Search
  • Follow NativePlanet
Share
» »ಕೇರಳದಲ್ಲಿ ನೋಡಬೇಕಾದ ಅನನ್ಯ ಗಿರಿಧಾಮಗಳು

ಕೇರಳದಲ್ಲಿ ನೋಡಬೇಕಾದ ಅನನ್ಯ ಗಿರಿಧಾಮಗಳು

By Vijay

ಭೌಗೋಳಿಕವಾಗಿ ದಕ್ಷಿಣ ಭಾರತದಲ್ಲಿ ಚಿಕ್ಕ ರಾಜ್ಯವಾಗಿದ್ದರೂ ಪ್ರವಾಸಿ ದೃಷ್ಟಿಯಿಂದ ದೊಡ್ಡದಾಗಿ ನಿಲ್ಲುತ್ತದೆ ಕೇರಳ. ಏಕೆಂದರೆ ಕೇರಳದ ಬಹುತೇಕ ಭಾಗವು ಪಶ್ಚಿಮ ಘಟ್ಟಗಳ ಬೆಟ್ಟಗುಡ್ಡಗಳು ಹಾಗೂ ದಟ್ಟ ಹಸಿರಿನ ವನರಾಶಿಯಿಂದ ಸಂಪದ್ಭರಿತವಾಗಿದ್ದು ಸಾಕಷ್ಟು ನಯನ ಮನೋಹರ ಭೂದೃಶ್ಯಾವಳಿಗಳನ್ನು ಒಳಗೊಂಡಿದೆ.

ಇನ್ನೂ ವಿಶೇಷವಾಗಿ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗಿರಿಧಾಮಗಳನ್ನು ಕಾಣಬಹುದು. ಪ್ರತಿ ಗಿರಿಧಾಮಗಳೂ ಸಹ ತಮ್ಮದೆ ಆದ ವಿಶೇಷತೆಗಳನ್ನು ಹೊಂದಿದ್ದು ಭೇಟಿ ನೀಡುವ ಪ್ರವಾಸಿಗರು ಖಂಡಿತವಾಗಿಯೂ ಬೇಸರಿಸಿಕೊಳ್ಳದಂತೆ ಮಾಡುವಲ್ಲಿ ಸಂಪೂರ್ಣ ಯಶಸ್ವಿಯಾಗಿವೆ.

ನಿಮಗಿಷ್ಟವಾಗಬಹುದಾದ : ಕರ್ನಾಟಕದ ಸುಂದರ ಗಿರಿಧಾಮಗಳು

ಕೇರಳದ ಹಿನ್ನೀರಿನ ಮಜ ನೀವು ಈಗಾಗಲೆ ಅನುಭವಿಸಿದ್ದರೆ ಗಿರಿಧಾಮಗಳ ಆನಂದ ಇನ್ನೊಂದು ರೀತಿಯ ಪ್ರಸನ್ನತಾ ಭಾವವನ್ನು ಮೂಡಿಸುವುದರಲ್ಲಿ ಸಂಶಯವಿಲ್ಲ. ನೀವು ಈಗಾಗಲೆ ಮುನ್ನಾರ್, ವಯನಾಡ್, ವಗಮೋನ್, ತೆಕ್ಕಡಿ ಅಂತಹ ಗಿರಿಧಾಮಗಳ ಹೆಸರುಗಳನ್ನು ಕೇಳಿರಬಹುದು. ಈ ಪ್ರಖ್ಯಾತ ಗಿರಿಧಾಮಗಳ ಹೊರತಾಗಿಯೂ ಇನ್ನೂ ಕೆಲವು ಸುಂದರ ಗಿರಿಧಾಮಗಳು ಈ ಪುಟ್ಟ ರಾಜ್ಯದ ತುಂಬೆಲ್ಲ ನೆಲೆಸಿವೆ. ಸಾಕಷ್ಟು ಜನ ಈ ಗಿರಿಧಾಮಗಳ ಹೆಸರನ್ನೂ ಬಹುಶಃ ಕೇಳಿರಲಾರರು. ಆದರೆ ಇವುಗಳ ಪ್ರಕೃತಿ ಸೌಂದರ್ಯ ಮಾತ್ರ ಸುಮಧುರ.

