Search
  • Follow NativePlanet
Share
» »ದೇವಾಲಯಗಳ ಪಟ್ಣಣ ಕುಂಭಕೋಣಂ

ದೇವಾಲಯಗಳ ಪಟ್ಣಣ ಕುಂಭಕೋಣಂ

By Vijay

ಕೂಂಬಕೋಣಂ ಎಂತಲೂ ಸಹ ಕರೆಯಲ್ಪಡುವ ಕುಂಭಕೋಣಂ ತಮಿಳುನಾಡು ರಾಜ್ಯದಲ್ಲಿರುವ ಒಂದು ಪವಿತ್ರ ಪಟ್ಟಣವಾಗಿದೆ. ರಾಜ್ಯದ ತಾಂಜಾವೂರು ಜಿಲ್ಲೆಯಲ್ಲಿರುವ ಈ ಕ್ಷೇತ್ರವು ಕಾವೇರಿ ಮತ್ತು ಅರ್ಸಲಾರ್ ನದಿಗಳ ಮಧ್ಯದಲ್ಲಿ ನೆಲೆಸಿರುವ ಕಾರಣ ಧಾರ್ಮಿಕ ಮಹತ್ವದ ಜೊತೆಗೆ ಅಹ್ಲಾದಕರ ವಾತಾವರಣವನ್ನೂ ಸಹ ಹೊಂದಿದೆ. ನಗರದ ದಕ್ಷಿಣ ಭಾಗದಲ್ಲಿ ಅರ್ಸಲಾರ್ ನದಿಯೂ ಉತ್ತರ ಭಾಗದಲ್ಲಿ ಕಾವೇರಿ ನದಿಯೂ ಸಮಾನಾಂತರವಾಗಿ ಹರಿಯುವುದನ್ನು ಕಾಣಬಹುದು.

ಗ್ಲೋಬಲ್ ಆನ್‍ಲೈನ್ ಶಾಪಿಂಗ್ ಉತ್ಸವ 2014 ರ ಕೊಡುಗೆ : ಪ್ರವಾಸ ಹಾಗೂ ವಿಮಾನ ಹಾರಾಟಗಳ ಮೇಲೆ 80% ರ ವರೆಗೂ ಕಡಿತ

ಕುಂಭಕೋಣಂ ಇತಿಹಾಸವನ್ನು ಕೊಂಚ ಕೆದಕಿದರೆ ಹಲವಾರು ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಕ್ರಿ.ಪೂರ್ವ 3-4 ನೇ ಶತಮಾನದ ಸಂಗಮ ಅವಧಿ (ತಮಿಳಾಕಂ ಎಂದೂ ಕರೆಯಲ್ಪಡುತ್ತದೆ) ಯಲ್ಲಿ ಈ ನಗರದ ಉಪಸ್ಥಿತಿಯ ಪುರಾವೆಗಳು ದೊರಕುತ್ತವೆ. ದಕ್ಷಿಣ ಭಾರತವನ್ನು ಆಳಿದ ಹಲವು ರಾಜವಂಶಗಳು ಈ ಪ್ರದೇಶವನ್ನೂ ಆಳಿವೆ ಎಂದು ತಿಳಿದುಬರುತ್ತದೆ. ಅವರಲ್ಲಿ ಪ್ರಮುಖವಾಗಿ ಚೋಳರು, ಪಲ್ಲವರು, ಪಾಂಡ್ಯರು, ಮದುರಲ್ ನಾಯಕರು, ತಂಜಾವೂರ್ ನಾಯಕರು ಹಾಗೂ ತಂಜುವರ್ ಮರಾಠರು.

ಓದಲು ಆಸಕ್ತಿ ಮೂಡಿಸುವ ಲೇಖನಗಳು:

