Search
  • Follow NativePlanet
Share
» »ಈ ಭಯಾನಕ ತಾಣಗಳಿಗೆ ಹೋಗೋದು ತುಂಬಾನೇ ಡೇಂಜರ್ !

ಈ ಭಯಾನಕ ತಾಣಗಳಿಗೆ ಹೋಗೋದು ತುಂಬಾನೇ ಡೇಂಜರ್ !

ಈಗಿನ ಕಾಲದಲ್ಲಂತೂ ವಿಜ್ಞಾನ ಸಾಕಷ್ಟು ಮುಂದುವರಿದಿದೆ. ನೀವು ಭೂತ ಪ್ರೇತಗಳನ್ನು ನಂಬದೇ ಇರಬಹುದು. ಆದರೆ ಕೆಲವು ಅಸಾಮಾನ್ಯ ಚಟುವಟಿಕೆಗಳು ನಡೆಯುತ್ತವೆ. ಇವುಗಳನ್ನು ಅಲ್ಲಗಳೆಯುವಂತಿಲ್ಲ. ಇಂದು ನಾವು ದೇಶದಲ್ಲಿರುವ ಕೆಲವು ಪ್ರಸಿದ್ಧ ಪ್ರೇತಬಾಧಿತ ಸ್ಥಳಗಳ ಬಗ್ಗೆ ತಿಳಿಸಲಿದ್ದೇವೆ.

ಸಂಜಯ್ ವನ

ಸಂಜಯ್ ವನ

ಯಾರಾದರೂ ನಿಮ್ಮಲ್ಲಿ ದೆಹಲಿಯಲ್ಲಿ ಹಲವಾರು ಭೂತ ಪ್ರೇತಗಳಿಂದ ಕೂಡಿದ ಸ್ಥಳ ಇದೆ ಎಂದರೆ ನೀವು ನಂಬಲಿಕ್ಕಿಲ್ಲ. ಆದರೆ ದೆಹಲಿಯಲ್ಲಿ ವಸಂತ್ ಕುಂಜ್‌ ಜಾಹೀ ಮಹಾರೌಲಿಯ ಬಳಿ ಇರುವ ಸಂಜಯ್ ವನ ಒಂದು ದಟ್ಟ ಕಾಡು. ಈ ಕಾಡಿನಲ್ಲಿ ಪ್ರತಿನಿತ್ಯ ರಾತ್ರಿಯ ಸಮಯದಲ್ಲಿ ಯಾವುದೋ ಮಹಿಳೆ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾಳೆ.

ರಾತ್ರಿ ಟ್ರೆಕ್ಕಿಂಗ್ ಹೋಗಬೇಕಾದ್ರೆ ಇಲ್ಲಿಗೆ ಹೋಗಿರಾತ್ರಿ ಟ್ರೆಕ್ಕಿಂಗ್ ಹೋಗಬೇಕಾದ್ರೆ ಇಲ್ಲಿಗೆ ಹೋಗಿ

ಡಾಹೋ ಬೆಟ್ಟ, ಡಾರ್ಜಲಿಂಗ್

ಡಾಹೋ ಬೆಟ್ಟ, ಡಾರ್ಜಲಿಂಗ್

ಕ್ವೀನ್ ಆಫ್ ಹಿಲ್ಸ್‌ ಅಂದರೆ ಬೆಟ್ಟಗಳ ರಾಣಿ ಎಂದೇ ಪ್ರಸಿದ್ಧಿ ಹೊಂದಿರುವ ಡಾರ್ಜಲಿಂಗ್ ಬಳಿ ಇರುವ ಕುರುಸಿಯಾಂಗ್ ನಲ್ಲಿ ಡಾಹೋ ಬೆಟ್ಟ ಇದೆ. ಇದು ಪಾಕ್ರತಿಕ ಸೌಂದರ್ಯದಿಂದ ಕೂಡಿದೆ. ಆದರೆ ಈ ಸ್ಥಳವನ್ನೂ ದೇಶದ ಭಯಾನಕ ಸ್ಥಳಗಳಲ್ಲಿ ಒಂದು ಎನ್ನಲಾಗುತ್ತದೆ. ಈ ಬೆಟ್ಟದ ಕಾಡಿನಲ್ಲಿ ಅನೇಕ ಕೊಲೆಗಳು ನಡೆದಿವೆ. ಹಾಗಾಗಿ ಇದನ್ನು ಭೂತ ಪ್ರೇತಗಳ ಸ್ಥಳ ಎನ್ನಲಾಗುತ್ತದೆ.

