Search
  • Follow NativePlanet
Share
» »ನಿಮ್ಮ ಆಸೆ ಈಡೇರಬೇಕಾದರೆ ಇಲ್ಲಿ ಒಂದು ಮಾವಿನಹಣ್ಣನ್ನು ಅರ್ಪಿಸಬೇಕಂತೆ!

ನಿಮ್ಮ ಆಸೆ ಈಡೇರಬೇಕಾದರೆ ಇಲ್ಲಿ ಒಂದು ಮಾವಿನಹಣ್ಣನ್ನು ಅರ್ಪಿಸಬೇಕಂತೆ!

ತಮಿಳುನಾಡಿನಲ್ಲಿರುವ ಈ ವಿಶೇಷ ದೇವಾಲಯವೊಂದರಲ್ಲಿ ಭಕ್ತರು ದೇವರಿಗೆ ಮಾವಿನಹಣ್ಣನ್ನು ಅರ್ಪಿಸುತ್ತಾರಂತೆ. ಮಾವಿನ ಹಣ್ಣನ್ನು ಅರ್ಪಿಸುವ ಮೂಲಕ ತಮ್ಮ ಬೇಡಿಕೆಯನ್ನು ಮುಂದಿಡುತ್ತಾರೆ.ಹಾಗಾದ್ರೆ ಬನ್ನಿ ಈ ವಿಶೇಷ ದೇವಾಲಯ ಯಾವುದು? ಅದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: youtube

ಈ ವಿಶೇಷ ದೇವಾಲಯವನ್ನು ದಂಡಾಯುತಪಾನಿ ದೇವಾಲಯ ಎನ್ನುತ್ತಾರೆ. ಇದು ಮುರುಗನ್ ದೇವಾಲಯವಾಗಿದ್ದು, ತಮಿಳುನಾಡಿನ ಸಲೀಮ್ ಜಿಲ್ಲೆಯ ಕುಮಾರಗಿರಿಯಲ್ಲಿದೆ.

ಹೊಸಪೇಟೆಯಲ್ಲಿನ ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆಹೊಸಪೇಟೆಯಲ್ಲಿನ ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ

ಮಾವಿನಹಣ್ಣಿನ ನೈವೇದ್ಯ

ಮಾವಿನಹಣ್ಣಿನ ನೈವೇದ್ಯ

ಅಕ್ಕಿ ಹಾಗೂ ಮಾವಿನಹಣ್ಣನ್ನು ನೈವೇದ್ಯವಾಗಿ ಇಲ್ಲಿನ ದೇವರಿಗೆ ಅರ್ಪಿಸಲಾಗುತ್ತದೆ. ಇಲ್ಲಿನ ವಾತಾವರಣವು ಪ್ರಶಾಂತವಾಗಿದ್ದು, ಧ್ಯಾನಕ್ಕೆ ಯೋಗ್ಯವಾಗಿದೆ. ಇಲ್ಲಿ ದುರ್ಗಾ ದೇವಿ, ನವಗ್ರಹ ಹಾಗೂ ಅಯ್ಯಪ್ಪ ಸ್ವಾಮಿಯ ಗುಡಿ ಇದೆ.

ಪೌರಾಣಿಕ ಕಥೆಯ ಪ್ರಕಾರ

ಪೌರಾಣಿಕ ಕಥೆಯ ಪ್ರಕಾರ

ಮಾವಿನ ಹಣ್ಣಿನ ವಿಚಾರವಾಗಿ ಶಿವನು ಗಣೇಶನಿಗೆ ಬೆಂಬಲಿಸಿದ್ದಕ್ಕೆ ಸಿಟ್ಟಾದ ಮುರುಗನ್ ಮನೆ ಬಿಟ್ಟು ಪಳನಿಯಲ್ಲಿ ತನ್ನ ವಾಹನದ ಜೊತೆ ನೆಲೆಸಿದನು. ಹಾಗಾಗಿ ಆ ಕಾರಣಕ್ಕಾಗಿ ಇಲ್ಲಿ ಮಾವಿನಹಣ್ಣನ್ನು ನೇವೇದ್ಯವಾಗಿ ಅರ್ಪಿಸಲಾಗುತ್ತಿದೆ. ಈ ದೇವಾಲಯದಲ್ಲಿ ಮಾವಿನ ಹಣ್ಣನ್ನು ನೈವೇದ್ಯವಾಗಿ ಅರ್ಪಿಸುವುದರಿಂದ ಸಲೀಮ್ ಜಿಲ್ಲೆಯು ಮಾವಿನ ಉತ್ಪನ್ನಕ್ಕೆ ಹೆಸರುವಾಸಿಯಾಗಿದೆ ಎನ್ನಲಾಗುತ್ತದೆ.

