Search
  • Follow NativePlanet
Share
» »ಇನ್ನುಮುಂದೆ ಮುಂಬೈನಿಂದ ಗೋವಾಕ್ಕೆ ಶಿಪ್‌ನಲ್ಲಿ ಪ್ರಯಾಣಿಸಬಹುದು

ಇನ್ನುಮುಂದೆ ಮುಂಬೈನಿಂದ ಗೋವಾಕ್ಕೆ ಶಿಪ್‌ನಲ್ಲಿ ಪ್ರಯಾಣಿಸಬಹುದು

ಗೋವಾಕ್ಕೆ ಹೆಚ್ಚಿನವರು ಹೋಗೋದೇ ಬೀಚ್ ನೋಡೋಕೆ. ಗೋವಾದಲ್ಲಿನ ಪಾಶ್ಚಾತ್ಯ ಸಂಸ್ಕೃತಿಯನ್ನು ನೋಡಲು, ಪಾರ್ಟಿ ಮಾಡಲು. ಹೀಗಿರುವಾಗ ನಿಮ್ಮ ಗೋವಾ ಪ್ರಯಾಣ ಇನ್ನಷ್ಟು ರೋಮಾಂಚನಕಾರಿಯಾಗಲಿದೆ. ಅದು ಹೇಗೆಂದರೆ ಮುಂಬೈನಿಂದ ಗೋವಾಕ್ಕೆ ಹೋಗಲು ವಿಮಾನವಾಗಲಿ, ರೈಲು , ಬಸ್ ಬುಕ್ ಮಾಡಬೇಕೆಂದೇನಿಲ್ಲ. ಬದಲಾಗಿ ಬೋಟ್‌ನಲ್ಲಿ ಹೋಗಬಹುದು.

ಟಿಕೇಟ್‌ ದರ 7 ಸಾವಿರ ರೂ.

ಟಿಕೇಟ್‌ ದರ 7 ಸಾವಿರ ರೂ.

ಹೌದು ಮುಂಬೈನಿಂದ ಗೋವಾಕ್ಕೆ ನೀವು ಬೋಟ್‌ನಲ್ಲಿ ತಲುಪಬಹುದು. ಈ ವ್ಯವಸ್ಥೆ ಇತ್ತೀಚೆಗೆ ಪ್ರಾರಂಭವಾಗಿದೆ. ಓರ್ವ ವ್ಯಕ್ತಿಗೆ 7ಸಾವಿರ ರೂ. ಖರ್ಚಾಗುತ್ತದೆ. ಆಗಸ್ಟ್‌ 1 ರಿಂದ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಗೋವಾ ಪ್ರಯಾಣ ಇನ್ನಷ್ಟು ಖುಷಿ ನೀಡಲಿದೆ. ಶಿಪ್‌ನಲ್ಲಿ 6 ಕೆಟಗರಿಗಳಿರುತ್ತದೆ. ಕ್ರೂಜ್‌ನ್ನು ಚಲಾಯಿಸು ಸೀ ಈಗಲ್ ಕಂಪನಿಯ ಪ್ರಕಾರ ಈ ಕ್ರೂಜ್‌ನಲ್ಲಿ 6 ವಿಭಾಗಗಳಿರುತ್ತವೆ, ಟಿಕೇಟ್‌ನಲ್ಲಿ ಊಟ, ರಿಫ್ರೆಶ್‌ಮೆಂಟ್ ಹಾಗೂ ಬ್ರೇಕ್‌ಫಾಸ್ಟ್ ಸೇರಿರುತ್ತದೆ.

500 ಮಂದಿ ಪ್ರಯಾಣಿಸಬಹುದು

500 ಮಂದಿ ಪ್ರಯಾಣಿಸಬಹುದು

ಒಂದು ಕ್ರೂಜ್‌ನಲ್ಲಿ ಒಮ್ಮೆಗೆ 500 ಮಂದಿ ಪ್ರಯಾಣಿಸಬಹುದು. ಮುಂಬೈನಿಂದ ಗೋವಾ ಹೋಗುವ ಈ ಶಿಪ್‌ನಲ್ಲಿ ರತ್ನಗಿರಿ, ಮಾಲ್ವಾನಾ, ವಿಜಯ್‌fದುರ್ಗಾ ಹಾಗೂ ರಾಯ್‌ಘಡ್‌ನಂತಹ ಸ್ಥಳಗಳಿಗೆ ಪ್ಲಾನ್ಡ್‌ ಹಾಲ್ಟ್‌ ಕೂಡಾ ಇರುತ್ತದೆ.

