Search
  • Follow NativePlanet
Share
» »ಗದಗಿನ ಲಕ್ಷ್ಮೇಶ್ವರ ಮತ್ತು ಅಲ್ಲಿಯ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ

ಗದಗಿನ ಲಕ್ಷ್ಮೇಶ್ವರ ಮತ್ತು ಅಲ್ಲಿಯ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ

ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಷ್ಮೇಶ್ವರ ಗದಗ ನಗರದಿಂದ ಸುಮಾರು 40 ಕಿ.ಮೀ ಅಂತರದಲ್ಲಿದೆ. ಲಕ್ಷ್ಮೇಶ್ವರ ಒಂದು ಐತಿಹಾಸಿದ ನಗರವಾಗಿದ್ದು ಮಧ್ಯಕಾಲೀನ ಯುಗದ ಇತಿಹಾಸವನ್ನು ಹೊಂದಿದ್ದು ಆ ಕಾಲದಲ್ಲಿ ಈ ನಗರವು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿತ್ತು. ಈ ಪ್ರದೇಶವನ್ನು ಅನೇಕ ಶತಮಾನಗಳ ಹಿಂದೆ ಆಳಿದ ಲಕ್ಷಣರಸ ಎಂಬ ರಾಜನ ಹೆಸರನ್ನು ಇಡಲಾಗಿದೆ ಎಂದು ನಂಬಲಾಗುತ್ತದೆ.

ಈ ನಗರದ ರಚನೆಯ ಕುರಿತಾದ ಖಚಿತವಾದ ದಿನಾಂಕ ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಈ ಪ್ರಾಂತ್ಯವು ಅನೇಕ ಸಾಮ್ರಾಜ್ಯದ ಆಡಳಿತಗಾರರಿಂದ ಆಳಲ್ಪಟ್ಟಿದೆ ಆದುದರಿಂದ ಇಲ್ಲಿ ಅನೇಕ ದೇವಾಲಯಗಳು ಮತ್ತು ಅನೇಕ ಧಾರ್ಮಿಕ ತಾಣಗಳು ನಿರ್ಮಿಸಲ್ಪಟ್ಟಿದೆ.

ಹಿಂದೆ ಇದು ಜೈನರ ಒಂದು ಪ್ರಮುಖವಾದ ಕೇಂದ್ರವೂ ಆಗಿತ್ತು. ಆದುದರಿಂದ ಇಂದು ಇಲ್ಲಿ ಅನೇಕ ಜೈನ ಬಸದಿಗಳನ್ನೂ ಕೂಡಾ ಕಾಣಬಹುದಾಗಿದೆ. ಇಂತಹ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದಂತಹ ಐತಿಹಾಸಿಕ ಪಟ್ಟಣದ ಅನ್ವೇಷಣೆ ಮಾಡಲು ನೀವು ಇಷ್ಟ ಪಡುವುದಿಲ್ಲವೆ?

ನೀವು ಇದರ ಗಡಿಯೊಳಗೆ ಕರ್ನಾಟಕದ ಬಹಳಷ್ಟು ಇತಿಹಾಸವನ್ನು ಕಲಿಯಬಹುದಾಗಿದೆ. ಇಲ್ಲಿಗೆ ಬೆಂಗಳೂರಿನಿಂದ ಸುಲಭವಾಗಿ ಹೋಗಬಹುದು. ನೀವು ಪ್ರಾಚೀನ ಕಾಲದ ಅನ್ವೇಷಣೆಗೊಳಗಾಗದ ಸ್ಥಳಗಳಲ್ಲಿಯ ಹಾಗೂ ಭಾರತದ ಕೆಲವು ಬೆಳಕಿಗೆ ಬರದೇ ಇರುವ ಇತಿಹಾಸಗಳ ಬಗ್ಗೆ ಶೋಧನೆ ಮಾಡಲು ನೋಡುತ್ತಿರುವಿರಾದಲ್ಲಿ ನೀವು ಕರ್ನಾಟದಲ್ಲಿಯ ಲಕ್ಷ್ಮೇಶ್ವರಕ್ಕೆ ಒಮ್ಮೆ ಭೇಟಿ ಕೊಡಲೇಬೇಕು. ಈ ಪಟ್ಟಣದಲ್ಲಿರುವಾಗ ಈ ಕೆಳಗಿನ ಕೆಲವು ಭೇಟಿ ಕೊಡಲೇಬೇಕಾದಂತಹ ಕೆಲವು ಸ್ಥಳಗಳು.