1) ರಾಮಾಯಣದ ಮಹತ್ವ ಹೊಂದಿರುವ ರಾಮೇಶ್ವರಂ 2) ಭಾರತದ ಆಧ್ಯಾತ್ಮಿಕ ರಾಜಧಾನಿ

3) ಗುರು ರಾಯರ ಸನ್ನಿಧಿ ಮಂತ್ರಾಲಯ 4) ಮಹಾಲಕ್ಷ್ಮಿಯ ಕಲ್ಲೂರು ಕ್ಷೇತ್ರ

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂನಲ್ಲಿ ಆದಿ ಕುಂಭೇಶ್ವರ, ರಾಮಸ್ವಾಮಿ, ಸಾರಂಗಪಾಣಿ, ಸೋಮೇಶ್ವರ ಹೀಗೆ ಹಲವಾರು ದೇವಾಲಯಗಳನ್ನು ನೋಡಬಹುದಾಗಿದೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಗಳ ಪಟ್ಟಣಕ್ಕೆ ಭೇಟಿ ನೀಡುತ್ತಾರೆ. ಬೆಂಗಳೂರಿನಿಂದ 410 ಕಿ.ಮೀ ಗಳಷ್ಟು ದೂರವಿರುವ ಕುಂಭಕೋಣಂಗೆ ತೆರಳಲು ಖಾಸಗಿ ಬಸ್ಸುಗಳು ಹಾಗೂ ಒಂದು ರೈಲಿನ ವ್ಯವಸ್ಥೆಯಿದೆ. ಮೈಲಾಡುತುರೈ ಎಕ್ಸ್ ಪ್ರೆಸ್ ರೈಲು ಕುಂಭಕೋಣಂ ಮೂಲಕ ಹಾದು ಹೋಗುತ್ತದೆ.

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಆದಿ ಕುಂಭೇಶ್ವರರ್ ದೇವಾಲಯ : ಇದು ಕುಂಭಕೋಣಂ ನಗರದಲ್ಲಿಯೇ ಅತಿದೊಡ್ಡ ಶಿವದೇವಾಲಯವಾಗಿದೆ. ಕನಿಷ್ಟ 1300 ವರ್ಷಗಳ ಹಿಂದೆ ನಿರ್ಮಿಸಲಾದ ಕುಂಭೇಶ್ವರರ್ ದೇವಾಲಯದಲ್ಲಿ ಶಿವನನ್ನು ಆದಿ ಕುಂಬೇಶ್ವರರನ ರೂಪದಲ್ಲಿ ಆರಾಧಿಸಲಾಗುತ್ತದೆ. ಏಳನೆಯ ಶತಮಾನದಲ್ಲಿ ಚೋಳರ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಏಳನೆಯ ಶತಮಾನದಲ್ಲಿ ಬದುಕಿದ್ದ ತಮಿಳುನಾಡಿನ ಖ್ಯಾತ ಕವಿ ಹಾಗೂ ಸಂತರಾದ ಸೈವನಯನಾರರು ಬರೆದ ಸ್ತುತಿಗಳಲ್ಲಿಯೂ ಈ ದೇವಾಲಯದ ಕುರಿತು ಉಲ್ಲೇಖವಿದೆ.

ಚಿತ್ರಕೃಪೆ: Ssriram mt

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಸೋಮೇಶ್ವರ ದೇವಾಲಯ : ಶಿವ, ಚಿಕ್ಕೇಶ್ವರ ಮತ್ತು ದೇವತೆ ಸೋಮಸುಂದರಿಯರನ್ನು ಆರಾಧಿಸಲ್ಪಡುವ ಕುಂಭಕೋಣಂನಲ್ಲಿರುವ ಈ ದೇವಾಲಯಕ್ಕೆ ರೋಚಕ ಇತಿಹಾಸವಿದೆ. ಪುರಾಣದ ಪ್ರಕಾರ ಅಮೃತವನ್ನು ಹೊಂದಿದ್ದ ಕುಡಿಕೆಯಲ್ಲಿ ಬಿರುಕುಂಟಾದಾಗ ಅದರಿಂದ ಒಂದು ನೂಲಿನಷ್ಟು ಅಮೃತ ಹೊರಬಿದ್ದು ಬಳೆಯಾಕಾರ ತಾಳಿತ್ತು. ಆ ಬಳೆ ಬಿದ್ದಲ್ಲಿ ಶಿವಲಿಂಗವೊಂದು ಉದ್ಭವವಾಗಿತ್ತು. ಈ ಶಿವಲಿಂಗವಿರುವಲ್ಲಿಯೇ ಸೋಮೇಶ್ವರ ದೇವಾಲಯವನ್ನು ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯಕ್ಕೆ ಐದಂತಸ್ತಿನ ಬೃಹತ್ ಪ್ರವೇಶದ್ವಾರವಿದೆ. ಅನತಿದೂರದಲ್ಲಿರುವ ಕುಂಬೇಶ್ವರ ದೇವಾಲಯ ಹಾಗೂ ಸೋಮೇಶ್ವರ ದೇವಾಲಯಗಳ ನಡುವೆ ಹೇಮಾ ಪುಷ್ಕರಣಿ ಎಂಬ ಹೆಸರಿನ ಕೊಳವಿದೆ. ಈ ಕೊಳದಲ್ಲಿ ಎರಡೂ ದೇವಾಲಯಗಳ ಪ್ರತಿಬಿಂಬ ನೋಡುವುದೇ ಒಂದು ವಿಭಿನ್ನ ಅನುಭವ ನೀಡುತ್ತದೆ.

