Search
  • Follow NativePlanet
Share
» »2017 ರಲ್ಲಿ ಭಾರತದ ಅತಿ ಹೆಚ್ಚು ಭೇಟಿ ನೀಡಿದ ಪರಂಪರೆಯ ತಾಣಗಳ ರಚನೆಗಳು

2017 ರಲ್ಲಿ ಭಾರತದ ಅತಿ ಹೆಚ್ಚು ಭೇಟಿ ನೀಡಿದ ಪರಂಪರೆಯ ತಾಣಗಳ ರಚನೆಗಳು

By Manjula Balaraj Tantry

ಸುಮಾರು 5000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವುಳ್ಳ ಭಾರತದಲ್ಲಿ ಇಂದಿಗೂ ಪ್ರಸಿದ್ದಿ ಪಡೆದ ಅನೇಕ ಸ್ಮಾರಕಗಳಿವೆ ಇವುಗಳನ್ನು ಒಳಗೊಂಡ ಸ್ಥಳಗಳು ಪರಂಪರೆಯ ತಾಣಗಳೆನಿಸಿವೆ. ಭಾರತವು ಸಂಸ್ಕ್ರೃತಿ ಕಲೆ, ಸಂಗೀತ, ವಾಸ್ತುಶಿಲ್ಪ, ತತ್ವಶಾಸ್ತ್ರ ಮತ್ತು ಆಧ್ಯಾತ್ಮ ಮುಂತಾದ ನಿಧಿಗಳನ್ನೊಳಗೊಂಡ ಭಂಡಾರವೇ ಆಗಿದೆ. ಇದು ಹಿಂದಿನ ಕಾಲದಿಂದಲೂ ವಿಶ್ವದಾದ್ಯಂತ ಪ್ರವಾಸಿಗರು, ವಿದ್ವಾಂಸರು ಮತ್ತು ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತಲೇ ಬಂದಿದೆ.

ದೇಶದ ಪುರಾತನ ಅವಶೇಷಗಳು ಮತ್ತು ವಾಸ್ತುಶಿಲ್ಪದ ಅವಶೇಷಗಳನ್ನು ಅನ್ವೇಷಿಸುವ ಅನುಭವವನ್ನು ದಟ್ಟವಾದ ನಗರಗಳು, ಬೀದಿಗಳು ಮತ್ತು ರಸ್ತೆಗಳಲ್ಲೂ ಪಡೆಯಬಹುದು. ಭಾರತವು ಒಂದು ದೊಡ್ಡ ದೇಶವಾಗಿದ್ದು ಇಲ್ಲಿ ಸಂಪ್ರದಾಯ ಮತ್ತು ಆಧುನಿಕತೆಗಳ ಸಮ್ಮಿಲನವಿದೆ. ಭಾರತದ ಪಾರಂಪರಿಕ ರಚನೆಗಳು ಅವುಗಳ ಇತಿಹಾಸದ ಪ್ರಸಿದ್ದಿಯಿಂದ ಇಂದಿಗೂ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತದಲ್ಲಿ ಹೆಚ್ಚು ಪ್ರಸಿದ್ದಿ ಪಡೆದ ಪರಂಪರೆಯ ರಚನೆಗಳ ಬಗ್ಗೆ ಒಮ್ಮೆ ಅನ್ವೇಷಣೆ ನಡೆಸೋಣ

ತಾಜ್ ಮಹಲ್

ತಾಜ್ ಮಹಲ್

ಹಲವರು ಮಾರ್ಬಲ್ ನಲ್ಲಿ ಕವನವಾಗಿ ಇದನ್ನು ಪರಿಗಣಿಸಿದ್ದಾರೆ, ತಾಜ್ ಮಹಲ್ ಅನ್ನು ಷಹಜಹಾನ್ ತನ್ನ ಅತ್ಯಂತ ಪ್ರೀತಿಪಾತ್ರ ರಾಣಿಯಾಗಿದ್ದ ಮುಮ್ತಾಜ್ ಹೆಸರಿನಲ್ಲಿ ಕಟ್ಟಿಸಿದ ಸಮಾಧಿಯಾಗಿದೆ.

