Search
  • Follow NativePlanet
Share
» »ಪ್ರತಿದಿನವು ವಿವಾಹವನ್ನು ಮಾಡಿಕೊಳ್ಳುವ ಸ್ವಾಮಿ... ಸಂದರ್ಶನದಿಂದ ಶೀಘ್ರವಾಗಿ ವಿವಾಹ ಪ್ರಾಪ್ತಿ...

ಪ್ರತಿದಿನವು ವಿವಾಹವನ್ನು ಮಾಡಿಕೊಳ್ಳುವ ಸ್ವಾಮಿ... ಸಂದರ್ಶನದಿಂದ ಶೀಘ್ರವಾಗಿ ವಿವಾಹ ಪ್ರಾಪ್ತಿ...

ಮೂರುಮಳ್ಳ ಪುರಾಣ ಪ್ರಾಧಾನ್ಯತೆಯನ್ನು ಹೊಂದಿರುವ ಪುಣಕ್ಷೇತ್ರವಾಗಿದೆ. ಇಲ್ಲಿ ವೀರಭದ್ರನಿಗೆ ಹಾಗು ಭಧ್ರಕಾಳಿಗೆ ಗಾಂಧರ್ವ ಪದ್ದತಿಯಲ್ಲಿ ವಿವಾಹ ನಡೆಯಿತು ಎಂದು ಸ್ಥಳ ಪುರಾಣವು ತಿಳಿಸುತ್ತದೆ. ಆ ಸಂಪ್ರದಾಯವು ಇಂದಿಗೂ ಕೂಡ ಮುಂದುವರೆಯುತ್ತಲೇ ಇದೆ. ಅದ್ದರಿಂದಲೇ ಇಲ್ಲಿ ಸ್ವಾಮಿಗೆ ವಿವಾಹವನ್ನು ಮಾಡಿಸಿದರೆ ತನ್ನ ಸಂತಾನಕ್ಕೆ ಶೀಘ್ರವಾಗಿ ವಿವಾಹವಾಗುತ್ತದೆ ಎಂದಯ ಭಕ್ತರ ನಂಬಿಕೆ.

ಹಾಗಾಗಿಯೇ ಸುಮಾರು ತಿಂಗಳಕ್ಕಿಂತ ಮುಂಚೆಯೇ ವಿವಾಹ ಮಹೋತ್ಸವವನ್ನು ಮಾಡಲು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುತ್ತಾರೆ. ಸತತ ಮೂರು ಗಂಟೆಗಳ ಕಾಲ ನಡೆಯುವ ಈ ವಿವಾಹ ಮಹೋತ್ಸವವನ್ನು ನೋಡುವುದಕ್ಕೆ ನಿತ್ಯವು ಸಾವಿರಾರು ಮಂದಿ ಭಕ್ತರು ಮೂರುಮಳ್ಳ ವೀರೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ಶಿವರಾತ್ರಿಯ ಸಮಯದಲ್ಲಿ ಮೂರುಮಳ್ಳ ವೀರೇಶ್ವರಸ್ವಾಮಿ ದೇವಾಲಯವು ಭೂ ಕೈಲಾಸವಾಗಿ ಕಂಗೊಳಿಸುತ್ತಿರುತ್ತದೆ. ಈ ಮೂಲಕ ಈ ವಿಶೇಷವಾದ ದೇವಾಲಯದ ಸ್ಥಳ ಪುರಾಣದ ಬಗ್ಗೆ ತಿಳಿದುಕೊಂಡು ನೀವು ಕೂಡ ಒಮ್ಮೆ ಭೇಟಿ ನೀಡಿ ಬನ್ನಿ.

