Search
  • Follow NativePlanet
Share
» »ಮಂಗಳವನಂ : ಕೊಚ್ಚಿ ನಗರದ ಶ್ವಾಸಕೋಶ!

ಮಂಗಳವನಂ : ಕೊಚ್ಚಿ ನಗರದ ಶ್ವಾಸಕೋಶ!

By Vijay

ದಕ್ಷಿಣ ಭಾರತದ ಒಂದು ಚಿಕ್ಕ ಹಾಗೂ ಸುಂದರ ರಾಜ್ಯವಾದ ಕೇರಳದ ಪ್ರಮುಖ ನಗರವಾಗಿದೆ ಕೊಚ್ಚಿ. ಸಾಕಷ್ಟು ಆಧುನಿಕತೆಯಿಂದ ಕೂಡಿರುವ ಕೊಚ್ಚಿ ನಗರದಾದ್ಯಂತ ಹಲವಾರು ಗಗನಚುಂಬಿ ಕಟ್ಟಡಗಳಿರುವುದನ್ನು ಕಾಣಬಹುದು. ಅಲ್ಲದೆ ಆಧುನಿಕ ಮಾಲ್ ಗಳು, ಕಚೇರಿಗಳು, ಚಿತ್ರಮಂದಿರಗಳು ಹಾಗೂ ದಟ್ಟವಾದ ಜನಸಂದಣಿ ಸಾಮಾನ್ಯವಾಗಿರುತ್ತದೆ.

ಆದಾಗ್ಯೂ ಕೊಚ್ಚಿ ನಗರವನ್ನು ಒಂದು ಮಟ್ಟಿಗೆ ಆರೋಗ್ಯಕರವಾಗಿಟ್ಟಿರುವುದರಲ್ಲಿ ಅನೇಕ ತಾಣಗಳು ಪ್ರಮುಖ ಪಾತ್ರವಹಿಸಿವೆ. ಅದರಲ್ಲೂ ಪ್ರಮುಖವಾಗಿ ನಗರದ ಹೃದಯ ಭಾಗದಲ್ಲೆ ಸ್ಥಿತವಿರುವ ಮಂಗಳವನಂ ಪಕ್ಷಿಧಾಮ. ಕೊಚ್ಚಿ ಹೈಕೋರ್ಟಿನ ಹಿಂಭಾಗದಲ್ಲಿ ವಿಶಾಲವಾಗಿ ವ್ಯಾಪಿಸಿರುವ ಈ ಸುಂದರ ಹಸಿರಿನ ಪ್ರದೇಶವು ನಗರದ ಶ್ವಾಸಕೋಶ ಎಂತಲೆ ಪ್ರಸಿದ್ಧಿ ಪಡೆದಿದೆ.

ಮಂಗಳವನಂ : ಕೊಚ್ಚಿ ನಗರದ ಶ್ವಾಸಕೋಶ!

ಚಿತ್ರಕೃಪೆ: Augustus Binu

ಮಂಗಳವನಂ ಮೂಲತಃ ಆಳವಾಗಿರದ ನೀರಿನಿಂದ ಆವೃತವಾದ ಆದರೆ ಸಾಕಷ್ಟು ದಟ್ಟವಾದ ಮ್ಯಾಂಗ್ರೋವ್ ಬಳ್ಳಿಗಳನ್ನು ಹೊಂದಿರುವ ಹಚ್ಚ ಹಸಿರಿನಿಂದ ಕೂಡಿದ ಸುಂದರ ತಾಣವಾಗಿದೆ. ಕಡಿಮೆ ಆಳದ ನೀರು ಹಾಗೂ ಸಸ್ಯರಾಶಿಗಳಿಂದ ಸಂಪದ್ಭರಿತವಾಗಿರುವುದರಿಂದ ಅದ್ಭುತ ಪಕ್ಷಿಧಾಮವಾಗಿಯೂ ಮಂಗಳವನಂ ಗಮನಸೆಳೆಯುತ್ತದೆ.