20,000 ಕುಶಲಕರ್ಮಿಗಳ ಸಹಾಯದಿಂದ ಸುಮಾರು 21 ವರ್ಷಗಳ ಅವಧಿಯಲ್ಲಿ, ಈ ಭವ್ಯ ಸ್ಮಾರಕವನ್ನು ಆಗ್ರಾದಲ್ಲಿನ ಯಮುನಾ ನದಿ ತೀರದಲ್ಲಿ ನಿರ್ಮಿಸಲಾಯಿತು. ರಚನೆಯು ಎತ್ತರದ ಸ್ಮಾರಕವಾಗಿದ್ದು ಅದರ ಗೋಡೆಗಳ ಮೇಲೆ ಕೆತ್ತನೆಯು ಸಂಕೀರ್ಣದ ವಿವರಣೆಯನ್ನು ತೋರಿಸುತ್ತದೆ.

ತಾಜ್ ತನ್ನ ಸಂಕೀರ್ಣದ ರೇಖಾಗಣಿತದ ಮಾದರಿಗಳಿಂದಾಗಿ ಮತ್ತು ಕುಶಲ ಕರ್ಮಿಗಳ ಚಾಕ ಚಾಕ್ಯತೆಯನ್ನು ಪ್ರತಿಬಿಂಬಿಸುತ್ತದೆ ಆದುದರಿಂದ ಇತಿಹಾಸಕಾರರು ಮತ್ತು ಪುರಾತತ್ವಜ್ಞರನ್ನು ಆಕರ್ಷಿಸುತ್ತದೆ.

PC: Suraj rajiv

ಹಂಪಿಯ ಸ್ಮಾರಕಗಳ ಗುಂಪುಗಳು

ಹಂಪಿಯ ಸ್ಮಾರಕಗಳ ಗುಂಪುಗಳು

ನಿಮಗೆ ಅವಶೇಷಗಳನ್ನು ಅನ್ವೇಷಿಸುವ ಇಚ್ಚೆ ಇದ್ದವರಾದಲ್ಲಿ ಹಂಪೆಯ ಅಳಿದುಳಿದ ಅವಶೇಷಗಳ ಸ್ಮಾರಕಗಳ ಗುಂಪುಗಳಲ್ಲಿ ನಿಮ್ಮ ಬಯಕೆಯನ್ನು ಪೂರೈಸಿಕೊಳ್ಳಿ. ಇಲ್ಲಿನ ಅವಶೇಷಗಳು 14ನೇ ಮತ್ತು 16ನೇ ಶತಮಾನದ ಹಿಂದಿನ ದೇವಾಲಯಗಳು ಮತ್ತು ಅರಮನೆಗಳು ಒಳಗೊಂಡಿವೆ.

1986 ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟ ಈ ತಾಣವು ಅನೇಕ ಪ್ರಮಾಣದಲ್ಲಿ ಪ್ರವಾಸಿಗರನ್ನು ತನ್ನ ಐತಿಹಾಸಿಕ ಮಹತ್ವದಿಂದ ಮಾತ್ರವಲ್ಲದೆ ಅದ್ಬುತವಾದ ಮತ್ತು ಸುಂದರವಾದ ವಾಸ್ತುಶಿಲ್ಪಕಲೆಗಳು ಮತ್ತು ಇಲ್ಲಿಯ ಪರಿಸರವು ಕೂಡ ಆಕರ್ಷಿಸುತ್ತದೆ.