1.ಮೂರುಮಳ್ಳ

1.ಮೂರುಮಳ್ಳ

PC:YOUTUBE

ವೃದ್ಧ ಗೌತಮಿ ನದಿ ತೀರದಲ್ಲಿ ನೆಲೆಸಿರುವ ಸುಪ್ರಸಿದ್ಧ ಶೈವಕ್ಷೇತ್ರವೇ ಮೂರುಮಳ್ಳ. ಇಲ್ಲಿ ಪ್ರಧಾನವಾದ ದೈವವಾಗಿ ಭದ್ರಕಾಳಿ ಸಮೇತ ವೀರೇಶ್ವರಸ್ವಾಮಿಯು ನೆಲೆಸಿದ್ದಾರೆ. ಪುರಾಣ ಕಥೆಯ ಪ್ರಕಾರ ಪೂರ್ವದಲ್ಲಿ ದಕ್ಷನು ಒಂದು ದೊಡ್ಡದಾದ ಯಾಗವನ್ನು ಮಾಡಬೇಕು ಎಂದು ಭಾವಿಸುತ್ತಾನೆ.

2.ದಕ್ಷಪ್ರಜಾಪತಿ

2.ದಕ್ಷಪ್ರಜಾಪತಿ

PC:YOUTUBE

ಆದರೆ ಈ ವಿವಾಹ ದಕ್ಷಪ್ರಜಾಪತಿಗೆ ಇಷ್ಟವಿರುವುದಿಲ್ಲ. ಆದ್ದರಿಂದಲೇ ತನ್ನ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಕೂಡ ತನ್ನ ಮಗಳಾದ ದಾಕ್ಷಾಯಣಿಗೇ ಆಗಲಿ ಆಳಿಯನಾದ ಪರಮಶಿವನಿಗೆ ಆಗಲಿ ಕರೆಯುತ್ತಿರುವುದಿಲ್ಲ.

3.ಯಾಗ

3.ಯಾಗ

PC:YOUTUBE

ಈ ಕ್ರಮದಲ್ಲಿಯೇ ಒಮ್ಮೆ ದಕ್ಷನು ಒಂದು ದೊಡ್ಡ ಯಾಗವನ್ನು ಮಾಡಬೇಕು ಎಂದು ಭಾವಿಸುತ್ತಾನೆ. ಈ ವಿಷಯವನ್ನು ತಿಳಿದುಕೊಂಡ ದಾಕ್ಷಾಯಣಿಯು ತನಗೆ ಆಹ್ವಾನ ಇಲ್ಲದೆ ಇದ್ದರು, ಪತಿಯು ಬೇಡ ಎಂದು ಹೇಳಿದರೂ ಕೇಳದೆ ತವರು ಮನೆಯ ಮೇಲೆ ಮಮಕಾರದಿಂದಾಗಿ ಯಾಗ ನಡೆಯುತ್ತಿರುವ ಸ್ಥಳಕ್ಕೆ ತೆರಳುತ್ತಾಳೆ. ದಕ್ಷಪ್ರಜಾಪತಿಯು ಆಕೆಯನ್ನು ಹಾಗು ಪರಮಶಿವನನ್ನು ಅವಮಾನಿಸುತ್ತಾನೆ. ಇದರಿಂದ ಅವಮಾನಿತಳಾಗಿ ಆತ್ಮಹೂತಿ ಮಾಡಿಕೊಳ್ಳುತ್ತಾಳೆ.

4.ವೀರಭದ್ರ

4.ವೀರಭದ್ರ

PC:YOUTUBE

ಈ ವಿಷಯಯನ್ನು ತಿಳಿದುಕೊಂಡ ಪರಮೇಶ್ವರನು ಅತ್ಯಂತ ಕೋಪದಿಂದ ರುದ್ರನಾಗಿ ತನ್ನ ಜಠಾಜೂಟದಿಂದ ವೀರಭದ್ರನನ್ನು ಸೃಷ್ಟಿಸಿ ಆತನ ಮೂಲಕ ಯಾಗವನ್ನು ಧ್ವಂಸಗೊಳಿಸುತ್ತಾನೆ. ತನ್ನ ಪತ್ನಿಯಾದ ದಾಕ್ಷಾಯಣಿಯ ಪಾರ್ಥಿವ ಶರೀರವನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಪ್ರಳಯ ತಾಂಡವ ಮಾಡುತ್ತಾನೆ.