ಈ ಬಾರಿಯ ಅರ್ಧಕುಂಭ ಮೇಳದಲ್ಲಿ ಭಾಗಿಯಾಗಬೇಕೆಂದಿದ್ದೀರಾ...ಇಲ್ಲಿದೆ ಡೀಟೇಲ್ಸ್ ಈ ಬಾರಿಯ ಅರ್ಧಕುಂಭ ಮೇಳದಲ್ಲಿ ಭಾಗಿಯಾಗಬೇಕೆಂದಿದ್ದೀರಾ...ಇಲ್ಲಿದೆ ಡೀಟೇಲ್ಸ್

ತ್ರಿಸಾದ ಅರ್ಚನೆ

ತ್ರಿಸಾದ ಅರ್ಚನೆ

ಇಲ್ಲಿನ ತ್ರಿಸಾದ ಅರ್ಚನೆಯು ಬಹಳ ವಿಶೇಷವಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ, ತೀವೃ ಸ್ಥಿತಿಯಲ್ಲಿರುವವರು ಗುಣಮುಖರಾಗಲು ಈ ಅರ್ಚನೆಯನ್ನು ಮಾಡಲಾಗುತ್ತದೆ. ಈ ಅರ್ಚನೆಯನ್ನು ಆರ್ಚಿ ಹೂವಿನಿಂದ ಮಾಡಲಾಗುತ್ತದೆ. ಆರ್ಚಿ ಹೂವಿಗೆ ಗುಲಾಬಿಜಲ ಹಾಗೂ ಶ್ರೀಗಂಧವನ್ನು ಸೇರಿಸಲಾಗುತ್ತದೆ.

ಬೇಡಿಕೆಯನ್ನು ಮುಂದಿಡುತ್ತಾರೆ

ಬೇಡಿಕೆಯನ್ನು ಮುಂದಿಡುತ್ತಾರೆ

ಇಲ್ಲಿಗೆ ಬರುವ ಭಕ್ತರು ಸ್ವಾಮಿಗೆ ಮಾವಿನ ಹಣ್ಣನ್ನು ಅರ್ಪಿಸುವ ಮೂಲಕ ಕಂಕಣ ಭಾಗ್ಯ ಹಾಗೂ ಸಂತಾನ ಭಾಗ್ಯಕ್ಕೆ ವರವನ್ನು ಕೋರುತ್ತಾರೆ. ಅಷ್ಟೇ ಅಲ್ಲದೆ ವಾಹನ ಸವಾರರು ದೂರದ ಊರುಗಳಿಗೆ ವಾಹನದ ಮೂಲಕ ಪ್ರಯಾಣ ಬೆಳೆಸುವಾಗ ಯಾವುದೇ ರೀತಿಯ ಅವಘಡಗಳು ಸಂಭವಿಸದೆ ಇರಲಿ ಎಂದು ಪ್ರಾರ್ಥಿಸುತ್ತಾರೆ.

ಪರಶುರಾಮನ ಪಾಪ ವಿಮೋಚನೆ ಮಾಡಿದ ಕುಂಡ; ಅಮವಾಸ್ಯೆ ದಿನ ಇಲ್ಲಿ ಸ್ನಾನ ಮಾಡಿದ್ರೆ.. ಪರಶುರಾಮನ ಪಾಪ ವಿಮೋಚನೆ ಮಾಡಿದ ಕುಂಡ; ಅಮವಾಸ್ಯೆ ದಿನ ಇಲ್ಲಿ ಸ್ನಾನ ಮಾಡಿದ್ರೆ..