ಸೋಮೇಶ್ವರ ದೇವಾಲಯ

ಸೋಮೇಶ್ವರ ದೇವಾಲಯ

Manjunath Doddamani Gajendragad

ಲಕ್ಷ್ಮೇಶ್ವರದಲ್ಲಿಯ ಅತ್ಯಂತ ಪ್ರಸಿದ್ದವಾದ ಸ್ಥಳ ಸೋಮೇಶ್ವರ ದೇವಾಲಯ. ಈ ಪ್ರಾಚೀನ ದೇವಾಲಯವು ಶಿವದೇವರಿಗೆ ಅರ್ಪಿತವಾದುದಾಗಿದೆ. ಈ ದೇವಾಲಯವು 11ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು, ಎತ್ತರವಾದ ಗೋಡೆಗಳಿಂದ ಆವರಿಸಲ್ಪಟ್ಟಿದುದಲ್ಲದೆ ಇನ್ನೂ ಅನೇಕ ಹಿಂದೂ ದೇವಾಲಯಗಳನ್ನು ಸುತ್ತಲೂ ಹೊಂದಿದೆ. ಇದು ಚಾಲುಕ್ಯರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿತವಾಗಿದೆ ಮತ್ತು ಇಲ್ಲಿಯ ನಂದಿಯ ಪ್ರತಿಮೆ, ಶಿವ ದೇವರ ಮತ್ತು ಪಾರ್ವತಿ ದೇವಿಯ ವಿಗ್ರಹಗಳು ಉತ್ತಮವಾಗಿ ಕೆತ್ತಲ್ಪಟ್ಟಿದೆ

ದಾಖಲೆಗಳ ಪ್ರಕಾರ ಈ ದೇವಾಲಯದ ಪ್ರತಿಮೆಗಳನ್ನು ಶಿವಭಕ್ತರೊಬ್ಬರಿಂದ ತರಲ್ಪಟ್ಟಿದೆ ಎಂದು ಹೇಳಲಾಗುತ್ತದೆ ಮತ್ತು ತದನಂತರದಿಂದ ಇದು ಈ ದೇವಾಲಯ ಸಂಕೀರ್ಣದ ಒಳಗಡೆ ಇದೆ ಎಂದು ಹೇಳಲಾಗುತ್ತದೆ. ನೀವು ಇಲ್ಲಿ 8ನೇ ಶತಮಾನಕ್ಕೆ ಸಂಬಂಧಿಸಿದ ಅನೇಕ ಪ್ರಾಚೀನ ಶಾಸನಗಳನ್ನೂ ಕಾಣಬಹುದಾಗಿದೆ. ಆದುದರಿಂದ ಸೋಮೇಶ್ವರ ದೇವಾಲಯವು ಲಕ್ಷ್ಮೇಶ್ವರದ ಇತಿಹಾಸವನ್ನು ತಿಳಿಯಲು ಅತ್ಯಂತ ಸೂಕ್ತವಾದ ಸ್ಥಳವೆನಿಸಿದೆ.

ಶಂಕ ಬಸದಿ

ಶಂಕ ಬಸದಿ

ಮೊದಲೇ ಹೇಳಿರುವಂತೆ ಲಕ್ಷ್ಮೇಶ್ವರವು ಒಂದೊಮ್ಮೆ ಜೈನ ಕೇಂದ್ರವೂ ಆಗಿತ್ತು ಆದುದರಿಂದ ಇಂದು ಇದು ಅನೇಕ ಜೈನ ದೇವಾಲಯಗಳಿಗೆ ನೆಲೆಯಾಗಿದೆ. ಶಂಕ ಬಸದಿ ಅವುಗಳಲ್ಲಿ ಹೆಚ್ಚು ಪ್ರಸಿದ್ದಿ ಹೊಂದಿದೆ. ಈ ದೇವಾಲಯವು 22ನೇ ಜೈನ ತೀರ್ಥಂಕರರಾದ ನೇಮಿನಾಥ ದೇವರಿಗೆ ಅರ್ಪಿತವಾದುದಾಗಿದ್ದು ಇದನ್ನು 8ನೇ ಶತಮಾನದಲ್ಲಿ ನಿರ್ಮಿಸಲಾಯಿತು ಎಂದು ನಂಬಲಾಗುತ್ತದೆ .