ಪ್ರಸ್ತುತ ಲೇಖನದ ಮೂಲಕ ಅಂತಹ ಕೆಲವು ವಿಶಿಷ್ಟವಾದ, ಹೆಚ್ಚು ಜನಬಳಕೆಯಲ್ಲಿರದ, ಅಷ್ಟೊಂದಾಗಿ ಹೆಸರು ಕೇಳಿರಲಾರದ ಆದರೆ ಭೇಟಿ ನೀಡಲು ಯೋಗ್ಯವಾದ ಆ ಗಿರಿಧಾಮಗಳ ಕುರಿತು ತಿಳಿಯಿರಿ. ಸಾಮಾನ್ಯವಾಗಿ ಗಿರಿಧಾಮಗಳು ಎಲ್ಲ ಋತುಮಾನಗಳಲ್ಲೂ ಭೇಟಿ ನೀಡಲು ಯೋಗ್ಯವಾಗಿರುವುದರಿಂದ ಇಲ್ಲಿ ತಿಳಿಸಲಾಗಿರುವ ಗಿರಿಧಾಮಗಳಿಗೆ ಒಮ್ಮೆಯಾದರೂ ಭೇಟಿ ನೀಡಲು ಯೋಜಿಸಿ.

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ನೆಲ್ಲಿಯಾಂಪತಿ : ಕೇರಳದ ಪಾಲಕ್ಕಾಡ್ ಪಟ್ಟಣದಿಂದ ಸುಮಾರು 60 ಕಿ.ಮೀ ದೂರದಲ್ಲಿ ನೆಲೆಸಿದೆ ಈ ಸುಂದರ ಗಿರಿಧಾಮ. ಈ ಗಿರಿಧಾಮದ ಸುತ್ತಲೂ ಚಹಾ ಹಾಗೂ ಕಾಫಿ ತೋಟಗಳು ಸುತ್ತುವರೆದಿದ್ದು ನೋಡಲು ನಯನ ಮನೋಹರವಾಗಿದೆ. ಮನ್ ಪಾರಾ ಎಂಬ ವೀಕ್ಷಣಾ ಸ್ಥಳ.

ಚಿತ್ರಕೃಪೆ: Baburajpm

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ನೆಲ್ಲಿಯಾಂಪತಿ ತನ್ನದೆ ಆದ ಗ್ರಾಮ ಪಂಚಾಯಿತಿಯನ್ನು ಹೊಂದಿದ್ದು ಚಿತ್ತೂರು ಎಂಬ ತಾಲೂಕಿನ ಭಾಗವಾಗಿದೆ. ದಟ್ಟವಾದ ಹಸಿರಿನ ಸಂಪತ್ತು, ಎತ್ತರದ ಬೆಟ್ಟ ಗುಡ್ಡಗಳು, ವೀಕ್ಷಣಾ ಸ್ಥಳಗಳನ್ನು ಹೊಂದಿರುವ ಈ ಪುಟ್ಟ ಸುಂದರ ಗಿರಿಧಾಮ ಭೇಟಿ ನೀಡಿದವರನ್ನು ಮೂಕವಿಸ್ಮಿತರನ್ನಾಗುವಂತೆ ಮಾಡುತ್ತದೆ.

ಚಿತ್ರಕೃಪೆ: Kjrajesh

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಹತ್ತೊಂಬತ್ತನೇಯ ಶತ್ಮಾನದಲ್ಲಿ ರಚಿತವಾದ ಪೋತುಂಡಿ ಎಂಬ ಜಲಾಶಯವು ನೆಲ್ಲಿಯಾಂಪತಿ ಗಿರಿಧಾಮಕ್ಕೆ ಸ್ವಾಗತ ಕೋರುವ ಪ್ರವೇಶ ದ್ವಾರದಂತಿದ್ದು ನೋಡಲು ಆಸಕ್ತಿಕರವಾಗಿದೆ.

