Search
  • Follow NativePlanet
Share
» »ಶ್ರಾವಣಮಾಸದಲ್ಲಿ ನಂದಿ ಇಲ್ಲದ ಶಿವಾಲಯ, ಜಡೆ ಇರುವ ಶಿವಲಿಂಗವನ್ನು ದರ್ಶನ ಮಾಡಿದರೆ...

ಶ್ರಾವಣಮಾಸದಲ್ಲಿ ನಂದಿ ಇಲ್ಲದ ಶಿವಾಲಯ, ಜಡೆ ಇರುವ ಶಿವಲಿಂಗವನ್ನು ದರ್ಶನ ಮಾಡಿದರೆ...

ಶ್ರಾವಣಮಾಸದಲ್ಲಿ ಹಿಂದುಗಳಿಗೆ ಪರಮ ಪವಿತ್ರವಾದ ತಿಂಗಳು ಎಂದೇ ಹೇಳಬಹುದು. ಮುಖ್ಯವಾಗಿ ಈ ಶ್ರಾವಣ ಮಾಸದಲ್ಲಿ ಶೈವರು ನಿಷ್ಟೆ-ಭಕ್ತಿಯಿಂದ ಇರುತ್ತಾರೆ. ಅದ್ದರಿಂದಲೇ ಶಿವಾಲಯಗಳಲ್ಲಿ ಈ ಶ್ರಾವಣ ಮಾಸದಲ್ಲಿ ಜನರಿಂದ ತುಂಬಿತುಳುಕುತ್ತಿರುತ್ತದೆ. ಈ ತಿಂಗಳು ಶಿವಾರಾಧನೆ ಮಾಡಿದ ಕುಟುಂಬದ ಸಮಸ್ಯೆಗಳೆಲ್ಲಾ ಪರಿಹಾರ ಮಾಡಿ ಪರಮಾತ್ಮನು ಒಳ್ಳೆಯದು ಮಾಡುತ್ತಾನೆ ಎಂದು ಭಕ್ತರು ನಂಬುತ್ತಾರೆ.

ಈ ಲೇಖನದ ಮೂಲಕ 2 ವಿಶಿಷ್ಟವಾದ ಶಿವಾಲಯಗಳಿಗೆ ಸಂಬಂಧಿಸಿದ ವಿವರಗಳನ್ನು ನೇಟಿವ್ ಪ್ಲಾನೆಟ್‍ನ ಮೂಲಕ ತಿಳಿದುಕೊಳ್ಳಿ. ಈ ವಿಶೇಷವಾದ ದೇವಾಲಯವನ್ನು ಸಂದರ್ಶನ ಮಾಡಿದರೆ ತಮ್ಮ ಕೋರಿಕೆಗಳು ನೆರವೇರುತ್ತವೆಯಂತೆ. ತಪ್ಪದೇ ಶ್ರಾವಣ ಮಾಸದಲ್ಲಿ ಭೇಟಿ ನೀಡಿ ಬನ್ನಿ....

1.ಶಿವಾಲಯ

1.ಶಿವಾಲಯ

PC:YOUTUBE

ಶಿವಾಲಯ ಎಂದ ತಕ್ಷಣ ನಮಗೆ ಸಾಧಾರಣವಾಗಿ ಒಂದು ಶಿವಲಿಂಗ ಹಾಗು ಎದುರಿನಲ್ಲಿ ನಂದಿ ಇರುವ ಒಂದು ಧಾರ್ಮಿಕ ಕ್ಷೇತ್ರವು ಗುರುತಿಗೆ ಬರುತ್ತದೆ. ಸಾಮಾನ್ಯವಾಗಿ ಶಿವಲಿಂಗದ ಎದುರು ನಂದಿಯು ಇದ್ದೇ ಇರುತ್ತಾರೆ. ಆದರೆ ಇದಕ್ಕೆ ಪೂರ್ತಿ ವಿರುದ್ಧವಾಗಿ ಒಂದು ಪುಣ್ಯಕ್ಷೇತ್ರವಿದೆ. ಅಂತಹ ಪುಣ್ಯಕ್ಷೇತ್ರವು ಭಾರತ ದೇಶದಲ್ಲಿಯೇ ಅಲ್ಲದೇ ಪ್ರಪಂಚದಲ್ಲಿಯೇ ಇದೊಂದೆ ದೇವಾಲಯ ಎಂದೇ ಹೇಳಬಹುದು. ಆ ಮಹಿಮಾನ್ವಿತವಾದ ದೇವಾಲಯವೇ ಸಿದ್ಧೇಶ್ವರ ದೇವಾಲಯ.