5.ಆದಿಪರಾಶಕ್ತಿ

5.ಆದಿಪರಾಶಕ್ತಿ

PC:YOUTUBE

ಇದರಿಂದಾಗಿ ದೇವತೆಗಳೆಲ್ಲಾ ಸೇರಿ ಆದಿಪರಾಶಕ್ತಿಯನ್ನು ಪ್ರಾರ್ಥಿಸುತ್ತಾರೆ. ಆಕೆಯು ಪ್ರತ್ಯಕ್ಷವಾಗಿ ಈ ಎಲ್ಲಾ ವಿಷಯವನ್ನು ತಿಳಿದುಕೊಂಡು ತನ್ನ ಷೋಡಶ ಕಳೆಯಿಂದ ಒಬ್ಬ ಭದ್ರಕಾಳಿಯನ್ನು ವೀರಭದ್ರನಿಗೆ ಶಾಂತಿಗೊಳಿಸುವ ಸಲುವಾಗಿ ಭೂಲೋಕಕ್ಕೆ ಕಳುಹಿಸುತ್ತಾಳೆ.

6.ಭದ್ರಕಾಳಿ

6.ಭದ್ರಕಾಳಿ

PC:YOUTUBE

ಭದ್ರಕಾಳಿ ದೇವಿಯು ಮೂರುಮಳ್ಳ ಸಮೀಪದಲ್ಲಿರುವ ತಟಾಕದಲ್ಲಿ ಮುಳುಗಿ ಕನ್ಯರೂಪವನ್ನು ಪಡೆದು ತಟಾಕದಿಂದ ಹೊರಗೆ ಬರುತ್ತಾಳೆ. ಕನ್ಯ ರೂಪದಲ್ಲಿರುವ ಭದ್ರಕಾಳಿಯನ್ನು ಕಂಡ ವೀರೇಶ್ವರನು ಶಾಂತಿಗೊಳ್ಳುತ್ತಾನೆ.

7.ವಿವಾಹ

7.ವಿವಾಹ

PC:YOUTUBE

ಶೀಘ್ರವಾಗಿ ಅಲ್ಲಿರುವ ಮುನಿಗಳು ಅವರಿಬ್ಬರಿಗೆ ಗಾಂಧರ್ವ ಪದ್ದತಿಯಲ್ಲಿ ವಿವಾಹ ಮಾಡಿಸುತ್ತಾರೆ. ಮುನಿಗಳು ಸಂಚರಿಸಿದ ಪ್ರದೇಶವಾದ್ದರಿಂದ ಒಂದು ಕಾಲದಲ್ಲಿ ಈ ಪ್ರದೇಶಕ್ಕೆ ಮುನಿಮಂಡಲಿ ಎಂದು ಕೂಡ ಕರೆಯುತ್ತಿದ್ದರು. ಆ ಮುನಿಮಂಡಲಿ ಪ್ರದೇಶವೇ ಕಾಲಕ್ರಮೇಣ ಮೂರುಮಳ್ಳವಾಗಿ ಮಾರ್ಪಾಟಾಯಿತು.

8.ವಿವಾಹ ಪ್ರಾಪ್ತಿ

8.ವಿವಾಹ ಪ್ರಾಪ್ತಿ

PC:YOUTUBE

ಆ ದಿನದಿಂದ ಅಲ್ಲಿಯೇ ನೆಲೆಸಿದ ಸ್ವಾಮಿಗೆ ಮುನಿಗಳೆಲ್ಲಾ ಸೇರಿ ಗಾಂಧರ್ವ ಪದ್ದತಿಯಲ್ಲಿ ಕಲ್ಯಾಣವನನು ಮಾಡಿಸುತ್ತಾರೆ. ತಮ್ಮ ಮಕ್ಕಳಿಗೆ ವಿವಾಹವು ತಡವಾಗುತ್ತಿದ್ದರೆ ಇಲ್ಲಿನ ಸ್ವಾಮಿಗೆ ಕಲ್ಯಾಣ ಮಾಡಿದರೆ ಶೀಘ್ರವಾಗಿ ವಿವಾಹವಾಗುತ್ತದೆ ಎಂದು ಅನೇಕ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

