Search
  • Follow NativePlanet
Share
» »ಅಬ್ಬಾ ಈ ಅದ್ಭುತ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು

ಅಬ್ಬಾ ಈ ಅದ್ಭುತ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು

ಈ ಬೆಟ್ಟವನ್ನು ನೋಡುವಾಗ ಆಹಾ...ಎಷ್ಟೊಂದು ಸುಂದರವಾಗಿದೆ. ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿದೆ ಅನ್ನಿಸೋದು ಸಹಜ. ಇದೊಂದು ಟ್ರಕ್ಕಿಂಗ್ ತಾಣವಾಗಿದೆ. ಈ ಬೆಟ್ಟದ ಮೇಲೆ ಚಿಮಣಿಯಂತಿರುವ ತುದಿಯಲ್ಲಿ ಹೋಗಿ ನಿಂತರೇ ಸುತ್ತಮುತ್ತಲಿನ ಇಡೀ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಈ ಸುಂದರ ತಾಣ ಇರುವುದು ಮಹಾರಾಷ್ಟ್ರದಲ್ಲಿ. ಇದನ್ನು ಕೋಥಲಿಗಡ್‌ ಕೋಟೆ ಎನ್ನುತ್ತಾರೆ.

 ಸಮುದ್ರ ಮಟ್ಟಕ್ಕಿಂತ 3100 ಅಡಿ ಎತ್ತರದಲ್ಲಿದೆ

ಸಮುದ್ರ ಮಟ್ಟಕ್ಕಿಂತ 3100 ಅಡಿ ಎತ್ತರದಲ್ಲಿದೆ

PC:Elroy Serrao

ಕೋಥಲಿಗಡ್‌, ಕರ್ಜಾತ್ ಜಿಲ್ಲೆಯ ಶಾಹಪುರ್ ತಾಲೂಕಿನಲ್ಲಿದೆ. ಈ ಕೋಟೆಯು ಸಮುದ್ರ ಮಟ್ಟಕ್ಕಿಂತ 3100 ಅಡಿ ಎತ್ತರದಲ್ಲಿದೆ. ಕೋಟೆಯನ್ನು ಅಗ್ರಸ್ಥಾನದಲ್ಲಿ ಆಂತರಿಕವಾಗಿ ಉತ್ಖನನ ಮಾಡಿದ ಮೆಟ್ಟಿಲುಗಳಿಂದ ಈ ಕೋಟೆ ಕೋಥಲಿಗಡ್ ಎಂದೂ ಕರೆಯಲ್ಪಡುತ್ತದೆ.ಇಲ್ಲಿ ಒಂದು ಸಣ್ಣ ದೇವಸ್ಥಾನ ಮತ್ತು ದೊಡ್ಡ ಗುಹೆ ಇದೆ. ಈ ಗುಹೆಯೊಳಗೆ ಮೆಟ್ಟಿಲುಗಳಿವೆ ಅವು ನಿಮ್ಮನ್ನು ಈ ಕೋಟೆಯ ತುದಿಗೆ ಕೊಂಡೊಯ್ಯುತ್ತವೆ. ಈ ಕೋಟೆಯ ತುದಿಯು ಚಿಮಣಿಯ ರೂಪದಲ್ಲಿದೆ. ಕೋಟೆಯ ಸುತ್ತಲು ಸ್ವಲ್ಪ ದೂರದಲ್ಲಿ ನೀರಿನ ಟ್ಯಾಂಕ್ ಇದೆ. ಒಂದು ಟ್ಯಾಂಕ್ ಕೋಟೆಯ ತುದಿಯಲ್ಲಿದೆ.

ಪೆಥ್ ಕೋಟೆ ಎನ್ನಲಾಗುತ್ತದೆ

ಪೆಥ್ ಕೋಟೆ ಎನ್ನಲಾಗುತ್ತದೆ

PC:Ccmarathe

ಕೋಥಲಿಗಡ್ ಅನ್ನು ಸಾಮಾನ್ಯವಾಗಿ ಪೆಥ್ ಕೋಟೆಯೆಂದು ಕರೆಯಲಾಗುತ್ತದೆ, ಏಕೆಂದರೆ ಪೆಥ್ ಹಳ್ಳಿಯು ಅದರ ತಳದಲ್ಲಿದೆ.ಇಲ್ಲಿ ಎರಡು ಗುಹೆಗಳಿವೆ, ಮೊದಲನೆಯದು ದೇವಿಯ ಗುಹೆ, ಇನ್ನೊಂದು ಭೈರೋಬಾ ಗುಹೆ. ಒಂದು ಫ್ಲಾಟ್ ಮಹಡಿ ಮತ್ತು ಉತ್ತಮ ಕೆತ್ತಿದ ಕಂಬಗಳು ಈ ಗುಹೆಯ ವಿಶೇಷತೆ.

