» »ಚಿತ್ತಾಕರ್ಷಕ ಬೇಲೂರಿನ ಸೊಬಗು ನೋಡಲು ಸಾಲದು ಎರಡು ಕಣ್ಣು.

ಚಿತ್ತಾಕರ್ಷಕ ಬೇಲೂರಿನ ಸೊಬಗು ನೋಡಲು ಸಾಲದು ಎರಡು ಕಣ್ಣು.

Written By: Sowmyabhai

ಬೇಲೂರು ಅಂದರೆ ತಟ್ಟನೆ ನೆನಪಾಗುವುದು ಶಿಲಾಬಾಲಕಿಯರು. ಈ ಬೇಲೂರಿನಲ್ಲಿ ಅದ್ಭುತವಾದ ಶಿಲ್ಪಕಲೆಗಳೂ, ಆಕಾಶದೆತ್ತರ ಧ್ವಜ ಸ್ತಂಭಗಳು, ಕಲಾತ್ಮಕತೆಯಿಂದ ಕೂಡಿದ ವಾಸ್ತುಶಿಲ್ಪ, ಸೂಕ್ಷ್ಮ ಕೆತ್ತನೆಗಳು. ರಮಣೀಯವಾದ ಮಂಟಪಗಳು ಎತ್ತರವಾದ ಶಿಲಾಸ್ತಂಭಗಳನ್ನು ನೋಡುತ್ತಿದ್ದರೆ. ನಾವು ಹೊಯ್ಸಳರ ಕಾಲದ ರಾಜರ ಕಲೆ, ವಾಸ್ತು ಶಿಲ್ಪ, ಹಾಗೂ ದೇವರ ಮೇಲಿನ ಒಲವನ್ನು ಕಾಣಬಹುದಾಗಿದೆ. ಇಂತಹ ಸೊಬಗನ್ನು ಹೊಂದಿರುವ ಬೇಲೂರಿನಲ್ಲಿ ಚೆನ್ನಕೇಶವ ದೇವಾಲಯವು ಅತ್ಯಂತ ಪವಿತ್ರವಾದ ದೇಗುಲವಾಗಿದೆ. ಪ್ರಸುತ್ತ ಲೇಖನದಲ್ಲಿ ಚೆನ್ನ ಕೇಶವ ದೇವಾಲಯ ಹಾಗೂ ಅಲ್ಲಿನ ವಾಸ್ತುಶಿಲ್ಪದ ಬಗ್ಗೆ ತಿಳಿಯೋಣ.

ಬೇಲೂರು

ಬೇಲೂರು

ಈ ದೇವಾಲಯವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಬೇಲೂರಿನಲ್ಲಿದೆ. ಬೆಂಗಳೂರಿನಿಂದ ಬೇಲೂರಿಗೆ ಸುಮಾರು 220 ಕಿ,ಮೀ ಅಂತರದಲ್ಲಿದೆ. ಈ ಚೆನ್ನಕೇಶವ ದೇವಾಲಯವನ್ನು ವಿಜಯನಾರಾಯಣ ದೇವಾಲಯವೆಂದೂ ಕೂಡ ಕರೆಯುತ್ತಾರೆ. ಈ ದೇವಾಲಯವನ್ನು ಯಾಗಾಚಿ ನದಿ ಮೇಲೆ ನಿರ್ಮಾಣ ಮಾಡಲಾಗಿದ್ದು ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಚೆನ್ನಕೇಶವ ದೇವಾಲಯವು ಪವಿತ್ರ ಹಿಂದೂ ದೇವಾಲಯವಾಗಿದ್ದು ಮಾಹಾವಿಷ್ಣುವಿನ ಅವತಾರ ಅಂದರೆ ಚೆನ್ನ ಎಂದರೆ ಸುಂದರ ಹಾಗೂ ಕೇಶವ ಎಂದರೆ ವಿಷ್ಣು ಅತ್ಯಂತ ಸುಂದರವಾದ ವಿಷ್ಣು ದೇವನೇ ಈ ಚೆನ್ನಕೇಶವ. ಚೆನ್ನಕೇಶವ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ಸಾಮ್ರಾಟ ವಿಷ್ಣು ವರ್ಧನ 1117 ರಲ್ಲಿ ಸ್ಥಾಪನೆಗೊಳಿಸಿದ ಪ್ರಸಿದ್ದ ದೇವಾಲಯವಾಗಿದೆ. ಹೊಯ್ಸಳ ಸಾಮ್ರಜ್ಯದಲ್ಲಿ ಸ್ಥಾಪಿಸಲ್ಪಟ್ಟ ಬೇಲೂರು ಹಾಗೂ ಹಳೇಬೀಡು ದೇವಾಲಯಗಳು ಅತ್ಯಂತ ಪುರಾತನವಾದ ದೇವಾಲಯವೆಂದು ಯುನೆಸ್ಕುದ ಪಟ್ಟಿಯಲ್ಲಿ ಸೇರ್ಪಡೆಗೊಡಿರುವುದು ನಮ್ಮ ಕರ್ನಾಟಕಕ್ಕೆ ಹೆಮ್ಮೆ ತರುವಂತಹದು.

