Search
  • Follow NativePlanet
Share
» »ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಸಿಂಧೂ ನಾಗರೀಕತೆಯು ಭಾರತ ದೇಶದಲ್ಲಿ ಮುಖ್ಯವಾಗಿ ಗುಜರಾತ್, ರಾಜಸ್ತಾನ, ಪಂಜಾಬ್, ಹರಿಯಾಣ, ಜಮ್ಮು ಕಾಶ್ಮೀರದ ಜೊತೆ ಜೊತೆಗೆ ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿಯೂ ಕೂಡ ವಿಸ್ತರಿತ್ತು. ಈ ಕಾಲದಲ್ಲಿ ಜೀವಿಸಿದ ಪ್ರಜೆಗಳು ಅಗಲ, ದ್ರವ್ಯರಾಶಿ ಮತ್ತು ಕಾಲವನ್ನು ಖಚಿತವಾಗಿ ಹೇಳುತ್ತಿದ್ದರು ಎಂದು ಆಧಾರಗಳು ಲಭಿಸಿವೆ. ಪ್ರಸ್ತುತ ಆ ಪ್ರದೇಶವು ಶಿಥಿಲಾವಸ್ಥೆಯಲ್ಲಿ ಇದ್ದರಿಂದ, ಚರಿತ್ರೆಕಾರರು ಇಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಸಿಂಧೂ ನಾಗರಿಕತೆಗೆ ಬಯಲಿಗೆ ಬಂದ ಪ್ರದೇಶಗಳನ್ನು (ಇವುಗಳೆಲ್ಲಾ ಭಾರತದಲ್ಲಿನ ಅತಿ ಪ್ರಾಚೀನವಾದ ಪ್ರದೇಶಗಳಾಗಿ ಗುರುತಿಸಲಾಗಿದೆ) ಗಮನಿಸಿದರೆ.....

ಪ್ರಪಂಚದಲ್ಲಿನ ಅತಿ ಪ್ರಾಚೀನವಾದ ನಾಗರಿಕತೆಯಲ್ಲಿ ಸಿಂಧೂ ನಾಗರೀಕತೆಯು ಕೂಡ ಒಂದು. ಈ ನಾಗರೀಕತೆ ಸಿಂಧೂನದಿ ಪ್ರದೇಶದಲ್ಲಿ ಕ್ರಿ.ಪೂ 2700 ರಿಂದ ಕ್ರಿ.ಪೂ 1750ರೆವರೆಗೆ ವಿಸ್ತರಿಸಿದೆ. ಈ ನಾಗರೀಕತೆಗೆ ಸೇರಿದ ಹರಪ್ಪಾ ನಗರವನ್ನು ಮೊದಲಿಗೆ ಬೆಳಕಿಗೆ ಬಂದ ನಂತರ ಅದನ್ನು ಸಿಂಧೂವಿನಲ್ಲಿ ಹರಪ್ಪ ಪ್ರದೇಶದಲ್ಲಿ ನಡೆದ ಹುಡುಕಾಟದಲ್ಲಿ ಲಭಿಸಿದ ಚಾರಿತ್ರಿಕ ಆಧಾರಗಳ ಮೂಲಕ ಅಂದಿನ ಪಟ್ಟಣದ ಪ್ರಣಾಳಿಕೆಯನ್ನು ಮಾಡಿ, ಪಟ್ಣಣದ ಅಭಿವೃದ್ಧಿ ಮಾಡುವ ಸಿದ್ಧಹಸ್ತರಿಗೆ, ಪರಿಶುಭದ್ರತೆಗೆ ಹೆಚ್ಚಾಗಿ ಪ್ರಾಧಾನ್ಯತೆ ನೀಡುತ್ತಿದ್ದರು ಎಂದು ತಿಳಿದುಬರುತ್ತದೆ.

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಅಲಂಗಿರ್ಪೂರ್, ಉತ್ತರ ಪ್ರದೇಶ
ಅಲಂಗಿಪ್ಪೂರ್ ಪ್ರದೇಶವು ಉತ್ತರ ಪ್ರದೇಶ ರಾಜ್ಯದಲ್ಲಿನ ಮೀರತ್ ಜಿಲ್ಲೆಯಲ್ಲಿದೆ. ಇದನ್ನು ಪರಶುರಾಂ-ಕಾ=ಖೇರಾ ಎಂದು ಕರೆಯುತ್ತಾರೆ. ಅಲಂಗಿರ್ಪೂರ್ ಸಿಂಧೂವಿನ ನಾಗರೀಕತೆಯ ಕಾಲದಲ್ಲಿ ಒಂದು ಪಟ್ಟಣವಾಗಿತ್ತು, ಈ ಪ್ರದೇಶವು ಯಮುನಾ ನದಿ ತೀರದಲ್ಲಿದೆ.