ಚಿತ್ರಕೃಪೆ: Krishna Kumar

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿದೆ ಪಟ್ಟೇಶ್ವರಂ ದುರ್ಗಾ ದೇವಾಲಯ. ದೇವತೆಗಳಲ್ಲಿಯೇ ಹೆಚ್ಚಾಗಿ ಆರಾಧಿಸಲ್ಪಡುವ ದುರ್ಗಾಮಾತೆಯನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ದುರ್ಗಾಮಾತೆಯ ಆಶೀರ್ವಾದ ಪಡೆಯಲು ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಆಗಮಿಸಿ ದೇವಾನುಗ್ರಹ ಪಡೆಯುತ್ತಾರೆ. ಈ ದೇವಾಲಯದ ವಿಶೇಷತೆ ಏನೆಂದರೆ ರಾವಣನನ್ನು ವಧಿಸಿದ ಪಾಪ ಪರಿಹಾರಕ್ಕಾಗಿ ರಾಮನು ಶಿವಲಿಂಗವೊಂದನ್ನು ಸ್ಥಾಪಿಸಿದ್ದು ಆ ಶಿವಲಿಂಗ ಈ ದೇವಾಲಯದ ಆವರಣದಲ್ಲಿದೆ.

ಚಿತ್ರಕೃಪೆ: Ssriram mt

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಉಪ್ಪಿಲಿ ಅಪ್ಪನ್ ಪೆರುಮಾಳ್ ಎಂಬ ಹೆಸರಿನಲ್ಲಿ ಭಗವಂತ ವಿಷ್ಣುವನ್ನು ಆರಾಧಿಸಲ್ಪಡುವ ಈ ದೇವಾಲಯದಲ್ಲಿ ಆತನ ಪತ್ನಿ ಭೂಮಿ ದೇವಿ, ಭೂಮಿ ದೇವಿಯ ತಂದೆ ಋಷಿ ಮಾರ್ಕಾಂಡೇಯರೂ ಆರಾಧಿಸಲ್ಪಡುತ್ತಾರೆ. ಉಪ್ಪಿಲಿ ಅಪ್ಪನ್ ದೇವಾಲಯ ಕುಂಬಕೋಣಂ ನಗರದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ತಿರುಂಗೇಶ್ವರಂ ಎಂಬ ಗ್ರಾಮದಲ್ಲಿದೆ. 'ದಕ್ಷಿಣದ ತಿರುಪತಿ' ಎಂದು ಪ್ರಖ್ಯಾತಿ ಪಡೆದಿರುವ ಈ ದೇವಾಲಯವನ್ನು ತಲುಪಲು ಉತ್ತಮ ರಸ್ತೆಯ ಸೌಲಭ್ಯವಿದೆ. ಈ ದೇವಾಲಯದೊಳಕ್ಕೆ ಉಪ್ಪು ಹಾಕಿದ ಆಹಾರಕ್ಕೆ ಪ್ರವೇಶವಿಲ್ಲ.