ಚಿತ್ರಕೃಪೆ: LIC Habeeb

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಸೀತಾರ್ಗುಂಡು ಅಥವಾ ಸೀತಾರ್ ಕುಂಡು ಎಂದು ಕರೆಯಲ್ಪಡುವ ತಾಣವು ನೆಲ್ಲಿಯಾಂಪತಿಯಲ್ಲಿರುವ ಕೆಲವು ವೀಕ್ಷಣಾ ಸ್ಥಳಗಳ ಪೈಕಿ ಒಂದಾಗಿದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ರಾಮ, ಲಕ್ಷ್ಮಣ ಹಾಗೂ ಸೀತೆಯರು ವನವಾಸ ಅನುಭವಿಸುತ್ತಿದ್ದಾಗ ಈ ತಾಣದಲ್ಲಿ ಅಲ್ಪ ಕಾಲ ತಂಗಿದ್ದರಂತೆ.

ಚಿತ್ರಕೃಪೆ: Muzirian

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಪ್ರಕೃತಿಯು ಸ್ವತಃ ತನ್ನ ಕೈಗಳಲ್ಲಿ ಕುಂಚ ಹಿಡಿದು ಚಿತ್ರ ರಚಿಸಿರುವಂತಹ ರೀತಿಯಲ್ಲಿದೆ ಈ ಗಿರಿಧಾಮದ ಸೊಬಗು. ಚಿಕ್ಕ-ಪುಟ್ಟ ಬೆಟ್ಟಗಾಡುಗಳ ಮಧ್ಯೆ ಹರಿಯುವ ನೀರಿನ ತೊರೆಯನ್ನು ಕಂಡಾಗ ಮನದಲ್ಲಿ ಎಲ್ಲಿಲ್ಲದ ಪ್ರಸನ್ನತಾ ಭಾವ ಮೂಡುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Kjrajesh

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇಸವಂ ಪಾರಾ ನೆಲ್ಲಿಯಾಂಪತಿಯಲ್ಲಿರುವ ಮತ್ತೊಂದು ಸುಂದರ ವೀಕ್ಷಣಾ ಸ್ಥಳವಾಗಿದೆ. ಮಲಯಾಳಂ ಭಾಷೆಯ ಯಶಸ್ವಿ ಚಿತ್ರವಾದ ಹಾಗೂ ಪ್ರಖ್ಯಾತ ತಾರೆ ಮಮ್ಮೂಟಿ ತಾರಾಗಣದಲ್ಲಿರುವ ಮೃಗಯಾ ಚಿತ್ರದ ಸನ್ನಿವೇಶಗಳು ಈ ಸುಂದರವಾದ ವೀಕ್ಷಣಾ ತಾಣದಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Rajesh Kakkanatt

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕಾಂತಲೂರು : ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಕಾಂತಲೂರು ಒಂದು ಗ್ರಾಮವಾಗಿರುವುದಲ್ಲದೆ ಒಂದು ಸುಂದರ ಗಿರಿಧಾಮವೂ ಸಹ ಹೌದು. ಇಲ್ಲಿನ ಪ್ರಕೃತಿಯ ಸೊಬಗನ್ನು ನೋಡಿದವನು ಎಂದೂ ಅದನ್ನು ಮರೆಯಲಾರ. ಪಶ್ಚಿಮ ಘಟ್ಟಗಳ ಬೆಟ್ಟಗಾಡುಗಳಲ್ಲಿ ಸುಂದರವಾಗಿ ನೆಲೆಸಿದೆ ಈ ಗ್ರಾಮ ಗಿರಿಧಾಮ.