ಸಾಂಬಾಜಿ ಮಹಾರಾಜರ ಕಾಲಕ್ಕೆ ಸೇರಿದ್ದು

ಸಾಂಬಾಜಿ ಮಹಾರಾಜರ ಕಾಲಕ್ಕೆ ಸೇರಿದ್ದು

PC: Ccmarathe

ಈ ಕೋಟೆ ಗಾತ್ರದಲ್ಲಿ ಬಹಳ ಸಣ್ಣದಾಗಿದೆ ಆದರೆ ಸಾಂಬಾಜಿ ಮಹಾರಾಜರ ಯುಗದಲ್ಲಿ ಯುದ್ಧ ಸಾಮಾಗ್ರಿಗಳನ್ನು ಸಂಗ್ರಹಿಸಲು ಮತ್ತು ರಕ್ಷಣಾ ಕೇಂದ್ರವಾಗಿ ಬಳಸಲಾಗುತ್ತಿತ್ತು. ಈ ಕೋಟೆಯು ಭೀಮಾಶಂಕರ್, ರಾಜ್ಮಾಚಿ, ಧಕ್, ಸಿಧಗಡ್ ಮತ್ತು ಪ್ರಬಾಲ್‌ಘಡ್ ನಂತಹ ಇತರ ಕೋಟೆಗಳಿಂದ ಸುತ್ತುವರಿದಿದೆ.

ಕೋಥಿಲಿಗಡ್ ಚಾರಣ

ಕೋಥಿಲಿಗಡ್ ಚಾರಣ

PC:Elroy Serrao

ಕೋಥಿಲಿಗಡ್ ಟ್ರೆಕ್‌ನ ಆರಂಭಿಕ ಹಂತವೆಂದರೆ ಅಂಬಿವಿಲಿ ಗ್ರಾಮ. ಅಂಬಿವಿಲಿಯನ್ನು ಕಚ್ಚಾ ರಸ್ತೆ ಮೂಲಕ ಕೋಥಿಲಿಗಡ್ ಗ್ರಾಮವನ್ನು ಸಂಪರ್ಕಿಸಲಾಗಿದೆ. ಮೋಟಾರ್‌ ಸೈಕಲ್ ಅಥವಾ ನಾಲ್ಕು ಚಕ್ರದ ವಾಹನದಿಂದ ಈ ರಸ್ತೆಯನ್ನು ಪ್ರವೇಶಿಸಬಹುದು. ಅಂಬಿವಿಲಿಯಿಂದ ಇದು 5.7 ಕಿಲೋಮೀಟರ್ ದೂರದಲ್ಲಿದ್ದು ಕೋಥಿಲಿಗಡ್ ಕೋಟೆ ತಲುಪಲು ಸುಮಾರು 3 ರಿಂದ 4 ಗಂಟೆಗಳ ಕಾಲ ಚಾರಣ ಕೈಗೊಳ್ಳಬೇಕು. 4.3 ಕಿಲೋಮೀಟರ್ ರಸ್ತೆ ಪೆಥ್ ಗ್ರಾಮಕ್ಕೆ ಸುಲಭವಾದ ಆರೋಹಣವಾಗಿದೆ ಮತ್ತು ಸಾಮಾನ್ಯವಾಗಿ ಎರಡು ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ.