ಇಲ್ಲಿ ಸ್ಥಳೀಯವಾಗಿ ಹಾಗೂ ವಲಸೆ ಬರುವ ಸಾಕಷ್ಟು ಪ್ರಬೇಧಗಳ ಹಕ್ಕಿಗಳನ್ನು ಕಾಣಬಹುದು. ಪಕ್ಷಿ ವೀಕ್ಷಣೆ ಇಷ್ಟವಿರುವ ಪ್ರವಾಸಿಗರಿಗೆ ನಗರ ಮಧ್ಯದಲ್ಲೆ ನಿರಾಯಾಸವಾಗಿ ಒಂದು ಸುಂದರ ಅವಕಾಶವನ್ನು ಒದಗಿಸಿಕೊಡುತ್ತದೆ ಮಂಗಳವನಂ. ಇನ್ನೂ ಪಕ್ಷಿಯ ವಿವಿಧ ಚಿತ್ರಪಟಗಳನ್ನು ತೆಗೆಯ ಬಯಸುವ ಛಾಯಾಗ್ರಾಹಕ್ರಿಗಂತೂ ಇದೊಂದು ಸುವರ್ಣ ಅವಕಾಶವನ್ನೆ ಒದಗಿಸುತ್ತದೆ.

ಮಂಗಳವನಂ : ಕೊಚ್ಚಿ ನಗರದ ಶ್ವಾಸಕೋಶ!

ಚಿತ್ರಕೃಪೆ: PaTCoF

ಮ್ಯಾಂಗ್ರೋವ್ ಪ್ರಬೇಧಕ್ಕೆ ಸೇರಿರುವ ಹಲವಾರು ಗಿಡಗಳನ್ನು ಇಲ್ಲಿ ಕಾಣಬಹುದಾಗಿದೆ. ಸಾಕಷ್ಟು ಸೂಕ್ಷ್ಮವಾದ ಸಸ್ಯ ವೈವಿಧ್ಯತೆಯನ್ನು ಇಲ್ಲಿ ಕಾಣಬಹುದು. ಮಂಗಳವನಂ ಪುಟ್ಟ ಪಕ್ಷಿಧಾಮವಾಗಿದ್ದರೂ ಸಹ ಕೊಚ್ಚಿ ನಗರದ ಮಟ್ಟಿಗೆ ಒಂದು ವಿಶೇಷವಾದ ಸ್ಥಳವೆಂದೆ ಹೇಳಬಹುದು.

ಇಲ್ಲಿ, ಏನಿಲ್ಲವೆಂದರೂ 72 ಬಗೆಯ ವಿವಿಧ ಪಕ್ಷಿ ಪ್ರಬೇಧಗಳನ್ನು ನೋಡಬಹುದಾಗಿದೆ. ಇತ್ತೀಚಿಗಷ್ಟ ಇಲ್ಲಿ ನಡೆಸಲಾದ ಅಧ್ಯಯನವೊಂದರ ಪ್ರಕಾರ, ಬಾವಲಿ, ನೀರುನಾಯಿ, ನರಿ, ಅಳಿಲಿನ ಕೆಲ ವಿಶೇಷ ಪ್ರಬೇಧಗಳು ಕಂಡುಬಂದಿವೆ. ಹಾಗಾಗಿ ಜೀವ ವೈವಿಧ್ಯತೆಯನ್ನು ಹೊಂದಿರುವ ಸುಂದರ ತಾಣವಾಗಿಯೂ ಮಂಗಳವನಂ ನಿಸರ್ಗಪ್ರಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಮನಸೆಳೆವ ಕೇರಳದ ಅದ್ಭುತ ಕಾಡುಗಳು

ಮಂಗಳವನಂನ ಒಟ್ಟಾರೆ ವಿಸ್ತೀರ್ಣವು ಸುಮಾರು 2.74 ಹೆಕ್ಟೇರುಗಳಷ್ಟಿದ್ದು ಕೊಚ್ಚಿ ನಗರದ ಹಿನ್ನೀರಿನೊಂದಿಗೆ ಇದು ಕಾಲುವೆಯೊಂದರ ಮೂಲಕ ಸಂಪರ್ಕ ಪಡೆದುಕೊಂಡಿದೆ. ಕೊಚ್ಚಿ ನಗರದಲ್ಲಿರುವ ಹೈಕೋರ್ಟ್ ಕಟ್ಟಡದ ಹಿಂಭಾಗದಲ್ಲಿ ಈ ಸುಂದರ ಮಂಗಳವನಂ ಪಕ್ಷಿಧಾಮವಿದ್ದು ನಗರದಿಂದ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more