಖಂಡ ರಾಜ್ಯವು ಹಲವು ಪುಣ್ಯ ಕ್ಷೇತ್ರಗಳ, ದೇವಾಲಯಗಳು, ತೀರ್ಥಯಾತ್ರೆಗಳ ತವರಾಗಿದೆ. ಈ ರಾಜ್ಯದಲ್ಲಿ ಎಲ್ಲಿ ಸುತ್ತಾಡಿದರೂ ಒಂದೊಂದು ಪುಣ್ಯ ಕ್ಷೇತ್ರಗಳು ದೊರೆಯುತ್ತಲೆ ಇರುತ್ತವೆ. ಹಾಗಾಗಿಯೆ ಇದನ್ನು "ದೇವಭೂಮಿ" ಎಂದೆ ಸಂಭೋದಿಸಲಾಗಿದೆ.

ಹರಿದ್ವಾರಕ್ಕೆ ಒಮ್ಮೆಯಾದರೂ ಏಕೆ ಭೇಟಿ ನೀಡಬೇಕು?

ಹರಿದ್ವಾರವೂ ಸಹ ಉತ್ತರಾಖಂಡದಲ್ಲಿರುವ ಒಂದು ಪವಿತ್ರ ಕ್ಷೇತ್ರ. ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ದೇಶೀಯ ಹಾಗೂ ವಿದೇಶೀಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಹೆಸರೆ ಸೂಚಿಸುವ ಹಾಗೆ ಹರಿದ್ವಾರವು ಹರಿಯನೆಡೆ ದಾರಿ ತೋರಿಸುವ ಸ್ಥಳವಾಗಿದೆ. ಸಾಕಷ್ಟು ದೇಗುಲಗಳು ಹರಿದ್ವಾರದಲ್ಲೆಲ್ಲ ಸ್ಥಿತಗೊಂಡಿವೆ. ಇಂತಹ ಕೆಲವು ಕ್ಷೇತ್ರಗಳ ಪೈಕಿ ಸಿದ್ಧಪೀಠ ಕ್ಷೇತ್ರವೂ ಸಹ ಒಂದು.

ಹರಿದ್ವಾರದ ಪುಣ್ಯದಾಯಕ ತ್ರಿಸಿದ್ಧಪೀಠಗಳು

ಮಾಯಾ ದೇವಿ, ಚಿತ್ರಕೃಪೆ: World8115

ಒಟ್ಟಾರೆಯಾಗಿ ಇಲ್ಲಿ ಮೂರು ಸಿದ್ಧಪೀಠಗಳಿದ್ದು, ತ್ರಿಸಿದ್ಧಪೀಠಗಳೆಂದು ಹೆಸರುವಾಸಿಯಾಗಿದೆ. ಆ ಮೂರು ಸಿದ್ಧಪೀಠಗಳೆಂದರೆ ಮಾಯಾ ದೇವಿ ದೇವಾಲಯ, ಚಂಡಿ ದೇವಿ ದೇವಾಲಯ ಹಾಗೂ ಮಾನಸಾ ದೇವಿ ದೇವಾಲಯ. ಹರಿದ್ವಾರಕ್ಕೆ ಭೇಟಿ ನೀಡುವ ಭಕ್ತರು ಈ ಮೂರು ಕ್ಷೇತ್ರಗಳನ್ನು ಸಂದರ್ಶಿಸಿ ತಾಯಿಯ ದರ್ಶನ ಪಡೆದೆ ಮರಳುತ್ತಾರೆ.