87 ಮೆಟ್ಟಿಲುಗಳು

87 ಮೆಟ್ಟಿಲುಗಳು

PC:Elroy Serrao

ಚಾರಣದ ದಾರಿಯಲ್ಲಿ ಒಂದು ನೀರಿನ ಕೊಳ ಸಿಗುತ್ತದೆ. ಇದು ಕೋಥಿಲಿಗಡ್ ಗ್ರಾಮದಿಂದ 1.5 ಕಿ.ಮೀ ದೂರದಲ್ಲಿದೆ. ಕೋಟೆಯ ತಳದಿಂದ ಸುರಂಗ ಒಳಗೆ ಕೆತ್ತಿದ 87 ಮೆಟ್ಟಿಲುಗಳ ಸರಣಿಯು ನಿಮ್ಮನ್ನು ಕೋಟೆಯ ಮೇಲ್ಭಾಗಕ್ಕೆ ತರುತ್ತದೆ. ಮೆಟ್ಟಿಲುಗಳ ಉದ್ದಕ್ಕೂ ಒಂದು ವಿಭಾಗವಿದೆ ಅಲ್ಲಿ ಮೆಟ್ಟಿಲುಗಳು ಮುರಿದುಹೋಗಿವೆ ಹಾಗಾಗಿ ಈ ಜಾಗದಲ್ಲಿ ಸ್ವಲ್ಪ ಎಚ್ಚರಿಕೆಯ ಹತ್ತಬೇಕಾದ ಅಗತ್ಯವಿರುತ್ತದೆ.

ವಾಚ್ ಗೋಪುರ

ವಾಚ್ ಗೋಪುರ

PC:Elroy Serrao

ಸ್ಥಳೀಯರು ಇದೊಂದು ಕೋಟೆಯಲ್ಲ ಬದಲಾಗಿ ಲೈಟ್‌ಹೌಸ್‌ ಇದ್ದಂತೆ ಎಂದು ಹೇಳುತ್ತಾರೆ. ಇದರ ಮೂಲಕ ಶತ್ರುಗಳ ಪ್ರಗತಿಯನ್ನು ತಿಳಿದುಕೊಳ್ಳಲು ಬಳಸುತ್ತಿದ್ದ ಒಂದು ರೀತಿಯ ಲೈಟ್ಹೌಸ್ ಎನ್ನುತ್ತಾರೆ. ವಾಸ್ತವವಾಗಿ, ಇದನ್ನು ಮರಾಠರ ಹೆಚ್ಚಿನ ಪ್ರಾಂತ್ಯವಾದ ಮಾವಲ್ ಪ್ರದೇಶದ ಮೇಲೆ ನಿಗಾ ಇಡಲು ಬಳಸುತ್ತಿದ್ದ ಒಂದು ವಾಚ್ ಗೋಪುರವೆಂದು ಕರೆಯಬಹುದು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Gananjayonline

ಮಳೆಗಾಲ ಕೋಥಲಿಗಡ್‌ಗೆ ಭೇಟಿ ನೀಡಲು ಸೂಕ್ತ ಸಮಯ ಎನ್ನಬಹುದು. ಈ ಋತುವಿನಲ್ಲಿ ಈ ಹಸಿರು ಪರಿಸರದ ನಡುವೆ ಕೋಟೆಯನ್ನು ಚುಂಬಿಸುವಂತೆ ಕಾಣುವ ಮೋಡಗಳು ಹಾಗೂ ಹರಿಯುತ್ತಿರುವ ಜಲಪಾತಗಳು ನಿಜಕ್ಕೂ ಸುಂದರವಾಗಿರುತ್ತದೆ.

ಪೆಥ್ ಹಳ್ಳಿಯು ಒಂದು ಕೃಷಿಗೆ ಯೋಗ್ಯವಾದ ತಾಣವಾಗಿದೆ. ಇಲ್ಲಿನ ಜನರೂ ಕೂಡಾ ಬಹಳ ಮೃದು ಸ್ವಭಾವದವರಾಗಿದ್ದಾರೆ.

ಮುಂಬೈನಿಂದ ತಲುಪುವುದು ಹೇಗೆ?

ಮುಂಬೈನಿಂದ ತಲುಪುವುದು ಹೇಗೆ?