ಚಿತ್ರಕೃಪೆ: Dhruvarahjs

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಇಲ್ಲಿನ ಹಿತಕರವಾದ ವಾತಾವರಣ, ರಮಣೀಯವಾಗಿ ಕಂಡುಬರುವ ಪರಿಸರ ಇದನ್ನು ಒಂದು ಸುಂದರ ಪ್ರವಾಸಿ ಯೋಗ್ಯ ಸ್ಥಳ ಮಾಡಿರುವುದರಲ್ಲಿ ಯಾವ ಸಂಶಯವೂ ಇಲ್ಲ. ವಿವಿಧ ಬಗೆಯ ಗಿಡ ಮರಗಳು, ಬೆಳೆಗಳು ಇದನ್ನೊಂದು ತಾಜಾತನದಿಂದ ಕೂಡಿದ ಪ್ರದೇಶವನ್ನಾಗಿಸಿದೆ.

ಚಿತ್ರಕೃಪೆ: Deepa Chandran2014

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕಾಂತಲೂರು ತನ್ನಲ್ಲಿ ಬೆಳೆಯಲಾಗುವ ವೈವಿಧ್ಯಮಯ ರೀತಿಯ ಬೆಳೆಗಳು ಹಾಗೂ ವಿಶಿಷ್ಟವಾಗಿರುವ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಬೆಳೆಯಲಾಗುವ ಕೆಲ ಬೆಳೆಗಳು ಕೇರಳ ಮತ್ತಿನ್ಯಾವ ಭಾಗದಲ್ಲೂ ಕಾಣಲಾಗದು.

ಚಿತ್ರಕೃಪೆ: Captain

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಬಾಯಲ್ಲಿ ನೀರೂರಿಸುವ, ಮನ ಪ್ರಸನ್ನಗೊಳಿಸುವ ಆರೆಂಜ್, ಸ್ಟ್ರಾವ್ಬೆರಿ, ಸೇಬು, ಪೀಚ್, ಪ್ಲಮ್, ಬ್ಲ್ಯಾಕ್ ಬೆರಿ, ಪ್ಯಾಶನ್ ಮುಂತಾದ ರುಚಿಕರವಾದ ಹಣ್ಣುಗಳ ತೋಟಗಳನ್ನು ಈ ಸುಂದರವಾದ ಗಿರಿಧಾಮದ ಆಸು ಪಾಸಿನಲ್ಲಿ ನೋಡಬಹುದು.

ಚಿತ್ರಕೃಪೆ: Rameshng

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ವಾಸ್ತವವಾಗಿ ಕಾಂತಲೂರು ಒಂದು ಮಳೆ ನೆರಳು ಪ್ರದೇಶವಾಗಿದೆ. ಅಂದರೆ ಇಲ್ಲಿ ಅತಿ ಕಡಿಮೆ ಮಳೆ ಮಾತ್ರ ಬೀಳುತ್ತದೆ. ಕಾರಣ ಇದರ ಸುತ್ತಲೂ ಎತ್ತರದ ಬೆಟ್ಟಗಳಿದ್ದು ಮಳೆ ಸುರಿಸುವ ಮೋಡಗಳನ್ನು ತಡೆಯುತ್ತವೆ. ಇಲ್ಲಿ ಹವಾಮಾನ ಸದಾಕಾಲ ತಂಪಾಗಿದ್ದು ಕಲ್ಮಶರಹಿತವಾಗಿದೆ.

ಚಿತ್ರಕೃಪೆ: Rameshng

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕಾಂತಲೂರನ್ನು ಕೇವಲ ರಸ್ತೆಯ ಮೂಲಕವಾಗಿ ಮಾತ್ರವೆ ತಲುಪಬಹುದಾಗಿದೆ. ಜನಪ್ರೀಯ ಗಿರಿಧಾಮವಾದ ಮುನ್ನಾರ್ ಇದಕ್ಕೆ ಹತ್ತಿರದಲ್ಲಿರುವುದರಿಂದ ಇಲ್ಲಿಗೂ ಭೇಟಿ ನೀಡಲು ಪ್ರವಾಸಿಗರು ಮುನ್ನಾರ್ ಗೆ ಭೇಟಿ ನೀಡಿದ್ದಾಗ ಯೋಚಿ/ಜಿಸಬಹುದು. ಕಾಂತಲೂರು-ಮರಯೂರು-ಮುನ್ನಾರ್ ರಸ್ತೆ ಮಾರ್ಗದಿಂದ ತಲುಪಬಹುದು.