PC:i10ian Follow

ಪುಷ್‍ಕರಣಿ

ಪುಷ್‍ಕರಣಿ

ಪುಷ್‍ಕರಣಿ ಎಂದರೆ ಕಲ್ಯಾಣಿಯಾಗಿದೆ. ಈ ಕಲ್ಯಾಣಿಯ ನೀರು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ. ಈ ಪುಷ್‍ಕರಣಿಯು ದೇವಾಲಯದ ಸ್ವಾಗತ ದ್ವಾರದ ಬಳಿಯೇ ಇದೆ. ಈ ದೇವಾಲಯಕ್ಕೆ ಬಂದು ರಾಜರು ದೇವರನ್ನು ಪಾರ್ಥಿಸುತ್ತಿದ್ದರು ಎಂಬ ಪ್ರತೀತಿ ಇದೆ. ಪುಷ್‍ಕರಣಿಯ ಬದಿಯಲ್ಲಿ ಸುಂದರವಾದ ಗಜಗಳಿವೆ ಇದು ಪುಷ್‍ಕರಣಿಗೆ ಮತ್ತಷ್ಟು ಮೆರಗುನ್ನು ನೀಡಿದೆ.

PC:uday28ms Follow

ಗುರುತ್ವಾಕರ್ಷಕ ಧ್ವಜಸ್ತಂಭ

ಗುರುತ್ವಾಕರ್ಷಕ ಧ್ವಜಸ್ತಂಭ

ಧ್ವಜಸ್ತಂಭವು ನಕ್ಷತ್ರಕಾರದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಈ ಸ್ತಂಭವು ಸುಮಾರು 42 ಮೀಟರ್‍ನಷ್ಟು ಉದ್ದವಿದೆ. ಈ ಸುಂದರವಾದ ಧ್ವಜ ಸ್ತಂಭವು ದೇವಾಲಯದ ಮುಂಭಾಗದ ಮಧ್ಯೆ ಭಾಗದಲ್ಲಿದೆ. ಆಶ್ಚರ್ಯವೆನೆದರೆ ಈ ಧ್ವಜ ಸ್ತಂಭಕ್ಕೆ ಯಾವುದೇ ಅಡಿಪಾಯವಿಲ್ಲದೇ ಯಾವುದೇ ಆಧಾರವಿಲ್ಲದೆ ನಿಂತಿದೆ. ಇದು ತನ್ನ ಭಾರದ ಮೇಲೆ ಏಕಾಂಗಿಯಾಗಿ ನಿಂತಿದೆ ಹಾಗಾಗಿ ಈ ಸ್ತಂಭವನ್ನು ಗುರುತ್ವಾಕರ್ಷಣೆ ಹೊಂದಿರುವ ಧ್ವಜಸ್ತಂಭ ಎಂದು ಕರೆಯಲಾಗುತ್ತದೆ. ಕೇವಲ ವೇದಿಕೆಯೇ ಅಲ್ಲದೇ ಸಂಪೂರ್ಣ ದೇವಲಯವನ್ನು ನಕ್ಷತ್ರಕಾರದಂತೆ ನಿರ್ಮಿಸಲಾಗಿದೆ.
PC:i10ian

