Search
  • Follow NativePlanet
Share

ಗದಗ್‌ - ಚಾಲುಕ್ಯರ ಕಾಲದ ವಸ್ತುಪ್ರದರ್ಶನ..!

52

ಇತಿಹಾಸ ಕಾಲದ ಒಂದು ಪುಟ್ಟ ನಗರ ಕರ್ನಾಟಕದ ಪಶ್ಚಿಮ ಮೂಲೆಯಲ್ಲಿ ಸ್ತಬ್ಧವಾದಂತಿದೆ ಈ ಗದಗ ಪಟ್ಟಣ. ಸುಮಾರು 4656 ಚದರ ಕಿ.ಮೀ ವ್ಯಾಪ್ತಿಯ ಸಣ್ಣ ಪಟ್ಟಣಕ್ಕೆ ಯಥೇಚ್ಛವಾಗಿಯೇನೂ ಪ್ರವಾಸಿಗರು ಬರುವುದಿಲ್ಲ. ಆದರೆ ಗದಗದಲ್ಲಿ ನೋಡುವಂಥ ವಿಶಿಷ್ಟ ವಾಸ್ತುಶಿಲ್ಪಳಿವೆ, ವಿವಿಧ ಶೈಲಿಯ ದೇವಸ್ಥಾನಗಳಿವೆ.

ಗದಗ್‌ನಲ್ಲಿ ಏನಿದೆ ?

ಗದಗ್‌ನಲ್ಲಿರುವ ದೇವಸ್ಥಾನಗಳು ಚಾಲುಕ್ಯರ ಕಾಲದ ಕಲೆಗೆ ಸೂಕ್ತ ಉದಾಹರಣೆಗಳು. ಇಲ್ಲಿ ವಾಸ್ತುಶಿಲ್ಪಗಳು ತನ್ನದೇ ವಿಶಿಷ್ಟ ಶೈಲಿಯನ್ನು ಹೊಂದಿದೆ ಹಾಗೂ ಕಲ್ಲಿನ ದಪ್ಪ ದಪ್ಪ ಗೋಡೆಗಳು ಮತ್ತು ದೇವಸ್ಥಾನದ ಗೋಡೆಗಳ ಮೇಲಿನ ಕೆತ್ತನೆಗಳು ನಿಮ್ಮನ್ನು ದಶಕಗಳಷ್ಟು ಹಿಂದೆ ಕರೆದುಕೊಂಡು ಹೋಗುತ್ತವೆ.ಗದಗ್‌ನಲ್ಲಿ ನೋಡಲೇಬೇಕಾದ ಮತ್ತು ಅತ್ಯಂತ ಜನಪ್ರಿಯ ತಾಣ ಎಂದರೆ ತ್ರಿಕೂಟೇಶ್ವರ ದೇವಸ್ಥಾನ. ಇದು ಕೇವಲ ವಾಸ್ತುಶಿಲ್ಪವಲ್ಲ, ಜನರನ್ನ ತನ್ನತ್ತ ಸೆಳೆಯುವ ಆಯಸ್ಕಾಂತ. ಶಿವ, ಬ್ರಹ್ಮ ಮತ್ತು ವಿಷ್ಣುವಿನ ಮೂರ್ತಿಗಳು ಇಲ್ಲಿ ವಿರಾಜಿಸಿವೆ. ಈ ದೇವಸ್ಥಾನಕ್ಕೆ ಧಾರ್ಮಿಕ ಪ್ರಾಮುಖ್ಯತೆಯೂ ಇದೆ. ಗದಗ್‌ನಲ್ಲಿ ನೋಡಬಹುದಾದ ಇತರ ದೇವಸ್ಥಾನಗಳೆಂದರೆ ವೀರ ನಾರಾಯಣ, ಡಂಬಳ ಮತ್ತು ಕಾಶಿವಿಶ್ವೇಶ್ವರ ದೇವಸ್ಥಾನಗಳು.

ಆದರೆ ಗದಗಕ್ಕೆ ನೀವು ದೇವಸ್ಥಾನ ಮತ್ತು ವಾಸ್ತುಶಿಲ್ಪವನ್ನು ಮಾತ್ರ ನೋಡಲು ಬರಬೇಕೆಂದಿದ್ದರೆ ಖಂಡಿತವಾಗಿಯೂ ತಪ್ಪು. ಇಲ್ಲಿರುವ ಮಾಗಡಿ ಪಕ್ಷಿ ಧಾಮದಲ್ಲಿ ಪರಿಸರ ಪ್ರಿಯರು ಹಕ್ಕಿಗಳ ಕಲರವವನ್ನು ಆಸ್ವಾದಿಸಬಹುದು. ಈ ಪಕ್ಷಿಧಾಮವು ಗದಗ್‌ನಿಂದ ಸುಮಾರು 26 ಕಿ.ಮೀ ದೂರದಲ್ಲಿದೆ.ಗದಗಕ್ಕೆ ರೈಲಿನ ಮೂಲಕ ಉತ್ತಮ ಸಂಪರ್ಕವಿದ್ದು, ಇಲ್ಲಿ ರೈಲ್ವೆ ಸ್ಟೇಷನ್ ಕೂಡ ಇದೆ.

ಗದಗ್ ಪ್ರಸಿದ್ಧವಾಗಿದೆ

ಗದಗ್ ಹವಾಮಾನ

ಉತ್ತಮ ಸಮಯ ಗದಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಗದಗ್

  • ರಸ್ತೆಯ ಮೂಲಕ
    ಗದಗವು ಬೆಂಗಳೂರು, ಮೈಸೂರು ಮತ್ತು ಮಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಹಲವು ಖಾಸಗಿ ಬಸ್‌ಗಳೂ ಕೂಡಾ ಈ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಹಲವು ಪ್ರವಾಸಿಗರು ಗದಗ ಪ್ರವಾಸಕ್ಕೆ ಬಸ್‌ಗಳನ್ನೇ ಅವಲಂಬಿಸುತ್ತಾರೆ. ಯಾಕೆಂದರೆ ಬಸ್‌ಗಳೇ ಹೆಚ್ಚು ಅನುಕೂಲ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗದಗ ರೈಲ್ವೆ ನಿಲ್ದಾಣ ನಗರ ಕೇಂದ್ರದಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಹೊಸಪೇಟೆ ಮಾರ್ಗವಾಗಿ ಹೋಗುವ ಹುಬ್ಬಳ್ಳಿ - ಗುಂತಕಲ್‌ ರೈಲನ್ನು ಇಲ್ಲಿ ಜೋಡಿಸಲಾಗುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹುಬ್ಬಳ್ಳಿ ವಿಮಾನ ನಿಲ್ದಾಣ ಗದಗಿಗೆ ಸಮೀಪದ ರಾಷ್ಟ್ರೀಯ ವಿಮಾನ ನಿಲ್ದಾಣ. ಗದಗಿನಿಂದ ಸುಮಾರು 46 ಕಿ.ಮೀ ದೂರದಲ್ಲಿದೆ. ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗದಗಿನಿಂದ ಸುಮಾರು 414 ಕಿ.ಮೀ ದೂರ. ಯುರೋಪಿಯನ್, ಅಮೆರಿಕನ್, ಏಷ್ಯನ್‌ ಮತ್ತು ಮಧ್ಯ ಏಷ್ಯಾದ ಪ್ರಮುಖ ವಿಮಾನಗಳ ಸಂಪರ್ಕವನ್ನು ಬೆಂಗಳೂರು ವಿಮಾನ ನಿಲ್ದಾಣ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat