Search
  • Follow NativePlanet
Share
» »ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ನೀಡಿದ ರಹಸ್ಯ ಗುಹೆ

ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ನೀಡಿದ ರಹಸ್ಯ ಗುಹೆ

ಸುಪರ್ ಸ್ಟಾರ್ ರಜನಿಕಾಂತ್ ಎಂದರೆ ಎಲ್ಲಾರಿಗೂ ಅಚ್ಚು ಮೆಚ್ಚು. ರಜನಿಕಾಂತ್‍ರವರು ಕನ್ನಡದವರೆ ಎಂಬುದು ಸಹಜವಾಗಿ ಎಲ್ಲಾರಿಗೂ ತಿಳಿದ ವಿಚಾರವೆ. ವಿಶೇಷ ಏನೆಂದರೆ ಪ್ರತಿಯೊಬ್ಬ ಸಾಮಾನ್ಯ ಜನತೆಯಾಗಲಿ, ಸ್ಟಾರ್ ನಟನಾಗಲಿ ತಮ್ಮ ಇಷ್ಟ ದೇವತೆಗಳನ್ನು ಪೂಜಿಸುವುದು ಸಾಮಾನ್ಯ. ಆದರೆ ಸ್ಟಾರ್ ನಟರು ಯಾವ ದೇವರನ್ನು ತಮ್ಮ ಆರಾಧ್ಯ ದೈವವಾಗಿ ಪೂಜಿಸುತ್ತಾರೆ ಎಂಬ ಕೂತುಹಲ ಎಲ್ಲರಲ್ಲೂ ಇರುತ್ತದೆ.

ಹಾಗಾದರೆ ಇತ್ತೀಚೆಗೆ ರಜನೀಕಾಂತ್‍ರವರು ಒಂದು ಪ್ರಸಿದ್ದವಾದ ಗುಹೆಗೆ ಭೇಟಿ ನೀಡಿದ್ದಾರೆ ಅದು ಯಾವುದು ಅಂತ ಕೇಳುತ್ತಾ ಇದ್ದಿರಾ ಅದೇ ಮಹಾ ಅವತಾರ್ ಬಾಬಾ ಗುಹೆ. ಈ ಮಹಾ ಅವತಾರ್ ಬಾಬಾ ಕ್ರಿ.ಪೂ 208 ರಲ್ಲಿ ಜನಿಸಿದ್ದರು, ಇವರು ಸರಾಸರಿ 1800 ವರ್ಷಗಳಿಂದಲೂ ಜೀವ ಸಮಾಧಿಯಾಗಿದ್ದರು.  ಸೂಪರ್ ಸ್ಟಾರ್ ರಜನಿಕಾಂತ್ ಉತ್ತರ ಖಂಡನಲ್ಲಿರುವ ದೂಣಗಿರಿ ಬೆಟ್ಟದ ಸಮೀಪದಲ್ಲಿನ ಶ್ರೀ ಮಹಾವತಾರ ಬಾಬಾ ಗುಹೆಗೆ ಭೇಟಿ ನೀಡಿದ್ದರು.

ಬಾಬಾರ ಗುಹೆಗೆ ತೆರಳಿದ ರಜನಿಕಾಂತ್

ಬಾಬಾರ ಗುಹೆಗೆ ತೆರಳಿದ ರಜನಿಕಾಂತ್

ಬಾಬಾಜಿ ಗುಹೆಗೆ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ನೀಡಿದ್ದರು. ಎಲ್ಲರೂ ತಿಳಿದ ಹಾಗೇ ರಜನಿಕಾಂತ್‍ರವರು ಯೋಗಿ ಪರಮಹಂಸರವರ ಆತ್ಮಕಥನದ ಕುರಿತು ಒಂದು ಚಿತ್ರವನ್ನು ನಿರ್ಮಿಸಿದ್ದಾರೆ. ವಿಶಿಷ್ಟವೆನೆಂದರೆ ಬಾಬಾ ಅವತಾರವಾದ ಯೋಗಿಯು ಈ ಗುಹೆಯೊಳಗೆ ಜೀವಿಸುತ್ತಿದ್ದಾರೆ ಎಂಬ ನಂಬಿಕೆ ಜನರದ್ದು. ಈ ಬಾಬಾಜಿ ಗುಹೆಗೆ ಬರುವ ಪ್ರವಾಸಿಗರು ಗುಹೆಯ ಸುತ್ತಮುತ್ತ ಇರುವ ಮಾಹಿಮಾನ್ವಿತ ತಾಣಗಳಿಗೆ ಹೋಗಿ ಪ್ರವಾಸಿಗರು ಆರ್ಶಿವಾದವನ್ನು ಪಡೆಯುತ್ತಾರೆ.

ಬಾಬಾಜಿ ಗುಹೆ

ಬಾಬಾಜಿ ಗುಹೆ

ಈ ಬಾಬಾಜಿ ಗುಹೆಯು ಪ್ರಶಾಂತತೆಯಿಂದ ಕೂಡಿದ್ದು 6 ರಿಂದ 8 ಮಂದಿ ಕುಳಿತು ಧ್ಯಾನವನ್ನು ಮಾಡಬಹುದಾಗಿದೆ. ಈ ಗುಹೆಯಲ್ಲಿ ಕುಳಿತು ಧ್ಯಾನ ಮಾಡಿದರೆ ಶಕ್ತಿ ಹಾಗೂ ಜ್ಞಾನ ವೃಧ್ದಿಯನ್ನು ಬಾಬಾಜಿ ನೀಡುತ್ತಾರೆ ಎಂಬುದು ಜನರ ನಂಬಿಕೆಯಾಗಿದೆ. ಈ ಗುಹೆಯು ಕೇವಲ ಪ್ರವಾಸಿ ತಾಣವೇ ಅಲ್ಲದೇ ತೀರ್ಥಕ್ಷೇತ್ರ ಕೂಡ ಆಗಿದೆ.

