» »ಮಂಜಿನಿಂದ ಆವೃತವಾಗಿರುವ ದೇಶದ ಸುಂದರವಾದ ಸೂರ್ಯದೇವಾಲಯ

ಮಂಜಿನಿಂದ ಆವೃತವಾಗಿರುವ ದೇಶದ ಸುಂದರವಾದ ಸೂರ್ಯದೇವಾಲಯ

Written By: Rajatha

ಭಾರತದ ಸುಂದರ ಪ್ರವಾಸಿ ತಾಣವಾಗಿರುವ ಕಾಶ್ಮೀರ ಕೇವಲ ತನ್ನ ಸುಂದರತೆಯನ್ನು ಹೊರತುಪಡಿಸಿ ಮಂದಿರಗಳಿಗೂ ಪ್ರಸಿದ್ಧಿ ಹೊಂದಿದೆ ಎನ್ನುವುದು ನಿಮಗೆ ಗೊತ್ತಾ? ಅವುಗಳಲ್ಲಿ ಒಂದು ಮಾರ್ತಂಡ ಸೂರ್ಯ ಮಂದಿರ. ಹೌದು ಈ ಮಂದಿರವು ಈಗ ಅವಶೇಷಗಳಾಗಿ ಮಾರ್ಪಾಡು ಹೊಂದಿದೆ. ಈ ಮಂದಿರದ ವಾಸ್ತುಕಲೆಯು ಇದನ್ನು ಕೇವಲ ಭಾರತದದ ಮಾತ್ರವಲ್ಲ ಇಡೀ ವಿಶ್ವದಲ್ಲಿನ ಸುಂದರ ಮಂದಿರವನ್ನಾಗಿಸುತ್ತದೆ.

ಈ ಮಂದಿರವನ್ನು ಯಾರು ನಿರ್ಮಿಸಿದರು ?

ಈ ಮಂದಿರವನ್ನು ಯಾರು ನಿರ್ಮಿಸಿದರು ?

Pc:Varun Shiv Kapur
ಮಧ್ಯಕಾಲಿನ ಯುಗದಲ್ಲಿ ಸುಮಾರು 7, 8 ನೇ ಶತಮಾನದಲ್ಲಿ ಸೂರ್ಯ ರಾಜವಂಶರಾದ ರಾಜ ಲಲಿತಾದಿತ್ಯ ಈ ಮಂದಿರವನ್ನು ನಿರ್ಮಿಸಿದನು.

ಮಾರ್ತಂಡ್ ಸೂರ್ಯ ಮಂದಿರ ಎಲ್ಲಿ ನಿರ್ಮಾಣವಾಗಿದೆ?

ಮಾರ್ತಂಡ್ ಸೂರ್ಯ ಮಂದಿರ ಎಲ್ಲಿ ನಿರ್ಮಾಣವಾಗಿದೆ?

Pc:Divya Gupta

ಈ ಮಂದಿರ ದಕ್ಷಿಣ ಕಾಶ್ಮೀರದ ಸಣ್ಣ ಹಳ್ಳಿ ಅನಂತನಾಗದಿಂದ 60 ಕಿ.ಮಿ ದೂರದಲ್ಲಿ ಸ್ಥಾಪಿಸಲಾಗಿದೆ. ಇದನ್ನು 84 ಕಂಬಗಳಿಂದ ನಿರ್ಮಿಸಲಾಗಿದೆ.

ಸೂರ್ಯದೇವನಿಗೆ ಸಮರ್ಪಿತವಾಗಿದೆ

ಸೂರ್ಯದೇವನಿಗೆ ಸಮರ್ಪಿತವಾಗಿದೆ

Pc:Mike Prince
ಮಾರ್ತಂಡ್ ಸೂರ್ಯ ಮಂದಿರ ಸೂರ್ಯದೇವನಿಗೆ ಸಮರ್ಪಿತವಾದುದು. ಸೂರ್ಯನ ಕಿರಣ ಬಿಳುತ್ತಿದ್ದಂತೆ ಈ ದೇವಾಲಯದಲ್ಲಿ ಪೂಜೆ ಪ್ರಾರಂಭವಾಗುತ್ತದೆ.

60 ಫೀಟ್ ಉದ್ದದ ಮಂದಿರ

60 ಫೀಟ್ ಉದ್ದದ ಮಂದಿರ

Pc:Unknown

ಈ ದೇವಾಲಯದ ಪ್ರಾಂಗಣ 220x 142 ಫೀಟ್ ಇದೆ. ಈ ಮಂದಿರ 60 ಫೀಟ್ ಉದ್ದ ಹಾಗೂ 38 ಫೀಟ್ ಅಗಲವಿದೆ. ಈ ಮಂದಿರದ ವಾಸ್ತುಶೈಲಿಯು ರೋಮ್‌ನ ಡೋರಿಕ್ ಶೈಲಿಯಲ್ಲಿದೆ. ಈ ಮಂದಿರದ ಪೂರ್ವದಲ್ಲಿ ಪ್ರವೇಶ ದ್ವಾರವಿದೆ.