ಚಿತ್ರಕೃಪೆ: Rameshng

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೋಡಿಕುತಿಮಲ : ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಸುಂದರ ಭೂದೃಶ್ಯಾವಳಿಗಳ ಅದ್ಭುತ ಗಿರಿಧಾಮ ಇದಾಗಿದೆ. ವೆಟ್ಟತೂರು, ತಳಿಕೊಡೆ ಹಳ್ಳಿಗಳ ಮಧ್ಯೆ ನೆಲೆಸಿರುವ ಈ ಗಿರಿಧಾಮ ಭೌಗೋಳಿಕವಗಿ ಈ ಪ್ರದೇಶದಲ್ಲಿರುವ ಅಮ್ಮಿನಿಕಾದನ್ ಬೆಟ್ಟ ಶ್ರೇಣಿಗಳಲ್ಲಿ ಅತಿ ಎತ್ತರದಲ್ಲಿ ನೆಲೆಸಿದ ಪ್ರದೇಶವಾಗಿದೆ.

ಚಿತ್ರಕೃಪೆ: Quraishie

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಸದಾ ಹರಿಯುವ ಚಿಕ್ಕ ಪುಟ್ಟ ನೀರಿನ ತೊರೆಗಳು, ಜಲಪಾತಗಳು, ನೀಲಾಗಸದಲಿ ತೇಲುವ ಬೆಳ್ಳಿ ಮೋಡಗಳು, ವೀಕ್ಷಣಾ ತಾಣಗಳು ಈ ಗಿರಿಧಾಮದಲ್ಲಿ ಆಸ್ವಾದಿಸಬಹುದಾದ ಪ್ರವಾಸಿ ಆಕರ್ಷಣೆಗಳು.

ಚಿತ್ರಕೃಪೆ: Sahalpk

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಚುಂದಾಲೆ : ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಲ್ಲಿರುವ ಚುಂದಾಲೆ ಒಂದು ಸುಂದರ ಗಿರಿಧಾಮ ಪ್ರದೇಶವಾಗಿದೆ.

ಚಿತ್ರಕೃಪೆ: Prof tpms

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಪುಲಿಯಾರ್ಮಾಲಾ ಜೈನ ದೇವಾಲಯ, ವಯನಾಡಿನ ಗತ ವೈಭವ ತೆರೆದಿಡುವ ವಸ್ತುಸಂಗ್ರಹಾಲಯಗಳಂತ ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದ್ದು ಸುಂದರ ಹಾಗೂ ಗಮ್ಯವಾದ ಪ್ರಕೃತಿ ವೈಭವದಿಂದ ಕಣ್ಮನ ಸೆಳೆಯುತ್ತದೆ.

ಚಿತ್ರಕೃಪೆ: Prof tpms

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕುಟ್ಟಿಕ್ಕಾನಂ : ಇಡುಕ್ಕಿ ಜಿಲ್ಲೆಯಲ್ಲಿರುವ ಕುಟ್ಟಿಕ್ಕಾನಂ ಒಂದು ಸುಂದರವಾದ ಗಿರಿಧಾಮ ಗ್ರಾಮ. ಸುತ್ತಲೂ ದಟ್ಟವಾದ ಹಸಿರಿನಿಂದ ಕೂಡಿದ್ದು ಇಲ್ಲಿ ಬೆಳೆಯಲಾಗಿರುವ ಚಹಾ ತೋಟಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.