ಚಿತ್ರಕೃಪೆ: sowrirajan s

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂನ ಪಶ್ಚಿಮಕ್ಕೆ ನಾಲ್ಕು ಕಿ.ಮೀ ದೂರವಿರುವ ದಾರಾಸುರಂನಲ್ಲಿರುವ ಐರಾವತೇಶ್ವರ ದೇವಾಲಯವು ಪ್ರಮುಖ ಆಕರ್ಷಣೆಗಳಲ್ಲೊಂದು. ಸ್ಥಳಪುರಾಣಗಳ ಪ್ರಕಾರ, ಇಂದ್ರನ ಬಿಳಿ ಆನೆಯು(ಐರಾವತ), ದೂರ್ವಾಸ ಋಷಿ ಮತ್ತು ಯಮನ ಶಾಪದಿಂದ ಮುಕ್ತಿ ಪಡೆಯಲು ಇಲ್ಲಿ ಶಿವನನ್ನು ಪೂಜಿಸಿತಂತೆ. ಆದ್ದರಿಂದ ಈ ದೇವಸ್ಥಾನದಲ್ಲಿ ಶಿವನು ಐರಾವತೇಶ್ವರ ಎಂದು ಪೂಜೆಗೊಳ್ಳುತ್ತಾನೆ. ಇದು ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ. ಇಲ್ಲಿ ಅನೇಕ ಸುಂದರ ಕೆತ್ತನೆಗಳಿವೆ. ಇದು ಗಂಗೈಕೊಂಡಚೋಳಪುರಂ ದೇವಾಲಯ ಮತ್ತು ಬೃಹದೇಶ್ವರ ದೇವಾಲಯಕ್ಕಿಂತ ಚಿಕ್ಕದು ಆದರೆ ಇಲ್ಲಿನ ಸೂಕ್ಷ್ಮಕಲೆಗಾರಿಕೆಯ ಕೆತ್ತನೆಗಳು ವಿಸ್ತೃತವಾಗಿವೆ.

ಚಿತ್ರಕೃಪೆ: Eurekaitskk

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಸಾರಂಗಪಾಣಿ ದೇವಾಲಯ : ಭಗವಂತ ವಿಷ್ಣುವನ್ನು ಆರಾಧಿಸಲ್ಪಡುವ ಈ ದೇವಾಲಯವು ವಿಶ್ವದಲ್ಲಿರುವ 108 ದಿವ್ಯದೇಶಂ ದೇವಾಲಯಗಳಲ್ಲೊಂದಾಗಿದೆ. ಆಳ್ವರು ಎಂದು ಕರೆಯಲ್ಪಡುವ ಹನ್ನೆರಡು ಸಂತರು ತಮ್ಮ ಹಲವು ಸ್ತುತಿಗಳಲ್ಲಿ ಈ ದೇವಾಲಯವನ್ನು ಪ್ರಸ್ತಾಪಿಸಿದ್ದಾರೆ. ಅತಿ ಪ್ರಾಚೀನವಾದ ಈ ದೇವಾಲಯ ಇಡಿಯ ದಕ್ಷಿಣ ಭಾರತದಲ್ಲಿಯೇ ಏಕಮಾತ್ರ ವೈಷ್ಣವ ಮಂದಿರವಾಗಿದೆ. ಕುಂಬಕೋಣಂ ರೈಲ್ವೇ ನಿಲ್ದಾಣದಿಂದ ಸುಮಾರು ಎರಡು ಕಿ.ಮೀ ದೂರವಿರುವ ಈ ದೇವಸ್ಥಾನವನ್ನು ಸಂದರ್ಶಿಸಲು ಆಟೋ, ಟ್ಯಾಕ್ಸಿ, ಬಸ್ ಸೇವೆ ಸುಲಭವಾಗಿ ಲಭ್ಯವಿದೆ.

ಚಿತ್ರಕೃಪೆ: Adam63

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕಾಶಿ ವಿಶ್ವನಾಥರ್ ದೇವಾಲಯ : ಪಾತಾಳ ಪೆಟ್ರ ಸ್ಥಳಗಳ ಪೈಕಿ ಒಂದಾಗಿ ಪರಿಗಣಿಸಲಾಗಿರುವ, ಶಿವನಿಗೆ ಮುಡಿಪಾದ ಕಾಶಿ ವಿಶ್ವನಾಥರ್ ದೇವಾಲಯವನ್ನು ಕುಂಭಕೋಣಂನಲ್ಲಿ ಕಾಣಬಹುದು. ದೇವಾಲಯವು ಕುಂಭಕೋಣಂನ ಪ್ರಖ್ಯಾತ ಮಹಾಮಹಂ ಕಲ್ಯಾಣಿಯ ಬಳಿ ಸ್ಥಿತವಿದೆ. ರಾಮಾಯಣ ಕಾಲದ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ದಂತಕಥೆಯ ಪ್ರಕಾರ, ಶಿವನನ್ನು ರಾಮ ಹಾಗೂ ರಾವಣರಿಬ್ಬರು ಪ್ರತ್ಯೇಕವಾದ ಸಮಯದಲ್ಲಿ ಸೀತೆಯನ್ನು ಹುಡುಕುತ್ತಿರುವಾಗ ಪೂಜಿಸಿದ್ದರು ಎನ್ನಲಾಗುತ್ತದೆ.