ಈ ದೇವಾಲಯವು ಅನೇಕ ಬಾರಿ ಪುನರ್ ನಿರ್ಮಾಣಕ್ಕೆ ಒಳಗಾಗಿದ್ದರೂ ಕೂಡಾ ಇದರ ಪ್ರಾಚೀನ ಸೌಂದರ್ಯತೆಯು ಇನ್ನು ಅಸ್ತಿತ್ವದಲ್ಲಿದೆ. ಸುಂದರವಾದ ಕೆತ್ತನೆಗಳು ಮತ್ತು ಭವ್ಯವಾದ ವಾಸ್ತುಶಿಲ್ಪಗಳನ್ನು ಹೊಂದಿರುವ ದೇವಾಲಯವು ಎಲ್ಲಾ ರಾಜ್ಯದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಜೈನಪಂಥದ ಇತಿಹಾಸವನ್ನು ಕರ್ನಾಟಕದಲ್ಲಿ ಪತ್ತೆ ಹಚ್ಚುವುದು ಹೇಗಿರುತ್ತದೆ? ನೀವು ಈ ಕೆಲಸವನ್ನು ಮಾಡಲಿಚ್ಚಿಸಿದಲ್ಲಿ, ಈ ಖುತುವಿನಲ್ಲಿ ಲಕ್ಷ್ಮೇಶ್ವರ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಈ ದೇವಾಲಯವು ಚಾಲುಕ್ಯರ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ.

ಜುಮ್ಮಾ ಮಸೀದಿ

ಜುಮ್ಮಾ ಮಸೀದಿ

Manjunath Doddamani Gajendragad

ಹೌದು ಲಕ್ಷ್ಮೇಶ್ವರವು ಮುಸಲ್ಮಾನರ ಧಾರ್ಮಿಕ ತಾಣಗಳಿಗೂ ನೆಲೆಯಾಗಿದೆ ಇದಕ್ಕೆ ಸಾಕ್ಷಿಯಾಗಿ ಇಲ್ಲಿ ಸುಂದರವಾದ ಜುಮ್ಮಾ ಮಸೀದಿ ಇದೆ. ಈ ಮಸೀದಿಯು 17ನೇ ಶತಮಾನದ ಆದಿಲ್ ಶಾಹೀ ಸಾಮ್ರ್ಯಾಜ್ಯದ ಸಮಯದಲ್ಲಿ ನಿರ್ಮಿತವಾಯಿತು.

ಬೃಹತ್ ಬಾಗಿಲುಗಳು ಸುಂದರವಾದ ಗುಮ್ಮಟಗಳು ಮತ್ತು ಎತ್ತರದ ಮಿನಾರ್ ಗಳು ಇವುಗಳನ್ನು ಹೊಂದಿರುವ ಈ ಮಸೀದಿಯು ಇಂಡೋ ಸೆರಾಸೆನಿಕ್ ವಾಸ್ತು ಶಿಲ್ಪಶೈಲಿಗೆ ರಾಜ್ಯದ ಒಂದು ಉತ್ತಮವಾದ ಉದಾಹರಣೆಯಾಗಿದೆ. ಇಂದು ಈ ಮಸೀದಿಯು ಭಾರತದ ಪುರಾತತ್ವ ಶಾಸ್ತ್ರದ ಸಮೀಕ್ಷೆಯ ಉಸ್ತುವಾರಿಯಲ್ಲಿಯಲ್ಲಿದೆ. ಈ ಮಸೀದಿಯು ನೂರಾರು ಪ್ರವಾಸಿಗರಿಂದ ಪ್ರತೀ ವರ್ಷ ಭೇಟಿ ನೀಡಲ್ಪಡುತ್ತದೆ. ಇದು ಈಗ ಅಧಃಪತನದದ ದಾರಿಯಲ್ಲಿದ್ದರು ಕೂಡಾ ಇದರ ಗಡಿಯೊಳಗೆ ಅನ್ವೇಷಣೆ ಮಾಡಬಹುದಾದಂತಹ ಅನೇಕ ವಿಷಯಗಳಿವೆ.