PC: Apadegal


ಸಾಂಚಿಯ ಬೌದ್ಧ ಸ್ಮಾರಕಗಳು

ಸಾಂಚಿಯ ಬೌದ್ಧ ಸ್ಮಾರಕಗಳು

ದೇಶದ ಅತ್ಯಂತ ಪ್ರಾಚೀನವಾದ ಹಾಗು ಪರಂಪರೆಯ ಬೌದ್ದರ ಅಭಯಾರಣ್ಯವನ್ನು ಭೇಟಿ ಮಾಡದೇ ರಜಾದಿನಗಳು ಪರಿಪೂರ್ಣವೆನಿಸುವುದಿಲ್ಲ. ಇದು 12ನೇ ಶತಮಾನದ ಅವಥ್ಯಲ್ಲಿ ಪ್ರಮುಖ ಬೌದ್ಧ ಕೇಂದ್ರವಾಗಿತ್ತು. ಈ ತಾಣವು ಅನೇಕ ಬೌದ್ದ ಸ್ಮಾರಕಗಳನ್ನೊಳಗೊಂಡಿದೆ. ಏಕಶಿಲೆಯ ಸ್ತಂಭಗಳು, ಬೌದ್ಧ ಮಠಗಳು, ಅರಮನೆಗಳು ಮತ್ತು ದೇವಸ್ಥಾನಗಳು ಇವುಗಳಲ್ಲಿ ಹೆಚ್ಚಿನವುಗಳು. 1 ಮತ್ತು 2 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ.

ಇಲ್ಲಿನ ಅತ್ಯಂತ ಪ್ರಸಿದ್ಧ ಸ್ಮಾರಕವೆಂದರೆ ಬೃಹತ್ ಗುಮ್ಮಟ ಅಥವಾ ಸ್ತೂಪವು ಚಕ್ರವರ್ತಿ ಅಶೋಕನಿಂದ ನಿರ್ಮಿಸಲ್ಪಟ್ಟಿದ್ದಾಗಿದೆ.

PC: Asitjain

ಅಜಂತಾ ಮತ್ತು ಎಲ್ಲೋರಾದ ಗುಹೆಗಳು

ಅಜಂತಾ ಮತ್ತು ಎಲ್ಲೋರಾದ ಗುಹೆಗಳು

ಕ್ರಿ.ಪೂ 2ನೇ ಶತಮಾನದಿಂದಲೂ ಇರುವ ಔರಂಗಬಾದಿನ ಸಹ್ಯಾದ್ರಿ ವ್ಯಾಪ್ತಿಯಲ್ಲಿ ಮಂತ್ರಮುಗ್ದರನ್ನಾಗಿಸುವ ಅಜಂತಾ ಮತ್ತು ಎಲ್ಲೋರಾ ಗಳಿವೆ. ಈ ಗುಹೆಗಳು ದೇಶದ ಪ್ರಾಚೀನ ವಾಸ್ತುಶಿಲ್ಪ ಕಲೆಗೆ ಒಂದು ಉತ್ತಮ ಉದಾಹರಣೆಯಾಗಿದ್ದು ಇದನ್ನು ನುರಿತ ಕುಶಲಕರ್ಮಿಗಳ ಕೈಚಳಕದಿಂದ ನಿರ್ಮಿಸಲ್ಪಟ್ಟಿದೆ.

ಎಲ್ಲೋರಾದಲ್ಲಿ ಸುಮಾರು ಕ್ರಿ .ಶ 350 ಯಿಂದ 700 ಕ್ರಿ.ಶ ಮಧ್ಯದ ಅವಧಿಯ ಒಟ್ಟು 34 ಗುಹೆಗಳನ್ನು ಕಾಣಬಹುದಾಗಿದೆ. ಇಲ್ಲಿ ಹಿಂದೂ, ಬೌದ್ದ ಮತ್ತು ಜೈನ ಮತಕ್ಕೆ ಅನ್ವಯಿಸಿದ ಹಲವಾರು ಕೆತ್ತನೆಗಳನ್ನು ಕಾಣಬಹುದು. ಅಜಂತಾದಲ್ಲಿ ಸುಮಾರು ಕ್ರಿ.ಪೂ 200 ಯಿಂದ ಕ್ರಿ.ಪೂ 650 ಮಧ್ಯದ ಅವಧಿಯಲ್ಲಿ ನಿರ್ಮಿಸಲಾಗಿರುವ 29 ಗುಹೆಗಳನ್ನು ಕಾಣಬಹುದು ಮತ್ತು ಇವು ಅನೇಕ ಬೌದ್ದ ಕಥೆಗಳನ್ನು ವಿವರಿಸುತ್ತದೆ.