ಸಮಯ

ಸಮಯ

ಮುಂಬೈ ಪೋರ್ಟ್ ಟ್ರಸ್ಟ್‌ನ ಅಧ್ಯಕ್ಷ ಸಂಜೀವ್‌ ಭಾಟಿಯಾ ಪ್ರಕಾರ ವಾತಾವರಣ ಚೆನ್ನಾಗಿರುವಾಗ ಕ್ರೂಜ್‌ನ್ನು ಅಪರೇಟ್ ಮಾಡಲಾಗುತ್ತದೆ. ಪ್ರತಿದಿನ ಸಂಜೆ 5 ಗಂಟೆಗೆ ಕ್ರೂಜ್ ಮುಂಬೈನಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ 9 ಗಂಟೆಗೆ ಗೋವಾ ತಲುಪುತ್ತದೆ.

ಐಷರಾಮಿ ವ್ಯವಸ್ಥೆ

ಐಷರಾಮಿ ವ್ಯವಸ್ಥೆ

ಕ್ರೂಜ್‌ನಲ್ಲಿ 8 ರೆಸ್ಟೋರೆಂಟ್ ಹಾಗೂ ಬಾರ್‌ನ್ನು ಹೊರತುಪಡಿಸಿ 24 ಗಂಟೆ ಓಪನ್ ಇರುವ ಕಾಫೀ ಶಾಪ್ ಇರುತ್ತದೆ. ಜೊತೆಗೆ ಅತಿಥಿಗಳ ಮೆಚ್ಚಿನ ಡಿಶ್‌ಗಳೂ ಇರುತ್ತದೆ. ಒಂದು ಸ್ವಿಮ್ಮಿಂಗ್ ಪೂಲ್ ಹಾಗೂ ಮನೋರಂಜನೆಯ ಕೋಣೆ ಕೂಡಾ ಇದೆ. ಕ್ರೂಜ್‌ನ್ನು ಸುಂದರವಾರ ಪೈಂಟಿಂಗ್ ಹಾಗೂ ಚಿತ್ರಗಳ ಮೂಳಕ ಅಲಂಕರಿಸಲಾಗಿದೆ.

ಮೊದಲಿಬಿಂದಲೂ ಇದೆ ಈ ಸೌಲಭ್ಯ

ಮೊದಲಿಬಿಂದಲೂ ಇದೆ ಈ ಸೌಲಭ್ಯ

ಮುಂಬೈನಿಂದ ಗೋವಾಕ್ಕೆ ಕ್ರೂಜ್ ಸೌಲಭ್ಯ ಇದೇ ಮೊದಲಬಾರಿಗೆ ಆಗಿರಬಹುದು. ಆದರೆ ಹಲವಾರು ಅಂತರಾಷ್ಟ್ರೀಯ ಕಂಪನಿಗಳು ಬೇರೆ ಬೇರೆ ಸ್ಥಳಗಳಿಗೆ ಕ್ರೂಜ್ ಸೌಲಭ್ಯವನ್ನು ಒದಗಿಸಿವೆ. ಇದನ್ನು ಹೊರತುಪಡಿಸಿ ಕೋಸ್ಟಲೈನ್ ಕ್ರೂಜ್ ಸರ್ವಿಸ್ ನಿಂದ ನೀವು ಮುಂಬೈನಿಂದ ಮಾಲ್ಡೀವ್ಸ್‌ಗೆ ಹೋಗಬಹುದಾಗಿತ್ತು. ಅನೇಕ ಶಿಪ್ ಕಂಪನಿಗಳು ಮುಂಬೈ-ಗೋವಾವನ್ನು ಹೊರತುಪಡಿಸಿ ಕೊಚ್ಚಿನ್‌ಗೂ ಶಿಪ್‌ ವ್ಯವಸ್ಥೆ ಇದೆ. ಈ ಕ್ರೂಜ್ ಸೌಲಭ್ಯವನ್ನು ಪಡೆಯಲು ಆನ್‌ಲೈನ್‌ ಮೂಲಕ ಟಿಕೇಟ್‌ ಬುಕ್ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X