ಬಾಹ್ಯ ಕೆತ್ತನೆ ಸೌಂದರ್ಯ

ಬಾಹ್ಯ ಕೆತ್ತನೆ ಸೌಂದರ್ಯ

ಶೃಂಗಾರಮಯ ಯುವತಿಯರ ಮೈಮಾಟದ ಕೆತ್ತನೆಯ ಶಿಲ್ಪಗಳಿದ್ದು, ರಾಮಾಯಾಣ ಮಾಹಾಭಾರತದ ಮತ್ತು ಪುರಾಣಗಳಲ್ಲಿನ ಕಥೆ, ಉಪನಿಷತ್‍ಗಳನ್ನು ಚಿತ್ರ ರೂಪದಲ್ಲಿ ಕೆತ್ತಲಾಗಿದೆ. ಈ ದೇವಾಲಯಗಳಲ್ಲಿ ಗೋಡೆ, ಬಾಗಿಲು ಮತ್ತು ಛಾವಣಿಗಳಲ್ಲಿ ಹಲವಾರು ಪ್ರಾಣಿ, ಪಕ್ಷಿ, ಮುಖ್ಯವಾಗಿ ಆನೆಗಳ ಸುಂದರವಾದ ರೂಪದಲ್ಲಿ ಕೆತ್ತನೆಗಳನ್ನು ನೋಡುವುದೇ ಒಂದು ಅದ್ಭುತ. ಆನೆಗಳ ಶಿಲ್ಪಗಳನ್ನು ಹೊಯ್ಸಳರ ಬಲ, ಕುದುರೆಗಳನ್ನು ತಮ್ಮ ವೇಗ
ಹಾಗೂ ಸಿಂಹವನ್ನು ತಮ್ಮ ಪರಾಕ್ರಮಕ್ಕೆ ಸಾಕ್ಷಿಯಾಗಿ ಈ ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ದೇವಾಲಯದಲ್ಲಿ ಸುಮಾರು 600 ಕಿಂತ ಅಧಿಕ ಆನೆಗಳ ಶಿಲ್ಪಗಳನ್ನು ಕಣ್ಣಾರೆ ವೀಕ್ಷೀಸಬಹುದು.

PC:Philip Larson

ವರ್ಣರಂಜಿತ ಗೋಪುರಗಳು

ವರ್ಣರಂಜಿತ ಗೋಪುರಗಳು

ಈ ದೇವಾಲಯದಲ್ಲಿ ಹಲವಾರು ರಮಣೀಯವಾದ ಗೋಪುರಗಳನ್ನು ಕಾಣಬಹುದು. ಒಂದೊಂದು ಗೋಪುರಗಳು ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿದ್ದು ಈ ದೇವಾಲಯದ ಮೊದಲ ಆಕರ್ಷಣಿಯತೆ ಸಾಕ್ಷಿಯಾಗಿದೆ. ಇಂತಹ ದೇವಾಲಯದ ಸೊಬಗು ನೋಡುವುದೇ ಒಂದು ಅದೃಷ್ಟ ಎಂದೇ ಭಾವಿಸಬಹುದು.

PC:Philip Larson

ಪ್ರವೇಶ ದ್ವಾರದ ಮೇಲ್ಛಾವಣಿಗಳು

ಪ್ರವೇಶ ದ್ವಾರದ ಮೇಲ್ಛಾವಣಿಗಳು

ಪ್ರವೇಶ ದೌರದ ಮೇಲ್ಛಾವಣಿಯು ಅತ್ಯಂತ ಸುಂದರವಾಗಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಪ್ರತಿಯೊಂದು ಮೇಲ್ಛಾವಣೆಯು ಬಗೆ ಬಗೆಯ ವಿನ್ಯಾಸದ, ಶೈಲಿಯನ್ನು ಹೊಂದಿದೆ.