ಮೀನುಗಳ ಸರೋವರವಿದೆ

ಮೀನುಗಳ ಸರೋವರವಿದೆ

Pc:Varun Shiv Kapur

ನೀವು ಈ ಮಂದಿರವನ್ನು ಸುತ್ತಾಡುತ್ತಾ ಒಂದು ಸರೋವರ ವನ್ನೂ ಕಾಣಬಹುದು. ಅದರಲ್ಲಿ ಇಂದಿಗೂ ಬಣ್ಣಬಣ್ಣದ ಮೀನುಗಳು ಕಾಣಸಿಗುತ್ತದೆ.

ಬಾಲಿವುಡ್‌ಗೆ ಪ್ರಿಯವಾದ ಮಂದಿರ

ಬಾಲಿವುಡ್‌ಗೆ ಪ್ರಿಯವಾದ ಮಂದಿರ

ಈ ಮಂದಿರ ಬಾಲಿವುಡ್‌ ಸಿನಿಮಾಗಳಲ್ಲಿ ಬಹಳ ಪ್ರಸಿದ್ಧವಾಗಿದೆ. ಈ ಮಂದಿರದ ಸುತ್ತಮುತ್ತ ಅನೇಕ ಬಾಲಿವುಡ್ ಸಿನಿಮಾಗಳ ಚಿತ್ರೀಕರಣವಾಗಿದೆ.

ಕಾಶ್ಮೀರದ ಸುಂದರತೆ ಕಾಣಸಿಗುತ್ತದೆ

ಕಾಶ್ಮೀರದ ಸುಂದರತೆ ಕಾಣಸಿಗುತ್ತದೆ

Pc:Mike Prince

ಈ ಮಂದಿರದ ಸುತ್ತಲೂ ಕಾಶ್ಮೀರದ ಸುಂದರತೆಯನ್ನು ಕಾಣಬಹುದು. ಮಂದಿರದ ಉತ್ತರ ದಿಕ್ಕಿನಲ್ಲಿ ಸುಂದರವಾದ ಪರ್ವತ ಹಾಗೂ ಕಾಶ್ಮೀರದ ಘಾಟ್‌ನ ಮನೋಹರ ದೃಶ್ಯ ನೋಡಬಹುದು.

ಈ ಮಂದಿರಕ್ಕೆ ಹೋಗುವವರಿಗೆ ಟಿಪ್ಸ್

ಈ ಮಂದಿರಕ್ಕೆ ಹೋಗುವವರಿಗೆ ಟಿಪ್ಸ್

ಇಲ್ಲಿ ನಿಮಗೆ ಯಾವುದೇ ಟೂರಿಸ್ಟ್ ಗೈಡ್ ಸಿಗುವುದಿಲ್ಲ. ಈ ಮಂದಿರದ ಬಗ್ಗೆ ತಿಳಿಯಬೇಕಾದರೆ ಅಲ್ಲಿನ ಸುತ್ತಮುತ್ತಲಿನ ಜನರ ಸಹಾಯ ಪಡೆಯಬಹುದು. ಸುತ್ತಮುತ್ತ ಆಹಾರದ ಅಂಗಡಿಗಳು ಇಲ್ಲ. ಹಾಗಾಗಿ ನೀವು ಅಲ್ಲಿಗೆ ಹೋಗುವಾಗ ತಿನ್ನಲು ಬೇಕಾಗುವಂತಹ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಒಳಿತು.

ಹೋಗುವುದು ಹೇಗೆ?

ಹೋಗುವುದು ಹೇಗೆ?

Pc:Gaurav Kumar
ಶ್ರೀನಗರ ತಲುಪಿದ ಮೇಲೆ ಕ್ಯಾಬ್‌ ಮೂಲಕ ಮಾರ್ತಂಡ ಸೂರ್ಯ ಮಂದಿರವನ್ನು ತಲುಪಬಹುದು. ಶ್ರೀನಗರದಿಂದ ಈ ಮಂದಿರಕ್ಕೆ ತಲುಪಲು ನಿಮಗೆ ಸುಮಾರು ಒಂದರಿಂದ ಒಂದುವರೆ ಗಂಟೆ ಸಮಯ ಬೇಕಾಗುತ್ತದೆ.

Read more about: temple, ಕಾಶ್ಮೀರ