ಚಿತ್ರಕೃಪೆ: Rojypala

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಇಲ್ಲಿ ವಿಶೇಷವಾಗಿ ಪೈನ್ ಮರಗಳ ಕಾಡುಗಳಿದ್ದು ಒಂದು ಸುಂದರ ಹಾಗೂ ವಿನೂತನವಾದ ಅನುಭವವನ್ನು ಭೇಟಿ ನೀಡುವ ಪ್ರವಾಸಿಗರಿಗೆ ಕರುಣಿಸುತ್ತದೆ.

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಗ್ರಾಂಪಿ ಅಥವಾ ಸ್ಥಳೀಯವಾಗಿ ಪರುಂತುಂಪಾರಾ ಎಂದು ಕರೆಯಲ್ಪಡುವ ಬೆಟ್ಟ ಬಂಡೆಯು ಒಂದು ಆಸಕ್ತಿ ಕೆರಳಿಸುವ ತಾಣವಾಗಿದೆ. ಇದರ ತುದಿಯಲ್ಲಿ ನಿಂತು ಸುತ್ತಲಿನ ಪ್ರಕೃತಿಯ ಸೊಬಗನ್ನು ಮನಸಾರೆ ಆನಂದಿಸಬಹುದು.

ಚಿತ್ರಕೃಪೆ: Praveenp

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಮೆಪ್ಪಾಡಿ : ಮೆಪ್ಪಾಡಿ ವಯನಾಡ್ ಜಿಲ್ಲೆಯಲ್ಲಿರುವ ಒಂದು ಹಸಿರಿನಿಂದ ಸಮೃದ್ಧವಾಗಿರುವ ಗಿರಿಧಾಮ ಪ್ರದೇಶವಾಗಿದೆ. ಇಲ್ಲಿನ ಆರೋಗ್ಯಕರ ವಾತಾವರಣವು ಎಂಥವರನ್ನೂ ಪ್ರಸನ್ನಗೊಳಿಸಬಹುದು. ಚಹಾ ಹಾಗೂ ಕಾಫಿ ತೋಟಗಳಿಂದ ಸುತ್ತುವರೆದಿದೆ. ಮೆಪ್ಪಾಡಿ ಬಳಿ ಇರುವ ಚೆಂಬ್ರಾ ಪೀಕ್ (ಶಿಖರ). ಇದು ವಿಶೇಷವಾಗಿ ತನ್ನಲ್ಲಿರುವ ಹೃದಯದಾಕಾರದ ಕೊಳಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Wayanadan

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ವಯನಾಡ್ ಜಿಲ್ಲೆಯ ಪ್ರಮುಖ ಪಟ್ಟಣವಾದ ಕಲ್ಪೆಟ್ಟಾದಿಂದ ಕೇವಲ 12 ಕಿ.ಮೀ ಗಳಷ್ಟು ದೂರದಲ್ಲಿ ಮಾತ್ರವೆ ಇದು ಸ್ಥಿತವಿದೆ. ಇಲ್ಲಿನ ಬಹುತೇಕ ನಿವಾಸಿಗಳು ಕಾಫಿ ಮತ್ತು ಚಹಾ ತೋಟಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಚಿತ್ರಕೃಪೆ: Prof tpms

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕೋಳಿಕೋಡ್ ನಿಂದ ತಮಿಳುನಾಡಿನ ಊಟಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಮೆಪ್ಪಾಡಿಯು ನೆಲೆಸಿದ್ದು ಈ ಮಾರ್ಗದಲ್ಲಿ ತೆರಳುತ್ತಿರುವವರು ಬೇಕಾದರೆ ಅಲ್ಪ ಕಾಲ ಇಲ್ಲಿನ ಸುಂದರ ಪ್ರದೇಶದಲ್ಲಿ ವಿಶ್ರಾಂತಿ ತೆಗೆದುಕೊಂಡು ಮುಂದುವರೆಯಬಹುದು.

ಚಿತ್ರಕೃಪೆ: Prof tpms

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಪೈತಲಮಲ : ಇದೊಂದು ಗಿರಿಧಾಮವಾಗಿದ್ದು ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನೆಲೆಸಿದೆ. ಕಣ್ಣೂರು ಜಿಲ್ಲೆಯಲ್ಲೆ ಭೌಗೋಳಿಕವಾಗಿ ಅತಿ ಎತ್ತರದ ಪ್ರದೇಶ ಇದಾಗಿದೆ.