PC: C .SHELARE

ಖಜುರಾಹೋ ನ ಸ್ಮಾರಕಗಳು

ಖಜುರಾಹೋ ನ ಸ್ಮಾರಕಗಳು

ಶೃಂಗಾರ ಕೆತ್ತನೆಗಳು ಖಜುರಾಹೊ ಗುಂಪಿನ ದೇವಾಲಯಗಳ ಪ್ರಮುಖ ವಿಶೇಷವಾಗಿದೆ. ಇವು ಚಂದೇಲಾ ರಾಜವಂಶದ ಆಡಳಿತಗಾರರಿಂದ ಕ್ರಿ.ಶ 950-1050 ವರ್ಷಗಳ ನಡುವೆ ನಿರ್ಮಿಸಲ್ಪಟ್ಟಿವೆ ಎಂದು ನಂಬಲಾಗಿದೆ. ಇಲ್ಲಿಯ ಸ್ಮಾರಕಗಳ ಗುಂಪುಗಳು ಹಿಂದು ಮತ್ತು ಜೈನ ದೇವಾಲಯಗಳನ್ನು ಒಳಗೊಂಡಿದ್ದು ಇವು ದೇಶದ ವಾಸ್ತುಶಿಲ್ಪ ಅದ್ಬುತವನ್ನು ಪ್ರತಿಬಿಂಬಿಸುತ್ತದೆ.

ಮೂಲತಃ ಇಲ್ಲಿ 85 ರಚನೆಗಳಿದ್ದು ಅವುಗಳಲ್ಲಿ ಇವುಗಳಲ್ಲಿ ಕೇವಲ 22 ಪರಿಕ್ಷೆಗೆ ಒಳಪಟ್ಟಿವೆ. ಅವುಗಳಲ್ಲಿ ಸ್ಮಾರಕಗಳು ಅನೇಕ ಬಣ್ಣಗಳ ಮರಳುಕಲ್ಲು ಗಳನ್ನು ಉಪಯೋಗಿಸಿ ನಿರ್ಮಿಸಲಾದ ರಚನೆಯಾಗಿದೆ. ಈ ಸ್ಮಾರಕಗಳ ಸಂಪೂರ್ಣ ಸೌಂದರ್ಯ ಮತ್ತು ವಾಸ್ತುಶಿಲ್ಪವು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಟ್ಯಾಗ್ ಅನ್ನು ಪಡೆದಿದೆ.

PC: Dennis Jarvis


ಮಹಾಬಲಿಪುರಂ

ಮಹಾಬಲಿಪುರಂ

ಮಹಾಬಲಿಪುರಂನ ಕಲ್ಲಿನ ಕೆತ್ತನೆ ಮತ್ತು ಏಕಶಿಲಾ ಶಿಲ್ಪಗಳು ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಪಡೆದಿದೆ. ಮಹಾಬಲಿಪುರಂನಲ್ಲಿರುವ ವಿಶ್ವ ಪರಂಪರೆಯ ತಾಣವು 7ನೇ ಶತಮಾನದಲ್ಲಿ ಪಲ್ಲವ ಸಾಮ್ರಾಜ್ಯದ ಬಂದರಾಗಿದ್ದು ಇಲ್ಲಿಯ ನಿರ್ಮಾಣವು ಸೃಜನಶೀಲತೆ ಮತ್ತು ಅದ್ಬುತವಾದ ಕಲಾಗಾರಿಕೆಯನ್ನು ಪ್ರತಿಬಿಂಬಿಸುತ್ತದೆ.

