Search
  • Follow NativePlanet
Share
» »ಮಹಾಗೌರಿ ದೇವಸ್ಥಾನ ವಾರಣಾಸಿ: ಈ ದೇವಿಯನ್ನು ಪೂಜಿಸುವವರಿಗೆ ದರಿದ್ರ ಬರೋದಿಲ್ಲ

ಮಹಾಗೌರಿ ದೇವಸ್ಥಾನ ವಾರಣಾಸಿ: ಈ ದೇವಿಯನ್ನು ಪೂಜಿಸುವವರಿಗೆ ದರಿದ್ರ ಬರೋದಿಲ್ಲ

ನವರಾತ್ರಿಯ 8ನೇ ದಿನದಂದು ದುರ್ಗೇಯ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಅನ್ನಪೂರ್ಣೇಯ ರೂಪದಲ್ಲೂ ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಪೂಜಿಸುವವರಿಗೆ ಧರಿದ್ರ ಬರೋದಿಲ್ಲ. ಭಕ್ತರ ಮೇಲೆ ತಾಯಿಯ ಅನುಕಂಪ ಯಾವಾಗಲೂ ಇರುತ್ತದೆ ಎನ್ನಲಾಗುತ್ತದೆ.

ಚತುರ್ಭುಜೆ

ಚತುರ್ಭುಜೆ

ಮಹಾಗೌರಿಯು ಯಾವಾಗಲೂ ಕಾಶಿ ನಿವಾಸಿಗಳಿಗೆ ಕಲ್ಯಾಣ ಮಾಡುತ್ತಾಳೆ. ಹಾಗಾಗಿ ಕಾಶಿಯ ಜನರು ಯಾವತ್ತೂ ಹಸಿವಿನಿಂದಿರೊದಿಲ್ಲ. ಮಹಾಗೌರಿಯ ವಾಹನ ವೃಷಭ. ಚತುರ್ಭುಜೆ ದೇವಿಯು ಶಾಂತ ಹಾಗೂ ಸೌಮ್ಯ ಸ್ವಭಾವವನ್ನು ಹೊಂದಿದ್ದಾಳೆ.

ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?

ಅನ್ನಪೂರ್ಣೇಯ ದೇವಾಲಯ

ಅನ್ನಪೂರ್ಣೇಯ ದೇವಾಲಯ

ವಾರಣಾಸಿಯಲ್ಲಿ ವಿಶ್ವನಾಥ ಬೀದಿಯಲ್ಲಿರುವ ಮಾತೆ ಅನ್ನಪೂರ್ಣೇಯ ದೇವಾಲಯವೇ ಮಹಾಗೌರಿಯ ದೇವಾಲಯವಾಗಿದೆ. ನವರಾತ್ರಿ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

 ಪತಿಯ ದೀರ್ಘಾಯುಷ್ಯ

ಪತಿಯ ದೀರ್ಘಾಯುಷ್ಯ

ಮಹಾಗೌರಿಯನ್ನು ಪೂಜಿಸುವವರಿಗೆ ತಾಯಿಯು ಸಂತೋಷ ಮತ್ತು ಶಕ್ತಿಯನ್ನು ನೀಡುತ್ತಾಳೆ. ಪತ್ನಿಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಮಹಾಗೌರಿಯನ್ನು ಪೂಜಿಸುತ್ತಾರೆ. ಇನ್ನು ಅವಿವಾಹಿತ ಸ್ತ್ರೀಯರು ಮಹಾಗೌರಿಯ ಪೂಜೆ ಮಾಡಿದ್ರೆ ಉತ್ತಮ ಬಾಳಸಂಗಾತಿ ಸಿಗುತ್ತಾರೆ ಎನ್ನುತ್ತಾರೆ.

ಕಾತ್ಯಾಯಿನಿ ವೃತ ಮಾಡಿದ್ರೆ ಇಷ್ಟಪಟ್ಟ ಬಾಳಸಂಗಾತಿ ಸಿಗ್ತಾರಂತೆಕಾತ್ಯಾಯಿನಿ ವೃತ ಮಾಡಿದ್ರೆ ಇಷ್ಟಪಟ್ಟ ಬಾಳಸಂಗಾತಿ ಸಿಗ್ತಾರಂತೆ

ಮಾತೃ ದೇವತೆ

ಮಾತೃ ದೇವತೆ

ತಾಯಿ ಗೌರಿ ದೇವಿ, ಶಕ್ತಿ ಅಥವಾ ಮಾತೃ ದೇವತೆಯಾಗಿದ್ದು, ದುರ್ಗಾ, ಪಾರ್ವತಿ, ಕಾಳಿ ಮತ್ತು ಇತರರು ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಆಕೆ ಮಂಗಳಕರ, ಅದ್ಭುತ ಮತ್ತು ಒಳ್ಳೆಯ ಜನರನ್ನು ರಕ್ಷಿಸುತ್ತಾ ದುಷ್ಟ ಕಾರ್ಯಗಳನ್ನು ಮಾಡುವವರಿಗೆ ಶಿಕ್ಷೆ ನೀಡುತ್ತಾಳೆ.

ಭಕ್ತರ ಭೇಡಿಕೆ ಈಡೇರಿಸುತ್ತಾಳೆ

ಭಕ್ತರ ಭೇಡಿಕೆ ಈಡೇರಿಸುತ್ತಾಳೆ

ಮಹಾಗೌರಿ ದೇವಿ ದೇವಾಲಯವು ವಾರಣಾಸಿ ಮತ್ತು ಲುಧಿಯಾನಾದಲ್ಲಿದೆ. ಮಹಾಗೌರಿಯನ್ನು ನವರಾತ್ರಿ ಎಂಟನೆಯ ದಿನದಲ್ಲಿ ಪೂಜಿಸಲಾಗುತ್ತದೆ ಮತ್ತು ದೇವತೆ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ಶಕ್ತಿಯನ್ನು ಹೊಂದಿದ್ದಾಳೆ ಎಂದು ನಂಬಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X