ಬಡೇ ನಾನಾ ದರ್ಗಾ

ಬಡೇ ನಾನಾ ದರ್ಗಾ

Manjunath Doddamani Gajendragad

ಲಕ್ಷ್ಮೇಶ್ವರದಲ್ಲಿ ನಿರ್ಮಿಸಲ್ಪಟ್ಟಿರುವ ಮತ್ತೊಂದು ಮುಸಲ್ಮಾನ ವಾಸ್ತುಶಿಲ್ಪ ಬಡೇ ನಾನಾ ದರ್ಗಾ ಇದೊಂದು ಮಸೀದಿಯಾಗಿದ್ದು ಜುಮ್ಮ ಮಸೀದಿಯ ಹತ್ತಿರದಲ್ಲಿದೆ. ಮತ್ತು ಇದನ್ನೂ ಕೂಡಾ ಆದಿಲ್ ಶಾಹಿ ಸಾಮ್ರಾಜ್ಯದ ಕಾಲದಲ್ಲಿಯೇ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಇಲ್ಲಿಯ ಸ್ಥಳೀಯ ದಂತಕತೆಗಳ ಪ್ರಕಾರ ಜುಮ್ಮಾ ಮಸೀದಿ ಮತ್ತು ಬಡೇ ನಾನಾ ದರ್ಗಾ ಈ ಎರಡೂ ಸ್ಮಾರಕಗಳನ್ನು ಆ ಕಾಲದ ಒಬ್ಬನೇ ಆಡಳಿತಗಾರನಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ .

ಇದನ್ನೂ ಕೂಡಾ ಇಂಡೋ -ಸೆರಾಸೆನಿಕ್ ಶೈಲಿಯ ವಾಸ್ತುಶಿಲ್ಪದಲ್ಲಿ ಕಟ್ಟಲಾಗಿದೆ. ನೀವು ಗದಗಿನ ಮುಸಲ್ಮಾನ ಆಡಳಿತದ ಬಗ್ಗೆ ಅನ್ವೇಷಣೆ ಮಾಡ ಬಯಸಿದಲ್ಲಿ ನೀವು ಖಂಡಿತವಾಗಿಯೂ, ಲಕ್ಷ್ಮೇಶ್ವರದ ಹಿಂದಿನ ಯುಗದ ವೈಭವವನ್ನು ಸಾರುವ ಹಾಗೂ ಅನೇಕ ಮಾಹಿತಿಗಳನ್ನು ನೀಡುವ ಈ ಪ್ರಾಚೀನ ಕಾಲದ ಸ್ಮಾರಕಗಳಿಗೆ ಭೇಟಿ ನೀಡಲೇ ಬೇಕು.

ಅನಂತನಾಥ ಬಸದಿ

ಅನಂತನಾಥ ಬಸದಿ

Manjunath Doddamani Gajendragad

ಬೇರೆ ಬೇರೆ ಧರ್ಮದ ಅನೇಕ ಪವಿತ್ರ ತಾಣಗಳನ್ನು ತನ್ನಲ್ಲಿ ಹೊಂದಿರುವ ಲಕ್ಷ್ಮೇಶ್ವರವು ಒಂದು ಜಾತ್ಯಾತೀತ ನಗರವೆನಿಸುವುದಿಲ್ಲವೆ ? ಒಂದು ಕಡೆ ನೀವು ಹಿಂದೂ ಮತ್ತು ಜೈನ ದೇವಾಲಯಗಳಿಗೆ ಭೇಟಿ ಕೊಡಬಹುದಾದರೆ ಇನ್ನೊಂದೆಡೆ ನೀವು ಇಲ್ಲಿಯ ಸುಂದರ ಮಸೀದಿಗಳ ಅನ್ವೇಷಣೆ ಮಾಡಬಹುದಾಗಿದೆ.

ಐತಿಹಾಸಿಕ ಪ್ರವಾಸಕ್ಕೆ ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು? ಅನಂತನಾಥ ಬಸದಿ ಮತ್ತೊಂದು ಜೈನ ದೇವಾಲಯವಾಗಿದ್ದು ಇದು ಜೈನ ಧರ್ಮದ 14ನೇ ತೀರ್ಥಂಕರರಿಗೆ ಅರ್ಪಿತವಾಗಿದೆ ಇದನ್ನು 13ನೇ ಶತಮಾನದ ಮಧ್ಯದ ಅವಧಿಯಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾಗಿದೆ ಮತ್ತು ನಗರದ ಅತೀ ಹೆಚ್ಚು ಭೇಟಿ ನೀಡಲ್ಪಡುವ ಸ್ಮಾರಕಗಳಲ್ಲೊಂದಾಗಿದೆ.

ಇದು ವಾಸ್ತುಶಿಲ್ಪ ಉತ್ಸಾಹಿಗಳಿಂದ ಇತಿಹಾಸ ಪ್ರಿಯರು ಮತ್ತು ಛಾಯಾಗ್ರಾಹಕರಿಂದ ಜೈನ ಅನುಯಾಯಿಗಳವರೆಗೆ ನೂರಾರು ಸಂದರ್ಶಕರನ್ನು ಪ್ರತಿ ತಿಂಗಳು ಆಕರ್ಷಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X