Raveesh Vyas

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಬಾಬರ್ ಕೋಟೆ, ಗುಜರಾತ್
ಬಾಬರ್ ಕೋಟೆ ಗ್ರಾಮವು ಗುಜರಾತ್ ರಾಜ್ಯದಲ್ಲಿನ ಸೌರಾಷ್ಟ್ರ ಪ್ರದೇಶಕ್ಕೆ ಸೇರಿದೆ. ಸಿಂಧೂವಿನ ನಾಗರಿಕತೆಗೆ ಸಂಬಂಧಿಸಿದ ಆಧಾರಗಳು ಇಲ್ಲಿ ಬೆಳಕಿಗೆ ಬಂದ್ದರಿಂದ ಈ ಗ್ರಾಮವು ಹರಪ್ಪ ನಾಗರೀಕತೆಗೆ ಸೇರಿದ್ದು ಎಂದು ನಿರ್ಧರಿಸಿದ್ದಾರೆ. ಈ ಗ್ರಾಮಕ್ಕೆ ಅಹಮದಾಬಾದ್ 325 ಕಿ.ಮೀ ದೂರದಲ್ಲಿ, ಭಾವನಗರದಿಂದ 150 ಕಿ.ಮೀ ದೂರದಲ್ಲಿದೆ.

Mohitnarayanan

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಬಲು, ಹರಿಯಾಣ
ಬಲು, ಹರಿಯಾಣ ರಾಜ್ಯದಲ್ಲಿನ ಫತ್ತೆಹಾಬಾದ್ ಜಿಲ್ಲೆಯಲ್ಲಿದೆ. ಈ ಗ್ರಾಮಕ್ಕೆ ಸಮೀಪದಲ್ಲಿ 22 ಕಿ.ಮೀ ದೂರದಲ್ಲಿ ಕೆತ್ತಲ್ ಎಂಬ ನಗರವಿದೆ. ಇಲ್ಲಿ ಕೂಡ ಸಿಂಧೂವಿನ ನಾಗರಿಕತೆಯ ಕೆಲವು ಅವಶೇಷಗಳು ಕಾಣಿಸಿವೆ.

Mohitnarayanan

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಬನವಾಳಿ, ಹರಿಯಾಣ
ಬನವಾಳಿ ಸಿಂಧೂವಿನ ನಾಗರೀಕತೆಗೆ ಸೇರಿದ ಪ್ರದೇಶ. ಇದು ಹರಿಯಾಣ ರಾಜ್ಯದಲ್ಲಿನ ಹೈಸರ್ ಜಿಲ್ಲೆಯಲ್ಲಿದೆ. ಬನವಾಳಿ ಸಮೀಪ ಪುರಾತತ್ತ್ವ ಪ್ರದೇಶ ಬಂಗಾನ್‍ಗೆ ಸುಮಾರು 120 ಕಿ.ಮೀ ದೂರದಲ್ಲಿ, ಫತ್ತೆಹಾಬಾದ್‍ನಿಂದ 16 ಕಿ.ಮೀ ದೂರದಲ್ಲಿದೆ. ಪ್ರಸ್ತುತ "ವನವಾಲಿ" ಎಂದು ಕರೆಯಲಾಗುವ ಈ ಬನವಾಳಿ ಸರಸ್ವತಿ ನದಿ ತೀರದಲ್ಲಿದೆ.

haryana tourism

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಬರ್ಗಾಓನ್, ಉತ್ತರ ಪ್ರದೇಶ
ಬರ್ಗಾಓನ್ ಎಂಬ ಪುರಾತತ್ತ್ವ ಪ್ರದೇಶವಾದ ಉತ್ತರ ಪ್ರದೇಶ ರಾಜ್ಯದಲ್ಲಿನ ಸಹಾರನ್ಪೂರ್ ಜಿಲ್ಲೆಯಲ್ಲಿದೆ. ಇಲ್ಲಿ ಲಭಿಸಿದ ಆಧಾರದ ಪ್ರಕಾರ ಈ ಪ್ರದೇಶ ಕೂಡ ಸಿಂಧೂ ನಾಗರೀಕತೆ ಕಾಲದಲ್ಲಿನ ಪ್ರಜೆಗಳು ನಿವಾಸಿಸಿದ್ದರು ಎಂದು ತಿಳಿದುಬರುತ್ತದೆ.

Radhi.pandit

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಬರೋರ್, ರಾಜಸ್ಥಾನ
ಬರೋರ್ ಪ್ರದೇಶ ರಾಜಸ್ಥಾನ ರಾಜ್ಯದಲ್ಲಿನ ಶ್ರೀ ಗಂಗನಾಗರ್ ಜಿಲ್ಲೆಯಲ್ಲಿದೆ. ಇದು ಸಿಂಧೂ ನಾಗರೀಕತೆಗೆ ಸೇರಿದ ಪ್ರದೇಶ.

