Search
  • Follow NativePlanet
Share
» »18 ಸಿದ್ಧರ ಮುಖ್ಯಸ್ಥನಾದ ಮಹಾನಂದಿ ದೇವಾಲಯ

18 ಸಿದ್ಧರ ಮುಖ್ಯಸ್ಥನಾದ ಮಹಾನಂದಿ ದೇವಾಲಯ

By Vijay

ನಂದಿಯನ್ನು ಸಾಮಾನ್ಯವಾಗಿ ಶಿವನ ವಾಹನ ಎಂದೆ ಕರೆಯಲಾಗಿದೆ. ಆದರೆ ನೆನಪಿರಲಿ ನಂದಿ ಕೇವಲ ಶಿವನ ವಾಹನವಲ್ಲ ಬದಲಾಗಿ ಕೈಲಾಸದ ಮೇಲ್ವಿಚಾರಕ. ಪತಂಜಲಿ, ತಿರುಮೂಲಾರ್ ರನ್ನೊಳಗೊಂಡ ಹದಿನೆಂಟು ಸಿದ್ಧರ ಮುಖ್ಯಸ್ಥ. ಧೈರ್ಯಶಾಲಿ, ಬಲಶಾಲಿ ಹಾಗೂ ಬುದ್ಧಿಶಾಲಿ ಎತ್ತು ನಂದಿ.

ಸಾಮಾನ್ಯವಾಗಿ ಪ್ರತಿ ಶಿವನ ದೇವಾಲಯಗಳಲ್ಲಿ ಶಿವನಿಗೆ ಎದುರಾಗಿ ದರ್ಶನ ಪಡೆಯುತ್ತಿರುವ ನಂದಿಯ ವಿಗ್ರಹವನ್ನು ಎಲ್ಲೆಡೆ ಕಾಣಬಹುದು. ಆದರೆ ನಿಮಗೆ ಗೊತ್ತೆ ನಂದಿಗೆಂದೆ ಮುಡಿಪಾದ ಕೆಲವು ದೇವಾಲಯಗಳು ಭಾರತದಲ್ಲಿ ಕಂಡುಬರುತ್ತವೆ. ಅಂತಹ ಒಂದು ದೇವಾಲಯದ ಪೈಕಿ ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ.

ನಂದಿ ಎಂಬ ಶಬ್ದ ಬರಲು ಎರಡು ರೀತಿಯ ಹಿನ್ನಿಲೆಗಳನ್ನು ಇತಿಹಾಸಕಾರರು ಮುಂದಿಡುತ್ತಾರೆ. ಕೆಲವರ ಪ್ರಕಾರ, ಸಂಸ್ಕೃತದಲ್ಲಿ ನಂದಿ ಎಂದರೆ ಸಂತಸದಿಂದಿರುವ ವ್ಯಕ್ತಿ ಎಂಬರ್ಥ ಬರುತ್ತದೆ. ಅದರಂತೆ ನಂದಿಯು ಶಿವನ ಅತಿ ಪರಮ ಭಕ್ತ ಹಾಗೂ ಶಿವನನ್ನು ದರ್ಶಿಸುತ್ತ ಕೈಲಾಸದಲ್ಲಿ ಸದಾ ಸಂತಸದಿಂದಿರುತ್ತಿದ್ದ. ಹೀಗಾಗಿ ನಂದಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಮಹಾನಂದಿ ದೇವಾಲಯ :

ಮಹಾನಂದಿ ದೇವಾಲಯ :

ಇನ್ನೂ ಕೆಲವರು ತಮಿಳಿನ ಪಂದಿಯಿಂದ ನಂದಿ ಎಂಬ ಹೆಸರು ಚಾಲ್ತಿಯಲ್ಲಿ ಬಂದಿತೆನ್ನಲಾಗಿದೆ. ಸದೃಢ ಮೈಕಟ್ಟನ್ನು ಪ್ರತಿನಿಧಿಸುವ ಸಂಕೇತವಾಗಿ ನಂದಿಯನ್ನು ಕೊಂಡಾಡುತ್ತಿದ್ದರೆನ್ನಲಾಗಿದೆ.

ಚಿತ್ರಕೃಪೆ: Sai Sreekanth

ಮಹಾನಂದಿ ದೇವಾಲಯ :

ಮಹಾನಂದಿ ದೇವಾಲಯ :

ನಂದಿಯ ಕುರಿತು ಹಿನ್ನಿಲೆ ತಿಳಿಯುವುದಕ್ಕಿಂತ ಮುಂಚೆ ಮಹಾನಂದಿಯ ದೇವಾಲಯದ ಕುರಿತು ಮೊದಲು ತಿಳಿಯಿರಿ. ಈ ದೇವಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ನಂದ್ಯಾಳ್ ನಗರದ ಬಳಿಯಿರುವ ನಲ್ಲಮಲ್ಲ ಬೆಟ್ಟಗಳಲ್ಲಿ ಸ್ಥಿತವಿದೆ.

ಚಿತ್ರಕೃಪೆ: Kcktatineni

ಮಹಾನಂದಿ ದೇವಾಲಯ :

ಮಹಾನಂದಿ ದೇವಾಲಯ :

ಚಾಲುಕ್ಯ ದೊರೆಗಳಿಂದ ನಿರ್ಮಿತವಾದ ಈ ಮಹಾನಂದೀಶ್ವರನ ದೇವಲಯವು ಸಾಕಷ್ಟು ಪುರಾತನವಾಗಿದ್ದು 1500 ವರ್ಷಗಳಷ್ಟು ಹಿಂದಿನ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಹೀಗಾಗಿ ಇತಿಹಾಸಪ್ರಿಯ ಪ್ರವಾಸಿಗರ, ಇತಿಹಾಸ ಅಧ್ಯಯನಕಾರರ ಗಮನ ಸಾಕಷ್ಟು ಸೆಳೆಯುತ್ತದೆ.