9. ವಿವಾಹ ಮಹೋತ್ಸವ

9. ವಿವಾಹ ಮಹೋತ್ಸವ

PC:YOUTUBE

ಹಾಗೆ ಭಕ್ತರು ನಡೆಸುವ ವಿವಾಹವು ನಿತ್ಯವು ನಡೆಯುತ್ತಿರುತ್ತದೆ. ಅನಾದಿಕಾಲದಿಂದಲೂ ಮಾಡುತ್ತಿರುವ ಈ ವಿವಾಹ ಮಹೋತ್ಸವವನ್ನು ನಡೆಸುವ ಪದ್ದತಿಯು ಭಕ್ತರನ್ನು ಆನಂದ ಪರವಶದಲ್ಲಿ ಮುಳುಗಿಸುತ್ತದೆ, ಬಾಜಾ ಭಜಂತ್ರಿಗಳಿಂದ ಹಾಗು ಮೇಳಗಳಿಂದ ಉತ್ಸವ ಪ್ರಾರಂಭಿಸುತ್ತಾರೆ. ಆ ಸುಂದರವಾದ ಸನ್ನಿವೇಶವನ್ನು ಕಾಣಲು ಎರಡು ಕಣ್ಣುಗಳು ಸಾಲಾದು.

10.ಅದ್ದಾಲ ಮಂಟಪ

10.ಅದ್ದಾಲ ಮಂಟಪ

PC:YOUTUBE

ಒಂದು ಪಕ್ಕದಲ್ಲಿ ಆರ್ಚಕರು ಮಂತ್ರವನ್ನು ಹೇಳುತ್ತಿದ್ದರೆ, ಮತ್ತೊಂದು ಕಡೆ ಪುರೋಹಿತರು ಸ್ವಾಮಿಯ ವಿವಾಹವನ್ನು ನಿರ್ವಹಿಸುತ್ತಿರುತ್ತಾರೆ. ವಿವಾಹದ ನಂತರ ಸ್ವಾಮಿಗೆ ಹಾಗು ದೇವಿಗೆ ಕನ್ನಡಿಯ ಮಂಟಪ (ಅದ್ದಾಲ ಮಂಟಪ)ಕ್ಕೆ ಕರೆದುಕೊಂಡು ಹೋಗುತ್ತಾರೆ.

11.ಅಭಿಷೇಕ

11.ಅಭಿಷೇಕ

PC:YOUTUBE

ಇನ್ನು ಪವಳಿಂಪು ಎಂದು ಸೇವೆಯಾದ ನಂತರ ಕಲ್ಯಾಣ ಮಹೋತ್ಸವವು ಮುಗಿಯುತ್ತದೆ. ಸುಮಾರು ಮೂರು ಗಂಟೆಗಳ ಕಾಲ ಈ ವಿವಾಹ ಮಹೋತ್ಸವವು ನಡೆಯುತ್ತದೆ. ಕಲ್ಯಾಣ ನಡೆಸುವ ಭಕ್ತರು ಸ್ವಾಮಿಗೆ ಬೆಳಗಿನ ಸಮಯದಲ್ಲಿ ಅಭಿಷೇಕವನ್ನು ಮಾಡುತ್ತಾರೆ.

12.ತೆರಳುವ ಬಗೆ ಹೇಗೆ?

12.ತೆರಳುವ ಬಗೆ ಹೇಗೆ?

PC:YOUTUBE

ದಿನಕ್ಕೆ ಇಷ್ಟು ಎಂದು ಕಲ್ಯಾಣಗಳಿಗೆ ಲೆಕ್ಕ ಇರುವುದರಿಂದ ಭಕ್ತರು ಸುಮಾರು ತಿಂಗಳಿಗಿಂತ ಮುಂಚೆಯೇ ತಮ್ಮ ಹೆಸರುಗಳನ್ನು ನಮೂದು ಮಾಡಿಕೊಳ್ಳುತ್ತಾರೆ. ದೂರಪ್ರದೇಶಗಳಿಂದ ಬರುವ ಭಕ್ತರಿಗಾಗಿ ನಿತ್ಯಾ ಅನ್ನದಾನ, ವಸತಿ ಸೌಕರ್ಯವಿದೆ. ಕಾಕಿನಾಡದಿಂದ ಕೇವಲ 36 ಕಿ.ಮೀ ದೂರದಲ್ಲಿ ಹಾಗು ರಾಜಮಂಡ್ರಿಯಿಂದ 90 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more