Search
  • Follow NativePlanet
Share
» »ಇಲ್ಲಿ ನಡೆಯೋ ನೃತ್ಯವನ್ನು ನೋಡಿದವರು ಜೀವಂತವಾಗಿ ಹಿಂದಿರುಗೋದಿಲ್ಲವಂತೆ!

ಇಲ್ಲಿ ನಡೆಯೋ ನೃತ್ಯವನ್ನು ನೋಡಿದವರು ಜೀವಂತವಾಗಿ ಹಿಂದಿರುಗೋದಿಲ್ಲವಂತೆ!

ಬೋಪಾಲ್ ಮಧ್ಯಪ್ರದೇಶದ ಒಂದು ಸುಂದರ ರಾಜಧಾನಿಯಾಗಿದೆ. ತನ್ನ ಐತಿಹಾಸಿಕತೆಯಿಂದಾಗಿ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಗತಕಾತಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೋಡಲು ಇಲ್ಲಿ ಪ್ರತಿ ದಿನ ದೇಶ-ವಿದೇಶದಿಂದ ಸಾವಿರಾರ ಜನರು ಬರುತ್ತಾರೆ. ಇಲ್ಲಿ ನೋಡಲು ಅನೇಕ ಸ್ಥಳಗಳಿವೆ. ಗೋಹರ್ ಮಹಲ್, ಶೌಕತ್ ಮಹಲ್, ಮೋತಿ ಮಸ್ಜೀದ್, ಮುಂತಾದವುಗಳು. ಆದರೆ ಅವುಗಳನ್ನೆಲ್ಲಾ ಹೊರತುಪಡಿಸಿ ನಿಮಗೆ ಭಯಾನಕ ಅನುಭವವನ್ನು ನೀಡುವ ಕೆಲವು ಸ್ಥಳಗಳೂ ಇವೆ. ಬೋಪಾಲ್‌ನಲ್ಲಿರುವ ಅಂತಹ ಭಯಾನಕ ಸ್ಥಳ ಯಾವುದು ಎನ್ನುವುದನ್ನು ನೋಡೋಣ.

ಭಕ್ತಿಯಿಂದ ಇಲ್ಲಿ ನಿಮ್ಮ ಇಷ್ಟದ ವಸ್ತು ತ್ಯಜಿಸಿದ್ರೆ ಕೋರಿಕೆ ಈಡೇರುತ್ತಂತೆ!ಭಕ್ತಿಯಿಂದ ಇಲ್ಲಿ ನಿಮ್ಮ ಇಷ್ಟದ ವಸ್ತು ತ್ಯಜಿಸಿದ್ರೆ ಕೋರಿಕೆ ಈಡೇರುತ್ತಂತೆ!

ಇಂದಿರಾಗಾಂಧಿ ಆಸ್ಪತ್ರೆ

ಇಂದಿರಾಗಾಂಧಿ ಆಸ್ಪತ್ರೆ

ಬೋಪಾಲ್ ಮಧ್ಯಪ್ರದೇಶದ ಒಂದು ಸುಂದರ ರಾಜಧಾನಿಯಾಗಿದೆ. ತನ್ನ ಐತಿಹಾಸಿಕತೆಯಿಂದಾಗಿ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಗತಕಾತಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೋಡಲು ಇಲ್ಲಿ ಪ್ರತಿ ದಿನ ದೇಶ-ವಿದೇಶದಿಂದ ಸಾವಿರಾರ ಜನರು ಬರುತ್ತಾರೆ. ಇಲ್ಲಿ ನೋಡಲು ಅನೇಕ ಸ್ಥಳಗಳಿವೆ. ಗೋಹರ್ ಮಹಲ್, ಶೌಕತ್ ಮಹಲ್, ಮೋತಿ ಮಸ್ಜೀದ್, ಮುಂತಾದವುಗಳು. ಆದರೆ ಅವುಗಳನ್ನೆಲ್ಲಾ ಹೊರತುಪಡಿಸಿ ನಿಮಗೆ ಭಯಾನಕ ಅನುಭವವನ್ನು ನೀಡುವ ಕೆಲವು ಸ್ಥಳಗಳೂ ಇವೆ. ಬೋಪಾಲ್‌ನಲ್ಲಿರುವ ಅಂತಹ ಭಯಾನಕ ಸ್ಥಳ ಯಾವುದು ಎನ್ನುವುದನ್ನು ನೋಡೋಣ.