ಚಿತ್ರಕೃಪೆ: Ssriram mt

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಮಹಾಮಹಂ ಕಲ್ಯಾಣಿ : ಮಹಾಮಹಂ ಉತ್ಸವಕ್ಕೆ ಹೆಸರುವಾಸಿಯಾಗಿರುವ ಮಹಾಮಹಂ ಕಲ್ಯಾಣಿಯು ಕುಂಭಕೋಣಂನಲ್ಲಿದೆ. ಮಹಾಮಹಂ ಉತ್ಸವದ ಸಂದರ್ಭದಲ್ಲಿ ಈ ಕಲ್ಯಾಣಿಯಲ್ಲಿ ಮಿಂದೆದ್ದರೆ ಸಕಲ ಪಾಪಗಳು ನಾಶ ಹೊಂದಿ ಪುಣ್ಯ ಲಭಿಸುತ್ತದೆಂದು ನಂಬಲಾಗಿದೆ.

ಚಿತ್ರಕೃಪೆ: Melanie M

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂನಿಂದ ಏಳು ಕಿ.ಮೀ ಗಳಷ್ಟು ದೂರವಿರುವ ತಿರುಸಕ್ತಿಮೂತಂ ಎಂಬ ಚಿಕ್ಕ ಹಳ್ಳಿಯಲ್ಲಿ ಶಕ್ತಿವನೇಶ್ವರಂ ದೇವಾಲಯವಿದೆ. ಇಲ್ಲಿ ಶಿವನನ್ನು ಶಕ್ತಿವನೇಶ್ವರನನ್ನಾಗಿ ಪೂಜಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿರುವ ಶಿವಲಿಂಗವನ್ನು ಪಾರ್ವತಿ ದೇವಿಯು ತಬ್ಬಿಕೊಂಡಿರುವುದನ್ನು ಕಾಣಬಹುದು. ನಂಬಿಕೆಯ ಪ್ರಕಾರ, ಯಾರು ಮದುವೆಯಾಗ ಬಯಸುವವರು ಭಕ್ತಿಯಿಂದ ಈ ಶಿವಲಿಂಗವನ್ನು ಪೂಜಿಸುತ್ತಾರೊ ಅವರಿಗೆ ಅವರಿಚ್ಛೆಯಂತೆ ಬಾಳ ಸಂಗಾತಿಯನ್ನು ಪಡೆಯುತ್ತಾರೆ.

ಚಿತ್ರಕೃಪೆ: Sridharp

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂ ಹಾಗೂ ಸುತ್ತಮುತ್ತಲು:

ಕುಂಭಕೋಣಂನಿಂದ 13 ಕಿ.ಮೀ ಗಳಷ್ಟು ದೂರವಿರುವ ತಿರುನೀಲಕ್ಕುಡಿ ಎಂಬ ಹಳ್ಳಿಯಲ್ಲಿ ನೀಲಕಂದೀಶ್ವರರ್ (ನೀಲಕಂಠೀಶ್ವರರ್) ಎಂಬ ಶಿವನ ದೇವಾಲಯವನ್ನು ಕಾಣಬಹುದಾಗಿದೆ. ಈ ಒಂದು ಸ್ಥಳದಲ್ಲಿ ಪಾರ್ವತಿ ದೇವಿಯು ಹಾಲಾಹಲ ವಿಷವನ್ನು ಸೇವಿಸಿದ್ದ ಶಿವನನ್ನು ನೋವಿನ ಪಾಶದಿಂದ ಮುಕ್ತಗೊಳಿಸಲು ತೈಲದಿಂದ ಅಭಿಷೇಕ ಮಾಡಿದಳೆನ್ನಲಾಗುತ್ತದೆ.

ಚಿತ್ರಕೃಪೆ: Krishna Kumar S

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X