ಇಲ್ಲಿನ ಸ್ಮಾರಕಗಳನ್ನು ಸ್ಥಳೀಯ ಗ್ರಾನೈಟ್ ನಿಂದ ಕೆತ್ತಲಾಗಿದೆ ಮತ್ತು ಅವುಗಳನ್ನು ನಾಲ್ಕು ವಿಭಾಗಗಳಾಗಿ ಕಲ್ಲಿನ ಗುಹೆಗಳು, ದೇವಾಲಯಗಳು, ಜಲಾಶಯಗಳು ಮತ್ತು ರಥಗಳು ಅಥವಾ ಏಕಶಿಲೆಯ ದೇವಾಲಯಗಳೆಂದು ವಿಂಗಡಿಸಲಾಗಿದೆ.

PC: Santhoshbapu

ಕೊನಾರ್ಕ್ ಸೂರ್ಯ ದೇವಾಲಯ

ಕೊನಾರ್ಕ್ ಸೂರ್ಯ ದೇವಾಲಯ

ಇದು ಬಂಗಾಳಕೊಲ್ಲಿಯ ತೀರದಲ್ಲಿದ್ದು, ಹೊಳೆಯುವ ಸೂರ್ಯನ ಕಿರಣಗಳನ್ನೊಳಗೊಂಡ ಈ ದೇವಾಲಯವು ಕೊನಾರ್ಕ್ ನಲ್ಲಿದೆ. ಕೊನಾರ್ಕ್ ನಲ್ಲಿನ ಈ ದೇವಸ್ಥಾನವು ಸೂರ್ಯ ದೇವರ ರಥದ ಒಂದು ಪ್ರತಿನಿಧಿಯಾಗಿದೆ.

ಈ ರಚನೆಯು 24 ಚಕ್ರಗಳನ್ನೊಳಗೊಂಡಿದ್ದು ಅವು ಸುಂದರವಾದ ವಿನ್ಯಾಸಗಳನ್ನು ಹೊಂದಿದ್ದೆ ಮತ್ತು ಇದನ್ನು ಆರು ಕುದುರೆಗಳು ಓಡಿಸುತ್ತಿರುವಂತೆ ರಚಿಸಲಾಗಿದೆ. 13 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು ದೇಶದಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ಕಳಿಂಗ ಜೀವನ ಜೀವನ ಶೈಲಿಯ ಸಂಗ್ರಹ, ಸಂತೋಷ ಮತ್ತು ಲಯವನ್ನು ಪ್ರದರ್ಶಿಸುತ್ತದೆ.


PC: Dinudey Baidya

ಜೈಸಲ್ಮೆರ್ ಕೋಟೆ

ಜೈಸಲ್ಮೆರ್ ಕೋಟೆ

ಹಳದಿ ಮರಳುಗಲ್ಲುಗಳಿಂದ ನಿರ್ಮಾಣಗೊಂಡ ಜೈಸಲ್ಮೇರ್ ಕೋಟೆಯನ್ನು 12ನೇ ಶತಮಾನದಲ್ಲಿ ತ್ರೈಕುಟಾ ಬೆಟ್ಟದ ಮೇಲೆ ರಾಜಾ ಜೈಸ್ವಾಲ್ ಅವರು ನಿರ್ಮಿಸಿದರು.ಈ ಕೋಟೆಯನ್ನು ಅನ್ವೇಶಿಸುವಾಗ ಇಲ್ಲಿ ಅನೇಕ ಪರಂಪರೆಗೆ ಸಂಭಂದಿಸಿದ ಅನೇಕ ವಿಷಯಗಳು ನಿಮ್ಮ ಗಮನಕ್ಕೆ ಬರುತ್ತದೆ.

ಈ ರಚನೆಯನ್ನು ಭಾರತೀಯ ಕಲಾಕೃತಿ ಮತ್ತು ಮಿಲಿಟರಿ ವ್ಯತ್ಯಾಸದ ಸಂಕ್ಷಿಪ್ತ ನಿರೂಪಣೆ ಎಂದು ಪರಿಗಣಿಸಲಾಗಿದೆ.ಥಾರ್ ಮರುಭೂಮಿಯ ಮಧ್ಯದಲ್ಲಿರುವ, ಜೈಸಲ್ಮೇರ್ ಕೋಟೆಯ ಭೇಟಿಯು ಬಹಳ ಕಾಲ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ.