Radhi.pandit

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಬೆಟ್ ದ್ವಾರಕ, ಗುಜರಾತ್
ಬೆಟ್ ದ್ವಾರಕಗೆ ಶಂಖೋಧರ ಎಂದು ಕೂಡ ಕರೆಯುತ್ತಾರೆ. ಇದು ಗಲ್ಫ್ ಆಫ್ ಕಚ್ ಮುಖದ್ವಾರದ ಸಮೀಪದಲ್ಲಿದೆ. ಇದಕ್ಕೆ ಸಮೀಪದ ಪಟ್ಟಣವು ಸುಮಾರು 3 ಕಿ.ಮೀ ದೂರದಲ್ಲಿರುವ ಓಖಾ. ಮರಳು, ಕಲ್ಲುಗಳಿಂದ ಕೂಡಿರುವ ಬೆಟ್ ದ್ವಾರಕ ಪ್ರಮುಖ ಪುಣ್ಯ ಕ್ಷೇತ್ರವಾಗಿದೆ. ಇದು ದ್ವಾರಕದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಇಲ್ಲಿಯೂ ಕೂಡ ಹರಪ್ಪ ನಾಗರೀಕತೆಗೆ ಸಂಬಂಧಿಸಿದ ಅವಶೇಷಗಳು ಲಭಿಸಿವೆ.

Kuldip Pipaliya

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಗತ್ರಾವ್( ಭಗತ್ ರಾವ್ )ಗುಜರಾತ್
ಭಗತ್ರವಾ ಸಿಂಧೂ ನಾಗರೀಕತೆಗೆ ಸೇರಿದ ಚಿಕ್ಕದಾದ ಪ್ರದೇಶವೇ ಆಗಿದೆ. ಗುಜರಾತ್ ರಾಜ್ಯದಲ್ಲಿರುವ ಭರೂಚ್ ಜಿಲ್ಲೆಯಲ್ಲಿನ ಭಗತ್ರಾವ್ ಪ್ರದೇಶ ಸೂರತ್‍ಗೆ ಸುಮಾರು 51 ಕಿ.ಮೀ ದೂರದಲ್ಲಿದೆ. ಇಲ್ಲಿ ನರ್ಮದಾ, ತಪತಿ ನದಿ ಪ್ರವಾಹಗಳ ಜೊತೆ ಜೊತೆಗೆ ಅರಣ್ಯಗಳನ್ನು ಕೂಡ ಕಾಣಬಹುದು.

Radhi.pandit

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಿರ್ರಂಗಾ, ಹರಿಯಾಣ
ಭಿರ್ರಂಗಾ ಪ್ರದೇಶವು ಸಿಂಧೂ ನಾಗರೀಕತೆಗೆ ಸೇರಿದ ಅತಿ ಪ್ರಾಚೀನವಾದ ಪ್ರದೇಶ. ಈ ಗ್ರಾಮವು ಕ್ರಿ.ಪೂ 7570 ರಿಂದ ಕ್ರಿ.ಪೂ 6200 ಮಧ್ಯದಲ್ಲಿ ಇತ್ತು ಎಂದು ಚರಿತ್ರೆಕಾರರು ಹೇಳುತ್ತಾರೆ. ಪ್ರಸ್ತುತ ಈ ಗ್ರಾಮವು ಫತೆಹಾಬಾದ್ ಜಿಲ್ಲೆಯಲ್ಲಿ, ನ್ಯೂಢೆಲ್ಲಿಗೆ ಸುಮಾರು 200 ಕಿ.ಮೀ ದೂರದಲ್ಲಿದೆ.

Abhilashdvbk

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ದೈಮಬಾದ್, ಮಹಾರಾಷ್ಟ್ರ
ದೈಮಬಾದ್ ಆರ್ಕಿಯಾಲಾಜಿಕಲ್ ಸೈಟ್ ಆಗಿದೆ. ದೈಮಾಬಾದ್ ಮಹಾರಾಷ್ಟ್ರ ರಾಜ್ಯದಲ್ಲಿನ ಆಹಮದಾಬಾದ್ ಜಿಲ್ಲೆಗೆ ಸಂಬಂಧಿಸಿದೆ. ಈ ಸೈಟ್ ಅನ್ನು ನೋಡಿದರೆ ದಕ್ಕನ್ ಪ್ರಸ್ತಭೂಮಿ ಪ್ರದೇಶದಲ್ಲಿ ಕೂಡ ಸಿಂಧೂ ನಾಗರೀಕತೆ ಇತ್ತಾ? ಎಂಬ ಆಶ್ಚರ್ಯವಾಗದೇ ಇರದು.