2.ಹೇಮಾವತಿ

2.ಹೇಮಾವತಿ

PC:YOUTUBE

ಈ ಮಹಿಮಾನ್ವಿತವಾದ ದೇವಾಲಯವು ಅನಂತಪುರ ಜಿಲ್ಲೆ ಅಮರಾಪುರಂನಲ್ಲಿನ ಹೇಮಾವತಿ ಗ್ರಾಮದಲ್ಲಿ ಈ ವಿಶಿಷ್ಟವಾದ ದೇವಾಲಯವಿದೆ. ಇಲ್ಲಿ ಮಹಾಶಿವನು ಲಿಂಗ ರೂಪದಲ್ಲಿ ಅಲ್ಲದೇ ಮಾನವ ರೂಪದಲ್ಲಿ ಭಕ್ತರಿಗೆ ದರ್ಶನವನ್ನು ಕರುಣಿಸುವುದು ವಿಶೇಷ. ಅಷ್ಟೇ ಅಲ್ಲದೇ, ಸ್ವಾಮಿಯು ಉಗ್ರ ರೂಪದಲ್ಲಿ ಇರುತ್ತಾನೆ. ಆತನ ಶಿರಸ್ಸಿನ ಮೇಲೆ ಚಂದ್ರನು ಇರುವುದು ಗಮನಾರ್ಹ.

3.ನಂದಿಯನ್ನು ಜೊತೆಯಲ್ಲಿ ಕಳುಹಿಸುತ್ತಾನೆ

3.ನಂದಿಯನ್ನು ಜೊತೆಯಲ್ಲಿ ಕಳುಹಿಸುತ್ತಾನೆ

PC:YOUTUBE

ಮುಖ್ಯವಾಗಿ ಇಲ್ಲಿನ ಶಿವಲಿಂಗದ ಎದುರು ನಂದಿ ಇರುವುದಿಲ್ಲ. ಇದಕ್ಕೆ ಸಂಬಂಧಿಸಿದ ಕಥೆ ಕೂಡ ಪ್ರಚಾರದಲ್ಲಿದೆ. ಪುರಾಣಗಳ ಪ್ರಕಾರ, ದಕ್ಷಯಜ್ಞವನ್ನು ಮಾಡುವ ಸಮಯದಲ್ಲಿ ಆಹ್ವಾನವಿಲ್ಲದೇ ಇದ್ದರು ಸತಿದೇವಿ ಆ ಯಾಗಕ್ಕೆ ಹೋಗುತ್ತಾಳೆ. ಆ ಸಮಯದಲ್ಲಿ ಮಹಾಶಿವನು ಸತಿ ದೇವಿಯ ಜೊತೆ ನಂದಿಯನ್ನು ಕಳುಹಿಸುತ್ತಾನೆ.