ಚಿತ್ರಕೃಪೆ: Rawbin

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕಣ್ಣೂರು ನಗರ ಕೇಂದರದಿಂದ 65 ಕಿ.ಮೀ ದೂರದಲ್ಲಿರುವ ಈ ಗಿರಿಧಾಮವನ್ನು ಸುಲಭವಾಗಿ ತಲುಪಬಹುದಾಗಿದೆ. ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಈ ಗಿರಿಧಾಮವು ಕರ್ನಾಟಕ-ಕೇರಳದ ಗಡಿಗಳಿಗೂ ಸಹ ಹತ್ತಿರವಾಗುತ್ತದೆ.

ಚಿತ್ರಕೃಪೆ: Rawbin

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಇದು ವಿಶೇಷವಾಗಿ ನಿಸರ್ಗಪ್ರಿಯ ಪ್ರವಾಸಿಗ ಹಾಗೂ ಚಾರಣ ಮಾಡ ಬಯಸುವವರಿಗೆ ಆಕರ್ಷಿಸುತ್ತದೆ. ಇಲ್ಲಿ ಋತುಮಾನಕ್ಕನುಸಾರವಾಗಿ ಎರಡು ಚಾರಣಗಳನ್ನು ಕೈಗೊಳ್ಳಬಹುದಾಗಿದೆ.

ಚಿತ್ರಕೃಪೆ: Rawbin

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಒಂದು ಮಳೆಗಾಲಾಂತ್ಯದ ನಂತರದಲ್ಲಿ ಕೈಗೊಳ್ಳಬಹುದಾದ ಚಾರಣವಾಗಿದ್ದರೆ ಇನ್ನೊಂದು ಚಾರಣವನ್ನು ಬೇಸಿಗೆಯ ಸಮಯದಲ್ಲಿ ಕೈಗೊಳ್ಳಬಹುದಾಗಿದೆ.

ಚಿತ್ರಕೃಪೆ: Sivahari

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಪಂಬನಾರ್ : ಈ ಪುಟ್ಟ ಗಿರಿಧಾಮದ ಕುರಿತು ಬಹುಶಃ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ ಒಂದೊಮ್ಮೆ ಭೇಟಿ ನೀಡಿದರೆ ಇದರ ಪ್ರಕೃತಿಯ ರಮಣೀಯತೆಯು ಇದು ನಮ್ಮ ಸದಾ ಇಲ್ಲಿಗೆ ಮತ್ತೆ ಮತ್ತೆ ಬರುವಂತೆ ಮಾಡುತ್ತದೆಂದರೆ ತಪ್ಪಾಗಲಾರದು.

ಚಿತ್ರಕೃಪೆ: Sibyperiyar

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಕೇರಳದ ಕಳೆ ಹೊತ್ತ ಗಿರಿಧಾಮಗಳು:

ಎಲ್ಲೆಡೆ ಹಚ್ಚ ಹಸಿರಿನಿಂದ ಚಹಾ ತೋಟಗಳ ದಿಬ್ಬ ಬೆಟ್ಟಗಳು ನಿಮ್ಮನ್ನು ಒಂದು ಕ್ಷಣ ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಯಾವುದೆ ಸಂಶಯವಿಲ್ಲ. ಪೀರ್ಮೆಡೆ - ಕುಮಾಲಿ ರಸ್ತೆಯಲ್ಲಿ ಪೀರ್ಮೆಡೆಯಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿ ಇಡುಕ್ಕಿ ಜಿಲ್ಲೆಯಲ್ಲಿ ಬರುವ ಈ ಗಿರಿಧಾಮವು ನೆಲೆಸಿದೆ.

ಚಿತ್ರಕೃಪೆ: Hans A. Rosbach

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X