ದಮಾಸ್‌ ಬೀಚ್

ದಮಾಸ್‌ ಬೀಚ್

ಗುಜರಾತ್‌ನ ಸೂರತ್ ನ ಅರಬಿ ಸಾಗರದ ಬಳಿ ಇರುವ ದಮಾಸ್‌ ಬೀಚ್, ಸುಂದರ ನೀಚ್‌ಗಳಲ್ಲಿ ಒಂದಾಗಿದೆ. ಇಲ್ಲಿ ಹಿಂದೆ ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು. ಹಾಗಾಗಿ ಇದನ್ನು ಭಯಾನಕ ಸ್ಥಳ ಎನ್ನಲಾಗುತ್ತದೆ. ಇದನ್ನು ಭಾರತ ಸರ್ಕಾರದ ಕಡೆಯಿಂದ ಭೂತಬಾದಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ಸ್ಥಳಕ್ಕೆ ಹೋಗುವುದು ಅಪಾಯಕಾರಿಯಾಗಿದೆ.

ದಿನಕ್ಕೆ ಮೂರು ಬಾರಿ ಬಣ್ಣಬದಲಾಯಿಸುವ ಶಿವಲಿಂಗ ಎಲ್ಲಿದೆ ಗೊತ್ತಾ? ದಿನಕ್ಕೆ ಮೂರು ಬಾರಿ ಬಣ್ಣಬದಲಾಯಿಸುವ ಶಿವಲಿಂಗ ಎಲ್ಲಿದೆ ಗೊತ್ತಾ?

ಭಾನ್‌ಘಡ್‌

ಭಾನ್‌ಘಡ್‌

ಭಾನ್‌ಘಡ್‌ನ ಕೋಟೆಯು ವಿಶ್ವದಲ್ಲೇ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಇದು ರಾಜಸ್ಥಾನದ ಅಲವಾರದಲ್ಲಿನ ರಾಜಘಡ್‌ ಇಲಾಖೆಯಲ್ಲಿದೆ. ಇದನ್ನು ೧೭ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಇಲ್ಲಿ ಅನೇಕ ಪ್ರೇತಬಾಧಿತ ಚಟುವಟಿಕೆಗಳು ನಡೆದಿರುವ ಘಟನೆಗಳು ಬೆಳಕಿಗೆ ಬಂದಿದೆ. ಆ ನಂತರ ಭಾರತ ಸರ್ಕಾರವು ಸೂರ್ಯ ಮುಳುಗಿದ ನಂತರ ಇಲ್ಲಿಗೆ ಹೋಗುವುದನ್ನು ನಿಷೇದಿಸಿದೆ.

ರಾಜಸ್ಥಾನದ ಕುಲ್ಧಾರಾ ಹಳ್ಳಿ

ರಾಜಸ್ಥಾನದ ಕುಲ್ಧಾರಾ ಹಳ್ಳಿ

ಕುಲ್ಧಾರಾ ಹಳ್ಳಿಯು 1800 ರ ದಶಕದಿಂದಲೂ ತೊರೆದ ಮರಳುಭೂಮಿಯ ಪ್ರೇತಗೃಹ ಎಂದು ಪ್ರಸಿದ್ಧವಾಗಿದೆ. ಸುಮಾರು 7 ಶತಮಾನಗಳ ಕಾಲ ಅಲ್ಲಿ ವಾಸವಾಗಿದ್ದ ಜನರ ಶಾಪ ಎಂದು ಹೇಳಲಾಗಿದೆ. ಯಾರೊಬ್ಬರೂ ಆ ಊರನ್ನು ಬಿಟ್ಟು ಹೋಗಲಿಲ್ಲ ಅಥವಾ ಅವರು ಹೋದದ್ದನ್ನು ಯಾರು ನೋಡಲಿಲ್ಲ, ಅವರು ಕಣ್ಮರೆಯಾಗಿದ್ದರು ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X