PC: Ggia

ಫತೇಪುರ್ ಸಿಕ್ರಿ

ಫತೇಪುರ್ ಸಿಕ್ರಿ

ಇದು ಭಾರತದ ಪರಂಪರೆಯ ತಾಣಕ್ಕೆ ಇನ್ನೊಂದು ಹೆಮ್ಮೆಯ ಗರಿಯಾಗಿದ್ದು ಫತೇಪುರ್ ಸಿಕ್ರೆಯ ಮೊಘಲ್ ವಾಸ್ತುಶೈಲಿಯು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.ಇದು ಆಗ್ರಾದಿಂದ 26 ಕಿ.ಮೀ ದೂರದಲ್ಲಿದ್ದು ಈ ಸ್ಮಾರಕವನ್ನು ಅಕ್ಬರನಿಂದ ಸೂಫಿ ಸಂತರಿಗೆ ಗೌರವಾರ್ಥಕ್ಕಾಗಿ ನಿರ್ಮಿಸಲಾಯಿತು. ಇಲ್ಲಿನ ಸ್ಮಾರಕಗಳ ವಾಸ್ತುಶಿಲ್ಪವು ಇಂಡೋ-ಮುಸ್ಲಿಂ ಶೈಲಿಯ ವಿನ್ಯಾಸವನ್ನು ಪ್ರದರ್ಶಿಸುತ್ತದೆ ಮತ್ತು ಎರಡೂ ಸಂಸ್ಕೃತಿಗಳ ಸಮ್ಮಿಲನವನ್ನು ಎತ್ತಿ ತೋರಿಸುತ್ತದೆ.

PC: RebexArt

ಕುತುಬ್ ಮಿನಾರ್

ಕುತುಬ್ ಮಿನಾರ್

1192 ರಲ್ಲಿ ಇಸ್ಲಾಮಿಕ್ ಆಳ್ವಿಕೆಯ ಆರಂಭವನ್ನು ಗುರುತಿಸಲು ನಿರ್ಮಿಸಲಾಯಿತು ಕುತುಬ್ ಮಿನಾರ್ 73 ಮೀಟರ್ ಎತ್ತರವಿದೆ ಮತ್ತು ದೆಹಲಿಯ ಕೊನೆಯ ಹಿಂದೂ ಸಾಮ್ರಾಜ್ಯದ ಮೇಲಿನ ವಿಜಯದ ನಂತರ ಕುತುಬ್ ಉದ್ ದೀನ್ ಐಬಾಕ್ ಅವರಿಂದ ನಿರ್ಮಾಣವು ಪ್ರಾರಂಭವಾಯಿತು.

ಪ್ರತಿ ಗೋಪುರದ ಯೋಜನೆಯನ್ನು ಹೊಂದಿರುವ ಗೋಪುರವು ವಿಶಿಷ್ಟ ಮಳಿಗೆಗಳಿಂದ ನಿರ್ಮಿಸಲಾಗಿದೆ. ಮೇಲಿನಿಂದ ಕೆಳಕ್ಕೆ ಅಳೆಯಲ್ಪಟ್ಟಾಗ ಮಳಿಗೆಗಳ ವ್ಯಾಸ ಕ್ರಮೇಣ ಕಡಿಮೆಯಾಗುತ್ತದೆ.ಒಂದು ಕುತೂಹಲಕಾರಿ ಅಂಶವೆಂದರೆ, ಪೂರ್ವ ಬಾಗಿಲಲ್ಲಿರುವ ಶಾಸನಗಳು ಈ ಸ್ಮಾರಕವನ್ನು 27 ಹಿಂದೂ ದೇವಸ್ಥಾನಗಳನ್ನು ನಾಶಪಡಿಸಿದ ನಂತರ ಸಂಗ್ರಹಿಸಲಾದ ವಸ್ತುಗಳಿಂದ ಹೇಗೆ ರಚನೆಯಾಯಿತು ಎಂಬುದನ್ನು ವಿವರಿಸುತ್ತದೆ.

PC: Hsoniji007

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more