ಚಿತ್ರಕೃಪೆ: Adityamadhav83

ಮಹಾನಂದಿ ದೇವಾಲಯ :

ಮಹಾನಂದಿ ದೇವಾಲಯ :

ಇಲ್ಲಿ ದೊರೆತಿರುವ ಹತ್ತನೇಯ ಶತಮಾನಕ್ಕೆ ಸಂಬಂಧಿಸಿದ ಶಾಸನವೊಂದರಲ್ಲಿ ಬರೆಯಲಾದಂತೆ ಈ ದೇವಾಲಯವನ್ನು ಹಲವು ಬಾರಿ ನವೀಕರಣಗೊಳಿಸಲಾಗಿರುವುದರ ಕುರಿತು ತಿಳಿದು ಬರುತ್ತದೆ.

ಚಿತ್ರಕೃಪೆ: sai sreekanth mulagaleti

ಮಹಾನಂದಿ ದೇವಾಲಯ :

ಮಹಾನಂದಿ ದೇವಾಲಯ :

ನಗರ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯದಲ್ಲಿ ಪ್ರತಿ ವರ್ಷ ಬರುವ ಮಹಾಶಿವರಾತ್ರಿಯನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಪ್ರಮಾಣದಲ್ಲಿ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Adityamadhav83

ಮಹಾನಂದಿ ದೇವಾಲಯ :

ಮಹಾನಂದಿ ದೇವಾಲಯ :

ಇನ್ನೂ ಈ ದೇವಾಲಯ ಮಂಡಳಿಯು ಹೇಳುವಂತೆ ಕೆಲವು ಮೂಲಗಳ ಪ್ರಕಾರ, ಹಿಂದೆ ಕೃತಯುಗ ಪ್ರಾರಂಭದಲ್ಲಿ ಪರ್ವತನಿಗೆ ಇಬ್ಬರು ಮಕ್ಕಳಿದ್ದರು ಒಬ್ಬನು ಶಿಲದ ಹಾಗೂ ಇನ್ನೊಬ್ಬ ನಂದಿ ಎಂದು ಅವರ ಹೆಸರುಗಳು.

ಚಿತ್ರಕೃಪೆ: Sai Sreekanth

ಮಹಾನಂದಿ ದೇವಾಲಯ :

ಮಹಾನಂದಿ ದೇವಾಲಯ :

ದೊಡ್ಡವನಾಗಿದ್ದ ಶಿಲದ ದೇವರ ಕುರಿತು ಅತಿ ಕಠಿಣವಾದ ತಪಸ್ಸನ್ನಾಚರಿಸಿದ. ಅದರ ಭಾಗವಾಗಿ ಆಹಾರ ತ್ಯಜಿಸಿ ಕೇವಲ ಶಿಲೆಗಳನ್ನೆ ತಿಂದು ತಪಗೈದ. ಇದರಿಂದ ಪ್ರಸನ್ನನಾದ ದೇವರು ಅವನನ್ನು ಬೆಟ್ಟವಾಗುವಂತೆ ಹರಸಿ ಅದರ ಮೇಲೆ ತಾನು ವಾಸಿಸತೊಡಗಿದ.

ಚಿತ್ರಕೃಪೆ: sai sreekanth mulagaleti

ಮಹಾನಂದಿ ದೇವಾಲಯ :

ಮಹಾನಂದಿ ದೇವಾಲಯ :

ನಂದಿಯೂ ಸಹ ದೈವಭಕ್ತನಾಗಿದ್ದು ಅಣ್ಣನಂತೆಯೆ ಶಿವನನ್ನು ಕುರಿತು ತಪಗೈದ. ಅವನ ತಪಸ್ಸಿನಿಂದ ಪ್ರಸನ್ನನಾದ ಶಿವನು ನಂದಿಗೆ ಪ್ರತ್ಯಕ್ಷನಾಗಿ ಅವನನ್ನು ಹರಸಿ ತನ್ನ ವಾಹನವನ್ನಾಗಿ ಮಾಡಿಕೊಂಡ. ನಂದಿಯು ತಪಗೈದ ಆ ಸ್ಥಳವೆ ಇಂದಿನ ಮಹಾನಂದಿಯಾಗಿದೆ ಎನ್ನಲಾಗುತ್ತದೆ.

ಚಿತ್ರಕೃಪೆ: sai sreekanth mulagaleti

ಮಹಾನಂದಿ ದೇವಾಲಯ :

ಮಹಾನಂದಿ ದೇವಾಲಯ :

ಇನ್ನೂ ಒಂದು ಮೂಲದ ಪ್ರಕಾರ, ಹಿಂದೆ ನಂದರು ಈ ಪ್ರದೇಶವನ್ನಾಳುತ್ತಿದ್ದರು. ಅವರ ಕುಲದ ದೇವತೆಯಾದ ನಂದಿಯನ್ನು ಆರಾಧಿಸಲು ಈ ದೇವಾಲಯ ನಿರ್ಮಾಣ ಮಾಡಿದರೆನ್ನಲಾಗಿದೆ.

ಚಿತ್ರಕೃಪೆ: sai sreekanth mulagaleti

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X