Gpratik

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ದೆಶಲ್ಪಾರ್ ಗುಂತ್ಲಿ, ಗುಜರಾತ್
ದೇಶಲ್ಪಾರ್ ಗುಂತ್ಲಿ ಗ್ರಾಮವು ಸಿಂಧೂ ನಾಗರೀಕತೆಗೆ ಸೇರಿದ ಪ್ರದೇಶವೇ ಆಗಿದೆ. ಇದು ಗುಜರಾತ್ ರಾಜ್ಯದಲ್ಲಿನ ಕಚ್ ಜಿಲ್ಲೆಯಲ್ಲಿದೆ. ದೇಶಲ್ಪೂರ್‍ಗೆ ಸುಮಾರು 25 ಕಿ.ಮೀ ದೂರದಲ್ಲಿದೆ ಭುಜ್ ಪಟ್ಟಣ.

Vidishaprakash

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಧೋಲ್ ವೀರ, ಗುಜರಾತ್
ಧೋಲ್ ವೀರ ಗ್ರಾಮವು ಗುಜರಾತ್ ರಾಜ್ಯದಲ್ಲಿನ ಕಚ್ ಜಿಲ್ಲೆಯಲ್ಲಿನ ಖಾದಿರ್ ಬೆಟ್ ಸಮೀಪದಲ್ಲಿದೆ. ಈ ಗ್ರಾಮವು ಸಿಂಧೂ ನಾಗರೀಕತೆ ಕಾಲದಲ್ಲಿ ಅಭಿವೃದ್ಧಿ ಹೊಂದಿತು. ಇಲ್ಲಿಗೆ ಹೋದರೆ ಸಮೀಪದಲ್ಲಿರುವ ಕಚ್‍ನ ವನ್ಯಪ್ರಾಣಿ ಅಭಯಾರಣ್ಯ ತಪ್ಪದೇ ಭೇಟಿ ನೀಡಬೇಕು.

Rama's Arrow

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಫರ್ಮಾನಾಖಾಸ್, ಹರಿಯಾಣ
ಫರ್ಮಾನಾಖಾಸ್ ಅಥವಾ ದಕ್ಷ ಖೇರ್ ಪುರಾತತ್ತ್ವ ಪ್ರದೇಶ ಹರಿಯಾಣ ರಾಜ್ಯದಲ್ಲಿನ ರೋಹ್ಟಾಕ್ ಜಿಲ್ಲೆಯಲ್ಲಿದೆ. ಈ ಗ್ರಾಮವು ದೇಶದ ರಾಜಧಾನಿಯಾದ ದೆಹಲಿಯಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಇಲ್ಲಿ ಹರಪ್ಪ ನಾಗರೀಕತೆಗೆ ಸಂಬಂಧಿಸಿದ ಆಧಾರಗಳು ಲಭಿಸಿವೆ.

Emmanuel DYAN

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಗೊಲಧೋರೊ, ಗುಜರಾತ್
ಗುಜರಾತ್ ರಾಜ್ಯದಲ್ಲಿನ ಕಚ್ ಜಿಲ್ಲೆಯಲ್ಲಿ ಬಗಸರ ತಾಲೂಕಿನದಲ್ಲಿರುವ ಗೊಲಧೋರೋ ಗ್ರಾಮವಿದೆ. ಇದು ಸಿಂಧೂ ನಾಗರೀಕತೆಗೆ ಸಂಬಂಧಿಸಿದ ಪ್ರದೇಶವೇ ಆಗಿದೆ. ಈ ಪ್ರದೇಶದಲ್ಲಿ ನಿವಾಸಿಸುವ ಮನೆಗಳು ಹಾಗು ತಯಾರು ಮಾಡಿದ ನಿರ್ಮಾಣ ಶೈಲಿಗಳ ಅವಷೇಶಗಳನ್ನು ಇಲ್ಲಿ ಕಾಣಬಹುದು.

Emmanuel DYAN

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!

ಹುಲಸ್, ಉತ್ತರ ಪ್ರದೇಶ
ಹೊಲಸ್ ಒಂದು ಕಾಲದಲ್ಲಿ ಸಿಂಧೂ ನಾಗರೀಕತೆಗೆ ಸಂಬಂಧಿಸಿದ ಪ್ರದೇಶವಾಗಿತ್ತು. ಪ್ರಸ್ತುತ ಈ ಗ್ರಾಮವು ಉತ್ತರ ಪ್ರದೇಶ ರಾಜ್ಯದ ಸಹಾರನ್ಪೂರ ಜಿಲ್ಲೆಯಲ್ಲಿದೆ. ಇಲ್ಲಿ ಹರಪ್ಪ ನಾಗರೀಕತೆಗೆ ಸಂಬಂಧಿಸಿದ ಅವಶೇಷಗಳು ಹಾಗು ನಿರ್ಮಾಣಗಳನ್ನು ಕಾಣಬಹುದು.

Radhi.pandit

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more