4.ಸತಿದೇವಿ

4.ಸತಿದೇವಿ

PC:YOUTUBE

ಆದರೆ ಅಲ್ಲಿ ನಡೆದ ಅವಮಾನದಿಂದಾಗಿ ಸತಿ ದೇವಿಯು ತನ್ನ ಪ್ರಾಣವನ್ನು ಅಗ್ನಿಗೆ ಆಹುತಿ ಮಾಡಿಕೊಳ್ಳುತ್ತಾಳೆ. ತನ್ನ ಪತ್ನಿಯ ಮರಣದ ಸಮಾಚಾರವನ್ನು ತಿಳಿದುಕೊಂಡ ಶಿವನು ಉಗ್ರತಾಂಡವ ಮಾಡುತ್ತಾನೆ. ಆ ಉಗ್ರ ಮಹಾಶಿವನ ರೂಪವೇ ಇಲ್ಲಿ ನಮಗೆ ಕಾಣಿಸುತ್ತದೆ. ಇನ್ನು ಸತಿಯ ಹಿಂದೆ ನಂದಿ ಹೋದ್ದರಿಂದ ಈ ದೇವಾಲಯದಲ್ಲಿ ನಂದಿ ವಿಗ್ರಹವು ನಮಗೆ ಕಾಣಿಸುವುದಿಲ್ಲ. ಈ ದೇವಾಲಯವನ್ನು ಶಿವನ ಪರಮ ಭಕ್ತನಾದ ನಾಳಂಬರಾಜನು ನಿರ್ಮಾಣ ಮಾಡಿಸಿದನು ಎಂದು ಇಲ್ಲಿನ ಶಾಸನಗಳ ಮೂಲಕ ತಿಳಿದುಕೊಳ್ಳಬಹುದು.

5.ಜಟಾಜೂಟ

5.ಜಟಾಜೂಟ

ಪರಮಶಿವನಿಗೆ ಜಟಾಜೂಟ ಇರುವುದು ನಮಗೆ ತಿಳಿದಿರುವುದೇ. ಆದರೆ ಶಿವಲಿಂಗ ರೂಪದಲ್ಲಿರುವ ಸಮಯದಲ್ಲಿ ಆ ಪರಮೇಶ್ವರನಿಗೆ ಜಟಾಜೂಟ ಇರುವುದಿಲ್ಲ. ಆದರೆ ಒಂದೇ ಒಂದು ಸ್ಥಳದಲ್ಲಿ ಮಾತ್ರ ಶಿವಲಿಂಗಕ್ಕೆ ಜಟಾಜೂಟವಿದೆ. ಅದೇ ತೂರ್ಪುಗೋದಾವರಿ ಜಿಲ್ಲೆಯಲ್ಲಿನ ಪಲಿವೆಲದಲ್ಲಿದೆ.

6.ಒಂದೇ ಜಗಲಿಯ ಮೇಲೆ

6.ಒಂದೇ ಜಗಲಿಯ ಮೇಲೆ

PC:YOUTUBE

ಪರಮ ಭಕ್ತನಾದ ಒಬ್ಬ ಪೂಜಾರಿಯನ್ನು ಮರಣದಿಂದ ರಕ್ಷಿಸುವ ಉದ್ದೇಶದಿಂದ ಈ ಶಿವಲಿಂಗದ ಮೇಲೆ ಜಟಾಜೂಟವನ್ನು ಶಿವನೇ ತನ್ನ ಮುಡಿಯನ್ನು ಸೃಷ್ಟಿಸಿಕೊಂಡನು ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ, ಒಂದೇ ಜಗಲಿಯ ಮೇಲೆ ಪಾರ್ವತಿ ಪರಮೇಶ್ವರರು ನೆಲೆಸಿದ್ದಾರೆ. ಪ್ರಪಂಚದಲ್ಲಿ ಒಂದೇ ಜಗಲಿಯ ಮೇಲೆ ಶಿವ ಪಾರ್ವತಿ ಇರುವುದು ಇಲ್ಲಿ ಮಾತ್ರವೇ ಎಂದೇ ಹೇಳಬಹುದು. ಇಲ್ಲಿ ನೆಲೆಸಿರುವ ಸ್ವಾಮಿಯನ್ನು ಕೊಪ್ಪು ಲಿಂಗೇಶ್ವರಸ್ವಾಮಿ ಎಂದು ಕರೆಯುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more