ಆಧ್ಯಾತ್ಮಿಕ ಪಯಣ

ಆಧ್ಯಾತ್ಮಿಕ ಪಯಣ

ಈ ಗುಹೆಯ ಪ್ರಯಾಣವು ನಿಮಗೆ ಹಿತಕರವಾಗಿದ್ದು, ಒಂದು ಆಧ್ಯಾತ್ಮಿಕ ಪ್ರಯಾಣದ ಅನುಭವವನ್ನು ಪಡೆಯುತ್ತಿರಾ. ಹಲವಾರು ಭಕ್ತರು ಇಲ್ಲಿಗೆ ದಿನನಿತ್ಯ ಭೇಟಿ ಕೋಡುತ್ತಾರೆ. ಈ ಪ್ರದೇಶದ ಸಮೀಪದಲ್ಲಿ ಋಷಿಕೇಶ ಎಂಬ ತೀರ್ಥಕ್ಷೇತ್ರವಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳಿರುವುದರಿಂದ ಒಮ್ಮೆ ಭೇಟಿ ನೀಡಿ ಬನ್ನಿ.

ಬಾಬಾ ಗುಹೆ ಹೋಗುವುದು ಹೇಗೆ?

ಬಾಬಾ ಗುಹೆ ಹೋಗುವುದು ಹೇಗೆ?

ಈ ಗುಹೆಯು ಭಾರತದ ಉತ್ತರ ಖಂಡದಲ್ಲಿದೆ. ಬಾಬಾಜಿ ಗುಹೆಯು ರಾಣಿಖೇಟ್‍ನ ಸಮೀಪದಲ್ಲಿದೆ. ದ್ವಾರತ್‍ನಿಂದ ರಾಣಿಖೇಟ್‍ಗೆ ಸುಮಾರು 35 ಕಿ.ಮೀಯಷ್ಟಿದ್ದು, ಕುಕುಚಿನ್ನದ ಬಳಿ ದೂಣಗಿರಿ ಬೆಟ್ಟದ ಮೇಲೆ ಈ ಗುಹೆ ಇದೆ.

PC:Richard Reinhardt

ಈ ಯೋಗಿಯ ಜೀವನಕಥೆ

ಈ ಯೋಗಿಯ ಜೀವನಕಥೆ

ಬಾಬಾ ಒಬ್ಬ ಭಾರತೀಯ ಸನ್ಯಾಸಿ. ಈ ಬಾಬಾ 1800 ವರ್ಷಗಳಾದರು ಇವತ್ತೀಗೂ ಜೀವಂತವಾದ ಮಹಾಯೋಗಿ ಶ್ರೀ ಮಹಾವತಾರ ಬಾಬಾಜಿಯವರ ಜನ್ಮದಿನವಾಗಿ ನವೆಂಬರ್ 30ರಂದು ಆಚರಿಸಲಾಗುತ್ತದೆ. ಆದರೆ ಕೆಲವರು ಈ ಬಾಬಾ ಕ್ರಿ.ಶ 208 ರ ಮುಂಚೆಯೇ ಜನಿಸಿದ್ದರು ಎಂದು ಹೇಳುತ್ತಾರೆ. ಬಾಬಾಜಿಯವರು ಈಗಲೂ ಹಿಮಾಲಯದ ಪರ್ವತಗಳಲ್ಲಿ ಜೀವಿಸುತ್ತಿದ್ದಾರೆ ಎಂಬ ನಂಬಿಕೆ ಜನರಲ್ಲಿದೆ. ತಲತಲಾಂತರಗಳಿಂದ ಭಾರತೀಯ ಸಂಸ್ಕøತಿಯನ್ನು ಪೋಷಿಸಿದ ಆಧ್ಯಾತ್ಮಿಕ ಗುರು ಈ ಬಾಬಾಜಿ. ಬಾಬಾಜಿಯವರು ಕ್ರಿಯಾಯೋಗದ ಕುರಿತು ಹಲವಾರು ಧ್ಯಾನ ಸಂದೇಶಗಳನ್ನು ನೀಡಿದ ಮಹಾಗುರು.

PC:Dr Nagraj Rajgopal

ನೋಡಬೇಕಾದ ತಾಣಗಳು

ನೋಡಬೇಕಾದ ತಾಣಗಳು

ಋಷಿಕೇಶ ಮತ್ತು ಸಮೀಪದ ಹರಿದ್ವಾರದಲ್ಲಿ ಹಲವಾರು ಪುಣ್ಯ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿರುವುದರಿಂದ ಇಲ್ಲಿಗೂ ಒಮ್ಮೆ ಭೇಟಿ ನೀಡಿ ಬನ್ನಿ.

ಉತ್ತಮ ಸಮಯ

ಉತ್ತಮ ಸಮಯ

ಈ ಗುಹೆಗೆ ಭೇಟಿ ನೀಡಲು ವರ್ಷದಲ್ಲಿ ಯಾವಾಗಲಾದರೂ ಭೇಟಿ ನೀಡಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more