PC:Philip Larson

ಹೊಯ್ಸಳ ಲಾಂಛನ

ಹೊಯ್ಸಳ ಲಾಂಛನ

ಈ ಲಾಂಛನಕ್ಕೆ ಒಂದು ಅದ್ಭುತ ಇತಿಹಾಸವಿದೆ. ಹೊಯ್ ಅಂದರೆ ಕೊಲ್ಲು ಹಾಗೂ ಸಳ ಎಂದರೆ ಈ ಹೋಯ್ಸಳ ಸಾಮ್ರಾಜ್ಯದ ಸಂಸ್ಥಾಪಕ , ಈತ ಸಾಧಾರಣಾ ವ್ಯಕ್ತಿ. ಒಂದು ದಿನ ವ್ಯಘ್ರನು ಹಳ್ಳಿಯೊಳ ನುಗ್ಗಿ ಜನರನ್ನು ಕೊಲ್ಲಲು ಬರುವಾಗ ಸಳನೆಂಬ ಸಾಮಾನ್ಯ ವ್ಯಕ್ತಿಯು ವ್ಯಘ್ರನೊಂದಿಗೆ ಹೋರಾಡುತ್ತಾನೆ. ಆಗ ಅಲ್ಲಿರುವ ಜನರು ಹೊಯ್(ಕೊಲ್ಲು) ಎಂದು ಹೇಳುತ್ತಾರೆ ಕೊನೆಗೆ ಸಳನು ಇದರಲ್ಲಿ ಜಯಗಳಿಸುತ್ತಾನೆ. ಹಾಗಾಗಿ ಹೊಯ್ಸ್‍ಳನೆಂಬ ಹೆಸರು ಬಂದಿತ್ತು ಎಂದು ಹೇಳಲಾಗುತ್ತದೆ. ಹಾಗಾಗಿ ಈ ಲಾಂಛನವನ್ನು ತಮ್ಮ ರಾಷ್ಟ್ರ ಲಾಂಛನವಾಗಿ ಬಳಸಲಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ.

PC:Philip Larson

ಮದನಿಕೆಯರು

ಮದನಿಕೆಯರು

ಈ ಬೇಲೂರಿನಲ್ಲೇ ಅತ್ಯಂತ ಸುಂದರವಾದ ಮನಸೆಳೆಯುವ ದೃಶ್ಯವೆಂದರೆ ಈ ಸೌಂದರ್ಯವತಿ ಮದನಿಕೆಯರು. ಈ ಸುಂದರವಾದ ಮದನಿಕೆಯರ ಕೆತ್ತನೆಗಳಿಂದ ಪ್ರವಾಸಿಗರನ್ನು ಬೆರಗುಗೊಳಿಸುವಂತೆ ಮಾಡುವ ಅಪೂರ್ವ ಸೊಬಗು. ಇಲ್ಲಿ ಹಲವಾರು ಶಿಲ್ಪಕಲೆಗಳು ವಿವಿಧ ನೃತ್ಯದ ಭಂಗಿಯಲ್ಲಿವೆ. ಈ ಮದನಿಕೆಯರಲ್ಲಿಯೆ ಅತ್ಯಂತ ಪ್ರಸಿದ್ದವಾದುದೆಂದರೆ ದರ್ಪಣ ಸುಂದರಿ . ಈ ದರ್ಪಣ ಸುಂದರಿಯು ತನ್ನ ಸೌಂದರ್ಯವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿರುವ ಭಂಗಿಯಾಗಿದೆ. ಕೇವಲ ನೃತ್ಯ ಭಂಗಿಗಳೇ ಅಲ್ಲದೆ ಸಂಗೀತ ಸಲಕರಣೆಗಳನ್ನು ಹಿಡಿದು ನಿಂತಿರುವ ಭಂಗಿಯನ್ನು ಕಾಣಬಹುದು.

PC:Philip Larson
D

ಮೋಹಿನಿ ಮತ್ತು ವಿಷ್ಣು ಶಿಲ್ಪಗಳು

ಮೋಹಿನಿ ಮತ್ತು ವಿಷ್ಣು ಶಿಲ್ಪಗಳು

ಮೋಹಿನಿಯ ಅವತಾರದಲ್ಲಿ ಇರುವ ಶಿಲ್ಪವು ಅತ್ಯಂತ ಮನೋಹರವಾಗಿದೆ. ಈ ಮೋಹಿನಿಯ ಶಿಲ್ಪವನ್ನು ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿದ್ದು, ಈ ಸ್ತಂಭಕ್ಕೆ ಮತ್ತಷ್ಟು ಮೆರಗನ್ನು ನೀಡಿದೆ. ಹಾಗೇಯೆ ಇಲ್ಲಿ ವಿಷ್ಣುವಿನ ಶಿಲ್ಪವಿದ್ದು ಆರ್ಕಷಕಯುತವಾಗಿದೆ. ಬೇಲೂರಿಗೆ ಭೇಟಿ ನೀಡಿದಾಗ ತಪ್ಪದೇ ಈ ಎರಡು ಶಿಲ್ಪಗಳನ್ನು ನೋಡಿ.

PC:Philip Larson

Please Wait while comments are loading...