ಕೋಥಿಲಿಗಡ್ ತಲುಪಲು ಉತ್ತಮ ಮಾರ್ಗವೆಂದರೆ ಕಾರ್ಜಾಟ್‌ಗೆ ಹೋಗುವ ರೈಲಿನಲ್ಲಿ ಪ್ರಯಾಣಿಸಿ ನಾರಲ್ ನಿಲ್ದಾಣದಲ್ಲಿ ಇಳಿಯುವುದು. ನಾರಾಲ್‌ನಲ್ಲಿ ನಿಮಗೆ ನಿಯಮಿತವಾಗಿ 6-ಸೀಟರ್ ಶೇರಿಂಗ್ ರಿಕ್ಷಾ ಸಿಗುತ್ತದೆ. ಈ ರಿಕ್ಷಾದಲ್ಲಿ ಪ್ರತಿಯೊಬ್ಬರಿಗೆ ಸುಮಾರು 55 ರೂ. ಪಡೆಯುತ್ತಾರೆ. ಕಶೆಲೆಯಲ್ಲಿ ಇಳಿದು. ಕಶೆಲೆಯಿಂದ ಜಮ್ರುಖ್‌ಗೆ ಹೋಗುವ ಶೇರಿಂಗ್ ರಿಕ್ಷಾವನ್ನು ಹತ್ತಬೇಕು. ಅಂಬಿವಲಿ ಗ್ರಾಮದಲ್ಲಿ ಇಳಿಯಬಹುದು. ಈ ಶೇರಿಂಗ್ ರಿಕ್ಷಾಗಳು ಸಂಜೆ 6 ಗಂಟೆಯವರೆಗೆ ಎರಡೂ ಮಾರ್ಗಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ. ಇಲ್ಲವಾದಲ್ಲಿ ನೀವು ಕರ್ಜಾತ್ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಜಮ್ರುಖ್‌ಗೆ ಹೋಗುವ ರಾಜ್ಯ ಬಸ್‌ನ್ನು ಹತ್ತಿ ಅಂಬಿವಿಲಿಯಲ್ಲಿ ಇಳಿಯಿರಿ. ಈ ದಾರಿಯಲ್ಲಿ ಬಸ್‌ಗಳು ಬಹಳ ವಿರಳವಾಗಿರುವುದರಿಂದ ನೆರಾಲ್ ಮೂಲಕ ಹೋಗುವುದೇ ಬೆಸ್ಟ್.

ಪುಣೆಯಿಂದ ತಲುಪುವುದು ಹೇಗೆ?

ಪುಣೆಯಿಂದ ತಲುಪುವುದು ಹೇಗೆ?

ಮುಂಬೈನಿಂದ 64 ಕಿ.ಮೀ ಮತ್ತು ಪುಣೆದಿಂದ 116 ಕಿ.ಮೀ ದೂರದಲ್ಲಿರುವ ಕರ್ಜಾತ್ ಇಲ್ಲಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಕರ್ಜಾತ್ ಪುಣೆ-ಮುಂಬೈ ಕೇಂದ್ರ ರೈಲು ಮಾರ್ಗದಲ್ಲಿದೆ. ಪುಣೆಯಿಂದ ಕರ್ಜಾತ್‌ಗೆ ರೈಲಿನಲ್ಲಿ ಸುಮಾರು 40 ರೂ. ಆಗುತ್ತದೆ. ಕರ್ಜಾತ್‌ನಿಂದ ಅಂಬಿವಿಲಿಗೆ ಸಾಕಷ್ಟು ಸ್ಥಳೀಯ ಸಾರಿಗೆಗೆ ಬಸ್‌ಗಳು ಲಭ್ಯವಿದೆ.

ತಂಗುವುದು ಎಲ್ಲಿ?

ತಂಗುವುದು ಎಲ್ಲಿ?

ಟ್ರಕ್ಕಿಂಗ್ ಮುಗಿಸಿ ನೀವು ಆಯಾಸವಾಗಿದ್ದು ಒಂದು ವೇಳೆ ನೀವು ಇಲ್ಲಿ ರಾತ್ರಿ ಉಳಿಯಲು ಬಯಸಿದ್ದಲ್ಲಿ ನರಾಲ್ ಮತ್ತು ಕರ್ಜಾತ್‌ನಲ್ಲಿ ರಾತ್ರಿ ಉಳಿಯಲು ಬಜೆಟ್ ವಸತಿಗೃಹಗಳಿವೆ. ಆದರೆ ಅಂಬಿವಲಿ ಅಥವಾ ಕಶೆಲ್ಲಿನಲ್ಲಿ ಯಾವುದೇ ಲಾಡ್ಜ್‌ ಲಭ್ಯವಿರೋದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more