ಹರಿದ್ವಾರದ ಪುಣ್ಯದಾಯಕ ತ್ರಿಸಿದ್ಧಪೀಠಗಳು

ಚಂಡಿ ದೇವಿ ದೇವಾಲಯ ತಲುಪಲು ಕೇಬಲ ಕಾರ್, ಚಿತ್ರಕೃಪೆ: Mahatma4711

ಮಾಯಾ ದೇವಿ ದೇವಾಲಯ ಒಂದು ಶಕ್ತಿಪೀಠವಾಗಿದೆ. ಸತಿಯ ನಾಭಿಯ ಭಾಗ ಬಿದ್ದ ಸ್ಥಳ ಇದಾಗಿದೆ ಎನ್ನಲಾಗುತ್ತದೆ. ಹಿಂದೆ ಮಾಯಾ ದೇವಿಯು ಇಲ್ಲಿ ನೆಲೆಸಿದ್ದುದರಿಂದ ಹಿಂದೆ ಹರಿದ್ವಾರವು ಮಾಯಾಪುರಿ ಎಂಬ ಹೆಸರಿನಿಂದಲೆ ಗುರುತಿಸಲ್ಪಟ್ಟಿತ್ತು. 11 ನೇಯ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದಲ್ಲಿ ಮುಖ್ಯ ವಿಗ್ರಹವಾಗಿ ಮಾಯ ದೇವಿ, ಬಲಗಡೆಗೆ ಕಾಮಾಖ್ಯ ದೇವಿಯು, ಎಡಗಡೆಗೆ ಕಾಳಿ ದೇವಿಯೂ ನೆಲೆಸಿದ್ದಾಳೆ.

ಹರಿದ್ವಾರದ ಪುಣ್ಯದಾಯಕ ತ್ರಿಸಿದ್ಧಪೀಠಗಳು

ಮಾನಸಾ ದೇವಿ ದೇವಾಲಯ, ಚಿತ್ರಕೃಪೆ: Ekabhishek

ಶಕ್ತಿಯ ಅವತಾರ ಚಂಡಿ ದೇವಿಗೆ ಮುಡಿಪಾದ ಚಂಡಿ ದೇವಾಲಯವು ಹರಿದ್ವಾರದ ತ್ರಿಸಿದ್ಧಪೀಠಗಳಲ್ಲಿ ಒಂದಾಗಿರುವ ದೇವಾಲಯವಾಗಿದೆ. ಶಿವಾಲಿಕ್ ಪರ್ವತ ಶ್ರೇಣಿಯ ನೀಲ ಪರ್ವತದ ಮೇಲೆ ದೇವಾಲಯವು ಸ್ಥಿತವಿದ್ದು ಮೂರು ಕಿ.ಮೀ ಚಾರಣದ ಮೂಲಕ ಮೆಟ್ಟಿಲುಗಳಿರುವ ಬೆಟ್ಟ ಏರಿ ತಲುಪ್ಬಹುದು. ಇತ್ತೀಚೆಗೆ ಕೇಬಲ್ ಕಾರ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಗ್ರಹವು ಶಂಕರಾಚಾರ್ಯರಿಂದ 8 ನೇಯ ಶತಮಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ.

ದೇವಿಗೆಂದೆ ಮುಡಿಪಾದ ಕರ್ನಾಟಕದ ಕೆಲವು ಸುಂದರ ದೇವಾಲಯಗಳು

ಮೂರನೇಯದಾಗಿ ಮಾನಸಾ ದೇವಿ ದೇವಾಲಯ ಹರಿದ್ವಾರದಲ್ಲಿರುವ ಮತ್ತೊಂದು ಸಿದ್ಧಪೀಠವಾಗಿದೆ. ಚಂಡಿ ದೇವಾಲಯದಂತೆಯೆ ಮಾನಸಾ ದೇವಿಯ ದೇವಾಲಯವು ಶಿವಾಲಿಕ್ ಪರ್ವತ ಶ್ರೇಣಿಯ ಬಿಲ್ವ ಪರ್ವತದ ಮೇಲೆ ಸ್ಥಿತವಿದೆ. ಇದನ್ನು ಬಿಲ್ವ ತೀರ್ಥ ಎಂದೂ ಸಹ ಕರೆಯಲಾಗಿದ್ದು ಪಂಚತೀರ್ಥಗಳ ಪೈಕಿ ಇದು ಒಂದಾಗಿದೆ. ಇಲ್ಲಿಯೂ ದೇವಾಲಯ ತಲುಪಲು ಕೇಬಲ್ ಕಾರಿನ ವ್ಯವಸ್ಥೆಯಿದೆ.

ಹರಿದ್ವಾರಕ್ಕೆ ತಲುಪುವ ಬಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X