ಭೂತ ಬಂಗಲೆ

ಭೂತ ಬಂಗಲೆ

ಬೋಪಾಲ್‌ನಲ್ಲಿರುವ ಈ ಭೂತ ಬಂಗಲೆ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೇ ಇರುತ್ತದೆ. ಇದು ಬೋಪಾಲ್‌ನಲ್ಲಿರುವ ಭಯಾನಕ ಬಂಗಲೆಗಳಲ್ಲಿ ಒಂದು. ಇಲ್ಲಿ ನಡೆಯುವ ಕೆಲವು ಘಟನೆಗಳ ಬಗ್ಗೆ ಕೇಳಿದರೆ ಯಾರಾದರೂ ಭಯದಿಂದ ನಡುಗುತ್ತಾರೆ. ಈ ಬಂಗಲೇ ಯಾವುದೋ ಅಗ್ರವಾಲ್ ಪರಿವಾರಕ್ಕೆ ಸೇರಿದ್ದು ಎನ್ನಲಾಗುತ್ತದೆ. ಈ ಬಂಗಲೇ ಬೋಪಾಲ್‌ನ ಪ್ರೋಫೆಸರ್ ಕಾಲೋನಿಯಲ್ಲಿದೆ. ಇಲ್ಲಿ ರಾತ್ರಿಯಾಗುತ್ತಿದ್ದಂತೆ ಭಯಾನಕ ಸದ್ದು ಕೇಳಿ ಬರುತ್ತದೆ. ಹಾಗಾಗಿ ಈ ಬಂಗಲೆಯ ಹತ್ತಿರ ಯಾರೂ ಸುಳಿಯೋದಿಲ್ಲ ಎನ್ನುತ್ತಾರೆ ಜನರು.

ಡಾವೋ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್

ಡಾವೋ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್

ಇದೂ ಕೂಡಾ ಬೋಪಾಲ್‌ನ ಪ್ರೇತ ಬಾಧಿತ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಬೋಪಾಲ್ ಗ್ಯಾಸ್ ದುರಂತದಲ್ಲಿ ಸಾವನ್ನಪ್ಪಿದವರು ಆತ್ಮ ತಿರುಗುತ್ತಿದೆ ಎನ್ನಲಾಗುತ್ತದೆ. ಈ ದುರಂತದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಇಲ್ಲಿ ಯಾರೂ ಹೋಗೋದಿಲ್ಲ. ಇಲ್ಲಿ ಭಯಾನಕ ಅನುಭವವೇ ಆಗುತ್ತದೆ.

ಗುನಾದ ಚರ್ಚ್

ಗುನಾದ ಚರ್ಚ್

ಈ ಚರ್ಚ್ ಮಧ್ಯಪ್ರದೇಶದಲ್ಲಿ ಭಯಾನಕ ಸ್ಥಳಗಳಲ್ಲಿ ಸೇರಿಕೊಂಡಿದೆ. ಈ ಚರ್ಚ್ ಒಳಗಿನಿಂದ ಯಾವುದೋ ಮಗುವಿನ ಅಳುವಿನ ಸದ್ದು ಕೇಳಿಸುತ್ತದೆ ಎನ್ನುತ್ತಾರೆ ಸ್ಥಳೀಯರು. ಅಲ್ಲದೆ ವಿಚಿತ್ರ ಘಟನೆಗಳೂ ನಡೆಯುತ್ತದೆ. ಈ ಚರ್ಚ್‌ನ್ನು ಸುಡಲಾಗಿತ್ತು ಎನ್ನಲಾಗುತ್ತದೆ. ಆಗಿನಿಂದ ಇಂದಿನ ವರೆಗೂ ಈ ಚರ್ಚ್ ಪಾಳುಬಿದ್ದಿದೆ.

ಶಿವಪುರದ ಕೋಟೆ

ಶಿವಪುರದ ಕೋಟೆ

ಮಧ್ಯಪ್ರದೇಶದಲ್ಲಿರುವ ಈ ಪ್ರಾಚೀನ ಕೋಟೆಯ ನಿರ್ಮಾಣ 2100ರಲ್ಲಿ ಮಾಡಲಾಗಿತ್ತು. ಇದು ತನ್ನ ಇತಿಹಾಸಕ್ಕಿಂತ ಹೆಚ್ಚಾಗಿ ಬೇರೆ ಕಾರಣಕ್ಕೆ ಹೆಸರುವಾಸಿಯಾಗಿದೆ. ಸ್ಥಳೀಯ ನಿವಾಸಿಗಳ ಪ್ರಕಾರ ಖಂಡೇರಾವ್ ಒಬ್ಬ ಪ್ರೇಮಿ ರಾಜನಾಗಿದ್ದ. ಈ ತನ ಆಸ್ಥಾನದಲ್ಲಿ ಪ್ರತಿದಿನ ನೃತ್ಯ ಸಂಗೀತ ಆಯೋಜಿಸಲಾಗುತ್ತಿತ್ತು. ಆದರೆ ಇಂದು ಆ ಕೋಟೆ ಪಾಳುಬಿದ್ದಿರುವ ಕಟ್ಟಡದಂತಾಗಿದೆ. ರಾತ್ರಿಯ ಸಮಯದಲ್ಲಿ ಇಲ್ಲಿ ಹಾಡು ನೃತ್ಯದ ಸದ್ದು ಕೇಳಿಸುತ್ತದೆ. ಆದರೆ ಯಾರೂ ಅಲ್ಲಿಗೆ ಹೋಗಲು ಧೈರ್ಯ ಮಾಡೋದಿಲ್ಲ. ಒಂದು ವೇಳೆ ಆ ನೃತ್ಯ ಆಯೋಜನೆಯನ್ನು ನೋಡಿದರೆ ಅವರು ಬದುಕುಳಿಯೋದಿಲ್ಲ ಎನ್ನುವುದು ಅಲ್ಲಿನ ಜನರ ನಂಬಿಕೆ.

Read more about: madhya pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X