ಕೇಶಮುಂಡನೆ

ಕೇಶಮುಂಡನೆ

ತಮ್ಮ ಬೇಡಿಕೆ ಈಡೇರಿದರೆ ಭಕ್ತರು ದೇವರಿಗೆ ಹಾಲನ್ನು ಅರ್ಪಿಸುತ್ತಾರೆ. ಜೊತೆಗೆ ಕೇಶ ಮುಂಡನ ಮಾಡುತ್ತಾರೆ. ಇಲ್ಲಿನ ಮುರುಗನು ಕುಬೇರನ ದಿಕ್ಕಾದ ಉತ್ತರಕ್ಕಿದ್ದಾನೆ. ಹಾಗಾಗಿ ಭಕ್ತರು ಜೀವನದಲ್ಲಿ ಹಣ ಪಡೆಯುವುದಕ್ಕೂ ಇಲ್ಲಿ ಪ್ರಾರ್ಥಿಸುತ್ತಾರೆ.

ಆಚರಿಸಲಾಗುವ ಉತ್ಸವಗಳು

ಆಚರಿಸಲಾಗುವ ಉತ್ಸವಗಳು

ಜನವರಿ-ಫೆಬ್ರವರಿಯಲ್ಲಿ ಥೈ ಪೂಸಮ್, ಇಪಪಿಯಲ್ಲಿನ ಸ್ಕಂದ ಶಸ್ತಿ - ಅಕ್ಟೋಬರ್-ನವೆಂಬರ್, ಮಾರ್ಚ್-ಏಪ್ರಿಲ್‌ನ ಪಂಗುನಿ ಉಥಿರಾಮ್ ಈ ದೇವಾಲಯದಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವಗಳಾಗಿವೆ.

ಈ ಭಯಾನಕ ತಾಣಗಳಿಗೆ ಹೋಗೋದು ತುಂಬಾನೇ ಡೇಂಜರ್ !ಈ ಭಯಾನಕ ತಾಣಗಳಿಗೆ ಹೋಗೋದು ತುಂಬಾನೇ ಡೇಂಜರ್ !

ತೆರೆಯುವ ಸಮಯ

ತೆರೆಯುವ ಸಮಯ

ಈ ದೇವಾಲಯವು 9.00 ರಿಂದ 11.00 ಗಂಟೆಗೆ. ಮತ್ತು 5.00 ಗಂಟೆಯಿಂದ ರಾತ್ರಿ 8.00 ಗಂಟೆವರೆಗೆ ತೆರೆದಿರುತ್ತದೆ. ದೇವಸ್ಥಾನವು ಬೆಟ್ಟದ ಮೇಲಿರುವುದರಿಂದ ದೇವಸ್ಥಾನದ ತುಂಬಾ ಕಡಿದಾದ ಮೆಟ್ಟಿಲುಗಳನ್ನು ಹತ್ತಿಕೊಂಡು ದೇವಾಲಯವನ್ನು ತಲುಪಬೇಕು.

 ತಲುಪುವುದು ಹೇಗೆ?

ತಲುಪುವುದು ಹೇಗೆ?

ಕುಮಾರಗಿರಿಯು ಸಲೇಮ್‌ನಿಂದ 6ಕಿ.ಮಿ ದೂರದಲ್ಲಿದೆ. ಸಲೇಮ್ ಹಳೆ ಬಸ್‌ ನಿಲ್ದಾಣದಿಂದ ಸನ್ಯಾಸಿಗುಂಡು ಪಾಸ್‌ ಮೂಲಕ ಅನೇಕ ಬಸ್‌ಗಳು ಚಲಿಸುತ್ತವೆ. ಆಟೋ ಕೂಡಾ ಸಿಗುತ್ತವೆ. ಹತ್ತಿರದ ರೈಲು ನಿಲ್ದಾಣವೆಂದರೆ ಸಲೇಮ್ ರೈಲು ನಿಲ್ದಾಣ. ಇನ್ನು ಸಮೀಪದ ವಿಮಾನ ನಿಲ್ದಾಣವೆಂದರೆ ಕೊಯಂಬತ್ತೂರು ಹಾಗೂ ತಿರುಚಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X